Author: Nammur Express Admin

ಸಿಎಂ ಬದಲಾವಣೆ ಇಲ್ಲ, ಆದರೆ ಏನೋ ಆಗ್ತಿದೆ… ಬೆಂಗಳೂರು: ರಾಜ್ಯದ ಉಪ ಚುನಾವಣೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಶೀಘ್ರ ಮುಹೂರ್ತ ಫಿಕ್ಸ್ ಆಗಲಿದೆ. ಎ;ಲಾ ಹಳ್ಳಿ, ಪಟ್ಟಣಗಳಲ್ಲೂ ರಾಜಕೀಯ ಗರಿಗೆದರಿದೆ. ಆದರೆ ಸಿಎಂ ಬದಲಾವಣೆ ಚರ್ಚೆ ಮುನ್ನೆಲೆಗೆ ಬಂದಿರುವುದು ರಾಜಕೀಯವಾಗಿ ಭಾರೀ ಕುತೂಹಲ ಮೂಡಿಸಿದೆ. ಶಿರಾ, ಆರ್.ಆರ್.ನಗರ, ಪರಿಷತ್ ಚುನಾವಣೆಗಳಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಪ್ರತಿ ಪಕ್ಷಗಳನ್ನು ಮಕಾಡೆ ಮಲಗಿಸಿದೆ. ಸಹಕಾರಿ ಮತ್ತು ಸಂಘ ಸಂಸ್ಥೆಗಳ ಚುನಾವಣೆಯಲ್ಲೂ ಬಿಜೆಪಿ ತನ್ನ ಗೆಲುªವಿನ ಓಟ ಮುಂದುವರಿಸಿದೆ. ಆದ್ದರಿಂದ ಹೈಕಮಾಂಡ್, ವರಿಷ್ಠರು, ಸದ್ಯಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ನಾಯಕತ್ವ ಬದಲಾವಣೆಗೆ ಕೈ ಹಾಕುವುದು ಡೌಟು. ಆದರೂ ಸಿಎಂ ಕಚೇರಿಯಲ್ಲಾಗುತ್ತಿರುವ ಬದಲಾವಣೆಗಳು ಸಣ್ಣ ಅನುಮಾಮನಕ್ಕೆ ಕಾರಣವಾಗಿದೆ. ಇತ್ತ ಕರಾವಳಿ ಭಾಗದಲ್ಲಿ ಮುಂದಿನ ಸಿಎಂ ಕರಾವಳಿಯವರೇ ಎಂಬ ವದಂತಿ ಹಬ್ಬಿದೆ. ಅತ್ತ ರಮೇಶ್ ಜಾರಕಿಹೊಳಿ ರಹಸ್ಯ ಮಾತುಕತೆ ನಡೆಸಿದ್ದಾರೆ. ಇದೆಲ್ಲವೂ ಎನೋ ಆಗುತ್ತಿದೆ ಎಂಬ ಅನುಮಾನ ಸೃಷ್ಟಿಸಿದೆ. ರಾಜೀನಾಮೆ ಏಕೆ?: ಯಡಿಯೂರಪ್ಪ ಆಪ್ತರಾದ ಇಬ್ಬರು ಸಲಹೆಗಾರರು ರಾಜೀನಾಮೆ…

Read More

ಬಿಹಾರ ಮೂಲದ ವೈದ್ಯೆ ಜತೆ ವಿವಾಹ ಚೆನ್ನೈ: ಸದಾ ಸುದ್ದಿಯಲ್ಲಿರುವ ನಟ, ನಿರ್ದೇಶಕ ಹಾಗೂ ನೃತ್ಯ ಸಂಯೋಜಕ ಪ್ರಭುದೇವ ರಹಸ್ಯವಾಗಿ ವೈದ್ಯೆಯೊಬ್ಬರ ಜತೆ ಎರಡನೇ ವಿವಾಹ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಬಿಹಾರದ ಫಿಸಿಯೋಥೆರಪಿಸ್ಟ್ ವೈದ್ಯೆ ಜೊತೆ ಸೆಪ್ಟಂಬರ್‍ನಲ್ಲಿ ಸಪ್ತಪದಿ ತುಳಿದಿದ್ದಾರಂತೆ. ಮುಂಬೈನಲ್ಲಿರುವ ಪ್ರಭುದೇವ ಅವರ ನಿವಾಸದಲ್ಲಿ ರಹಸ್ಯವಾಗಿ ವಿವಾಹ ಮಾಡಿಕೊಂಡಿರುವ ಈ ಜೋಡಿ ಪ್ರಸ್ತುತ ಚೆನ್ನೈನಲ್ಲಿದ್ದಾರೆ. ಪ್ರಭುದೇವ ಅವರ ಸಮೀಪವರ್ತಿಯೊಬ್ಬರು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ. ಆದರೆ, ಈ ಬಗ್ಗೆ ಪ್ರಭುದೇವ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಸಂಬಂಧ ಅಧಿಕೃತ ಹೇಳಿಕೆ ಇನ್ನೂ ಹೊರಬೀಳಬೇಕಿದೆ. ಬೆನ್ನುಮೂಳೆ ಸಮಸ್ಯೆಯಿಂದ ಬಳಲುತ್ತಿದ್ದ ಪ್ರಭುದೇವ ಅವರಿಗೆ ಚಿಕಿತ್ಸೆ ನೀಡಿದ್ದ ವೈದ್ಯೆಯನ್ನೇ ಪ್ರೀತಿಸಿ ವಿವಾಹವಾಗಿದ್ದಾರೆ ಎಂದು ಹೇಳಲಾಗಿದೆ. ಪ್ರಭುದೇವ 1995ರಲ್ಲಿ ರಾಮಲತಾರನ್ನು ವಿವಾಹವಾಗಿದ್ದರು. 2011ರಲ್ಲಿ ವಿಚ್ಚೇದನ ನೀಡಿದ್ದರು. ಅವರಿಗೆ ಇಬ್ಬರು ಮಕ್ಕಳೂ ಇದ್ದಾರೆ. ನಂತರ ನಾಯಕಿ ನಟಿ ನಯನತಾರಾ ಅವರೊಂದಿಗೆ ಪ್ರಭುದೇವ ಹೆಸರು ತಳುಕು ಹಾಕಿಕೊಂಡಿದ್ದು ಬಳಿಕ ಅದು ವದಂತಿ ಎನ್ನಲಾಗಿತ್ತು.

Read More

2 ದಿನ ಮಳೆ ಸೂಚನೆ: ಹೆಚ್ಚಿದ ಬಿಸಿಲು, ಚಳಿ ಬೆಂಗಳೂರು: ಒಂದು ಕಡೆ ಚಳಿ ಹೆಚ್ಚಾಗುತ್ತಿದೆ. ಇತ್ತ ಮಧ್ಯಾಹ್ನ ಬಿಸಲಿನ ಝಳವೂ ಹೆಚ್ಚಿದೆ. ಈ ನಡುವೆ ನವೆಂಬರ್ 24 ರಿಂದ ಎರಡು ದಿನಗಳವರೆಗೆ ದಕ್ಷಿಣ ಒಳನಾಡು ಭಾಗಗಳಲ್ಲಿ ಮಳೆ ಸುರಿಯುವ ಸಾಧ್ಯತೆಯಿಂದ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮೋಡ ಮುಸುಕು, ಮುಂಜಾನೆ ಹೊತ್ತು ಹೆಚ್ಚು ಮಂಜು ಕಂಡುಬರುತ್ತಿದೆ. ಸಾಯಂಕಾಲ ಹೊತ್ತು ಕೂಡ ಚಳಿ ಮಂಜು ಇರುತ್ತದೆ. ಚಂಡಮಾರುತದ ಪರಿಣಾಮ ಹಿಂದೂ ಮಹಾಸಾಗರ ಮತ್ತು ಬಂಗಾಳಕೊಲ್ಲಿಯ ದಕ್ಷಿಣ ಭಾಗದಲ್ಲಿ ಕಡಿಮೆ ಒತ್ತಡ ಪ್ರದೇಶಗಳು ಏರ್ಪಟ್ಟಿದ್ದು, ಇದರಿಂದಾಗಿ ದಕ್ಷಿಣ ಒಳನಾಡು ಭಾಗಗಳಲ್ಲಿ ನವೆಂಬರ್ 24 ಮತ್ತು 25ರಂದು ಮಳೆಯಾಗುವ ಸಾಧ್ಯತೆಯಿದೆ, ಹೀಗಾಗಿ ಯಲ್ಲೋ ಎಲರ್ಟ್ ಘೋಷಿಸಲಾಗಿದೆ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಕೂಡ ಸ್ವಲ್ಪ ಮಳೆಯಾಗುವ ಸಾಧ್ಯತೆಯಿದೆ ಎಂದು ಬೆಂಗಳೂರು ಹವಾಮಾನ ಇಲಾಖೆ ನಿರ್ದೇಶಕ ಸಿ ಎಸ್ ಪಾಟೀಲ್ ಹೇಳಿದ್ದಾರೆ.

Read More

ಹಳ್ಳಿಗೆ ಮಾಡಿದ ಜನಪರ ಕೆಲಸಕ್ಕೆ ದೇವರ ಸ್ಥಾನನಟರು, ರಾಜಕಾರಣಿಗಳ ಸೇವೆಗೆ ಇದು ಮಾದರಿ ಮಂಡ್ಯ: ಕನ್ನಡ ಚಿತ್ರರಂಗದ ಮೇರು ನಟ ರೆಬಲ್ ಸ್ಟಾರ್ ಅಂಬರೀಷ್ ಅವರ ನೆನಪಲ್ಲಿ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಹೊಟ್ಟೆಗೌಡನದೊಡ್ಡಿಯಲ್ಲಿ 8 ಲಕ್ಷ ರೂ. ನಿಧಿ ಸಂಗ್ರಹದ ಮೂಲಕ “ಅಂಬಿ ಅಮರ’ ದೇವಾಲಯ ನಿರ್ಮಿಸಿ ನಟನಿಗೆ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ರೆಬೆಲ್ ಸ್ಟಾರ್ ಅಂಬರೀಶ್ ಅವರ ಕಂಚಿನ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದ್ದು, ಅವರ ಎರಡನೇ ಪುಣ್ಯ ಸ್ಮರಣೆ ದಿನವಾದ ನವೆಂಬರ್ 24ರಂದು ಅನಾವರಣ ಮಾಡಲಾಗುತ್ತಿದೆ. ಈಗಾಗಲೇ ಗ್ರಾಮದಲ್ಲಿ ಸಡಗರ ಮನೆ ಮಾಡಿದೆ. ಅಂಬರೀಷ್ ಹಳ್ಳಿಯಲ್ಲಿ ಜನಪರ ಕಾರ್ಯಗಳಿಂದ ಜನರ ಜೀವನ ಬದಲಾಗಿದ್ದು, ದೇವರಂತೆ ನಂಬಿಕೆ ಇಡಲಾಗಿದೆ. ಪ್ರತಿಯೊಬ್ಬರ ಮನೆಯಲ್ಲೂ ಅಂಬಿ ಫೆÇೀಟೋವಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಅಂಬರೀಶ್ ಅವರ ಸಮಾಧಿ ಸ್ಥಳದಿಂದ ತಂದ ಚಿತಾಭಸ್ಮವನ್ನು ಇಲ್ಲಿಟ್ಟು ಅವರ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಇದರ ಹಿಂದೆ ಯಾವುದೇ ರಾಜಕೀಯ ಇಲ್ಲ, ಸ್ವಯಂ ಪ್ರೇರಣೆಯಿಂದ ಈ ಕಾರ್ಯವನ್ನು ಮಾಡಿದ್ದೇವೆ ಎಂದು ಅಖಿಲ ಕರ್ನಾಟಕ…

Read More

ಇಳಿಕೆ ಕಂಡಿದ್ದ ಕೇಸ್ ಒಂದೇ ದಿನದಲ್ಲಿ ಏರಿಕೆಒಂದೇ ದಿನ 20 ಮಂದಿ ಸಾವು ಬೆಂಗಳೂರು: ಕೆಲವು ದಿನಗಳಿಂದ ತಣ್ಣಗಾಗಿದ್ದ ಕರೋನಾ ರಾಜ್ಯದಲ್ಲಿ ಮತ್ತೆ ತನ್ನ ಎರಡನೇ ಅವತಾರ ತೋರಿಸಲು ಶುರು ಮಾಡಿದ್ದಾನೆ. ಶನಿವಾರ ಒಂದೇ ದಿನ 1,781 ಸೋಂಕು ದೃಢಪಟ್ಟಿದ್ದು, ಒಟ್ಟು 871342 ಪ್ರಕರಣಗಳು ವರದಿಯಾಗಿವೆ.20 ಜನರು ಬಲಿಯಾಗಿದ್ದು, ಒಟ್ಟು ಬಲಿಯಾದವರ ಸಂಖ್ಯೆ 11,641ಕ್ಕೆ ಏರಿಕೆಯಾಗಿದೆ. ಈ ಮೂಲಕ ರಾಜ್ಯದಲ್ಲಿ 24,714 ಸಕ್ರಿಯ ಪ್ರಕರಣಗಳು ಇವೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.ಚಳಿ ಹೆಚ್ಚಾದಂತೆ ಕರೋನಾ ಕೂಡ ಹೆಚ್ಚಾಗುತ್ತಿದೆ. ಡಿಸೆಂಬರ್ ವೇಳೆಗೆ ಮತ್ತಷ್ಟು ಪ್ರಕರಣಗಳು ಹೆಚ್ಚಾಗಲಿದೆ ಎಂದು ಹೇಳಲಾಗಿದೆ.

Read More

ಸರ್ಕಾರದ ನಿರ್ಧಾರಕ್ಕೆ ಸಿದ್ದರಾಮಯ್ಯ ಸಿಟ್ಟುತಕ್ಷಣ ಹಿಂಪಡೆಯುವಂತೆ ಸಿಎಂಗೆ ಪತ್ರ ಬೆಂಗಳೂರು: ಮಲೆನಾಡಿನ ಅರಣ್ಯ ಪ್ರದೇಶವನ್ನು ಖಾಸಗಿ ಸಂಸ್ಥೆಗಳಿಗೆ ನೀಡುವ ನಿರ್ಧಾರ ಇದೀಗ ಮಲೆನಾಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಲ್ಲದೆ ರಾಜ್ಯ ರಾಜಕೀಯದ ಹೊಸ ವಸ್ತುವಾಗಿದೆ. ಬಿಜೆಪಿ ಸರ್ಕಾರದಲ್ಲಿ ಹಿಡಿತ ಇರುವ ಮುಖ್ಯಮಂತ್ರಿ ಆಪ್ತರು ಈ ಡೀಲ್ ಹಿಂದೆ ಇದ್ದಾರೆ ಎಂಬ ಊಹಾಪೋಹದ ನಡುವೆ ನಿರ್ಧಾರ ಹಿಂತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ವಿಶ್ವದ ಪಾರಂಪರಿಕ ಕಾಡು ಹೊಂದಿರುವ ಮಲೆನಾಡು ಪ್ರದೇಶದ ಅರಣ್ಯ ಭೂಮಿಯನ್ನು ಖಾಸಗಿ ಸಂಸ್ಥೆಗಳಿಗೆ ಹಸ್ತಾಂತರಿಸಲು ಸರ್ಕಾರ ಚಿಂತನೆ ನಡೆಸುತ್ತಿರುವುದು ದುರದೃಷ್ಟಕರ. 1980ರಲ್ಲಿ ಭದ್ರಾವತಿ ಎಂಪಿಎಂ ಕಾರ್ಖಾನೆಗೆ 40 ವರ್ಷಗಳ ಸೀಮಿತ ಅವಧಿಗೆ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸೇರಿದ ಅರಣ್ಯ ಪ್ರದೇಶ ಲೀಸ್‍ಗೆ ನೀಡಲಾಗಿತ್ತು. ಲೀಸ್ ಅವಧಿ ಮುಗಿದ ಕೂಡಲೇ ಈ ಪ್ರದೇಶ ಅರಣ್ಯ ಇಲಾಖೆಗೆ ಹಿಂತಿರುಗಿಸಬೇಕು ಎನ್ನುವ ಷರತ್ತು ವಿಧಿಸಲಾಗಿತ್ತು. ಪ್ರಸಕ್ತ ವರ್ಷ ಆಗಸ್ಟ್ ತಿಂಗಳಿನಲ್ಲಿ ಲೀಸ್…

Read More

ಕನ್ನಡದ ಫೇಮಸ್ ನಟಿ ಈಗ ಉತ್ತರ ಭಾರತಕ್ಕೆ… ಬೆಂಗಳೂರು: ಕನ್ನಡ, ತಮಿಳು, ತೆಲುಗು, ಕೊಡವ, ಮಲಯಾಳಂ ಸೇರಿದಂತೆ ಈಗಾಗಲೇ ಹಲವು ಭಾಷೆಗಳಲ್ಲಿ ನಟಿಸಿರುವ ಕನ್ನಡದ ಹುಡುಗಿ ನಟಿ ಹರ್ಷಿಕಾ ಪೂಣಚ್ಚ ಭೋಜಪುರಿ ಭಾಷೆಯ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿದ್ದಾರೆ.ಭೋಜ್‍ಪುರಿ ಚಿತ್ರರಂಗದ ಸೂಪರ್ ಸ್ಟಾರ್ ನಟ ಪವನ್ ಸಿಂಗ್ ಸಿನಿಮಾದ ನಾಯಕರಾಗಿದ್ದು, ಈ ಸಿನಿಮಾ ಭೋಜ್‍ಪುರಿ ಜೊತೆಗೆ ಹಿಂದಿ ಭಾಷೆಯಲ್ಲಿ ಸಹ ಬಿಡುಗಡೆ ಆಗಲಿದೆ. ಸಿನಿಮಾದ ಚಿತ್ರೀಕರಣ ಶೇ.50ರಷ್ಟು ಪೂರ್ಣವಾಗಿದೆ. ಸಂಪೂರ್ಣ ಚಿತ್ರೀಕರಣ ಲಂಡನ್‍ನಲ್ಲಿಯೇ ನಡೆಯಲಿದೆ.ಹರ್ಷಿಕಾ ಈಗ ಸಿನಿಮಾ ಅರ್ಧ ಭಾಗದ ಚಿತ್ರೀಕರಣವನ್ನೂ ಮುಗಿಸಿದ್ದಾರೆ. ಭೋಜಪುರಿಯಲ್ಲಿ ಸಾಕಷ್ಟು ಸಿನಿಮಾ ಮಾಡಿರುವ ಪವನ್ ಸಿಂಗ್ ಈ ಚಿತ್ರದ ನಾಯಕ. ಯಾಶಿ ಪೆÇ್ರಡಕ್ಷನ್ಸ್‍ನಲ್ಲಿ ಅಭಯ್ ಸಿನ್ಹಾ ಎಂಬುವವರು ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.

Read More

ಸಂತೋಷ್ ಜೀ ಭೇಟಿ ಮಾಡಿದ ಜಾರಕಿಹೊಳಿಕರಾವಳಿ ನಾಯಕನಿಗೆ ಸಿಎಂ ಹುದ್ದೆ: ವದಂತಿ ಬೆಂಗಳೂರು: ರಾಜ್ಯ ಸಚಿವ ಸಂಪುಟ ಸರ್ಕಸ್ ಇನ್ನೂ ಮುಗಿಯುವ ಹಾಗೆ ಕಾಣುತ್ತಿಲ್ಲ. ಇಲ್ಲಿ ಜನ ಕರೋನದ ಎಫೆಕ್ಟ್‍ನಿಂದ ಸಾಯುತ್ತಿದ್ದಾರೆ. ತುತ್ತು ಅನ್ನಕ್ಕೂ ಪರದಾಟ ನಡೆಸುತ್ತಿದ್ದಾರೆ. ಆದರೆ ಜನಪ್ರತಿನಿಧಿಗಳು ಮಾತ್ರ ಕುರ್ಚಿಗಾಗಿ ಕಾದಾಟ ನಡೆಸುತ್ತಿದ್ದಾರೆ. ಈ ನಡುವೆ ದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಿ ಬಂದಿದ್ದು, ಇನ್ನೆರಡು ಮೂರು ದಿನಗಳಲ್ಲಿ ಸಂಪುಟ ವಿಸ್ತರಣೆಯಾಗಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಈ ಮೂಲಕ ಕ್ಲೈಮಾಕ್ಸ್ ಸುಳಿವು ನೀಡಿದ್ದಾರೆ. ಆದರೆ ಯಾರಿಗೆ ಸ್ಥಾನ ಸಿಗುತ್ತೆ ಎಂಬ ಕುತೂಹಲ ಬಿಟ್ಟು ಕೊಟ್ಟಿಲ್ಲ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಸದ್ಯದಲ್ಲಿಯೇ ಹೊಸ ಸಚಿವರು ಯಾರು? ಯಾರಿಗೆ ಯಾವ ಖಾತೆ ಎನ್ನುವುದು ಗೊತ್ತಾಗಲಿದೆ.ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ ರೇಣುಕಾಚಾರ್ಯ ಸಭೆ ನಡೆಸಿದರ ಬಗ್ಗೆ ಕೇಳಿದ ಪ್ರಶ್ನೆಗೆ, ಎಲ್ಲಾ ಶಾಸಕರು ಸೇರಿ…

Read More

ಐತಿಹಾಸಿಕ ಬೇಲೂರು ದೇಗುಲದಲ್ಲಿ ಘಟನೆ ಹಾಸನ: ಮನುಷ್ಯ ತನ್ನ ಆಸೆಗೆ ದೇವರನ್ನು ಬಿಡುತ್ತಿಲ್ಲ. ಹೌದು. ಐತಿಹಾಸಿಕ ಬೇಲೂರು ದೇಗುಲದಲ್ಲಿ ದುಷ್ಕರ್ಮಿಗಳು ನಿಧಿಗಾಗಿ ಮಹಾಕಾಳಿ ವಿಗ್ರವನ್ನು ಧ್ವಂಸ ಮಾಡಿದ್ದಾರೆ.ಬೇಲೂರು ತಾಲ್ಲೂಕಿನ ದೊಡ್ಡಗದ್ದವಳ್ಳಿಯಲ್ಲಿರುವ ಐತಿಹಾಸಿಕ ಲಕ್ಷ್ಮಿ ದೇವಸ್ಥಾನ್ಕೆ ಮಂಗಳವಾರ ತಡರಾತ್ರಿ ನುಗ್ಗಿ ಈ ಕೃತ್ಯ ಎಸಗಿದ್ದಾರೆ. ದೇಗುಲ ಗ್ರಾಮದ ಹೊರಗೆ ಇರುವುದರಿಂದ ರಾತ್ರಿ ಯಾರೂ ಇಲ್ಲದ ವೇಳೆ ದುಷ್ಕರ್ಮಿಗಳು ದೇಗುಲದ ಬಾಗಿಲನ್ನು ಮುರಿದು ಒಳಗೆ ನುಗ್ಗಿದ್ದಾರೆ. ಸುಮಾರು 800 ವರ್ಷಗಳಷ್ಟು ಹಳೆಯದಾದ ಲಕ್ಷ್ಮೀ ದೇಗುಲವನ್ನು ಹೊಯ್ಸಳ ವಂಶಸ್ಥರು ನಿರ್ಮಿಸಿದ್ದರು. ದೇಗುಲವನ್ನು ರಾಷ್ಟ್ರೀಯ ಸ್ಮಾರಕವಾಗಿ ಗುರುತಿಸಲಾಗಿದ್ದು, ಕೇಂದ್ರ ಪುರಾತತ್ವ ಇಲಾಖೆ ಅಧೀನದಲ್ಲಿ ಈ ದೇಗುಲವಿದೆ. ದೇಗುಲದಲ್ಲಿನ ವಿಶೇಷ ವಿಗ್ರಹಗಳು ಮತ್ತು ಕಲ್ಲಿನ ಕೆತ್ತನೆಗಳು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Read More

ಕರೋನಾ ಲಸಿಕೆ ತಯಾರಿಕೆಗೆ ಒಪ್ಪಂದ ನವದೆಹಲಿ: ಭಾರತದಲ್ಲಿ ಕರೋನಾ ವೈರಸ್ ಕಡಿವಾಣ ಮತ್ತು ಲಸಿಕೆ ಉತ್ಪಾದನೆ ಬಗ್ಗೆ ಮಹತ್ವದ ಸಭೆ ಸರ್ಕಾರ ನಡೆಸಿದೆ.ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸಚಿವರು ಮತ್ತು ಹಿರಿಯ ಅಧಿಕಾರಿಗಳ ಸಭೆಯಲ್ಲಿ ಕರೋನಾ ಲಸಿಕೆ ಅಭಿವೃದ್ಧಿ, ಲಸಿಕೆ ಪ್ರಗತಿ, ನಿಯಂತ್ರಕ ಅನುಮೋದನೆ ಮತ್ತು ಸಂಗ್ರಹಣೆಗೆ ಸಂಬಂಧಿಸಿದ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ವಿದೇಶದಲ್ಲಿ ಹಲವು ಕಂಪನಿಗಳು ಲಸಿಕೆ ಸಂಶೋಧಿಸುವಲ್ಲಿ ತೊಡಗಿವೆ. ಕೆಲವು ಭಾರತೀಯ ಕಂಪನಿಗಳು ಕೂಡಾ ಅಂಥ ವಿದೇಶಿ ಕಂಪನಿಗಳ ಜೊತೆಗೆ ಒಪ್ಪಂದ ಮಾಡಿಕೊಂಡಿವೆ. ಪುಣೆ ಮೂಲದ ಸೆರಮ್ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾ ವೈದ್ಯಕೀಯ ಪ್ರಯೋಗಗಳನ್ನು ನಡೆಸುತ್ತಿದ್ದು, ಇದರ ಜೊತೆಗೆ ಲಸಿಕೆ ತಯಾರಿಕೆ ಮಾಡುತ್ತಿದೆ. ಹೀಗಿದ್ದರೂ ಕೂಡಾ ಡಾ. ರೆಡ್ಡೀಸ್ ಅವರ ಪ್ರಯೋಗಾಲಯಗಳಲ್ಲಿ ವೈದ್ಯಕೀಯ ಪ್ರಯೋಗಗಳನ್ನು ನಡೆಸಲು ಮತ್ತು ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಯ ವಿತರಣೆಗೆ ಒಪ್ಪಂದ ಮಾಡಿಕೊಂಡಿದೆ. ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ತಮ್ಮ ಲಸಿಕೆಗಳನ್ನು ತಯಾರಿಸಲು ಆಕ್ಸ್‍ಫರ್ಡ್ ವಿಶ್ವವಿದ್ಯಾಲಯದ ಅಸ್ಟ್ರಾಜೆನಿಕಾ, ಕೊಡಾಜೆನಿಕ್ಸ್ ಮತ್ತು…

Read More