ಲಸಿಕೆ ಪ್ರಯೋಗ, ತಯಾರಿಕೆ ಹಂತದಲ್ಲಿ ಹಲವು ಅಡತಡೆ ನ್ಯೂಯಾರ್ಕ್: ವಿಶ್ವವನ್ನೇ ಜೀವ ಭಯಕ್ಕೆ ತಳ್ಳಿರುವ ಕರೋನಾ ಮಹಾಮಾರಿಗೆ ಇನ್ನೂ ಲಸಿಕೆ ಸಿದ್ಧಗೊಂಡಿಲ್ಲ. ಯಾವ ದೇಶ ಯಶಸ್ವಿ ಲಸಿಕೆ ಕಂಡು ಹಿಡಿಯುತ್ತೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಹಲವು ದೇಶಗಳು ಲಸಿಕೆ ಉತ್ಪಾದನೆಯಲ್ಲಿ ತೊಡಗಿವೆ. ಡಿಸೆಂಬರ್ ಅಥವಾ 2021ರ ಮಧ್ಯದೊಳಗೆ ಲಸಿಕೆ ಸಿಗುವುದು ಅನುಮಾನ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಈ ಮೂಲಕ ಮತ್ತಷ್ಟು ಜಾಗೃತರಾಗಿರಲು ಸೂಚನೆ ನೀಡಿದೆ.ಜನರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಲಾಗುತ್ತದೆ. ಲಸಿಕೆ ಕಂಪನಿಯಲ್ಲಿ ಮುಂಚೂಣಿಯಲ್ಲಿರುವ ಮೂರನೇ ಹಂತದ ಪ್ರಯೋಗ ನಡೆಸುತ್ತಿರುವವರು ವೈಯಕ್ತಿಕ ಲಸಿಕೆಗಳ ಪರಿಣಾಮಕಾರಿತ್ವ ಮತ್ತು ಸುರಕ್ಷತೆಯನ್ನು ಮೌಲ್ಯಮಾಪನ ಮಾಡಲು ಹಲವು ತಿಂಗಳು ಬೇಕಾಗಲಿವೆ. ಪ್ರಯೋಗ ಪೂರ್ಣಗೊಂಡ ಬಳಿಕ ಪರವಾನಗಿ, ಬಳಕೆಗೆ ಅಧಿಕಾರ ಮತ್ತು ಸಾಮೂಹಿಕ ಉತ್ಪಾದನೆಗೆ ತೆಗೆದುಕೊಂಡ ಸಮಯದ ಬಗ್ಗೆ ಮಾಹಿತಿ ಲಭ್ಯವಾಗಲಿದೆ. ಕೆಲವೊಂದು ಲಸಿಕೆಗಳಿಗೆ ಅನುದಾನದ ಕೊರತೆ ಇದೆ ಎಂದು ಹೇಳಲಾಗಿದೆ. ಕೋವ್ಯಾಕ್ಸ್ ಪಡೆಯಲು 184 ದೇಶಗಳು ಸಹಿ ಹಾಕಿವೆ. 92 ಕಡಿಮೆ ಆದಾಯ…
Author: Nammur Express Admin
ಹೆಚ್ಚುಜನ ಸೇರಿದರೆ ಆಯೋಜಕರ ಮೇಲೆ ಕೇಸ್ ಬೆಂಗಳೂರು: ಚಳಿ ಹೆಚ್ಚಾದಂತೆ ಮತ್ತೆ ಕರೋನಾ ಹಾವಳಿ ಹೆಚ್ಚಾಗುತ್ತಿದೆ. ಈ ನಡುವೆ ವಿಶ್ವದ ಹಲವು ದೇಶಗಳಲ್ಲಿ ಮತ್ತೆ ಲಾಕ್ ಡೌನ್ ಶುರುವಾಗಿದೆ. ಇನ್ನು ಗುಜರಾತ್ ರಾಜಧಾನಿ ಅಹಮದಾಬಾದ್‍ನಲ್ಲಿ ರಾತ್ರಿ ಕಪ್ರ್ಯೂ ಜಾರಿಗೊಳಿಸಲಾಗಿದೆ. ಈ ಮುಳಕ ಕರೋನಾ ಮತ್ತೊಂದು ಮುಖ ಅನಾವರಣಗೊಳ್ಳುತ್ತಿದೆ. ಮತ್ತೆ ನಿಯಮ ಜಾರಿ?: ಜನ ಕರೋನಾ ಭಯ ಬಿಟ್ಟು ಸಹಜ ಬದುಕಿಗೆ ಮರಳುತ್ತಿದ್ದಾರೆ. ಬದುಕಿನ ಬಂಡಿ ಎಳೆಯಲು ಸಿದ್ಧರಾಗಿದ್ದಾರೆ. ಈ ನಡುವೆ ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಸರಿಂಗ್ ಮರೆತಿದ್ದಾರೆ. ಇದೇ ಕರೋನಾ ಹೆಚ್ಚಳಕ್ಕೂ ಕಾರಣವಾಗಿದೆ. ಇತ್ತ ಹಾಸನ ಜಿಲ್ಲೆಯಲ್ಲಿ ಮದುವೆ ಸಮಾರಂಭಗಳಲ್ಲಿ 200ಕ್ಕೂ ಹೆಚ್ಚು ಮಂದಿ ಸೇರುವಂತಿಲ್ಲ” ಎಂದು ಶುಕ್ರವಾರ ಜಿಲ್ಲಾಧಿಕಾರಿ ಆರ್.ಗಿರೀಶ್ ತಿಳಿಸಿದ್ದಾರೆ. ಹಾಸನ ಜಿಲ್ಲೆಯ ಕಲ್ಯಾಣ ಮಂಟಪ ಹಾಗೂ ಹೋಟೆಲ್‍ಗಳಲ್ಲಿ ವಿವಾಹ ಹಾಗೂ ಇತರೆ ಕಾರ್ಯಕ್ರಮಗಳಲ್ಲಿ 200ಕ್ಕೂ ಹೆಚ್ಚು ಮಂದಿ ಸೇರುತ್ತಿರುವುದು ಗಮನಕ್ಕೆ ಬಂದಿದೆ. ಹೆಚ್ಚು ಜನರು ಸೇರುವ ಯಾವುದೇ ಕಾರ್ಯಕ್ರಮದಲ್ಲಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಸರ್,…
ಓಮ್ನಿ ವಾಹನ ಬೆಂಕಿಗಾಹುತಿ ಚಿಕ್ಕಮಗಳೂರು: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದು, ಪಿಡಿಒ ಒಬ್ಬರ ಓಮ್ನಿ ವಾಹನಕ್ಕೆ ಬೆಂಕಿ ಹಚ್ಚಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲ್ಲೂಕಿನ ಶಂಭೈನೂರು ಗ್ರಾಮದಲ್ಲಿ ನಡೆದಿದೆ. ಬಸಾಪುರ ಗ್ರಾಮದದಲ್ಲಿ ಕಲ್ಲೇಶಪ್ಪ ಎಂಬುವವರು ರಾಗಿ ಬೆಳೆದಿದ್ದು, ಅದೇ ಬಗರ್ ಹುಕುಂ ಜಮೀನಿನಲ್ಲಿ ಪಿಡಿಒ ಹನುಮಂತಪ್ಪ ಎಂಬುವವರು ರಾಗಿ ಕಟಾವು ಮಾಡಿಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಈ ವಿಚಾರವಾಗಿ ಬುಧವಾರ ಸಂಜೆ 2 ಕುಟುಂಬಗಳ ನಡುವೆ ಮಾರಾಮಾರಿ ನಡೆದು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಪಿಡಿಒ ಹನುಮಂತಪ್ಪನವರ ಓಮ್ನಿ ವಾಹನಕ್ಕೆ ಬೆಂಕಿ ಹಚ್ಚಿದ್ದಾರೆ. ಇನ್ನೂ ಬೆಂಕಿ ಹಚ್ಚಿದ ಹಿನ್ನೆಲೆ ಗಂಟೆಗೂ ಹೆಚ್ಚು ಕಾಲ ಓಮ್ನಿ ವಾಹನ ಹೊತ್ತಿ ಉರಿದಿದ್ದು, ಗ್ರಾಮಸ್ಥರಲ್ಲಿ ಕೆಲ ಕಾಲ ಭಯದ ವಾತಾವರಣ ನಿರ್ಮಾಣವಾಯಿತು. ಪರಿಶಿಷ್ಟ ಜಾತಿ ಮತ್ತು ಪಂಗಡ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ದೂರು ಹಾಗೂ ಕೊಲೆಗೆ ಯತ್ನದ ಪ್ರತಿದೂರು ದಾಖಲಾಗಿದೆ. ಆರೋಪಿಗಳನ್ನು ಬಂಧಿಸಲು ಕ್ರಮ ಕೈಗೊಳ್ಳಲಾಗಿದ್ದು, ತನಿಖೆಗೆ ಆದೇಶಿಸಲಾಗಿದೆ. ಪಿಡಿಒ…
ಯೂಟ್ಯೂಬರ್ ವಿರುದ್ಧ 500 ಕೋಟಿ ಮಾನನಷ್ಟ ಕೇಸ್ನಟ ಅಕ್ಷಯ್ ಕುಮಾರ್ ಹೆಸರಿಗೆ ಅವಮಾನ ಆರೋಪ ಮುಂಬೈ: ಯಾರದೋ ಹೆಸರನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಬಳಸುವ ಮುನ್ನ ಹುಷಾರ್..!. ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ತಮ್ಮ ಹೆಸರನ್ನು ಬೆಳೆಸಿದ ರಶೀದ್ ಸಿದ್ದಿಕಿ ಎಂಬ ಯೂಟ್ಯೂಬರ್ ವಿರುದ್ಧ 500 ಕೋಟಿ ರೂ.ಗಳ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಸಿದ್ಧಕಿ ನಾಲ್ಕು ತಿಂಗಳ ಅವಧಿಯಲ್ಲಿ ಸುಮಾರು 15 ಲಕ್ಷ ರೂ.ಗಳಿಸಿದ್ದಾರೆ. ಅವರ ಫಾಲೋವರ್ಸ್‍ಗಳು 2 ಲಕ್ಷದಿಂದ 3 ಲಕ್ಷಕ್ಕೆ ಹೆಚ್ಚಾಗಿದ್ದರು. ಈ ಪ್ರಕರಣದಲ್ಲಿ ನಕಲಿ ಸುದ್ದಿ ಹರಡಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಅವರ ಪುತ್ರ ಸಚಿವ ಆದಿತ್ಯ ಠಾಕ್ರೆ ಅವರ ಹೆಸರನ್ನು ಎಳೆದಿದ್ದಕ್ಕಾಗಿ ರಶೀದ್ ಸಿದ್ದಿಕಿ ಎಂಬಾತನ್ನು ಈ ಹಿಂದೆ ಬಂಧಿಸಲಾಗಿತ್ತು. ಜನರನ್ನು ದಾರಿ ತಪ್ಪಿಸಲು ಮತ್ತು ಹಲವಾರು ಪ್ರಸಿದ್ಧ ವ್ಯಕ್ತಿಗಳ ಬಗ್ಗೆ ನಕಲಿ ಸುದ್ದಿಗಳನ್ನು ಹರಡಲು ಯೂಟ್ಯೂಬರ್ ಡಿಜಿಟಲ್ ಮಾಧ್ಯಮವನ್ನು ಬಳಸಲಾಗಿದೆ. ತಮ್ಮ ವೀಡಿಯೊಗಳಲ್ಲಿ…
ಸುರತ್ಕಲ್ ಎನ್‍ಐಟಿಕೆ ಸ್ಟೆಪ್ ಕ್ಯಾಂಪಸ್ಸಲ್ಲಿ ಬಿಡುಗಡೆಶಿಕ್ಷಣ, ತರಬೇತಿ, ಕೌಶಲ್ಯಕ್ಕೆ ಹೊಸ ಸಾಧನ ಮಂಗಳೂರು: ರಾಜ್ಯ ಶಿಕ್ಷಣ ಕ್ಷೇತ್ರಕ್ಕೆ ಮತ್ತೊಂದು ಆಪ್ ಸೇರ್ಪಡೆಯಾಗಿದೆ. ಆಕೃತಿ 3ಡಿ Pvt. Ltd ಕಂಪನಿಯ “ಆವಿಷ್ಕಾರ್ ಆಪ್” ಇತ್ತೀಚೆಗೆ ಮಂಗಳೂರು ಸಮೀಪದ ಸುರತ್ಕಲ್ ಎನ್‍ಐಟಿಕೆ ಸ್ಟೆಪ್ ಕ್ಯಾಂಪಸ್ಸಲ್ಲಿ ಬಿಡುಗಡೆಗೊಂಡಿದೆ. ಎಲ್ಲಾ ಹಂತದ ಶಿಕ್ಷಣ, ತರಬೇತಿ, ಕೌಶಲ್ಯಕ್ಕೆ ಹೊಸ ರೀತಿಯ ಬೋಧನಾ ಕ್ರಮದೊಂದಿಗೆ ಈ ಆಪ್ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲಿದೆ. ಲಾಕ್ಡೌನ್ ಬಳಿಕ ದೇಶದ ಶಿಕ್ಷಣ ಕ್ರಮದಲ್ಲಿ ಬದಲಾವಣೆಯಾಗಿದ್ದು ಡಿಜಿಟಲ್ ಆಧಾರಿತ ಶಿಕ್ಷಣ ಜಾರಿಗೆ ಬಂದಿದೆ. ಡಿಜಿಟಲ್ ಎಜುಕೇಶನ್ ಕ್ಷೇತ್ರದಲ್ಲಿ ಆವಿಷ್ಕಾರ್ ಆಪ್ ಹೊಸ ಮೈಲುಗಲ್ಲಾಗಿದೆ. ಏಕೆಂದರೆ ಇಲ್ಲಿ ಶಿಕ್ಷಣದ ಜತೆ ಜತೆಗೆ ಪ್ರಾಯೋಗಿಕ ಕೋರ್ಸ್‍ಗಳಿಗೂ ಒತ್ತು ನೀಡಲಾಗಿದೆ. ರಾಜ್ಯದ ನವೋದ್ಯಮ ಕ್ಷೇತ್ರದಲ್ಲಿ ಹೆಸರು ಮಾಡಿರುವ ಸಂಶೋಧಕ ರಾಘವೇಂದ್ರ ಎಸ್ ಅವರು ಹುಟ್ಟು ಹಾಕಿರುವ ಈ ಆಪ್‍ನಲ್ಲಿ ಪ್ರೌಢ ಶಿಕ್ಷಣದಿಂದ ಇಂಜಿನಿಯರಿಂಗ್ ಶಿಕ್ಷಣದವರೆಗೆ ತರಬೇತಿ ಪಡೆಯಬಹುದು. ಎನ್‍ಐಟಿಕೆ ನಿರ್ದೇಶಕರಾದ ಉಮಾಮಹೇಶ್ವರ್ ರಾವ್ ಆನ್‍ಲೈನ್ ಮೂಲಕ ಆಪ್ ಬಿಡುಗಡೆಗೊಳಿಸಿದ್ದು, ಮಂಗಳೂರು…
ಕೋವಿಡ್-19 ಸಲಹಾ ಸಮಿತಿಗೆ ನೇಮಕಮಂಡ್ಯ ಮೂಲದ ಡಾ.ವಿವೇಕ್ ಎಚ್.ಮೂರ್ತಿಗೆ ಹುದ್ದೆ ವಾಷಿಂಗ್ಟನ್: ಇತ್ತೀಚೆಗಷ್ಟೆ ಅಮೆರಿಕ ಅಧ್ಯಕ್ಷರಾಗಿ ಚುನಾಯಿತರಾಗಿರುವ ಜೋ ಬೈಡೆನ್ ಅವರು ರಚಿಸಿರುವ ಅಮೆರಿಕಾ ಕೋವಿಡ್-19 ಸಲಹಾ ಸಮಿತಿಗೆ ತಮಿಳುನಾಡು ಮೂಲದ ಡಾ.ಸಲೈನ್ ಗೌಂಡರ್ ಅವರನ್ನು ಸದಸ್ಯರಾಗಿ ನೇಮಕ ಮಾಡಲಾಗಿದೆ. ಇದೇ ಸಮಿತಿಗೆ ಮಂಡ್ಯ ಮೂಲದ ಡಾ.ವಿವೇಕ್ ಎಚ್.ಮೂರ್ತಿ ಅವರು ಸಹ ಅಧ್ಯಕ್ಷರಾಗಿದ್ದಾರೆ. ಈ ಮೂಲಕ ಅಮೆರಿಕಾದಲ್ಲಿ ಭಾರತದ ಪತಾಕೆ ಹಾರುತ್ತಿದೆ. ಡಾ.ಸಲೈನ್ ಅವರು ನ್ಯೂಯಾರ್ಕ್‍ನ ಗ್ರಾಸ್‍ಮನ್ ಸ್ಕೂಲ್ ಆಫ್ ಮೆಡಿಸಿನ್‍ನಲ್ಲಿ ವೈದ್ಯಕೀಯ ಮತ್ತು ಸಾಂಕ್ರಾಮಿಕ ರೋಗಗಳ ಕ್ಲಿನಿಕಲ್ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ತಮಿಳುನಾಡು ಮೂಲದ ಕಮಲಾ ಹ್ಯಾರಿಸ್ ಅವರು ಅಮೆರಿಕ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ನಡುವೆ ಈ ಹುದ್ದೆ ಭಾರತೀಯರಿಗೆ ಹೆಮ್ಮೆ ತರಿಸಿದೆ.
ಘಟನೆ ಹಿಂದೆ ಕಾಣದ ಕೈ..? ಚೆನ್ನೈ: ನಟಿ, ರಾಜಕಾರಣಿ ಖುಷ್ಬು ಪ್ರಯಾಣಿಸುತ್ತಿದ್ದ ಕಾರು ನ.18ರಂದು ಅಪಘಾತಕ್ಕೆ ಈಡಾಗಿದ್ದು, ಯಾವುದೇ ಅಪಾಯ ಆಗಿಲ್ಲ, ಆದರೆ ಇದೀಗ ನಟಿ ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಖುಷ್ಬು ಅವರು ತಮಿಳುನಾಡಿನ ಕೂಡಲ್ಲೋರುಗೆ ತಮ್ಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಎದುರಿನಿಂದ ಬಂದ ಟ್ಯಾಂಕರ್ ಒಂದು ಕಾರಿಗೆ ಡಿಕ್ಕಿ ಹೊಡೆದು ಕಾರು ಜಖಂ ಆಗಿದೆ. ಕಾರಿನ ಚಿತ್ರಗಳನ್ನು ಖುಷ್ಬು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ದೇವರು ಹಾಗೂ ನಿಮ್ಮಗಳ ಕೃಪೆಯಿಂದ ನಾನು ಪಾರಾಗಿದ್ದೇನೆ ಎಂದಿದ್ದಾರೆ. ಘಟನೆ ಬಗ್ಗೆ ಅನುಮಾನವನ್ನೂ ವ್ಯಕ್ತಪಡಿಸಿರುವ ಖುಷ್ಬು, ನಾನು ರಸ್ತೆ ನಿಯಮದ ಪ್ರಕಾರ ಸರಿಯಾಗಿಯೇ ಹೋಗುತ್ತಿದ್ದೆ, ಆದರೆ ಅದೆಲ್ಲಿಂದಲೋ ಹಠಾತ್ತನೆ ಬಂದ ಟ್ಯಾಂಕರ್ ನನ್ನ ಕಾರಿಗೆ ಗುದ್ದಿತು, ಇದನ್ನು ಮಾಧ್ಯಮಗಳ ಗಮನಕ್ಕೆ ತರಲು ಇಚ್ಛೆಪಡುತ್ತಿದ್ದೇನೆ ಎಂದಿದ್ದಾರೆ ಟ್ಯಾಂಕರ್‍ನ ಚಾಲಕನನ್ನು ಪೆÇಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಖುಷ್ಬು ಕಾಂಗ್ರೆಸ್ ತೊರೆದು ಇತ್ತೀಚೆಗಷ್ಟೆ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ತಮಿಳುನಾಡಿನಲ್ಲಿ ಖುಷ್ಬೂಪ್ರಮುಖ ಬಿಜೆಪಿ ಮಹಿಳಾ ನಾಯಕಿ. ಹೀಗಾಗಿ…
ದೀಪಾವಳಿಯಲ್ಲಿ ಅತೀ ಹೆಚ್ಚು ಬಹಿಷ್ಕಾರ ನವದೆಹಲಿ: ದೀಪಾವಳಿ ವ್ಯಾಪಾರ-ವಹಿವಾಟಿನಲ್ಲಿ ಚೀನಾಗೆ ಈ ವರ್ಷ ಭಾರೀ ನಷ್ಟ ಉಂಟಾಗಿದೆ. ಜೊತೆಗೆ ಇದೇ ಮೊದಲ ಬಾರಿಗೆ ಭಾರತದಲ್ಲಿ ಚೀನಾ ವಸ್ತು ಬಹಿಷ್ಕಾರ ಅತೀ ಹೆಚ್ಚು ಪ್ರಮಾಣದಲ್ಲಾಗಿದೆ. ಚೀನಾಕ್ಕೆ ಈಗಾಗಲೇ 40,000 ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎಂದು ಈಗಾಗಲೇ ಸಿಎಐಟಿ ಮೂಲಕ ತಿಳಿದುಬಂದಿದೆ. ಶೇ.71ರಷ್ಟು ಭಾರತೀಯರು ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಿದ್ದಾರೆ. ಲೋಕಲ್ ಸರ್ಕಲ್ಸ್ ನಡೆಸಿರುವ ಸಮೀಕ್ಷೆಯ ಪ್ರಕಾರ ಶೇ.71ರಷ್ಟು ಜನರು ಮೇಡ್ ಇನ್ ಚೀನಾ ಗುರುತನ್ನು ಹೊಂದಿರುವ ಸರಕುಗಳನ್ನು ಖರೀದಿಸಿಲ್ಲ. ಸಮೀಕ್ಷೆಯಲ್ಲಿ ಕಮ್ಯುನಿಟಿ ಸೋಶಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ 204 ಜಿಲ್ಲೆಗಳಲ್ಲಿ 14,000 ಭಾರತೀಯ ಗ್ರಾಹಕರನ್ನು ಸಮೀಕ್ಷೆಗೊಳಪಡಿಸಿದ್ದು, ಶೇ.29 ಗ್ರಾಹಕರು ಒಂದು ಅಥವಾ ಒಂದಕ್ಕಿಂತ ಹೆಚ್ಚು ಚೀನಾ ಉತ್ಪಾದಿತ ಉತ್ಪನ್ನಗಳನ್ನು ಖರೀದಿಸಿದ್ದಾರೆ. ಈ ಪೈಕಿ ಶೇ.11ರಷ್ಟು ಅದರ ಬಗ್ಗೆ ಮಾಹಿತಿ ಇಲ್ಲದೇ ಖರೀದಿಸಿದ್ದರೆ ಶೇ.16 ತಿಳಿದೂ ಸಹ ಚೀನಾ ಉತ್ಪನ್ನಗಳನ್ನು ಖರೀದಿಸಿದ್ದಾರೆ. ಚೀನಾ ಪಟಾಕಿ, ಅಲಂಕಾರಿಕ ವಸ್ತುಗಳು ಈಗಾಗಲೇ ಮಾರುಕಟ್ಟೆಯಿಂದ ಸರಿಯುತ್ತಿವೆ.
3 ವಾರದೊಳಗೆ ದಿನಾಂಕ ಪ್ರಕಟಗ್ರಾಮಗಳಲ್ಲಿ ರಾಜಕೀಯ ಶುರು ಬೆಂಗಳೂರು: ಮುಂದಿನ 3 ವಾರಗಳಲ್ಲಿ ಗ್ರಾಮ ಪಂಚಾಯಿತಿ ಚುನಾವಣಾ ವೇಳಾಪಟ್ಟಿ ಪ್ರಕಟಿಸುವಂತೆ ಹೈಕೋರ್ಟ್ ಚುನಾವಣಾ ಆಯೋಗಕ್ಕೆ ಆದೇಶಿಸಿದೆ. ಈ ನಡುವೆ ಕೋವಿಡ್ ಪರಿಸ್ಥಿತಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಜಿಲ್ಲೆಗಳಲ್ಲಿ 2 ಹಂತಗಳಲ್ಲಿ ಚುನಾವಣೆ ನಡೆಸಲು ಆಯೋಗ ಸಿದ್ಧತೆ ಮಾಡಿಕೊಂಡಿದೆ. ರಾಜ್ಯ ಚುನಾವಣಾ ಆಯೋಗದ ಆಯುಕ್ತರಾದ ಡಾ.ಬಿ.ಬಸವರಾಜು ರಾಜ್ಯದ ಎಲ್ಲಾ ಡೀಸಿ, ಎಸ್ಪಿ ಹಾಗೂ ಜಿಪಂ ಸಿಇಒಗಳ ಜತೆ ವೀಡಿಯೋ ಸಂವಾದ ನಡೆಸಿ ಮಾಹಿತಿ ನೀಡಿದ್ದಾರೆ. ಈಗಾಗಲೇ ಜಿಲ್ಲಾಡಳಿತಗಳು ಸಜ್ಜುಗೊಂಡಿದ್ದು, ತಾಲೂಕು ಆಡಳಿತಗಳಿಗೆ ಸಿದ್ಧತೆಗೆ ಸೂಚನೆ ನೀಡಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಹೆಚ್ಚು ಜನಸಂದಣಿಯಾಗದಂತೆ ಹಾಗೂ ಸಿಬ್ಬಂದಿಗಳ ಕೊರತೆಯಾಗದಂತೆ ಯೋಜಿಸಿ ಎರಡು ಹಂತಗಳಲ್ಲಿ ಚುನಾವಣೆ ನಡೆಸಲು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು. ಗ್ರಾಮ ಪಂಚಾಯ್ತಿಯು ಪ್ರಜಾ ಪ್ರಭುತ್ವದ ಮೂಲ ಅಡಿಪಾಯವಾಗಿದೆ. ಹಾಗಾಗಿ ಎಲ್ಲಾ ಸೂಕ್ಷ್ಮ ವಿಷಯಗಳ ಮೇಲೂ ಹೆಚ್ಚಿನ ಗಮನಹರಿಸಿ, ಯಾವುದೇ ಲೋಪಗಳಿಲ್ಲದಂತೆ ನ್ಯಾಯಯುತವಾಗಿ…
ಚಿತ್ರದ ಶೂಟಿಂಗ್ ವೇಳೆ ಘಟನೆ ಮುಂಬೈ: ಬಾಲಿವುಡ್ ನಟಿ ತಾಪ್ಸಿ ತಮ್ಮ ಅಭಿನಯದ “ರಶ್ಮಿ ರಾಕೆಟ್”ಗಾಗಿ ಚಿತ್ರೀಕರಣ ನಡೆಸುತ್ತಿದ್ದು, ಬೈಕ್ ರೈಡಿಂಗ್‍ನಲ್ಲಿರುವ ಚಿತ್ರವನ್ನು ಇನ್ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದರು. ಇದೀಗ ಆ ಚಿತ್ರ ಆಧರಿಸಿ ತಾಪ್ಸಿಗೆ ದಂಡ ವಿಧಿಸಲಾಗಿದೆ. ರಶ್ಮಿ ರಾಕೆಟ್ ಎಂಬುದು ರಶ್ಮಿ ಎಂಬ ಹೆಸರಿನ ಹುಡುಗಿ ಸಣ್ಣ ಗ್ರಾಮದಿಂದ ಅಥ್ಲೆಟಿಕ್ ಸ್ಪರ್ಧೆಗಳಿಗೆ ತೆರಳುವ ಕಥೆ. ಆಕರ್ಶ್ ಖುರಾನ ನಿರ್ದೇಶನ ಹಾಗೂ ರೋನಿ ಸ್ಕ್ರೂವಾಲಾ ಸಹ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಚಿತ್ರ 2021ರಲ್ಲಿ ಸಿನಿಮಾ ಬಿಡುಗಡೆಯಾಗುವ ನಿರೀಕ್ಷೆ ಇದೆ. ವಿವಾದಿತ ಫೋಟೋ ಈಗ ವೈರಲ್ ಆಗಿದೆ.