ಸಚಿವರಾಗಿದ್ದ ಕುಲಕರ್ಣಿಗೆ ಸಾಥ್ ನೀಡಿದ್ದ ಅಧಿಕಾರಿಗಳು…. ಹುಬ್ಬಳ್ಳಿ: ಜಿಲ್ಲಾ ಪಂಚಾಯತಿ ಸದಸ್ಯ ಯೋಗೇಶ ಗೌಡ ಕೊಲೆ ಪ್ರಕರಣದ ತನಿಖೆ ಈಗ ಮತ್ತೊಂದ ಹಂತಕ್ಕೆ ತಲುಪಿದ್ದು, ಸಾಕ್ಷಿ ನಾಶಕ್ಕೆ ಮಾಜಿ ಸಚಿವ ವಿನಯ ಕುಲಕರ್ಣಿ ಕೋಟಿ-ಕೋಟಿ ಹಣ ಸುರಿದಿದ್ದಾರೆ ಎಂಬ ಮಾಹಿತಿಯನ್ನು ಸಿಬಿಐ ಅಧಿಕಾರಿಗಳು ಕಲೆ ಹಾಕಿದ್ದಾರೆ. ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ ಆರೋಪದ ಹಿನ್ನೆಲೆಯಲ್ಲಿ ಕೆಎಎಸ್ ಅಧಿಕಾರಿ ಸೋಮಶೇಖರ ನ್ಯಾಮಗೌಡರ ವಿಚಾರಣೆಯನ್ನು ಸಿಬಿಐ ಭಾನುವಾರವೂ ಮುಂದುವರೆಸಿದೆ. ಸಚಿವರ ಆಪ್ತರಾಗಿದ್ದರು…: ವಿನಯ ಆಪ್ತ ಕಾರ್ಯದರ್ಶಿಯಾಗಿದ್ದ ಸೋಮಲಿಂಗ ನ್ಯಾಮಗೌಡ, ವಿನಯ ಕುಲಕರ್ಣಿ ಸಚಿವರಾಗಿದ್ದ ವೇಳೆ ಆಪ್ತ ಕಾರ್ಯದರ್ಶಿಯಾಗಿದ್ದರು. ಸೋಮಲಿಂಗ ನ್ಯಾಮಗೌಡ ಅವರನ್ನು ಕಳೆದ ಮೂರು ದಿನಗಳಿಂದ ಸಿಬಿಐನಿಂದ ವಿಚಾರಣೆ ನಡೆಸಲಾಗಿದೆ. ವಿನಯ ಹಾಗೂ ಸೋಮಲಿಂಗ ಇಬ್ಬರನ್ನೂ ಮುಖಾಮುಖಿ ವಿಚಾರಣೆ ಮಾಡಿದ್ದ ಸಿಬಿಐ ಅಧಿಕಾರಿಗಳು ಮತ್ತೇ ವಿಚಾರಣೆಗಾಗಿ ಸಿಎಆರ್ ಮೈದಾನಕ್ಕೆ ಕರೆಸಿಕೊಂಡು ವಿಚಾರಣೆ ನಡೆಸಿದ್ದಾರೆ. 2 ಕೋಟಿ ರೂ. ಹಣ: ಸಾಕ್ಷ ನಾಶಪಡಿಸಲು ದೊಡ್ಡ ಮಟ್ಟದ ಹಣ ನೀಡಿದ ಆರೋಪದ ಹಿನ್ನೆಲೆಯಲ್ಲಿ ನ್ಯಾಮಗೌಡ ವಿಚಾರಣೆ ನಡೆಸಲಾಗುತ್ತಿದೆ.…
Author: Nammur Express Admin
ಪಂಚಮಸಾಲಿ ಕೆಲಮಠಾಧೀಶರಿಂದ ಗೌಪ್ಯ ಸಭೆ..? ಹುಬ್ಬಳ್ಳಿ: ಧರ್ಮದೊಂದಿಗೆ ಯಾವುದೇ ಕಾರಣಕ್ಕೂ ರಾಜಕೀಯ ವಿಲೀನಗೊಳಿಸಬಾರದು. ಒಂದೊಮ್ಮೆ ರಾಜಕೀಯದೊಂದಿಗೆ ಧರ್ಮ ವಿಲೀನಗೊಂಡರೇ ಸಮಾಜ ಅಧೋಗತಿಗೆ ಇಳಿಯುವುದು ಶತಃಸಿದ್ಧ ಎಂಬುದು ಮತ್ತೇ ಸಾಬೀತಾಗುವ ಸಾಧ್ಯತೆಗಳು ಮಾಜಿ ಸಚಿವ ವಿನಯ ಕುಲಕರ್ಣಿಯವರ ಬಂಧನದಿಂದ ಸಾಬೀತಾಗತೊಡಗಿದೆಯೇ..? ಇಂತಹದೊಂದು ಚರ್ಚೆ ಇದೀಗ ಇಡೀ ರಾಜ್ಯದಲ್ಲೇ ಆರಂಭಗೊಂಡಿದ್ದು ಸುಳ್ಳಲ್ಲ. ಕಾವಿತೊಟ್ಟ ಸಾಧುಗಳು ಜಗದ ಸುಖಃ, ಶಾಂತಿಗಾಗಿ ದೇವರನ್ನು ಪ್ರಾರ್ಥಿಸಿ ಜಾತಿ, ಭೇದ ಮಾಡದೇ ಸಕಲರಿಗೂ ಒಳಿತನ್ನೇ ಬಯಸುವುದು ಶ್ರೀಗಳ ಕರ್ಮ. ಆದರೆ, ಯೋಗೇಶಗೌಡ ಕೊಲೆ ಪ್ರಕರಣದಲ್ಲಿ ಸಿಲುಕಿ ಹಾಕಿಕೊಂಡಿರುವ ಪಂಚಸಾಲಿ ಸಮಾಜದ ಮುಖಂಡ ಹಾಗೂ ಮಾಜಿ ಸಚಿವ ವಿನಯ ಕುಲಕರ್ಣಿಯವರನ್ನು ಬಂಧನದಿಂದ ಮುಕ್ತಗೊಳಿಸಲು ಸ್ವಾಮೀಜಿಗಳು ನಡೆಸುತ್ತಿರುವ ಯತ್ನ ನಿಜಕ್ಕೂ ಭಕ್ತ ಸಮೂಹವನ್ನು ವಿಚಲಿತಗೊಳಿಸುವಂತೆ ಮಾಡಿದ್ದು ಸುಳ್ಳಲ್ಲ. ಕೆಲ ಕಾವಿಧಾರಿಗಳ ರಾಜಕೀಯ ಬುದ್ಧಿಯಿಂದ ಅದೇ ಮಠಾಧೀಶರು ಸಮುದಾಯದ ಜನ ಕೈ ಕೈ ಹಿಸುಕಿಕೊಳ್ಳುವಂತಾಗಿದೆ.ಪ್ರಸಿದ್ಧ ಮಠದಲ್ಲಿ ಸಭೆ?: ಒಂದೆಡೆ ಮಾಜಿ ಸಚಿವ ವಿನಯ ಕುಲಕರ್ಣಿಗೆ, ಯೋಗೇಶಗೌಡ ಕೊಲೆ ಪ್ರಕರಣದಲ್ಲಿ ಸಿಬಿಐ ಅಧಿಕಾರಿಗಳು ಡ್ರಿಲ್ ನಡೆಸುತ್ತಿದ್ದಾರೆ.…
ಜಿಪಂ ಸದಸ್ಯ ಯೋಗೇಶಗೌಡ ಕೊಲೆ ಕೇಸಿಗೆ ಟ್ವಿಸ್ಟ್? ಹುಬ್ಬಳ್ಳಿ: ರಾಜ್ಯಾದ್ಯಂತ ಕುತೂಹಲ ಕೆರಳಿಸಿರುವ ಯೋಗೇಶ ಗೌಡ ಕೊಲೆ ಪ್ರಕರಣದ ತನಿಖೆ ಹೊಣೆಹೊತ್ತ ಸಿಬಿಐ ಅಧಿಕಾರ ರಾಕೇಶ ರಂಜನ್ ಸಾಮಾನ್ಯದವರಲ್ಲ!ಹೌದು, ಕರ್ನಾಟಕದ ಜನತೆಗೆ ನೆನಪಿರಬಹುದು, ಮಾಜಿ ಸಚಿವ ಜನಾರ್ಧನ ರೆಡ್ಡಿಯ ಗಣಿಯನ್ನು ಅಗೆದು-ಬಗೆದು ಜೈಲಿಗೆ ಅಟ್ಟಿದ ಅಧಿಕಾರಿ ಇವರೇ. ಇದೀಗ ಮತ್ತೊಬ್ಬ ಮಾಜಿ ಸಚಿವ ವಿನಯ ಕುಲಕರ್ಣಿ ಅವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. 2019 ಸೆಪ್ಟೆಂಬರ್‍ನಲ್ಲಿ ಯೋಗೇಶಗೌಡ ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸಿದಾಗ ತನಿಖಾಧಿಕಾರಿಯಾಗಿ ನಿಯುಕ್ತಿಗೊಂಡಿದ್ದ ಇದೇ ರಾಕೇಶ ರಂಜನ್.ಯೋಗೇಶಗೌಡ ಕೊಲೆಯಾದ 48 ಗಂಟೆಯಲ್ಲಿ 6 ಆರೋಪಿಗಳು ಪೆÇಲೀಸರಿಗೆ ಶರಣಾಗಿ , ತಾವೇ ಕೊಲೆ ಆರೋಪಿಗಳು ಎಂದು ಹೇಳಿಕೊಂಡಾಗ ಈ ಪ್ರಕರಣ ಮುಗಿದೇ ಹೋಯಿತು ಎಂದು ಭಾವಿಸಿದವರೇ ಹೆಚ್ಚು. ಸರ್ಕಾರ ಸಿಬಿಐಗೆ ಪ್ರಕರಣ ಹಸ್ತಾಂತರಿಸಿದ ನಂತರ ತನಿಖೆಯ ಜವಾಬ್ದಾರಿ ಹೊತ್ತುಕೊಂಡವರು ರಾಕೇಶ ರಂಜನ್.ಯೋಗೇಶಗೌಡನನ್ನು ಕೊಲೆಗೈದ ಶೂಟರ್‍ಗಳು ಸ್ಥಳೀಯರಲ್ಲ. ಬದಲಾಗಿ ತಮಿಳುನಾಡು, ಬೆಂಗಳೂರು ಮೂಲದವರು. ಇವರು ಸುಪಾರಿ ಹಂತಕರು ಎಂಬ ಸತ್ಯ ಸಂಗತಿಯನ್ನು ಬಹಿರಂಗಗೊಳಿಸಿದವರು…
ಮಂಜುನಾಥ ಗೌಡರ ಅರ್ಜಿಗೆ ಹೈಕೋರ್ಟ್ ತಡೆನ.9ರಂದೇ ಡಿಸಿಸಿ ಬ್ಯಾಂಕ್ ಚುಣಾವಣೆಇತ್ತ ತೀರ್ಥಹಳ್ಳಿಯಲ್ಲಿ ಗೌಡರ ಪಾದಯಾತ್ರೆ! ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತದ ಚುನಾವಣೆಗೆ ಕರ್ನಾಟಕ ಹೈಕೋರ್ಟ್ ತಡೆ ನೀಡಲು ನಿರಾಕರಿಸಿದೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷರನ್ನು ಆಯ್ಕೆ ಮಾಡಲು ನವೆಂಬರ್ 9ರಂದು ಚುನಾವಣೆ ನಡೆಯಲಿದೆ. ಈ ಮೂಲಕ ಮೊದಲ ಬಾರಿಗೆ ಸಹಕಾರಿ ನಾಯಕ ಡಾ.ಆರ್.ಎಂ.ಮಂಜುನಾಥ ಗೌಡರ ಕೈಯಿಂದ ಡಿಸಿಸಿ ಬ್ಯಾಂಕ್ ಅಧಿಕಾರ ಕೈತಪ್ಪುವ ಸಾಧ್ಯತೆ ಇದೆ. ಶಿವಮೊಗ್ಗ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್. ಎಂ. ಮಂಜುನಾಥ ಗೌಡ ಸಲ್ಲಿಸಿದ್ದ ಅರ್ಜಿಯ ತುರ್ತು ವಿಚಾರಣೆಗೆ ಹೈಕೋರ್ಟ್ ನಿರಾಕರಿಸಿದೆ. ಚುನಾವಣಾಧಿಕಾರಿ ನಾಗೇಂದ್ರ ಎಫ್. ಹೊನ್ನಾಳಿ ಸೋಮವಾರ ಚುನಾವಣೆ ನಡೆಸಲಿದ್ದಾರೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನದ ಚುನಾವಣೆಗೆ ತಡೆ ನೀಡಬೇಕು. ತಮ್ಮ ಸದಸ್ಯತ್ವ ಅನರ್ಹತೆ ಕುರಿತ ತೀರ್ಪಿಗೆ ತಡೆ ನೀಡಬೇಕು ಎಂದು ಮಾಜಿ ಅಧ್ಯಕ್ಷ ಆರ್. ಎಂ. ಮಂಜುನಾಥ ಗೌಡ ಹೈಕೋರ್ಟ್ ಮೆಟ್ಟಿಲೇರಿದ್ದರು. ತುರ್ತಾಗಿ ವಿಚಾರಣೆ ನಡೆಸುವ ಅರ್ಜಿ ಇದಲ್ಲ. ಮುಖ್ಯ ಅರ್ಜಿಯ…
ಭಾರತದ ಮೂಲದ ಕಮಲಾ ಉಪಾಧ್ಯಕ್ಷೆ ತೀವ್ರ ಕುತೂಹಲ ಕೆರಳಿಸಿದ್ದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡನ್ ಅಧ್ಯಕ್ಷರಾಗಿದ್ದಾರೆ.ಬೈಡನ್ 290 ಸ್ಥಾನ ಪಡೆದು ಗೆಲುವು ಸಾಧಿಸಿದ್ದಾರೆ.214 ಸ್ಥಾನ ಪಡೆದ ಟ್ರಂಪ್ ಸೋಲು ಕಂಡಿದ್ದಾರೆ.ಭಾರತೀಯ ಮೂಲದ ಕಮಲಾ ಹ್ಯಾರಿಸ್ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಚೆನ್ನೈ ಮೂಲದ ಕಮಲಾ ಅಮೆರಿಕಾದ ಸಾಧಕಿ. ಜೊತೆಗೆ ಮೊದಲ ಮಹಿಳಾ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.2016ರಲ್ಲಿ ಟ್ರಂಪ್ ಆಯ್ಕೆಯಾಗಿದ್ದರು. 2008, 2012ರಲ್ಲಿ ಬರಾಕ್ ಒಬಾಮಾ ಆಯ್ಕೆಯಾಗಿದ್ದರು.ಅಮೆರಿಕದ 46ನೇ ಅಧ್ಯಕ್ಷರಾಗಿ ಡೆಮಾಕ್ರಟಿಕ್ ಪಕ್ಷದ ಜೋ ಬೈಡನ್ ಆಯ್ಕೆಯಾಗಿದ್ದು, ರಿಪಬ್ಲಿಕನ್ ಪಕ್ಷದ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಮುಖಭಂಗವಾದಂತಾಗಿದೆ.270 ಮ್ಯಾಜಿಕ್ ನಂಬರ್ ಆಗಿತ್ತು.
ಎನ್.ಆರ್.ಪುರ ತಾಲೂಕಿನ ಪ್ರಸಿದ್ಧ ಜೈನ ಬಸ್ತಿಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ ಸಾಥ್ ಎನ್.ಆರ್.ಪುರ: ನಾಡಿನ ಪ್ರಸಿದ್ಧ ಜೈನ ಬಸ್ತಿಗಳಲ್ಲಿ ಒಂದಾದ ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಅತಿಶಯ ಕ್ಷೇತ್ರದ ಬಸ್ತಿ ಮಠಕ್ಕೆ ಮಾಜಿ ಸಚಿವ ಅಭಯಚಂದ್ರ ಜೈನ್ ಭೇಟಿ ನೀಡಿ ಜ್ವಾಲಾಮಾಲಿನಿ ದೇವಿಯ ಅಮ್ಮನವರ ದರ್ಶನ ಪಡೆದರು. ಶೃಂಗೇರಿ ಕ್ಷೇತ್ರದ ಶಾಸಕರಾದ ಟಿ.ಡಿ.ರಾಜೇಗೌಡ ಅವರನ್ನು ಸ್ವಾಗತಿಸಿ ಸ್ವಾಮೀಜಿಗಳ ಆಶೀರ್ವಾದ ಪಡೆದರು. ಈ ವೇಳೆ ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಮುಕುಂದ ಮತ್ತಿತರರು ಹಾಜರಿದ್ದರು.
ಕಿಮ್ಮನೆ ಬೇಡ ಅಂದರೂ ಭಾಗಿಯಾದ ನಾಯಕರುನಾಯಕರು ಹೇಳಿದ್ದೇನು..?, ಮಾಡಿದ್ದೇನು..? ತೀರ್ಥಹಳ್ಳಿ: ಸಹಕಾರಿ ನಾಯಕ ಮಂಜುನಾಥ ಗೌಡ ಅವರ ನಾಯಕತ್ವದ ರೈತ ಪಾದಯಾತ್ರೆಯಲ್ಲಿ ಕಾಂಗ್ರೆಸ್ ನಾಯಕರು ಭಾಗಿಯಾಗುವ ಮೂಲಕ ಇದೀಗ ಹೊಸ ಚರ್ಚೆಗೆ ಕಾರಣವಾಗಿದೆ. ಜತೆಗೆ ಕಾಂಗ್ರೆಸ್ ಪಕ್ಷದಲ್ಲೂ ಸಣ್ಣನೆ ಕಿಡಿ ಹೊತ್ತಿದೆ.ಮಾಜಿ ಸಚಿವ, ಕಾಂಗ್ರೆಸ್ ನಾಯಕ ಕಿಮ್ಮನೆ ರತ್ನಾಕರ್ ಅವರು ಮಂಜುನಾಥ ಗೌಡರ ನೇತೃತ್ವದ ಪಾದಯಾತ್ರೆಯಲ್ಲಿ ಕಾಂಗ್ರೆಸ್ ನಾಯಕರು ಭಾಗಿಯಾಗುವುದು ಬೇಡ ಎಂದು ಮಾಧ್ಯಮಗಳ ಮೂಲಕ ಕರೆ ನೀಡಿದ್ದರು. ಆದರೆ ಅನೇಕ ಮುಂಚೂಣಿ ನಾಯಕರು ಪಾದಯಾತ್ರೆಯಲ್ಲಿ ಭಾಗಿಯಾಗುವ ಮೂಲಕ ಈಗ ಕಾಂಗ್ರೆಸ್ ಪಾಳಯದಲ್ಲಿ ಸಣ್ಣ ಕಿಡಿ ಹೊತ್ತಿದೆ. ಇದು ಯಾವ ರೂಪ ತಾಳುವುದು ಎಂಬ ಕುತೂಹಲ ಮೂಡಿದೆ. ಜೊತೆಗೆ ಸಭೆಯಲ್ಲೇ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಶುಭ ಕೋರಿ ಓರ್ವ ನಾಯಕನನ್ನು ಕಳಿಸಿಕೊಟ್ಟಿದ್ದಾರೆ ಎಂದು ಮಂಜುನಾಥ ಗೌಡರೇ ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ. ಆದರೆ ಕಾಂಗ್ರೆಸ್ ನಾಯಕರು, ಇದೊಂದು ರೈತಪರ, ಪಕ್ಷಾತೀತ ಹೋರಾಟ. ನಾವು ಜನರ ಪರ ಹೋರಾಟಕ್ಕೆ ಬಂದಿದ್ದೇವೆ ಎಂದು ಸಮರ್ಥನೆ ನೀಡಿದ್ದಾರೆ.
ದಾರಿಯಲ್ಲಿ ಜ್ಯೂಸ್, ಊಟ-ತಿಂಡಿ: ಹಲವೆಡೆ ಸನ್ಮಾನಮಧು 16 ಕಿಮೀ, ಬೇಳೂರು 18 ಕಿಮೀ ನಡೆದರು! ತೀರ್ಥಹಳ್ಳಿ: ಕಸ್ತೂರಿ ರಂಗನ್ ವರದಿ ವಿರುದ್ಧ ಸಹಕಾರಿ ನಾಯಕ ಡಾ.ಆರ್.ಎಂ.ಮಂಜುನಾಥ ಗೌಡ ನೇತೃತ್ವದಲ್ಲಿ ತೀರ್ಥಹಳ್ಳಿಯ ಬಿದರಗೋಡಿನಿಂದ ಆರಂಭವಾದ ಪಾದಯಾತ್ರೆ ಮೊದಲ ದಿನ 22 ಕಿಮೀ ಸಾಗಿದೆ. ಮಂಜುನಾಥ ಗೌಡ ಸೇರಿದಂತೆ ಬಹುತೇಕ ನಾಯಕರು, ಕಾರ್ಯಕರ್ತರು 22 ಕಿ.ಮೀ ನಡೆದಿದ್ದಾರೆ.ಜೆಡಿಎಸ್ ನಾಯಕ ಮಧು ಬಂಗಾರಪ್ಪ 16, ಕಾಂಗ್ರೆಸ್ ನಾಯಕ ಬೇಳೂರು ಗೋಪಾಲಕೃಷ್ಣ 18 ಕಿಮೀ ನಡೆದಿದ್ದಾರೆ. ಮಂಜುನಾಥ ಗೌಡ 22 ಕಿಮೀ ನಡೆದು ರೆಕಾರ್ಡ್ ಮಾಡಿದ್ದಾರೆ. ದಾರಿಯುದ್ದಕ್ಕೂ ನೀರು, ಮಜ್ಜಿಗೆ, ನೀರು, ತಿಂಡಿ ವ್ಯವಸ್ಥೆಯನ್ನು ಅವರ ಅಭಿಮಾನಿಗಳು ಮಾಡಿದ್ದರು. ಮಧು ಬಂಗಾರಪ್ಪ ಬಿದರಗೋಡಿನಿಂದ ನಾಬಳದವರೆಗೆ ನಡೆದರು. ಬೇಳೂರು ಗೋಪಾಲಕೃಷ್ಣ ಕೆಂದಾಳಬೈಲ್‍ವರೆಗೆ ನಡೆದಿದ್ದಾರೆ. ಮಂಜುನಾಥ ಗೌಡ ನಾಲೂರಿನಲ್ಲೇ ವಾಸ್ತವ್ಯ ಹೂಡಿದ್ದಾರೆ. ಭಾನುವಾರ ನಾಲೂರಿಂದ ಶಿವರಾಜಪುರದವರೆಗೆ ಸುಮಾರು 18 ಕಿಮೀ ಪಾದಯಾತ್ರೆ ಇದೆ. ಬಹುತೇಕ ನಾಯಕರು ಭಾಗಿಯಾಗಲಿದ್ದಾರೆ.ಮಂಜುನಾಥ ಗೌಡ ಮತ್ತು ಇತರೆ ನಾಯಕರಿಗೆ ದಾರಿಯುದ್ದಕ್ಕೂ ಅಭಿಮಾನಿಗಳು, ನಾಯಕರು ಸನ್ಮಾನ ಮಾಡಿದರು.…
ತೀರ್ಥಹಳ್ಳಿ ರಾಜಕೀಯದಲ್ಲಿ ಹೊಸ ಅಧ್ಯಾಯ ಸೃಷ್ಟಿ1000ಕ್ಕೂ ಹೆಚ್ಚು ಜನರು ಭಾಗಿ: ಜೆಡಿಎಸ್ ಬ್ಯಾನರ್ ಇಲ್ಲ! ತೀರ್ಥಹಳ್ಳಿ: ಕಸ್ತೂರಿ ರಂಗನ್ ವರದಿ ವಿರೋಧಿಸಿ ಸಹಕಾರಿ ನಾಯಕ ಡಾ.ಆರ್.ಎಂ.ಮಂಜುನಾಥ ಗೌಡ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆ ಒಂದನೇ ದಿನ ಪೂರೈಸಿದ್ದು, ಸಾವಿರಾರು ಜನರು ಪಕ್ಷಬೇಧ ಮರೆತು ಭಾಗಿಯಾಗಲಿದ್ದಾರೆ. ಜೆಡಿಎಸ್ ನಾಯಕರು, ಕಾರ್ಯಕರ್ತರು, ಕಾಂಗ್ರೆಸ್ ನಾಯಕರು, ಕಾರ್ಯಕರ್ತರು, ಮಂಜುನಾಥ ಗೌಡ ಅಭಿಮಾನಿಗಳು, ಸಹಕಾರಿ ನಾಯಕರು, ರೈತ ನಾಯಕರು, ಹೋರಾಟಗಾರರು ಮೊದಲ ದಿನ ಭಾಗಿಯಾಗಿದ್ದಾರೆ. 22 ಕಿ.ಮೀ ಪಾದಯಾತ್ರೆ ಮೊದಲ ದಿನಕ್ಕೆ ಅಂತ್ಯಗೊಂಡಿತು. ಬಿದರಗೋಡಿನ ಶ್ರೀರಾಮ ಮಂದಿರದಲ್ಲಿ ಪಾದಯಾತ್ರೆಗೆ ಚಾಲನೆ ನೀಡಲಾಗಿದೆ. ಮಂಜುನಾಥಗೌಡರಿಗೆ ನಾಯಕರಾದ ಮಂದು ಬಂಗಾರಪ್ಪ, ಬೇಳೂರು ಗೋಪಾಲಕೃಷ್ಣ ಸಾಥ್ ನೀಡಿದ್ದಾರೆ. ಪಾದಯಾತ್ರೆ ಸಭೆ ಉದ್ಘಾಟಿಸಿ ಮಾತನಾಡಿದ ಗೋಪಾಲಕೃಷ್ಣ ಬೇಳೂರು, ಯಡಿಯೂರಪ್ಪ ಮತ್ತು ಮೋದಿ ಕೈ ತೋರಿಸಿದರೆ ಸಾಲದು. ರೈತರ ಪರ ನಿಲ್ಲಬೇಕು. ನಾವು ಯಾವುದೇ ಹೋರಾಟಕ್ಕೆ ಸಿದ್ಧ ಎಂದರು. ಮಧು ಬಂಗಾರಪ್ಪ ಮಾತನಾಡಿ, ರೈತರ ಪರ ಈ ಹೋರಾಟ ರಾಜ್ಯ, ದೇಶದ ಗಮನ ಸೆಳೆಯಬೇಕು ಎಂದರು.…
ನವೆಂಬರ್‍ನಲ್ಲಿ ಚಿತ್ರೀಕರಣ ಶುರು ಬೆಂಗಳೂರು: ಕನ್ನಡದ ಯುವ ನಟ ಧ್ರುವ ಸರ್ಜಾ ಈಗ ದುಬಾರಿ ನಟ!. ಧ್ರುವ ಸರ್ಜಾ ನಾಯಕಾರಲಿಗಲಿರುವ ನಂದಕಿಶೋರ್ ನಿರ್ದೇಶನದ ಹೊಸ ಸಿನಿಮಾದ ಮುಹೂರ್ತ ನಗರದ ದೇವಾಲಯವೊಂದರಲ್ಲಿ ನೆರವೇರಿದೆ. ಅದರ ಹೆಸರು ದುಬಾರಿ!.ವಾಸವಿ ಎಂಟರ್‍ಪ್ರೈಸಸ್ ಅಡಿಯಲ್ಲಿ ಉದಯ್ ಕೆ.ಮೆಹ್ತಾ ಪೆÇ್ರಡಕ್ಸನ್ಸ್ ಬ್ಯಾನರ್‍ನಲ್ಲಿ ನಿರ್ಮಾಣವಾಗುತ್ತಿರುವ, ಧ್ರುವ ಸರ್ಜಾ ನಾಯಕತ್ವದ ನೂತನ ಸಿನಿಮಾ ದುಬಾರಿಯ ಮುಹೂರ್ತ ಮತ್ತು ಶೀರ್ಷಿಕೆ ಅನಾವರಣ ನವರಂಗ ಗಣೇಶ್ ದೇವಸ್ಥಾನದಲ್ಲಿ ನೆರವೇರಿದೆ. ಹಿರಿಯ ನಟ ದೊಡ್ಡಣ್ಣ ಮತ್ತು ನಟಿ ತಾರಾ ಆಗಮಿಸಿ ತಂಡದ ಮುಹೂರ್ತಕ್ಕೆ ಚಾಲನೆ ನೀಡಿ, ಕ್ಲಾಪ್ ಮಾಡಿದರು. ಇನ್ನುಳಿದಂತೆ ಚಿತ್ರದ ಬಹುತೇಕ ಕಲಾವಿದರು ಮತ್ತು ತಾಂತ್ರಿಕ ವರ್ಗ ಇದೇ ವೇಳೆ ಹಾಜರಾಗಿತ್ತು. ಸದ್ಯ ಮುಹೂರ್ತ ಮುಗಿಸಿಕೊಂಡಿರುವ ಚಿತ್ರತಂಡ, ಇದೇ ತಿಂಗಳ ಕೊನೆಯ ವಾರದಲ್ಲಿ ಚಿತ್ರೀಕರಣಕ್ಕೆ ನಿರ್ಧರಿಸಿದೆ.ಪೆÇಗರು ಸಿನಿಮಾ ನಿರ್ದೇಶನ ಮಾಡಿರುವ ನಂದ ಕಿಶೋರ್, ದುಬಾರಿ ಚಿತ್ರಕ್ಕೂ ಆಕ್ಷನ್,ಕಟ್ ಹೇಳಲಿದ್ದು, ಈಗಾಗಲೇ ಚಿತ್ರಕಥೆ ಎಲ್ಲವೂ ಅಂತಿಮವಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ನಿರ್ಮಾಪಕ ಉದಯ್ ಮೆಹ್ತಾ,…