Author: Nammur Express Admin

ಹತ್ಯೆಯಾದ ಯೋಗೇಶಗೌಡ ಪತ್ನಿ ಮಲ್ಲಮ್ಮನ ಶೋಚನೀಯ ಸ್ಥಿತಿ ರಿಯಲ್ ಸ್ಟೋರಿ: ನಮ್ಮೂರ್ ಎಕ್ಸ್‍ಪ್ರೆಸ್: ಬಿ.ಕೆ.ಮಹೇಂದ್ರಹುಬ್ಬಳ್ಳಿ: ಅತ್ತ ಪತಿಯನ್ನೂ ಕಳೆದುಕೊಂಡು ಇತ್ತ ಗಂಡನ ಕುಟುಂಬಸ್ಥರ ವಿಶ್ವಾಸವನ್ನೂ ಕಳೆದುಕೊಂಡಿರುವ ಕೊಲೆಯಾದ ಜಿಪಂ ಸದಸ್ಯ ಯೋಗೇಶ ಗೌಡ ಗೌಡನ ಪತ್ನಿ ಮಲ್ಲಮ್ಮ ಗೌಡರ್, ರಾಜಕಾರಣಿಗಳ ಕಪಿಮುಷ್ಠಿಯಲ್ಲಿ ಸಿಲುಕಿ ಹಾಕಿಕೊಂಡು ಇಡೀ ಬದುಕು ನರಕವನ್ನಾಗಿಸಿಕೊಂಡರೇ..?ಇಂತಹದೊಂದು ಯಕ್ಷ ಪ್ರಶ್ನೆ ಧಾರವಾಡ ಜಿಲ್ಲೆಯಾದ್ಯಂತ ಶ್ರೀಸಾಮಾನ್ಯರ ಬಾಯಿಯಿಂದ ಕೇಳಿ ಬರಲಾರಂಭಿಸಿದೆ. ಇದಕ್ಕೆ ಕಾರಣವೂ ಇಲ್ಲದ್ದಿಲ್ಲ. ಪತಿಯ ಕೊಲೆಯಾದ ಸಂದರ್ಭದಲ್ಲಿ ಆಗ ಸಚಿವರಾಗಿದ್ದ ವಿನಯ ಕುಲಕರ್ಣಿ ಸೇರಿದಂತೆ ಕಾಂಗ್ರೆಸ್ ವಿರುದ್ಧ ಬಿಜೆಪಿಯ ನಾಯಕರೊಂದಿಗೆ ತೊಡೆ ತಟ್ಟಿದ್ದ ಮಲ್ಲಮ್ಮ, ಬದಲಾದ ಸನ್ನಿವೇಶದಲ್ಲಿ ಕಾಂಗ್ರೆಸ್ ಜತೆ ಗುರುತಿಸಿಕೊಳ್ಳುವ ಮೂಲಕ ಇತ್ತ ಬಿಜೆಪಿ ಹಾಗೂ ಅತ್ತ ಗಂಡನ ಮನೆಯವರ ಆಕ್ರೋಶಕ್ಕೆ ಕಾರಣವಾಗಿದ್ದಳು. ಅತಂತ್ರ ಸ್ಥಿತಿಯಲ್ಲಿ ಮಲ್ಲಮ್ಮ!: 2015ರಲ್ಲಿ ತನ್ನ ಪತಿಯನ್ನು ಹಾಡಹಗಲೇ ಕೊಲೆಯಾಗಿದ್ದಾರೆಂಬ ಸುದ್ದಿ ತಿಳಿದು ಗರಬಡಿದಂತೆ ಮಲ್ಲಮ್ಮ ಬಿದ್ದುಕೊಂಡಿದ್ದಳು. ಇಡೀ ಪ್ರಕರಣದಲ್ಲಿ ರಾಜಕೀಯ ಹಾಸುಹೊಕ್ಕಾಗಿದೆ ಎಂಬ ವಿಷಯ ತಿಳಿಯುತ್ತಲೇ ಆಗ ಪ್ರತಿಪಕ್ಷ ಸ್ಥಾನದಲ್ಲಿದ್ದ ಬಿಜೆಪಿಗರು, ಯೋಗೇಶಗೌಡನ…

Read More

ಈಡಿಗ ಸಮುದಾಯದ ನಿಯೋಗಕ್ಕೆ ಸಿಎಂ ಅಭಯ21 ಮಂದಿ ಹಿಂದುಳಿದ ವರ್ಗಗಳ ಸ್ವಾಮೀಜಿಗಳ ಭೇಟಿ ಬೆಂಗಳೂರು: ಪ್ರಸಿದ್ಧ ಸಿಗಂದೂರು ಶ್ರೀ ಚೌಡೇಶ್ವರಿ ದೇವಾಲಯ ಇನ್ಮುಂದೆ ರಾಮಪ್ಪ ಅವರ ನೇತೃತ್ವದಲ್ಲೇ ನಡೆಯಲಿದೆ. ಉಸ್ತುವಾರಿ ಸಮಿತಿ ನಿಗಾ ಇಡಲಿದೆ. ದೇವಸ್ಥಾನವನ್ನು ಮುಜರಾಯಿ ವ್ಯಾಪ್ತಿಗೆ ತರುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಶಾಸಕ ಹರತಾಳು ಹಾಲಪ್ಪ, ರಾಜ್ಯ ಬಿಜೆಪಿ ನಾಯಕ ಬೇಗುವಳ್ಳಿ ಸತೀಶ್ ಮುಂತಾದ ಈಡಿಗ ನಾಯಕರ ನೇತೃತ್ವದಲ್ಲಿ ಈಡಿಗ ಸಮುದಾಯದ ನಿಯೋಗ 21 ಮಂದಿ ಹಿಂದುಳಿದ ವರ್ಗದ ವಿವಿಧ ಮಠಾಧೀಶರ ಜತೆ ಶನಿವಾರ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಭೇಟಿ ಮಾಡಿ ಸಭೆ ನಡೆಸಲಾಯಿತು. ಸಿಗಂದೂರು ದೇವಾಲಯದ ಮೇಲುಸ್ತುವಾರಿ ಸಮಿತಿ ಕುರಿತ ಗೊಂದಲ ಹಾಗೂ ಭಕ್ತರು ನೀಡುವ ಹಣಕಾಸು, ದೇಣಿಗೆ ವಿಚಾರದಲ್ಲಿ ಪಾರದರ್ಶಕತೆ ತರುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಶಿವಮೊಗ್ಗ ಜಿಲ್ಲಾಡಳಿತ ನೇತೃತ್ವದ ದೇಗುಲ ಸಲಹಾ ಸಮಿತಿಗೆ ಈಡಿಗ ಸಮುದಾಯದ ಶ್ರೀ ರೇಣುಕಾನಂದ ಸ್ವಾಮೀಜಿ ಸೇರ್ಪಡೆ ಮಾಡಿಕೊಳ್ಳಲು ಇದೇ ವೇಳೆ ಮುಖ್ಯಮಂತ್ರಿಗಳು…

Read More

ಡಿಸೆಂಬರ್‍ನಲ್ಲಿ ಹಣ ಜಮಾವಣೆ ನವದೆಹಲಿ: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಫಲಾನುಭವಿಗಳಿಗೆ ಹಣ ವರ್ಗಾವಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. 7ನೇ ಕಂತಿನ ಹಣ ವರ್ಗಾವಣೆ ಡಿಸೆಂಬರ್ 1ರಿಂದ 6000 ರೂಪಾಯಿಗಳನ್ನು ಮೂರು ಕಂತುಗಳಲ್ಲಿ ನೀಡಲಾಗುತ್ತದೆ.ಈವರೆಗೆ 6 ಕಂತುಗಳನ್ನು ರೈತರಿಗೆ ನೀಡಲಾಗಿದೆ. ಕಳೆದ 23 ತಿಂಗಳಲ್ಲಿ 11.17 ಕೋಟಿ ರೈತರಿಗೆ ಕೇಂದ್ರ ಸರ್ಕಾರ ನೇರವಾಗಿ 95 ಕೋಟಿ ರೂಪಾಯಿ ನೀಡಿದೆ.ಮೊದಲ ಕಂತು ಡಿಸೆಂಬರ್ 1ರಿಂದ ಮಾರ್ಚ್ 31ರ ನಡುವೆ ಬರುತ್ತದೆ. ಎರಡನೇ ಕಂತು ಏಪ್ರಿಲ್ 1ರಿಂದ ಜುಲೈ 31 ರವರೆಗೆ ಮತ್ತು ಮೂರನೇ ಕಂತು ಆಗಸ್ಟ್ 1ರಿಂದ ನವೆಂಬರ್ 30ರ ನಡುವೆ ಬರುತ್ತದೆ. ದಾಖಲೆಗಳು ಸರಿಯಾಗಿದ್ದರೆ, ಎಲ್ಲಾ 11.17 ಕೋಟಿ ನೋಂದಾಯಿತ ರೈತರಿಗೂ ಏಳನೇ ಕಂತಿನ ಲಾಭ ಸಿಗಲಿದೆ. ಫಲಾನುಭವಿಗಳು ದಾಖಲೆಯನ್ನು ಪರಿಶೀಲಿಸಬೇಕಾದ ಅಗತ್ಯತೆಯಿದೆ.ಅರ್ಜಿ ಸಲ್ಲಿಸಿದ 1.3 ಕೋಟಿ ರೈತರಿಗೆ ಹಣ ಬಂದಿಲ್ಲ. ತಪ್ಪು ದಾಖಲಾತಿ ಹಾಗೂ ಆಧಾರ್ ಕಾರ್ಡ್ ಇಲ್ಲದಿರುವುದು ಇದಕ್ಕೆ ಕಾರಣವಾಗಿದೆ. ಪಿಎಂ…

Read More

ಹತ್ತಾರು ಕಡೆ ಮನೆ: ಲಕ್ಷಾಂತರ ಹಣಎಸಿಬಿ ದಾಳಿಯಿಂದ ಮಹಿಳಾ ಅಧಿಕಾರಿಗೆ ಸಂಕಷ್ಟ ಬೆಂಗಳೂರು: ಕೆಎಎಸ್ ಅಧಿಕಾರಿ, ಶಿವಮೊಗ್ಗ ಜಿಲ್ಲೆ ಸೊರಬದಲ್ಲಿ ಈ ಹಿಂದೆ ತಹಶೀಲ್ದಾರ್ ಆಗಿದ್ದ ಡಾ.ಬಿ.ಸುಧಾ ಅವರ ಭವ್ಯ ಬಂಗಲೆಯಲ್ಲಿ ಕೆಜಿಗಟ್ಟಲೆ ಚಿನ್ನಾಭರಣ, ಸುಮಾರು ಹತ್ತು ಲಕ್ಷ ನಗದು, ಹಲವು ಆಸ್ತಿ ಪತ್ರಗಳು ಪತ್ತೆಯಾಗಿವೆ. ಭ್ರಷ್ಟಾಚಾರದ ಆರೋಪದಲ್ಲಿ ಕೆಎಎಸ್ ಅಧಿಕಾರಿ ಡಾ.ಬಿ.ಸುಧಾ ಅವರ ಮನೆ, ಕಚೇರಿಗಳ ಮೇಲೆ ಬೆಳಗ್ಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಬೆಂಗಳೂರು, ಉಡುಪಿಯ ಹೆಬ್ರಿ, ಮೈಸೂರಿನಲ್ಲಿರುವ ಡಾ. ಸುಧಾ ಅವರ ಮನೆ ಮತ್ತು ಸಂಬಂಧಿಕರ ಮನೆಗಳ ಮೇಲೂ ದಾಳಿ ನಡೆಸಲಾಗಿದೆ. ಬೆಂಗಳೂರಿನ ಕೊಡಿಗೇಹಳ್ಳಿಯಲ್ಲಿರುವ ಅವರ ಭವ್ಯ ಬಂಗಲೆಯಲ್ಲಿ ಕೆಜಿಗಟ್ಟಲೆ ಚಿನ್ನಾಭರಣ, ಸುಮಾರು ಹತ್ತು ಲಕ್ಷ ನಗದು, ಹಲವು ಆಸ್ತಿ ಪತ್ರಗಳು ಪತ್ತೆಯಾಗಿವೆ. ಈ ಹಿಂದೆ ಬಿಡಿಎನಲ್ಲಿ ವಿಶೇಷ ಭೂ ಸ್ವಾಧೀನಾಧಿಕಾರಿಯಾಗಿದ್ದ ಡಾ.ಸುಧಾ ಅವರ ವಿರುದ್ಧ ಎಸಿಬಿಯಲ್ಲಿ ಅಕ್ರಮ ಆಸ್ತಿ ಗಳಿಕೆ ಹಾಗೂ ಅವ್ಯವಹಾರದ ಕುರಿತಾಗಿ ದೂರು ದಾಖಲಾಗಿತ್ತು. ಪ್ರಸ್ತುತ ಮಾಹಿತಿ ಮತ್ತು…

Read More

ನಿರ್ಗಮನದ ಹಾದಿಯಲ್ಲಿ ಟ್ರಂಪ್..?264 ಸ್ಥಾನ ಜೋ ಬಿಡೆನ್, 214 ಸ್ಥಾನ ಟ್ರಂಪ್ ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆ ಸಸ್ಪೆನ್ಸ್ ಈಗ ಕುತೂಹಲದ ಘಟ್ಟಕ್ಕೆ ಬಂದು ನಿಂತಿದೆ. ಇನ್ನೇನು ಕೆಲವೇ ಗಂಟೆಗಳಲ್ಲಿ ಫಲಿತಾಂಶ ಘೋಷಣೆಯಾಗುವ ಸಾಧ್ಯತೆಗಳಿವೆ. ಬಹುತೇಕ ಈಗಿನ ವಿಧ್ಯಾಮಾನಗಳ ಪ್ರಕಾರ ನಿರ್ಗಮನದ ಹಾದಿಯಲ್ಲಿ ಟ್ರಂಪ್ ಇದ್ದಾರೆ. ಶ್ವೇತ ಭವನದ ಹೊಸ್ತಿಲಲ್ಲಿರುವ ಜೋ ಬಿಡೆನ್ ಪರ ಭಾರೀ ಟ್ರೆಂಡ್ ಕಾಣುತ್ತಿದೆ. ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಯನ್ನು ಗೆಲ್ಲಲು 270 ಸ್ಥಾನಗಳ ಅಗತ್ಯವಿದ್ದು, ಟ್ರಂಪ್ 214 ಸ್ಥಾನಗಳಲ್ಲಿ ಗೆದ್ದು 15 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದಾರೆ. ಜೋ ಬಿಡೆನ್ 264 ಸ್ಥಾನಗಳನ್ನು ಗೆದ್ದಿದ್ದು, ಅವರಿಗೆ ಗೆಲ್ಲಲು 6 ಸ್ಥಾನಗಳ ಅಗತ್ಯವಿದೆ. ಜೋ ಬಿಡೆನ್ 42 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಎರಡನೇ ಬಾರಿ ಅಧ್ಯಕ್ಷ ಹುದ್ದೆಗೆ ಏರುವ ಟ್ರಂಪ್ ಕನಸು ನನಸಾಗುವುದು ಬಹುತೇಕ ಕಷ್ಟ ಎನ್ನಲಾಗುತ್ತಿದೆ. ಮತ ಎಣಿಕೆ ನಡೆಯುತ್ತಿದ್ದು, ಅಧೀಕೃತ ಪ್ರಕಟಣೆ ಹೊರ ಬಿದ್ದಿಲ್ಲ.ಮತದಾನದಲ್ಲಿ ವಂಚನೆ ನಡೆದಿದೆ ಎಂದು ಆರೋಪಿಸುತ್ತಿರುವ ಟ್ರಂಪ್ ಸರಣಿ ಟ್ವೀಟ್‍ಗಳನ್ನು ಮಾಡುತ್ತಿದ್ದಾರೆ. ಅಮೆರಿಕದ ಎಲ್ಲಾ…

Read More

ಕಸ್ತೂರಿ ರಂಗನ್ ವರದಿ ವಿರೋಧಿಸಿ ಪಾದಯಾತ್ರೆಪಕ್ಷಾತೀತವಾಗಿ 1000 ಜನರ ಬೆಂಬಲ: ಹಚ್ಚಿತು ಕಿಡಿ..! ತೀರ್ಥಹಳ್ಳಿ: ಮಲೆನಾಡಿನ ರೈತರ ಬದುಕಿಗೆ ಮಾರಕವಾಗಿರುವ ಕಸ್ತೂರಿ ರಂಗನ್ ವರದಿ ವಿರೋಧಿಸಿ ಸಹಕಾರಿ ನಾಯಕ ಮಂಜುನಾಥ ಗೌಡ ನಾಯಕತ್ವದಲ್ಲಿ ಮಲೆನಾಡಿನ ಹೃದಯ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಸಮೀಪದ ಬಿದರಗೋಡಿನಿಂದ ಪಾದಯಾತ್ರೆ ಶುರುವಾಗಿದೆ. ಕಸ್ತೂರಿ ರಂಗನ್ ವರದಿಯಿಂದ ಮಲೆನಾಡಿನ ಸಾವಿರಾರು ಹಳ್ಳಿಗಳ ರೈತರು ತಮ್ಮ ಮನೆ ಮಠ ಕಳೆದುಕೊಳ್ಳಲಿದ್ದಾರೆ. ಹೀಗಾಗಿ ಸಹಕಾರಿ ನಾಯಕ ಡಾ.ಮಂಜುನಾಥ ಗೌಡ ನೇತೃತ್ವದಲ್ಲಿ 3 ದಿನಗಳ 42 ಕಿಮೀ ಪಾದಯಾತ್ರೆ ಮೊದಲ ದಿನ ಬಿದರಗೋಡಿನಿಂದ ಕುಂದಾದ್ರಿ-ಕೆಂದಾಳಬೈಲ್-ಗುಡ್ಡೇಕೇರಿ ಮಾರ್ಗವಾಗಿ ನಾಲೂರು ತಲುಪಿದೆ. ಬಿದರಗೋಡಿನ ಶ್ರೀರಾಮ ಮಂದಿರದಲ್ಲಿ ಪೂಜೆ ಮಾಡಿಸಿ ಬಳಿಕ ಸಭೆ ನಡೆಸಲಾಯಿತು.ರಾಜ್ಯ ನಾಯಕರಾದ ಮಧು ಬಂಗಾರಪ್ಪ, ಬೇಳೂರು ಗೋಪಾಲಕೃಷ್ಣ, ಸಹಕಾರಿ ನಾಯಕರಾದ ವಿಜಯದೇವ್, ದುಗ್ಗಪ್ಪ ಗೌಡ, ಆನಂದ್, ವಿಧ್ಯಾಧರ, ಪ್ರಶಾಂತ್ ಸಾಗರ ಸೇರಿದಂತೆ ಅನೇಕ ನಾಯಕರು ಆಗಮಿಸಿ ಪಾದಯಾತ್ರೆಗೆ ರಂಗು ತುಂಬಿದರು. ಜೊತೆಗೆ ಕೇಂದ್ರ, ರಾಜ್ಯ ಸರ್ಕಾರಗಳ ವೈಫಲ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಹೋರಾಟಗಾರರಾದ…

Read More

ಕಳಸ ಕಾಂಗ್ರೆಸ್ ಅಧ್ಯಕ್ಷ ಹೆಬ್ಬಾರ್ಕರೋನಾ ಡೇಂಜರ್ ಡೇಂಜರ್..! ಕಳಸ: ಕರೋನಾ ಸೋಂಕಿಗೆ ತುತ್ತಾಗಿ ಬೆಂಗಳೂರಿನ ಮಣಿಪಾಲ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂಡಿಗೆರೆ ತಾಲೂಕಿನ ಕಳಸ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ‌ ತೋಟದೂರು ಶ್ರೀನಿವಾಸ್ ಹೆಬ್ಬಾರ್ ಸಾವನ್ನಪ್ಪಿದ್ದಾರೆ. ಈ ಮೂಲಕ ಮಲೆನಾಡಿನ ಮತ್ತೊಬ್ಬ ನಾಯಕ ಕರೋನಾಗೆ ಬಲಿಯಾದಂತಾಗಿದೆ. ಒಂದು ತಿಂಗಳಿನಿಂದ ಕರೊನಾ ಸೋಂಕಿನಿಂದ ಬಳಲುತ್ತಿದ್ದ ತೋಟದೂರು ಶ್ರೀನಿವಾಸ್ ಹೆಬ್ಬಾರ್ (54) ಬೆಂಗಳೂರು ಮಣಿಪಾಲ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.ಶ್ರೀನಿವಾಸ್ ಹೆಬ್ಬಾರ್ ಪ್ರಸ್ತುತ ಕಳಸ ಬ್ಲಾಕ್ ಕಾಂಗ್ರೆಸ್​​ ಸಮಿತಿ ಅಧ್ಯಕ್ಷರಾಗಿ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾಗಿ, ರೋಟರಿ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳು ಮತ್ತು ಧಾರ್ಮಿಕ ಕ್ಷೇತ್ರ, ಕನ್ನಡ ಸಾಹಿತ್ಯ ಪರಿಷತ್ತು, ಕ್ರೀಡಾ ಕ್ಷೇತ್ರದಲ್ಲಿ ಹೆಸರು ಮಾಡಿದ್ದರು.ಭದ್ರಾವತಿ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನದ ಬಳಿಕ ಮತ್ತೊಬ್ಬ ನಾಯಕನನ್ನು ಮಲೆನಾಡು ಕಳೆದುಕೊಂಡಿದೆ.

Read More

ಆಧುನಿಕ ತಂತ್ರಜ್ಞಾನ ವ್ಯವಸ್ಥೆಹೊಸ ಟೆಂಡರ್ ನೀಡಲು ಸಿದ್ಧತೆ ಬೆಂಗಳೂರು: ಅರೋಗ್ಯ ಪ್ರತಿ ಜನರ ಮೊದಲ ಆಧ್ಯತೆ. ಆದರೆ ಇಂದು ಕೆಲವು ಸೇವೆಗಳು ಜನತೆಗೆ ಸಿಗುತ್ತಿಲ್ಲ ಎಂಬ ಆರೋಪ ಇದೆ. ಈ ನಡುವೆ ರಾಜ್ಯಾದ್ಯಂತ ಗುಣಮಟ್ಟದ ಆಂಬ್ಯುಲೆನ್ಸ್ ಸೇವೆ ಒದಗಿಸುವ ನಿಟ್ಟಿನಲ್ಲಿ ಜಾರಿಯಲ್ಲಿರುವ ವ್ಯವಸ್ಥೆಯನ್ನು ಬದಲಾವಣೆ ಮಾಡಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಸೂಚನೆ ನೀಡಿದ್ದಾರೆ.ತುರ್ತು ಆರೋಗ್ಯ ಸೇವೆ ನೀಡುವ ಆಂಬ್ಯುಲೆನ್ಸ್ ಗಳ ಸೇವೆ ಮಹತ್ವದ್ದಾಗಿದೆ. ಸದ್ಯ ನಮ್ಮಲ್ಲಿರುವ ವ್ಯವಸ್ಥೆಯಲ್ಲಿ ಸಾಕಷ್ಟು ಲೋಪಗಳಿದ್ದು, ಅವುಗಳನ್ನು ನಿವಾರಿಸಿ ಆಧುನಿಕ ತಂತ್ರಜ್ಞಾನ ಮತ್ತು ಜಾಗತಿಕ ಗುಣಮಟ್ಟದ ನಿರ್ವಹಣಾ ಪದ್ಧತಿ ಅಳವಡಿಸಿಕೊಳ್ಳಬೇಕಿದೆ. 108 ಆಂಬ್ಯುಲೆನ್ಸ್ ಸೇವೆಗೆ ರಾಜ್ಯ ಸರ್ಕಾರ ದೊಡ್ಡ ಮೊತ್ತದ ಹಣ ನೀಡುತ್ತದೆ. ಆದರೆ ಅದಕ್ಕೆ ತಕ್ಕಂತೆ ಗುಣಮಟ್ಟದ ಸೇವೆ ಲಭ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ದೇಶದಲ್ಲೇ ಮಾದರಿ ಆಗುವಂತಹ ವ್ಯವಸ್ಥೆ ಜಾರಿಗೊಳಿಸಬೇಕಿದೆ. ಅದಕ್ಕಾಗಿ ಹೊಸದಾಗಿ ಟೆಂಡರ್ ನೀಡುವಾಗ ಲೋಪಗಳಿಗೆ ಅವಕಾಶವಿಲ್ಲದಂತೆ ಜಾಗತಿಕ ಮಟ್ಟದ ಸೇವೆ ನೀಡುವ ಸಂಸ್ಥೆ ಅಥವಾ…

Read More

ರಾಜ್ಯದೆಲ್ಲೆಡೆ ಪ್ರತಿಭಟನೆ ಸಜ್ಜುಈಡಿಗ ಬಿಜೆಪಿ ನಾಯಕರಿಂದ ಸಿಎಂ ಭೇಟಿಈಡಿಗ ಸಮುದಾಯ ಸಭೆ ಬೆಂಗಳೂರು/ಶಿವಮೊಗ್ಗ: ದೇಶದ ಪ್ರತಿಷ್ಠಿತ ದೇವಾಲಯದಲ್ಲಿ ಒಂದಾದ ಸಿಗಂದೂರು ವಿಚಾರದಲ್ಲಿ ಸರಕಾರದ ನಡೆ ವಿರೋಧಿಸಿ ರಾಜ್ಯದೆಲ್ಲೆಡೆ ಇದೀಗ ಭಾರಿ ಹೋರಾಟಕ್ಕೆ ಸಿದ್ಧತೆ ನಡೆದಿದೆ.ಸಿಗಂದೂರು ಗೊಂದಲಗಳ ನಿವಾರಣೆಗಾಗಿ ಮುಖ್ಯಮಂತ್ರಿಗಳ ಜತೆ ಜನಾಂಗದ ಪ್ರಮುಖರ ಸಭೆ ನಡೆಯಿತು.ಯಡಿಯೂರಪ್ಪ ಅವರನ್ನು ಸಾಗರ ಶಾಸಕ ಹರತಾಳು ಹಾಲಪ್ಪ ಅವರು ಸಮುದಾಯದ ಶ್ರೀಗಳಾದ ರೇಣುಕಾನಂದ ಸ್ವಾಮೀಜಿಗಳ ನೇತೃತ್ವದಲ್ಲಿ ಗೃಹ ಕಚೇರಿ ಕೃಷ್ಣಾ ದಲ್ಲಿ ಭೇಟಿ ಮಾಡಿ ಮಾಡಿ ಚರ್ಚೆ ನಡೆಸಲಾಯಿತು. ಬಳಿಕ ಸಂಸದ ರಾಘವೇಂದ್ರ ಅವರನ್ನು ಭೇಟಿಯಾಗಿ ಸಭೆ ನಿಗದಿ ಕುರಿತು ಚರ್ಚೆ ನಡೆಸಿದರು. ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ, ಕಾಂಪೋಸ್ಟ್ ಅಭಿವೃದ್ಧಿ ನಿಗಮ ಉಪಾಧ್ಯಕ್ಷ ಬೇಗುವಳ್ಳಿ ಸತೀಶ್ ಹಾಜರಿದ್ದರು. ಇತ್ತ ಶಿವಮೊಗ್ಗ ಈಡಿಗರ ಭವನದಲ್ಲಿ ಮುಖಂಡರೊಂದಿಗೆ ನಡೆದ ಅನೌಪಚಾರಿಕ ಸಭೆಯಲ್ಲಿ ಕಾಂಗ್ರೆಸ್ ರಾಷ್ಟ್ರ ನಾಯಕ ಬಿ.ಕೆ.ಹರಿಪ್ರಸಾದ್ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಹಿಂದುತ್ವದ ಹೆಸರಲ್ಲಿ ಹಿಂದುಳಿದವರನ್ನು ಹೋರಾಟಕ್ಕೆ ಬಳಸಿಕೊಳ್ಳುವ ಬಿಜೆಪಿ, ಇಂದು ಹಿಂದುಳಿದವರ ಆಡಳಿತ ಮಂಡಳಿ ಇರುವ…

Read More

ಯುವಕರ ಸಂಘಟನೆ ಜೋರುಶಶಾಂಕ್, ಅಶ್ವಲ್, ನಾಗರಾಜ್, ಗಗನ್, ಪ್ರವೀಣ್ ಸಾರಥ್ಯ! ತೀರ್ಥಹಳ್ಳಿ: ನ.7ರಿಂದ ಸಹಕಾರಿ ನಾಯಕ ಡಾ.ಮಂಜುನಾಥ ಗೌಡ ನಾಯಕತ್ವದಲ್ಲಿ ಆಯೋಜಿಸಲಾಗಿರುವ ರೈತ ಕಲ್ಯಾಣ ನಡಿಗೆಗೆ ಯುವ ಸಮುದಾಯದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.ತೀರ್ಥಹಳ್ಳಿ ತಾಲೂಕಿನ ಪ್ರಮುಖ ಯುವ ನಾಯಕರಾದ ಶಶಾಂಕ್ ಹೆಗ್ಡೆ ಗುಡ್ಡೇಕೇರಿ, ಅಶ್ವಲ್ ಗೌಡ, ಪ್ರವೀಣ್ ಕಟ್ಟೆ, ನಾಗರಾಜ್ ಪೂಜಾರಿ, ಗಗನ್, ಪೂರ್ಣೇಶ್ ಕೊಡಿಗೆಬೈಲ್, ವಿಕ್ಕಿ ಶೆಟ್ಟಿ ಸೇರಿದಂತೆ ನೂರಾರು ಯುವಕರು ಗ್ರಾಮ ಮಟ್ಟದಲ್ಲಿ ಸಾಥ್ ನೀಡುತ್ತಿದ್ದಾರೆ. ಎಲ್ಲಾ ಕಡೆಯಿಂದ ಸಂಘಟನೆ ಮಾಡುತ್ತಿದ್ದಾರೆ.ಕಸ್ತೂರಿ ರಂಗನ್ ವರದಿ ವಿರೋಧಿಸಿ ಹೋರಾಟ ಪಕ್ಷಾತೀತ, ರೈತರ ಹಾಗೂ ಮಲೆನಾಡಿನ ಜನರ ಪರವಾದ ಹೋರಾಟ. ಹೀಗಾಗಿ ಮುಂದಿನ ರೈತರಾದ ಯುವಕರು ಹೋರಾಟಕ್ಕೆ ಜೊತೆಯಾಗಿದ್ದಾರೆ. ಯುವ ಮುಖಂಡ ಗುಡ್ಡೆಕೇರಿ ಶಶಾಂಕ್ ಹೆಗಡೆ ಮಾತನಾಡಿ, ಅನ್ನದಾತನ ನಿರ್ಣಾಯಕ ಹೋರಾಟದಲ್ಲಿ ನಮ್ಮ ರೈತರ ಒಗ್ಗಟ್ಟು ತೋರಿಸೋಣ ಎಂದು ರೈತರಲ್ಲಿ ಮನವಿ ಮಾಡಿದ್ದಾರೆ. ಮಲೆನಾಡಿನ ದನಿಯಾಗಿ ಈ ಹೋರಾಟ ರೂಪುಗೊಳ್ಳಲಿದೆ. ಎಲ್ಲರೂ ಪಾಲ್ಗೊಳ್ಳಲು ಹುಂಚದಕಟ್ಟೆ ಪ್ರವೀಣ್ ಮನವಿ ಮಾಡಿದ್ದಾರೆ. ಇನ್ನು ಯುವ…

Read More