ಸಹಕಾರ ಭಾರತಿಗೆ ಬೆಂಬಲ ನೀಡಲು ಆರಗ ಮನವಿರೈತರ ಅಭಿವೃದ್ಧಿಗೆ ಮತ್ತೆ ನಾಗರಾಜ ಶೆಟ್ಟಿ ಸಾರಥ್ಯ? ತೀರ್ಥಹಳ್ಳಿ: ತೀರ್ಥಹಳ್ಳಿ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಚುನಾವಣೆ ನ.5ರಂದು ನಡೆಯಲಿದ್ದು, ಸಹಕಾರ ಭಾರತಿಯ 8 ಮಂದಿಗೆ ಷೇರುದಾರರು ಬೆಂಬಲ ನೀಡಬೇಕೆಂದು ಶಾಸಕ ಆರಗ ಜ್ಞಾನೇಂದ್ರ ಷೇರುದಾರರಲ್ಲಿ ಮನವಿ ಮಾಡಿದ್ದಾರೆ.ತೀರ್ಥಹಳ್ಳಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಆರಗ ಅವರು, ಟಿಎಪಿಸಿಎಂಎಸ್ ಸುಮಾರು 30 ವರ್ಷದಿಂದ ಉತ್ತಮ ಕೆಲಸ ಮಾಡುತ್ತಿದೆ. ಹಿರಿಯ ಸಹಕಾರಿ ನರಸಿಂಹ ನಾಯಕ, ನಾಗರಾಜ್ ಶೆಟ್ಟಿ ಸಾರಥ್ಯದಲ್ಲಿ ತಾಲೂಕಿನ ಟಿಎಪಿಸಿಎಂಎಸ್ ರೈತರ ಪರವಾಗಿ ಬೆಳೆದು ನಿಂತಿದೆ. ರಾಜ್ಯದಲ್ಲಿ ಬೃಹತ್ ಸಹಕಾರಿ ಸಂಸ್ಥೆಯಾಗಿ ಮಾದರಿಯಾಗಿದೆ. ಸಂಸ್ಥೆಯ ಅಭಿವೃದ್ಧಿಗೆ ಸಹಕಾರಿ ಭಾರತಿ ತಂಡ ಕೆಲಸ ಮಾಡುತ್ತಿದೆ. ಹೀಗಾಗಿ ಸಹಕಾರ ಭಾರತಿ ತಂಡದ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು. ಹಗರಣದ ಕೂಪದಿಂದ ಅಭಿವೃದ್ಧಿಯೆಡೆಗೆ!: ತೀರ್ಥಹಳ್ಳಿ ತಾಲೂಕು ಸೊಸೈಟಿ ಹಿಂದೆ ಹೇಗಿತ್ತು. ಟೇಬಲ್ ಕುರ್ಚಿ ಮಾರಿ ಸಂಬಳ ಕೊಡುವ ಸ್ಥಿತಿ ಇತ್ತು. ಹಗರಣಗಳ ರಾಶಿ ಕೂಡಿಡಲಾಗಿತ್ತು. ಸಾಲಗಳ ಪಟ್ಟಿ ಬೆಳೆದಿತ್ತು.…
Author: Nammur Express Admin
ಸೀಬಿನಕೆರೆ ಎಸ್.ಕೆ.ಫ್ರೆಂಡ್ಸ್ ತಂಡದಿಂದ ಆಯೋಜನೆ ತೀರ್ಥಹಳ್ಳಿ: ತೀರ್ಥಹಳ್ಳಿಯ ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ತೀರ್ಥಹಳ್ಳಿಯ ಸೀಬಿನಕೆರೆ ಎಸ್.ಕೆ.ಫ್ರೆಂಡ್ಸ್ ಸರಳವಾಗಿ ರಾಜ್ಯೋತ್ಸವ ಆಚರಣೆ ಮಾಡಿದರು. ಆಸಿಫ್ ಸೀಬಿನಕೆರೆ ನಾಯಕತ್ವದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ಪ್ರತಿ ವರ್ಷ ಕನ್ನಡ ರಾಜ್ಯೋತ್ಸವ ಸೇರಿ ಒಂದಲ್ಲ ಒಂದು ಜನಪರ ಕಾರ್ಯಕ್ರಮ ಆಯೋಜಿಸುವ ಮೂಲಕ ಸೀಬಿನಕೆರೆ ಎಸ್.ಕೆ.ಫ್ರೆಂಡ್ಸ್ ತಾಲೂಕಿನಲ್ಲೇ ಹೆಸರು ಗಳಿಸಿದೆ. ಕಾರ್ಯಕ್ರಮದಲ್ಲಿ ಡಿವೈಎಸ್‍ಪಿ ಸಂತೋಷ್, ಯುವ ನಾಯಕ ಕೇಳೂರು ಮಿತ್ರ, ಯುವ ಪತ್ರಕರ್ತ ಅಗ್ನಿಮಿತ್ರ ಹೊಳ್ಳ, ಮಾಜಿ ಪಟ್ಟಣ ಪಂಚಾಯತ್ ಸದಸ್ಯರಾದ ನಯನಾ ಶೆಟ್ಟಿ, ಶಬ್ನಂ, ಆಸಿಫ್ ಸೀಬಿನಕೆರೆ ಹಾಜರಿದ್ದು ಕನ್ನಡ ತಾಯಿಗೆ ನಮನ ಸಲ್ಲಿಸಿದರು.ಸೀಬಿನಕೆರೆ ಎಸ್.ಕೆ.ಫ್ರೆಂಡ್ಸ್‍ನ ಇದಾಯತ್ ಮೆಜೆಸ್ಟಿಕ್, ಹರೀಶ್, ರಾಘು, ಸಚಿನ್, ಪ್ರಸನ್ನ, ಜಾವಿದ್, ಪ್ರಶಾಂತ್ ಸಾಲಿಯಾನ್, ಶಬರೀಶ್, ಅರುಣ್ ಡಿಸೋಜಾ, ಮೂರ್ತಿ ಗೌಡ, ಸುಬ್ಬಯ್ಯ ಗೌಡ, ಚೇತನ್, ರವೀಶ್ ಸೇರಿದಂತೆ ಎಸ್.ಕೆ.ಫ್ರೆಂಡ್ಸ್‍ನ ಎಲ್ಲಾ ಸದಸ್ಯರು, ಸ್ಥಳೀಯರು ಹಾಜರಿದ್ದರು.
ಕೊಪ್ಪ ತಾಲೂಕಿನ ಜಯಪುರ ಬಳಿ ಘಟನೆಕುಡಿತದ ಚಟಕ್ಕೆ ತೀರ್ಥಹಳ್ಳಿಯ ಕಾರ್ಮಿಕ ಆತ್ಮಹತ್ಯೆ! ಕೊಪ್ಪ: ವ್ಯಕ್ತಿಯೊಬ್ಬ ಸ್ಮಶಾನದಲ್ಲೇ ನೇಣಿಗೆ ಶರಣಾದ ಘಟನೆ ಕೊಪ್ಪ ತಾಲೂಕಿನ ಜಯಪುರ ಸಮೀಪದ ಗುಬ್ಬಿಬೈಲು ಎಂಬಲ್ಲಿ ವರದಿಯಾಗಿದೆ.ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಸುಮಾರು 55 ವರ್ಷ ವಯಸ್ಸಿನ ವ್ಯಕ್ತಿ ಎಂದು ಪೊಲೀಸರು ತಿಳಿಸಿದ್ದಾರೆ. ಸೌದೆ ತರಲು ಸ್ಥಳೀಯರು ಹೋಗಿದ್ದಾಗ ಘಟನೆ ಬೆಳಕಿಗೆ ಬಂದಿದೆ. ಕೊಪ್ಪ ಎಸ್ಸೈ ಗುರಣ್ಣ ಮುಂದಿನ ತನಿಖೆ ನಡೆಸುತ್ತಿದ್ದಾರೆ. ಜಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಮಿಕ ಆತ್ಮಹತ್ಯೆ: ಕರೋನಾ ಸಂಕಷ್ಟದಿಂದ ಎಲ್ಲಾ ಉದ್ಯಮಗಳು ತಲೆಕೆಳಗಾಗಿವೆ. ಉದ್ಯಮ, ವ್ಯವಹಾರ ನಡೆಸುವುದೇ ಕಷ್ಟಕರವಾಗಿದೆ. ಹೀಗಾಗಿ ಎಲ್ಲೆಡೆ ಆತ್ಮಹತ್ಯೆಗಳ ಸರಣಿ ಜನರನ್ನು ಭಯಭೀತರನ್ನಾಗಿಸಿದೆ. ಈ ನಡುವೆ ಕೆಲಸ ಇಲ್ಲದೆ, ಜತೆಗೆ ಕುಡಿತದ ಚಟಕ್ಕೆ ದಾಸನಾದ ಗಾರೆ ಕೆಲಸಗಾರನೊಬ್ಬ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೀರ್ಥಹಳ್ಳಿಯ ಗಾಂಧಿ ನಗರದಲ್ಲಿ ಶನಿವಾರ ರಾತ್ರಿ ಸಂಭವಿಸಿದೆ. ರಾಘವೇಂದ್ರ(ಗುಂಡ) ಮೃತ ವ್ಯಕ್ತಿ. ಸುಮಾರು 42 ವರ್ಷದ ರಾಘವೇಂದ್ರ ಗಾರೆ ಕೆಲಸ ಮಾಡಿಕೊಂಡು ಬದುಕು…
ದೆಹಲಿಯಲ್ಲಿ 58 ವರ್ಷಗಳಲ್ಲೇ ಅತೀ ಹೆಚ್ಚು ಚಳಿ, ಮಂಜು ನವ ದೆಹಲಿ: ಒಂದು ಕಡೆ ಕರೋನಾ, ಇನ್ನೊಂದು ಕಡೆ ತಾಪಮಾನ ಏರಿಳಿತ. ಇದು ದೇಶದ ಜನರನ್ನು ಕಂಗೆಡಿಸಿದೆ. ಈ ನಡುವೆ ರಾಜಧಾನಿ ದೆಹಲಿಯಲ್ಲಿ ಚಳಿ ಮತ್ತೆ ದಾಖಲೆ ಬರೆದಿದ್ದು, 58 ವರ್ಷಗಳಲ್ಲೇ ಈ ಅಕ್ಟೋಬರ್ ತಿಂಗಳಲ್ಲಿ ಕನಿಷ್ಠ ತಾಪಮಾನ ದಾಖಲಾಗಿದೆ. ಇದು ಕರೋನಾ ಭಯವನ್ನು ಮತ್ತಷ್ಟು ಹೆಚ್ಚಿಸಿದೆ. ಜೊತೆಗೆ ಬದುಕು ಕಷ್ಟಕರವಾಗಲಿದೆ.ದೆಹಲಿಯಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ಸರಾಸರಿ 17.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಇದು 58 ವರ್ಷಗಳಲ್ಲೆ ಅತ್ಯಂತ ಕನಿಷ್ಠ ತಾಪಮಾನವಾಗಿದೆ. ಇದಕ್ಕೂ ಮುನ್ನ 1962ರ ಅಕ್ಟೋಬರ್‍ನಲ್ಲಿ ದೆಹಲಿಯಲ್ಲಿ ಸರಾಸರಿ ಕನಿಷ್ಠ ತಾಪಮಾನ 16.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. 1937ರ ಅ.31ರಂದು ಇದುವರೆಗಿನ ಕನಿಷ್ಠ ತಾಪಮಾನ ದಾಖಲೆ ಎನ್ನಲಾಗಿರುವ 9.4 ಡಿಗ್ರಿ ಸೆಲ್ಸಿಯಸ್ ವರದಿಯಾಗಿತ್ತು. ಬಳಿಕ 1994ರಲ್ಲಿ 12.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಬಳಿಕ ಅಂಥಹ ಕನಿಷ್ಠ ತಾಪಮಾನ ದೆಹಲಿಯಲ್ಲಿ ದಾಖಲಾಗಿರಲಿಲ್ಲ. ಆದರೆ ಕಳೆದ ಗುರುವಾರ ನಗರದಲ್ಲಿನ ಕನಿಷ್ಠ ತಾಪಮಾನ 12.5…
ಮಹಾರಾಷ್ಟ್ರ ಬಳಿಕ ರಾಜ್ಯಕ್ಕೆ ಸ್ಥಾನಕೊಂಚ ಯಾಮಾರಿದರೂ ಅಪಾಯ ಕಟ್ಟಿಟ್ಟಬುತ್ತಿ! ಬೆಂಗಳೂರು: ವಿಶ್ವದಲ್ಲೇ ಸಾವಿನ ಸಂಖ್ಯೆಯಲ್ಲಿ ನಂ.2 ಸ್ಥಾನ ಗಳಿಸಿದ ಭಾರತ ಎಂಬ ಸುದ್ದಿ ಆತಂಕ ಸೃಷ್ಟಿಸಿರುವಾಗಲೇ ಕರ್ನಾಟಕ ಸೋಂಕಿತರ ಸಂಖ್ಯೆಯಲ್ಲಿ ರಾಜ್ಯ ದೇಶದಲ್ಲಿಯೇ 2ನೇ ಸ್ಥಾನಕ್ಕೆ ಬಂದಿದೆ. ಇದು ರಾಜ್ಯದಲ್ಲಿ ಕರೋನಾ ಇನ್ನು ತನ್ನ ಆರ್ಭಟ ಹೆಚ್ಚಿಸುತ್ತಿರುವ ಲಕ್ಷಣವಾಗಿದೆ. ಶನಿವಾರ ಕರ್ನಾಟಕದಲ್ಲಿ 3014 ಹೊಸ ಕೋವಿಡ್ ಪ್ರಕರಣ ದಾಖಲಾಗುವ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 8,23,412ಕ್ಕೆ ಏರಿಕೆಯಾಗಿದೆ. ಶನಿವಾರ ರಾಜ್ಯದಲ್ಲಿ 28 ಜನರು ಮಾತ್ರ ಮೃತಪಟ್ಟಿದ್ದಾರೆ. 6 ತಿಂಗಳಿನಲ್ಲಿ ಮೊದಲ ಬಾರಿಗೆ ರಾಜ್ಯದಲ್ಲಿ ಅತಿ ಕಡಿಮೆ ಕೋವಿಡ್ ಸೋಂಕಿತರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಇದುವರೆಗೂ 1,11,68 ಜನರು ಮೃತಪಟ್ಟಿದ್ದಾರೆ.ರಾಜ್ಯದಲ್ಲಿ ಅಕ್ಟೋಬರ್ 31ರಂದು 3014 ಹೊಸ ಪ್ರಕರಣ ಪತ್ತೆಯಾಗಿದೆ.ರಾಜ್ಯದಲ್ಲಿ 7,468 ಜನರು ಗುಣಮುಖರಾಗಿದ್ದಾರೆ. ಇದುವರೆಗೂ ರಾಜ್ಯದಲ್ಲಿ ಗುಣಮುಖರಾದವರ ಸಂಖ್ಯೆ 7,57,208 ಆಗಿದೆ. ದೇಶದಲ್ಲಿ ಕೋವಿಡ್ ಸೋಂಕಿತರು ಹೆಚ್ಚು ಇರುವ ರಾಜ್ಯಗಳಲ್ಲಿ ಮಹಾರಾಷ್ಟ್ರ (16,78,406) ಮೊದಲ ಸ್ಥಾನದಲ್ಲಿದೆ. ಕರ್ನಾಟಕ (8,23,412) 2ನೇ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿ…
ರಾತ್ರಿಯಿಂದ ಮುಂಜಾನೆಯವರೆಗೆ ಪೂಜೆ: ಗದ್ದೆಗಳಲ್ಲಿ ರಂಗು ಮಲೆನಾಡು: ಮಲೆನಾಡಿನ ಪ್ರಸಿದ್ಧ ಹಬ್ಬ ಭೂಮಿ ಹುಣ್ಣಿಮೆಯನ್ನು ಶನಿವಾರ ಮುಂಜಾನೆ ಮಲೆನಾಡಿಗರೆಲ್ಲರೂ ಸೇರಿ ಆಚರಣೆ ಮಾಡಿದರು. ಕುಟುಂಬದವರು ರಾತ್ರಿಯಿಂದಲೇ ಸೇರಿ ಅಡುಗೆ ಮಾಡಿ ಪೂಜೆ ಮಾಡಿದರು.ಭತ್ತದ ಗದ್ದೆಗಳಲ್ಲಿ ಜನರ ಕೂಗು ಕೇಳಿ ಬಂತು. ಗದ್ದೆಯಲ್ಲಿ ಫಸಲಿಗೆ ಹೂವು, ಬಳೆ, ಕುಂಕುಮ ತೊಡಿಸಿ ಅಲಂಕಾರ ಮಾಡಿ ಉಣ ಬಡಿಸಿದರು.ಹಾಲಪ್ಪ ಪೂಜೆ: ಸಾಗರ ಶಾಸಕ ಹಾಲಪ್ಪ ತಮ್ಮ ತವರು ಹರತಾಳಿಒನಲ್ಲಿ ಕುಟುಂಬದವರ ಜತೆ ಭೂಮಿ ಹುಣ್ಣಿಮೆ ಆಚರಿಸಿದರು. ಮಲೆನಾಡಿನ ಪ್ರತಿ ಮನೆ ಮನೆಯಲ್ಲೂ ಹಬ್ಬದ ಸಂಭ್ರಮ ಕಂಡು ಬಂತು.
ಆನ್‍ಲೈನ್ ಶಿಕ್ಷಣ, ಹೋಂ ವರ್ಕ್‍ಗೆ ವಿದ್ಯಾರ್ಥಿಗಳು ಹೈರಾಣಹೋಂ ವರ್ಕ್ ತೋರಿಸಲು 35 ಕಿಲೋ ಮೀಟರ್ ಪಯಣ ಹುಬ್ಬಳ್ಳಿ: ಬೆಕ್ಕಿಗೆ ಚೆಲ್ಲಾಟ…ಇಲಿಗೆ ಪ್ರಾಣ ಸಂಕಟ…ಎಂಬ ಮಾತು ಕರೋನಾದಂತಹ ಸಂಕಷ್ಟ ಕಾಲದಲ್ಲಿ ಪ್ರತಿಯೊಬ್ಬ ಪಾಲಕರು ನೆನಪಿಸಿಕೊಳ್ಳುವಂತೆ ಮಾಡಿದೆ..!ಹೌದು, ಒಂದೆಡೆ ಪ್ರಾಣ ಹೀರುವ ಕರೋನಾ ರಾಜ್ಯ ಮಾತ್ರವಲ್ಲದೇ ಇಡೀ ದೇಶದಲ್ಲೇ ತನ್ನ ಅಟ್ಟಹಾಸ ಮರೆಯುತ್ತಿದೆ. ಈ ಮಧ್ಯೆ, ಶಾಲೆಗಳ ಆರಂಭಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಪ್ರತಿನಿತ್ಯವೂ ಪ್ರಕಟಿಸುತ್ತಿರುವ ಮಾರ್ಗಸೂಚಿಗಳು ನಿಜಕ್ಕೂ ಪಾಲಕ ವರ್ಗವನ್ನು ಹೈರಾಣಾಗಿಸಿವೆ ಎಂದರೇ ಅತಿಶೋಕ್ತಿ ಆಗಲಿಕ್ಕಿಲ್ಲ. 35 ಕಿಲೋ ಮೀಟರ್‍ನಿಂದ: ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಯರೀಬೂದಿಹಾಳ ಗ್ರಾಮದ 8 ವರ್ಷದ ಬಾಲಕ ಪವನ್, ಶಿಕ್ಷಕಿ ನೀಡಿದ ಹೋಂ ವರ್ಕ್ ತೋರಿಸಲು 35 ಕಿಲೋ ಮೀಟರ್ ಪಯಣವನ್ನು ತನ್ನ ತಾಯಿಯೊಂದಿಗೆ ಕೈಗೊಂಡ ಕಥೆ ಇದು. ವಿದ್ಯಾರ್ಥಿ ಪವನ್ ತಂದೆ-ತಾಯಿ ಕೂಲಿ-ನಾಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಮಗನ ವಿದ್ಯಾಭ್ಯಾಸಕ್ಕೆ ಯಾವುದೇ ರೀತಿಯ ತೊಂದರೆಯಾಗಬಾರದೆಂಬ ಉದ್ದೇಶದಿಂದ ಹುಬ್ಬಳ್ಳಿಯ ವಸತಿ ನಿಲಯದಲ್ಲಿಟ್ಟು ವಿದ್ಯಾಭ್ಯಾಸ ನೀಡುತ್ತಿದ್ದರು. ಕರೋನಾ ಹಿನ್ನೆಲೆಯಲ್ಲಿ…
ರಾಜ್ಯೋತ್ಸವದಂದು ಸಿಎಂ ಲೋಕಾರ್ಪಣೆಕನ್ನಡ ಕಲಿಯುವವರಿಗೆ ಸರ್ಕಾರದ ಸಾಥ್ ಬೆಂಗಳೂರು: ಕರೋನಾ ಸಾಂಕ್ರಾಮಿಕ ಬಳಿಕ ಆನ್‍ಲೈನ್ ಶಿಕ್ಷಣ ಪರಿಣಾಮಕಾರಿ ಪ್ರತಿಯೊಬ್ಬರಿಗೂ ತಿಳಿಯುತ್ತಿದ್ದು, ಇದೀಗ ರಾಜ್ಯ ಸರ್ಕಾರ ಕೂಡ ಕನ್ನಡ ಕಲಿಕೆಗೆ ತಂತ್ರಜ್ಞಾನವನ್ನು ಅಳವಡಿಸಲು ಮುಂದಾಗಿದೆ. ಇದು ಕನ್ನಡ ಬಾರದವರಿಗೆ, ಅಂತರಾಜ್ಯದ ನಿವಾಸಿಗಳಿಗೆ ಅನುಕೂಲವಾಗಲಿದೆ. ಕನ್ನಡ ಕಲಿಯಲು ಇಚ್ಛಿಸುವ ಜನರು ಇ-ಲನಿರ್ಂಗ್ portal ಮೂಲಕ ಕನ್ನಡ ಭಾಷೆಯನ್ನು ಸುಲಭವಾಗಿ ಕಲಿಯಬಹುದಾಗಿದೆ. ಇ-ಕಲಿಕೆ ಪೆÇೀರ್ಟಲ್‍ಗೆ ನವೆಂಬರ್.1ರ ಕನ್ನಡ ರಾಜ್ಯೋತ್ಸವ ದಿನದಂದು ಮುಖ್ಯಮಂತ್ರಿ ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದೊಂದಿಗೆ ಈ ಉಪಕ್ರಮವು ರಾಜ್ಯದಲ್ಲಿ ನೆಲೆಸಿರುವ ಕನ್ನಡಿಗರಲ್ಲದವರಿಗೆ ಭಾಷೆಯನ್ನು ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ ಮತ್ತು ವಿದೇಶದಲ್ಲಿ ವಾಸಿಸುವ ಕನ್ನಡಿಗರು ತಮ್ಮ ಮುಂದಿನ ಪೀಳಿಗೆಯ ಕನ್ನಡದ ಮೂಲ ಸಂಪರ್ಕ ಕಳೆದುಕೊಳ್ಳದಂತೆಯೂ ಸಹಾಯ ಮಾಡಲಿದೆ.ಕನ್ನಡವನ್ನು ಕಲಿಸಲು ರಾಜ್ಯ ಸರ್ಕಾರ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿರುವುದು ಇದೇ ಮೊದಲಾಗಿದೆ. ಕನ್ನಡ ಪದಗಳನ್ನು ಡಿಜಿಟಲೀಕರಣಗೊಳಿಸಲು ತಜ್ಞರು, ಬರಹಗಾರರು ಕಾರ್ಯನಿರ್ವಹಿಸುತ್ತಿದ್ದಾರೆ. ಆರಂಭದಲ್ಲಿ, ಕನ್ನಡವನ್ನು ಕಲಿಯಲು ಇಚ್ಛಿಸುವ ಆಸಕ್ತರಿಗೆ ಈ portal ಸಹಾಯ ಮಾಡುತ್ತದೆ ಮತ್ತು…
ರಂಗಿ ತರಂಗ ನಾಯಕಿಯ ಮತ್ತೊಂದು ಹೆಜ್ಜೆ ಕರೋನಾ ಕಾರಣ ಸಿನಿಮಾ ಕ್ಷೇತ್ರ ಸಂಪೂರ್ಣ ನಿಂತಿದೆ. ಯಾವ ಬಿಗ್ ಬಜೆಟ್ ಸಿನಿಮಾಗಳು ಕೂಡ ತೆರೆಗೆ ಬರಲು ಅಥವಾ ಹೊಸ ಶೂಟಿಂಗ್ ಮಾಡಲು ಹಿಂದೆ ಮುಂದೆ ನೋಡುತ್ತಿವೆ. ಈ ನಡುವೆ ಕಿರಿತೆರೆ ಮತ್ತು ಡಿಜಿಟಲ್ ತೆರೆಗಳು ಪ್ರಸಿದ್ಧಿಗೆ ಬಂದಿವೆ.ಹೀಗಾಗಿ ಅನೇಕ ನಟ-ನಟಿಯರು ಕಿರುತೆರೆಗೆ ಜಿಗಿಯುತ್ತಿದ್ದಾರೆ. ಈಗ ರಂಗಿ ತರಂಗ ಖ್ಯಾತಿಯ ನಟಿ ರಾಧಿಕಾ ಚೇತನ್ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದು ವಿಶೇಷ ಅತಿಥಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಉದಯ ಟಿವಿಯ ಆಕೃತಿ ಧಾರವಾಹಿಯಲ್ಲಿ ರಾಧಿಕಾ ಚೇತನ್ ನಟನೆ ಮಾಡಲಿದ್ದಾರೆ. ಅವರು ಯಾವ ರೀತಿಯಾಗಿ ಆಕೃತಿ ಮತ್ತು ಮನಸಾರೆ ಪಾತ್ರಗಳಿಗೆ ಶಕ್ತಿಯಾಗಿ ನಿಲ್ಲುತ್ತಾರೆ ಎಂಬ ಹಲವು ರೋಚಕ ಸನ್ನಿವೇಶಗಳನ್ನೊಳಗೊಂಡಿರುವ ವಿಶೇಷ ಸಂಚಿಕೆಯೇ ಮನಸಾರೆ ಆಕೃತಿ ಮಹಾಸಂಗಮ. ಅದ್ಧೂರಿ ವಿಶೇಷ ಸಂಚಿಕೆಗಳು ಶನಿವಾರ ಮತ್ತು ಭಾನುವಾರ ರಾತ್ರಿ 9:30ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.
ಮಗದೀರ ನಟಿಯ ಬದುಕಿನ ಹೊಸ ಪುಟ ಮುಂಬೈ: ಭಾರತ ಚಿತ್ರರಂಗದ ಪ್ರಸಿದ್ಧ ನಟಿ ಕಾಜಲ್ ಅಗರ್ವಾಲ್ ಉದ್ಯಮಿ ಗೌತಮ್ ಕಿಚ್ಲು ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.ಮುಂಬೈಯಲ್ಲಿ ತಮ್ಮ ಸಮೀಪ ಬಂಧುಗಳು ಮತ್ತು ಆಪ್ತ ಸ್ನೇಹಿತರಿಗಷ್ಟೇ ವಿವಾಹ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದರು. ಕಾಜಲ್ ಅಗರ್ವಾಲ್ ಕಡುಗೆಂಪು ಬಣ್ಣದ ವಧುವಿನ ಉಡುಗೆಯಲ್ಲಿ ಕಂಗೊಳಿಸಿದ್ದರೆ ತಿಳಿ ಗುಲಾಬಿ ಬಣ್ಣದ ದುಪ್ಪಟ್ಟಾ ಹಾಗೂ ಗುಲಾಬಿ ಅಚ್ಚೊತ್ತಿದ ಬೆಳ್ಳಿ ಬಣ್ಣದ ಶೆರ್ವಾನಿಯಲ್ಲಿ ಮದುಮಗ ಗೌತಮ್ ಮಿಂಚಿದ್ದರು.ಕಾಜಲ್ ಮದುವೆಗೆ ಮುನ್ನ ಕಪ್ಪು ಬಿಳುಪಿನ ಮದುಮಗಳ ಫೆÇೀಟೋವನ್ನು ಇನ್ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದರು.ಸಿಂಗಂ, ಮಗದೀರ, ಸ್ಪೆಷಲ್ 26, ತುಪ್ಪಕ್ಕಿ ಚಿತ್ರಗಳಿಂದ ಜನಪ್ರಿಯರಾದ ಕಾಜಲ್ ಅಗರ್ವಾಲ್ ಕಳೆದ ಅಕ್ಟೋಬರ್ 6ರಂದು ಗೌತಮ್ ಜೊತೆ ತಮ್ಮ ವಿವಾಹ ನಿಶ್ಚಯವನ್ನು ಘೋಷಿಸಿಕೊಂಡಿದ್ದರು.