ಭಟ್ಕಳ ಬಂದರಿನಲ್ಲಿ ಕ್ರೇನ್ ಸಹಾಯದಿಂದ ಮೀನು ಸಾಗಣೆ ಭಟ್ಕಳ( ಉತ್ತರ ಕನ್ನಡ): ಮೀನು ಅಂದರೆ ಎಷ್ಟಿರಬಹುದು 50 ರಿಂದ 100 ಕೆ.ಜಿ!. ಆದರೆ ಅಚ್ಚರಿ ಎಂಬಂತೆ ಭಟ್ಕಳ ಬಂದರಿನಲ್ಲಿ ಬುಧವಾರ ರಾತ್ರಿ ಸುಮಾರು 400 ಕೆಜಿ( 4ಕ್ವಿಂಟಾಲ್), 2 ಮೀಟರ್ ಉದ್ದದ ಮೀನು ಮೀನುಗಾರರ ಬಲೆಗೆ ಬಿದ್ದಿದೆ.ಮೀನುಗಾರಿಕೆಗೆ ತೆರಳಿದ ರಾಧಾಕೃಷ್ಣ, ರಾಜಶ್ರೀ, ಜಯದುರ್ಗ ಗಣೇಶ ಬೋಟುಗಳಿಗೆ ಬೃಹತ್ ಗಾತ್ರದ ತೊರ್ಕೆ ಮೀನುಗಳು ದೊರಕಿದ್ದು, ಒಂದೊಂದು ಮೀನುಗಳು ಅಂದಾಜು 300ರಿಂದ 400 ಕೆಜಿ ತೂಕವಿದೆ. ಸುಮಾರು 2 ಮೀಟರ್ ಉದ್ದದ ಮೀನು ಇದಾಗಿದ್ದು, ಈ ಮೀನುಗಳನ್ನು ಬೃಹತ್ ಕ್ರೇನಿನ ಸಹಾಯದಿಂದ ಮೇಲಕ್ಕೆತ್ತಲಾಗಿದೆ. ವೈಜ್ಞಾನಿಕವಾಗಿ ರೇ ಫೀಶ್, ಮೆಂಟ್ ರೇ ಎಂದು ಕರೆಯಲ್ಪಡುವ ಈ ಮೀನು ಸಂಪೂರ್ಣ ಬೆಳವಣಿಗೆಯ ನಂತರ ಸುಮಾರು ನಾಲ್ಕು ಸಾವಿರ ಪೌಂಡ್ ತೂಕ ಹೊಂದಿರುತ್ತದೆ. ಮೀನುಗಾರರು ಪ್ರಯಾಸಪಟ್ಟು ಈ ಮೀನನ್ನು ದಡಕ್ಕೆ ತಂದು ಕ್ರೇನ್ ಸಹಾಯದಿಂದ ಮೇಲಕ್ಕೆ ತರಲಾಯಿತು. ಬೃಹತ್ ಗಾತ್ರದ ಮೀನನ್ನು ನೋಡಲು ಅಕ್ಕ ಪಕ್ಕದ ನೂರಾರು ಜನರು…
Author: Nammur Express Admin
ಅ.30ರಿಂದ ಅಧಿಕಾರ: ಆಡಳಿತ ಹೇಗೆ…?ಮಂಗಳೂರು: ಮಂಗಳೂರಿನ ಬಜಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣೆಯನ್ನು ಅದಾನಿ ಸಮೂಹದ ಕಂಪನಿಯು ವಹಿಸಿಕೊಂಡಿದೆ.ಅದಾನಿ ಸಂಸ್ಥೆ ಅಕ್ಟೋಬರ್ 30ರಂದು ಮಧ್ಯರಾತ್ರಿಯಿಂದ ವಿಮಾನ ನಿಲ್ದಾಣದ ನಿರ್ವಹಣೆಯನ್ನು ವಹಿಸಿಕೊಂಡಿದ್ದು, ಅಧಿಕೃತ ಹಸ್ತಾಂತರ ಪ್ರಕ್ರಿಯೆಯು ನಡೆದಿದೆ. ಅದಾನಿ ಸಂಸ್ಥೆಯ ಉನ್ನತ ಮಟ್ಟದ ಅಧಿಕಾರಿಗಳು ಶನಿವಾರ ಬೆಳಿಗ್ಗೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿ, ವಿಮಾನ ನಿಲ್ದಾಣ ನಿರ್ವಹಣೆಯನ್ನು ಹಸ್ತಾಂತರಿಸುವ ಮೊದಲು ಪೂಜೆ ನೆರವೇರಿಸಿದ್ದಾರೆ. ವಿಮಾನ ನಿಲ್ದಾಣವನ್ನು ಅದಾನಿ ಸಂಸ್ಥೆ ಹಸ್ತಾಂತರಿಸಲಾಗಿದ್ದರೂ, ವಿಮಾನ ನಿಲ್ದಾಣ ಪ್ರಾಧಿಕಾರ ಮತ್ತು ಅದಾನಿ ಸಂಸ್ಥೆ ಎರಡೂ ಒಂದು ವರ್ಷದ ಅವಧಿಗೆ ಸಮನಾಗಿ ಕಾರ್ಯನಿರ್ವಹಿಸಲಿವೆ. ಜಂಟಿ ಕಾರ್ಯಾಚರಣೆಯ ಈ ಒಂದು ವರ್ಷದ ಅವಧಿಯಲ್ಲಿ ಹಣ ವಿನಿಮಯ, ವಿಮಾನ ನಿಲ್ದಾಣದಲ್ಲಿನ ವಾಣಿಜ್ಯ ಚಟುವಟಿಕೆಗಳು, ಲಾಭ ಮತ್ತು ನಷ್ಟವನ್ನು ಅದಾನಿ ಸಂಸ್ಥೆ ನೋಡಿಕೊಳ್ಳುತ್ತದೆ. ವಿಮಾನ ನಿಲ್ದಾಣ ಪ್ರಾಧಿಕಾರವು ವಿಮಾನಗಳ ಆಗಮನ ಮತ್ತು ನಿರ್ಗಮನಕ್ಕೆ ಆದ್ಯತೆ ನೀಡುತ್ತದೆ ಮತ್ತು ಇಡೀ ವ್ಯವಸ್ಥೆಯಲ್ಲಿ ನಿರ್ದೇಶಕರ ಪಾತ್ರವನ್ನು ವಹಿಸುತ್ತದೆ. ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ಮತ್ತು…
ದೇಗುಲದ ವ್ಯವಹಾರಕ್ಕೆ ಡೀಸಿ ಹೊಣೆಕಂಟಕ ಮಾಡುತ್ತೆ ಸರ್ಕಾರ: ರಾಮಪ್ಪಈಡಿಗ ಸಮುದಾಯ ಹೋರಾಟಕ್ಕೆ ಇಳಿಯುತ್ತಾ? ಶಿವಮೊಗ್ಗ: ಸಿಗಂದೂರು ಚೌಡೇಶ್ವರಿ ದೇವಾಲಯದ ಆಡಳಿತ ವಿವಾದದ ಹಿನ್ನೆಲೆಯಲ್ಲಿ ರಚನೆಯಾಗಿದ್ದ ಮೇಲ್ವಿಚಾರಣಾ ಹಾಗೂ ಸಲಹಾ ಸಮಿತಿಯ ಮೊದಲ ಸಭೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದಿದ್ದು, ಈ ಸಭೆ ಭಾರೀ ಕುತೂಹಲ ಮೂಡಿಸಿದೆ. ಅಚ್ಚರಿಯೆಂದರೆ ಈ ಸಭೆಯಿಂದ ಮಾಧ್ಯಮದವರನ್ನು ಹೊರಗೆ ಇಟ್ಟು ನಡೆಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.ಸಿಗಂದೂರು ದೇವಾಲಯದ ಹಣದ ವ್ಯವಹಾರವನ್ನು ಜಿಲ್ಲಾಧಿಕಾರಿಗಳು ನೋಡಿಕೊಳ್ಳಲಿದ್ದಾರೆ. ದೇವಾಲಯದಲ್ಲಿ ಇದ್ದ ಗೊಂದಲ ನಿವಾರಣೆ ಮಾಡಿ, ಪಾರದರ್ಶಕ ಆಡಳಿತ ನಡೆಸಲು ಜಿಲ್ಲಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಸಭೆಯ ಬಳಿಕ ಸಚಿವ ಈಶ್ವರಪ್ಪ ತಿಳಿಸಿದ್ದಾರೆ.ದೇವಾಲಯದಲ್ಲಿ ಹಿಂದೆ ಯಾವ ರೀತಿ ಪೂಜೆ ಕಾರ್ಯಗಳು, ಸೇವೆಗಳು ನಡೆಯುತ್ತಿತ್ತೋ, ಮುಂದೆಯೂ ಸಹ ಹಾಗೆ ಮುಂದುವರೆಯಲಿದೆ. ಆದರೆ, ಇನ್ಮುಂದೆ ದೇವಾಲಯಕ್ಕೆ ಬರುವ ಹರಕೆ ಸೇರಿದಂತೆ ಎಲ್ಲದಕ್ಕೂ ರಶೀದಿ ನೀಡಲಾಗುತ್ತದೆ. ಇದಕ್ಕಾಗಿ ಜಿಲ್ಲಾಧಿಕಾರಿಗಳು ಒಬ್ಬರನ್ನು ನೇಮಕ ಮಾಡಲಿದ್ದಾರೆ ಎಂದರು. ಈ ಹಿಂದೆ ಇದ್ದ ಟ್ರಸ್ಟ್ ಹಾಗೆಯೆ ಇರಲಿದೆ. ಈಗ ಹೊಸ ಸಮಿತಿ ರಚನೆ…
ಎನ್.ಆರ್.ಪುರದಲ್ಲಿ ಕರೋನಾಗೆ ಬಲಿ! ನರಸಿಂಹರಾಜಪುರ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಡಿ ದರ್ಜೆಯ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದ ಮಹಿಳೆಯೊಬ್ಬಳು ಕರೋನಾಕ್ಕೆ ಬಲಿಯಾಗಿದ್ದಾರೆ.ಧನಲಕ್ಷ್ಮಿ ಎಂಬಾಕೆ ಶುಕ್ರವಾರ ಮುಂಜಾನೆ ಮೃತಪಟ್ಟಿದ್ದು, ಈಕೆ 15 ವರ್ಷದಿಂದ ಆಸ್ಪತ್ರೆಯಲ್ಲಿ ಹೆರಿಗೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಅನಾರೋಗ್ಯ ಉಂಟಾಗಿದ್ದು, ಅವರಿಗೆ ಕರೋನಾ ಪಾಸಿಟಿವ್ ಬಂದಿತ್ತು. ನಂತರ ಹೆಚ್ಚಿನ ಚಿಕಿತ್ಸೆಗೆ ಚಿಕ್ಕಮಗಳೂರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ವಿಜಯ ಸಂಕಲ್ಪ ಸಮಾವೇಶದಲ್ಲಿ ಭರವಸೆ ಮಹಾಪೂರಮುನಿರತ್ನ ಪರ ಪ್ರಚಾರಕ್ಕಿಳಿದ ನಟಿ ಅಮೂಲ್ಯ ತುಮಕೂರು: ಕಾಂಗ್ರೆಸ್ ಮತ್ತು ಜೆಡಿಎಸ್ ಏನಿದ್ದರೂ ಎರಡನೇ ಸ್ಥಾನಕ್ಕೆ ಪೈಪೆÇೀಟಿ ಮಾಡಬೇಕು. ಅದಕ್ಕೆ ಶಿರಾದಲ್ಲಿ ನೆರೆದಿರುವ ನೀವೆಲ್ಲರೇ ಸಾಕ್ಷಿ. ಬಿಜೆಪಿಗೆ ಆಶೀರ್ವಾದ ಮಾಡಿ. ಶಿರಾದಲ್ಲಿ ಯಾರಿಗೂ ಮನೆಯಿಲ್ಲದಂತಾಗಬಾರದು. ಐದು ಲಕ್ಷ ಕೊಟ್ಟು ಎಲ್ಲರಿಗೂ ಮನೆ ನಿರ್ಮಿಸಿ ಕೊಡುತ್ತೇನೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಶಿರಾ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಪರ ಪ್ರಚಾರಕ್ಕೆ ಇಳಿದಿರುವ ಯಡಿಯೂರಪ್ಪ, ಆರು ತಿಂಗಳ ಒಳಗಾಗಿ ಶಿರಾದ ಮದಲೂರು ಕೆರೆಗೆ ನೀರು ತುಂಬಿಸಿ, ನಾನೇ ಉದ್ಘಾಟನೆ ಮಾಡುತ್ತೇನೆ. ಕಾಂಗ್ರೆಸ್, ಜೆಡಿಎಸ್ ಭದ್ರಕೋಟೆಯನ್ನು ನುಚ್ಚುನೂರು ಮಾಡಿ, ಶಿರಾದಲ್ಲಿ ಬಿಜೆಪಿಯ ಗೆಲುವು ಸಾಧಿಸಲಿದ್ದು, ಬಿಜೆಪಿ ಗೆಲ್ಲುವುದನ್ನು ಯಾರು ತಡೆಯಲು ಆಗುವುದಿಲ್ಲ ಎಂದು ಕಾರ್ಯಕರ್ತರಿಗೆ ಹುರಿದುಂಬಿಸಿದರು.ಅಮೂಲ್ಯ ಪ್ರಚಾರ!: ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆ ಕಣ ರಂಗೇರಿದೆ. ಅಮೂಲ್ಯ ಪತಿ ಜಗದೀಶ್ ಹಾಗೂ ಮಾವ ರಾಮಚಂದ್ರ ಅವರು ಕೂಡ ಹಲವು ದಿನಗಳಿಂದ ಮುನಿರತ್ನ ಪರವಾಗಿ…
ಮತ್ತೆ ಥಿಯೆಟರ್ನಲ್ಲಿ “ರಂಗಿ ತರಂಗ” ಸಿನಿಮಾ ಸದ್ದು ಬೆಂಗಳೂರು: ಕರೋನಾ ಕಾರಣ ಬಂದ್ ಆಗಿದ್ದ ಚಿತ್ರ ಮಂದಿರಗಳ ಬಾಗಿಲು ತೆಗೆದಿದೆ. ಆದರೆ ಹೊಸ ಸಿನಿಮಾ ರಿಲೀಸ್ ಮಾಡುವಷ್ಟು ಧೈರ್ಯ ಈಗ ಸಿನಿಮಾ ತಂಡಕ್ಕಿಲ್ಲ. ಹೀಗಾಗಿ ಹೊಸ ಸಿನಿಮಾಗಳು ಈಗ ತೆರೆ ಕಾಣುವುದು ಕಷ್ಟ!. ಆದ್ದರಿಂದ ಹಳೆಯ ಯಶಸ್ವಿ ಚಿತ್ರಗಳು ಈಗ ಮರು ತೆರೆ ಕಾಣುತ್ತಿವೆ. ಈ ಸಾಲಿನಲ್ಲಿ ರಂಗಿತರಂಗ ಮತ್ತೆ ಸದ್ದು ಮಾಡಲಿದೆ. ಲವ್ ಮಾಕ್ಟೇಲ್, ದಿಯಾ, ಕೋಟಿಗೊಬ್ಬ 2, ಜಂಟಲ್‍ಮನ್, ಕೆಜಿಎಫ್ 1, ರಂಗನಾಯಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ಟಗರು ಮುಂತಾದ ಸಿನಿಮಾಗಳು ಪ್ರದರ್ಶನ ಕಾಣುತ್ತಿವೆ. ಚಿತ್ರಮಂದಿರಗಳಿಗೆ ಬರುವ ಜನರ ಸಂಖ್ಯೆ ಕಡಿಮೆ ಇದೆ. ಸ್ಟಾರ್ ನಟರ ಹೊಸ ಸಿನಿಮಾಗಳು ಬಿಡುಗಡೆಯಾದರೆ ಗಲ್ಲಾಪೆಟ್ಟಿಗೆಯಲ್ಲಿ ಚೇತರಿಕೆ ಕಾಣುವ ಸಾಧ್ಯತೆ ಇದೆ. ರಂಗಿತರಂಗ ಮಾತ್ರವಲ್ಲದೆ ಅನೇಕ ಸಿನಿಮಾಗಳು ರೀ-ರಿಲೀಸ್ ಆಗಿವೆ.2015ರಲ್ಲಿ ಸಂಪೂರ್ಣ ಹೊಸಬರ ತಂಡ ರಂಗಿತರಂಗ ಮಾಡಿತ್ತು. ನಿರ್ದೇಶಕ ಅನೂಪ್ ಭಂಡಾರಿ ಅವರ ಸಹೋದರ ನಿರೂಪ್ ಭಂಡಾರಿ ಹೀರೋ ಸಿನಿಮಾ…
ಕೋಟ್ಯಧಿಪತಿಗಳಾಗ್ತೀರಾ ಎಂಬ ಆಸೆ ಹುಟ್ಟಿಸಿ ಮಾರಾಟ ಮೈಸೂರು: ಎರಡು ತಲೆ ಹಾವಿನ ಮಾರಾಟ ದಂಧೆ ಎಗ್ಗಲ್ಲದೆ ನಡೆಯುತ್ತದೆ. ಈ ಉರಗವನ್ನು ಸಾಗಣೆ ಮಾಡುತ್ತಿದ್ದ ಐವರು ಕಳ್ಳ ಬೇಟೆಗಾರರನ್ನು ಮೈಸೂರಲ್ಲಿ ಬಂಧಿಸಲಾಗಿದೆ. ದೊಡ್ಡಯ್ಯ, ಹೇಮಂತ್, ಯೋಗೇಶ್, ರವಿ ಮತ್ತು ಭರಮಗೌಡ ಎಂಬುವವರು ಮೈಸೂರಿಗೆ ಹಾವನ್ನು ಕಾರಿನಲ್ಲಿ ಕಳ್ಳಸಾಗಣೆ ಮಾಡುತ್ತಿದ್ದಾರೆ ಎಂಬ ಸುಳಿವಿನ ಮೇರೆಗೆ ಇಲಾಖೆ ಸಿಬ್ಬಂದಿ ಸಿದ್ದಲಿಂಗಪುರ ಬಳಿ ಕಾರನ್ನು ತಡೆದು ಬೆಂಗಳೂರಿನಿಂದ ಮೈಸೂರಿಗೆ ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಮಣ್ಣುಮುಕ್ಕ ಹಾವನ್ನು ರಕ್ಷಿಸಿದ್ದಾರೆ. ಎರಡು ಮಂಡೆ ಹಾವನ್ನು ಮನೆಯಲ್ಲಿ ಇಟ್ಟುಕೊಂಡರೆ ಕೋಟ್ಯಾಧಿಪತಿಗಳಾಗಬಹುದೆಂದು ದುಷ್ಕರ್ಮಿಗಳು ಸುಳ್ಳು ಸುದ್ದಿ ಹಬ್ಬಿಸಿ, ಮಣ್ಣುಮುಕ್ಕ ಹಾವನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂದು ಅರಣ್ಯ ಸಂಚಾರಿ ದಳದ ಅಧಿಕಾರಿಗಳು ತಿಳಿಸಿದ್ದಾರೆ.
ನಿಷೇಧವಾದರೂ ಕೆಲವು ಮೊಬೈಲ್ನಲ್ಲಿ ಲಭ್ಯವಿತ್ತು… ಮೊಬೈಲ್ ಮತ್ತು ಪಬ್‍ಜಿ ಲೈಟ್ ಆವೃತ್ತಿ ದೇಶದಲ್ಲಿ ಲಭ್ಯವಾಗುತ್ತಿದ್ದ ಪಬ್‍ಜಿ ಗೇಮ್ ಭಾರತದಲ್ಲಿ ಈಗ ಸಂಪೂರ್ಣ ನಿಷೇಧಗೊಂಡಿದೆ. ದೇಶದಲ್ಲಿ ಸಂಪೂರ್ಣ ನಿಷೇಧ ಅನ್ವಯವಾಗಲಿದೆ. ಚೀನಾ ಮೂಲದ ಅಪ್ಲಿಕೇಶನ್ ಮತ್ತು ಮೊಬೈಲ್ ಗೇಮ್‍ಗಳ ಮೇಲೆ ಕೇಂದ್ರ ಸರಕಾರ ಕ್ರಮ ಕೈಗೊಂಡು 200ಕ್ಕೂ ಅಧಿಕ ಗೇಮ್ ಮತ್ತು ಆಪ್ ನಿಷೇಧವಾಗಿದೆ. ಅದರ ಜತೆಗೇ ಜನಪ್ರಿಯ ಪಬ್‍ಜಿ ಗೇಮ್ ಕೂಡ ಬ್ಯಾನ್ ಆಗಿದೆ. ಹಾಗಿದ್ದೂ ಕೆಲವು ಬಳಕೆದಾರರಿಗೆ ಪಬ್‍ಜಿ ಮೊಬೈಲ್ ಮತ್ತು ಪಬ್‍ಜಿ ಲೈಟ್ ಆವೃತ್ತಿ ದೇಶದಲ್ಲಿ ಲಭ್ಯವಾಗುತ್ತಿತ್ತು. ಭದ್ರತೆ ಮತ್ತು ಸುರಕ್ಷತೆ ಕಾರಣಗಳಿಂದಾಗಿ ದೇಶದಲ್ಲಿ ಪಬ್‍ಜಿ ಸಹಿತ ಚೀನಾ ಮೂಲದ ವಿವಿಧ ಆಪ್ ಮತ್ತು ಮೊಬೈಲ್ ಗೇಮ್ ನಿಷೇಧಿಸಲಾಗಿದೆ. ಅದರಲ್ಲಿ ಪಬ್‍ಜಿ ಕೂಡ ಸೇರಿದೆ. ಆದರೂ ನಿಷೇಧದ ಬಳಿಕವೂ ಹಲವರು ಮೊದಲೇ ಪಬ್‍ಜಿ ಇನ್‍ಸ್ಟಾಲ್ ಮಾಡಿಕೊಂಡಿದ್ದರೆ, ಪಬ್‍ಜಿ ಲೈಟ್ ಮತ್ತು ಪಬ್‍ಜಿ ಮೊಬೈಲ್ ದೇಶದಲ್ಲಿ ಬಳಕೆಗೆ ಲಭ್ಯವಾಗಿತ್ತು. ಸೆ.2ರಂದು ನಿಷೇಧ ಹೇರಲಾಗಿತ್ತಾದರೂ, ಕಾರ್ಯನಿರ್ವಹಿಸುತ್ತಿದ್ದ ಪಬ್‍ಜಿಗೆ ಇಂದಿನಿಂದ ಸಂಪೂರ್ಣ ನಿಬರ್ಂಧ…
ಮುನಿರತ್ನ ಪರ ದರ್ಶನ್ ರೋಡ್ ಶೋಜನವೋ ಜನ: ಭಾರೀ ಬಂದೋಬಸ್ತ್! ಬೆಂಗಳೂರು: ಬೆಂಗಳೂರು ನಗರದ ಆರ್.ಆರ್.ನಗರ ಕ್ಷೇತ್ರದ ಮರು ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರಾತ್ರಿವರೆಗೆ ಕ್ಷೇತ್ರದ ಹಲವೆಡೆ ರೋಡ್ ಶೋ ನಡೆಸಿ ಪ್ರಚಾರ ಮಾಡಿದ್ದಾರೆ. ಯಶವಂತಪುರದಿಂದ ರೋಡ್ ಶೋ ನಡೆಸುತ್ತಿರುವ ದರ್ಶನ್ ಅವರನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದಾರೆ. ಜನರನ್ನು ನಿಯಂತ್ರಿಸಲು ಪೊಲೀಸ್ ರು ಹರಸಾಹಸ ಪಡುತ್ತಿದ್ದಾರೆ. ಮುನಿರತ್ನ ಅವರ ಪರ ಪ್ರಚಾರ ಮಾಡುತ್ತಿರುವುದು ಇದೇ ಮೊದಲ ಬಾರಿ ಅಲ್ಲ. ಕರೋನಾ ಸಮಯದಲ್ಲಿ ಮುನಿರತ್ನ ಅವರು ಹೇಗೆ ಕೆಲಸ ಮಾಡಿದ್ದಾರೆ ಎಂಬುದನ್ನು ನೋಡಿದ್ದೇನೆ. ಅವರು ಸಾವಿರಾರು ಬಡ ಜನರಿಗೆ ಸಹಾಯ ಮಾಡಿದ್ದಾರೆ. ಅವರ ಕೆಲಸಗಳನ್ನು ನೋಡಿಯೇ ನಾನಿಂದು ಅವರ ಪರ ಪ್ರಚಾರ ಮಾಡುತ್ತಿದ್ದೇನೆ ಎಂದು ದರ್ಶನ್ ಹೇಳಿದ್ದಾರೆ. ನಾನು ಯಾವುದೇ ಪಕ್ಷವನ್ನು ನೋಡಿ ಪ್ರಚಾರ ಮಾಡುವುದಿಲ್ಲ. ವ್ಯಕ್ತಿಯನ್ನು ನೋಡಿ ಪ್ರಚಾರ ಮಾಡುತ್ತಿದ್ದೇನೆ. ಮುನಿರತ್ನ ಸೇವೆಯನ್ನು ಗಮನದಲ್ಲಿಟ್ಟುಕೊಂಡು ನಾನು ಮುನಿರತ್ನ ಅವರ ಪರವಾಗಿ ಮತಯಾಚನೆ…
ಸಿಲಿಂಡರ್ ಬುಕ್ಕಿಂಗ್ ಮಾಡಲು ನ.1ರಿಂದ ಹೊಸ ನಿಯಮ ಬೆಂಗಳೂರು: ಎಲ್ಪಿಜಿ ಸಿಲಿಂಡರ್ ಬುಕಿಂಗ್‍ಗಾಗಿ ಹೊಸ ಸಂಖ್ಯೆ ಜಾರಿಗೆ ಬರಲಿದ್ದು, ಇನ್ನು ಸಿಲಿಂಡರ್ ಪಡೆಯಲು ನವೆಂಬರ್ 1ರಿಂದ ಹೊಸ ನಿಯಮ ಬರಲಿದೆ. ಗ್ರಾಹಕರು ತಮ್ಮ ಮೊಬೈಲ್‍ಗೆ ಬರುವ ಕೋಡ್ ನೀಡಿ ಸಿಲಿಂಡರ್ ಪಡೆಯಬಹುದಾಗಿದೆ. ಈ ಬಗ್ಗೆ ಸಿದ್ಧತೆ ಸಂಪೂರ್ಣಗೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ. ಭಾರತೀಯ ತೈಲ ನಿಗಮದ ಇಂಡೇನ್ ಅಡುಗೆ ಅನಿಲ ಸಿಲಿಂಡರ್ ಪಡೆಯಲು ಎಲ್ಪಿಜಿ ಸಿಲಿಂಡರ್ ಬುಕ್ಕಿಂಗ್ ಸಂಖ್ಯೆ 77189 55555 ಆಗಿದ್ದು ಗ್ರಾಹಕರಿಗೆ ದಿನದ 24 ಗಂಟೆ ಸೇವೆ ಲಭ್ಯವಿದೆ. ಎಲ್ಪಿಜಿ ಬುಕಿಂಗ್ ಅನ್ನು ಒಂದೇ ಸಂಖ್ಯೆಯಲ್ಲಿ ಎಸ್‍ಎಂಎಸ್ ಮತ್ತು ಐವಿಆರ್‍ಎಸ್ ಮೂಲಕ ಮಾಡಬಹುದಾಗಿದೆ. ಇಂಡೇನ್ ಎಲ್ಪಿಜಿ ಸಿಲಿಂಡರ್ ಬುಕ್ ಮಾಡುವ ಗ್ರಾಹಕರಿಗೆ ಅನುಕೂಲ ಕಲ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಪ್ರಸ್ತುತ ಇರುವ ಬುಕ್ಕಿಂಗ್ ದೂರವಾಣಿ ಸಂಖ್ಯೆ ದೂರಸಂಪರ್ಕ ವೃತ್ತ ನಿರ್ದಿಷ್ಟವಾಗಿದ್ದು ಶನಿವಾರ ಮಧ್ಯರಾತ್ರಿಯಿಂದ ನಿಷ್ಕ್ರಿಯವಾಗುತ್ತದೆ.