Author: Nammur Express Admin

New Delhi, Chinese smartphone maker OPPO on Thursday launched its new budget smartphone ‘OPPO 15’ with an AI triple camera system at the rear for Rs 10,990 in India. OPPO A15 will be available in two colour variants — dynamic black and mystery blue. “Riding high on the success of the recently introduced A53, OPPO aims to further strengthen its highly acclaimed A series with the launch of A15 that offers promising features in this segment,” the company said in a statement. The smartphone features a 6.52-inch water-drop screen with a large 89 per cent screen-to-body ratio. The device also…

Read More

ಕಡೂರಲ್ಲಿ ಕಂಟೈನರ್ ಒಳಗೆ ಗೋ ಸಾಗಣೆಭಜರಂಗದಳದ ಕಾರ್ಯಕರ್ತರಿಂದ ದಾಳಿ ಕಡೂರು: ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಗೋವುಗಳ ಸಾಗಣೆ ಎಗ್ಗಿಲ್ಲದೆ ಸಾಗುತ್ತಿದೆ. ಕೊಪ್ಪ, ಶೃಂಗೇರಿ, ಮೂಡಿಗೆರೆ, ಕಡೂರು, ತರೀಕೆರೆ, ಚಿಕ್ಕಮಗಳೂರು, ನರಸಿಂಹರಾಜಪುರ, ಆಲ್ದೂರು ತಾಲೂಕು ಸೇರಿ ಮಲೆನಾಡಿನ ಹಲವೆಡೆ ಗೋ ಸಾಗಣೆ ದಂಧೆ ಹಲವು ವರ್ಷಗಳಿಂದ ನಡೆಯುತ್ತಿದೆ. ಆದರೆ ಪೊಲೀಸರು ಕಣ್ಣು ಕಾಣದಂತೆ ಕುಳಿತಿದ್ದಾರೆ. ಕೊಪ್ಪದ ತೋಟವೊಂದರಲ್ಲಿ ದಂಧೆ ನಡೆಯುತ್ತಿದ್ದು, ಕಳೆದ ವರ್ಷ ಬಯಲಾಗಿತ್ತು. ಆಲ್ದೂರು ಭಾಗದಲ್ಲಿ ಈಗಲೂ ನಡೆಯುತ್ತಿದೆ. ಇತ್ತ ಕಡೂರಲ್ಲಿ ಕಂಟೈನರ್ ಒಂದರಲ್ಲಿ ದನ ಮತ್ತು ಎಮ್ಮೆಗಳನ್ನು ಕೇರಳಕ್ಕೆ ಸಾಗಿಸುತ್ತಿದ್ದಾಗ ಭಜರಂಗದಳದ ಕಾರ್ಯಕರ್ತರ ಕೈಯಲ್ಲಿ ಮೂವರು ಸಿಕ್ಕಿಬಿದ್ದಿದ್ದಾರೆ.ಕಡೂರು ತಾಲೂಕಿನ ಮಲ್ಲೇಶ್ವರ ಬಳಿ ರೈತರಿಂದ ಖರೀದಿ ಮಾಡಿದ್ದ 3 ಹಸು, 6 ಎಮ್ಮೆಗಳನ್ನು ಕೇರಳಕ್ಕೆ ಸಾಗಿಸುತ್ತಿದ್ದ ವೇಳೆ 3 ಮಂದಿ ಸಿಕ್ಕಿಬಿದ್ದಿದ್ದಾರೆ. ಈ ದಂಧೆಯಲ್ಲಿ ಎಲ್ಲಾ ಧರ್ಮದವರು ಒಟ್ಟಾಗಿ ದಂಧೆ ನಡೆಸುತ್ತಿರುವ ಬಗ್ಗೆ ಗುಸು ಗುಸು ಕೇಳಿ ಬಂದಿದೆ.

Read More

ಕರೋನಾ ನಡುವೆ ಜನತೆಗೆ ವರುಣಾಘಾತಕೊಚ್ಚಿ ಹೋದ ಜನರ ಬದುಕುತರಕಾರಿ, ಬೆಳೆ, ಮನೆ ಮಠ ಆಸ್ತಿ ಹಾನಿ ಬೆಂಗಳೂರು: ಕರೋನಾ ರಾಕ್ಷಸನ ಹೊಡೆತಕ್ಕೆ ಸಿಲುಕಿ ಕಂಗಾಲಾಗಿದ್ದ ಜನ ಈ ಬಾರಿ ಮಳೆ ಹೊಡೆತದಿಂದ ತೊಂದರೆಗೆ ಈಡಾಗಿದ್ದಾರೆ. ರಾಜ್ಯದಲ್ಲಿ ಕಳೆದ ಒಂದು ವಾರದಿಂದ 11 ಜಿಲ್ಲೆಗಳಲ್ಲಿ ಅಕಾಲಿಕ ಹಿಂಗಾರು ಮಳೆ ಅಬ್ಬರಿಸುತ್ತಿದೆ. ಅದರಲ್ಲೂ ಉತ್ತರ ಕರ್ನಾಟಕ, ಮಧ್ಯ ಕರ್ನಾಟಕದಲ್ಲಿ ಅಪಾರ ಬೆಳೆ, ಮನೆ ನಾಶವಾಗಿದ್ದು, 5ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ರಾಜಧಾನಿ ಬೆಂಗಳೂರು, ಮೈಸೂರು, ಮಂಡ್ಯ ಸೇರಿ ಎಲ್ಲೆಡೆ ಭಾರಿ ಮಳೆಯಾಗಿದೆ. ಇನ್ನೂ ಮುಂದಿನ 3 ದಿನ ಭಾರೀ ಮಳೆ ಸೂಚನೆ ಇದೆ. ಈ ನಡುವೆ ಮಳೆ ಹಾನಿಯಿಂದ ತರಕಾರಿ, ಅಗತ್ಯ ದಿನಸಿ, ಆಹಾರ ಬೆಳೆ ನಾಶವಾಗಿದೆ. ಇದೀಗ ಕರೋನಾ ಬರೆಗೆ ಮತ್ತಷ್ಟು ತುಪ್ಪ ಸುರಿದಂತಾಗಿದೆ. ಜಲಾಶಯ ಭರ್ತಿ ಹಿನ್ನೆಲೆ ಹಳ್ಳಕ್ಕೆ ಭಾರೀ ಪ್ರಮಾಣದ ನೀರು ಹರಿಸಲಾಗಿದೆ. ಉತ್ತರ ಕರ್ನಾಟಕದಲ್ಲಿ ಬದುಕು ಅಕ್ಷರಶಃ ಬೀದಿಗೆ ಬಿದ್ದಿದೆ. ಜಿಲ್ಲೆಗಳಲ್ಲಿ ಮಳೆ ಅಬ್ಬರಿಸಿಸುತ್ತಿದೆ. ಜನತೆ ಎಚ್ಚರವಾಗಿರಬೇಕು. ಸರ್ಕಾರ…

Read More

ಗಡಿ ನುಸುಳಲು ಯತ್ನಿಸುತ್ತಿದ್ದ ವೇಳೆ ಘಟನೆಮತ್ತೆ ಗಡಿಯಲ್ಲಿ ಚೀನಾ ತಂಟೆ ಶುರು? ನವ ದೆಹಲಿ: ಪದೇ ಪದೇ ಗಡಿಯಲ್ಲಿ ಖ್ಯಾತೆ ತೆಗೆಯುವ ಚೀನಾದ ವಿರುದ್ಧ ಭಾರತ ಸಿಡಿದೆದ್ದಿರುವ ಬೆನ್ನಲ್ಲೇ ಲಡಾಕ್‍ನಲ್ಲಿ ಭಾರತದ ಗಡಿಯೊಳಗೆ ನುಸುಳಲು ಪ್ರಯತ್ನಿಸುತ್ತಿದ್ದ ಚೀನಾದ ಯೋಧನೊಬ್ಬನನ್ನು ಸೇನೆಯು ವಶಕ್ಕೆ ಪಡೆದುಕೊಂಡಿದೆ.ಚೀನಾದ ಯೋಧನ ಬಗ್ಗೆ ಎಲ್ಲಾ ರೀತಿಯ ಮಾಹಿತಿ ಪಡೆದು, ಶಿಷ್ಟಾಚಾರ ಪೂರೈಸಿದ ಬಳಿಕ ಮರಳಿ ಕಳುಹಿಸಲಾಗುವುದು ಎಂದು ವರದಿಗಳು ತಿಳಿಸಿವೆ. ಇತ್ತೀಚಿನ ಕೆಲವು ತಿಂಗಳಿಂದ ಗಡಿಯಲ್ಲಿ ಭಾರತ ಹಾಗೂ ಚೀನಾ ಮಧ್ಯೆ ಸಂಘರ್ಷವು ನಡೆಯುತ್ತಿದೆ.ಲಡಾಖ್‍ನ ಡೆಮ್ಚೊಕ್ ಪ್ರದೇಶದಲ್ಲಿ ಸೋಮವಾರ ಬೆಳಿಗ್ಗೆ ಚೀನಾದ ಪಿಎಲ್‍ಎ ಸೇನೆಯ ಸೈನಿಕನೊಬ್ಬನನ್ನು ಭಾರತೀಯ ಸೇನೆ ಬಂಧಿಸಿದೆ. ಆತ ಪ್ರಸ್ತುತ ಸೇನೆಯ ವಶದಲ್ಲಿದ್ದಾನೆ. ಚೀನೀ ಸೈನಿಕ ಭಾರತದಲ್ಲಿ ಬೇಹುಗಾರಿಕೆ ನಡೆಸುತ್ತಿದ್ದ ಎಂಬ ಗುಮಾನಿಯೊಂದಿಗೆ ತನಿಖೆ ನಡೆಸಲಾಗುತ್ತಿದೆ. ಶಾಂಗ್ಸಿ ಪ್ರದೇಶದವನಾದ ಸೈನಿಕನ ಬಳಿ ಚೀನಾದ ನಾಗರಿಕ ಮತ್ತು ಸೇನಾ ದಾಖಲೆಗಳಿದ್ದವು. ಶಸ್ತ್ರಸಜ್ಜಿತ ಸೈನಿಕ ಕಾಪೆರ್Çರಲ್ ಶ್ರೇಣಿಯವನಾಗಿದ್ದು, ಆತನ ಹೆಸರು ವಾಂಗ್ ಯಾ ಲಾಂಗ್ ಎಂದು ಇಂಡಿಯಾ ಟುಡೆ…

Read More

ಹಿಂದಿನ ಸವಾರರಿಗೂ ಹೆಲ್ಮೆಟ್ ಕಡ್ಡಾಯತಪ್ಪಿದ್ರೆ 3 ತಿಂಗಳು ಡಿಎಲ್ ಕ್ಯಾನ್ಸಲ್ ಬೆಂಗಳೂರು: ರಾಜ್ಯ ಸರ್ಕಾರ ಬೈಕ್ ಸವಾರರಿಗೆ ಮತ್ತೊಂದು ಶಾಕ್ ನೀಡಿದೆ.ಮುಂದಿನ ಸವಾರನಿಗೆ ಹಿಂದಿನ ಸವಾರರಿಗೂ ಹೆಲ್ಮೆಟ್ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ನಿಯಮ ತಪ್ಪಿದ್ರೆ 3 ತಿಂಗಳು ಡಿಎಲ್ ಕ್ಯಾನ್ಸಲ್ ಮಾಡುವುದಾಗಿ ತಿಳಿಸಲಾಗಿದೆ. ಈಗಾಗಲೇ ಸಂಚಾರ ನಿಯಮ ಉಲ್ಲಂಘನೆ ದಂಡ ದುಬಾರಿಗೊಳಿಸಿ ಬಳಿಕ ಕಡಿತಗೊಳಿಸಿದ್ದಂತ ರಾಜ್ಯ ಸರ್ಕಾರ, ಈಗ ರಾಜ್ಯದ ಬೈಕ್ ಸವಾರರಿಗೆ ಮತ್ತೊಂದು ಶಾಕ್ ನೀಡಿದೆ. ಬೆಂಗಳೂರು ನಗರ ಸೇರಿದಂತೆ ರಾಜ್ಯದ ನಗರ ಪ್ರದೇಶಗಳಲ್ಲಿ ಮಾತ್ರವೇ ಜಾರಿಯಲ್ಲಿದ್ದಂತ ಹಿಂಬದಿಯ ಸವಾರರಿಗೂ ಹೆಲ್ಮೆಟ್ ಕಡ್ಡಾಯ ನಿಯಮವನ್ನು ರಾಜ್ಯಾಧ್ಯಂತ ವಿಸ್ತರಿಸಲಾಗಿದೆ. ಅಲ್ಲದೇ ಹೆಲ್ಮೆಟ್ ಧರಿಸದೇ ಸಂಚಾರಿ ಪೆÇಲೀಸರಿಗೆ ಸಿಕ್ಕಿಬಿದ್ದರೇ, ಅಂತಹ ವಾಹನ ಸವಾರರ ಪರವಾನಗಿಯನ್ನೇ 3 ತಿಂಗಳು ಅಮಾನತುಗೊಳಿಸುವಂತೆ ಸಾರಿಗೆ ಇಲಾಖೆ ಆದೇಶಿಸಿದೆ.

Read More

ನವೆಂಬರ್ ಮಧ್ಯಂತರದಲ್ಲಿ 10 ಲಕ್ಷ ಕೇಸ್?ಭಾರತದಲ್ಲಿ 70 ಲಕ್ಷ ಕೇಸ್: 1.15 ಲಕ್ಷ ಸಾವು ಬೆಂಗಳೂರು: ಭಾರತದಲ್ಲಿ ಕರೋನಾ ದಿನೇ ದಿನೇ ಹೆಚ್ಚುತ್ತಿದೆ. ಕರ್ನಾಟಕದಲ್ಲಿ ನವೆಂಬರ್ ಮಧ್ಯಕ್ಕೆ ಕೊರೊನಾ ಸೋಂಕಿತರ ಸಂಖ್ಯೆ 10 ಲಕ್ಷ ದಾಟಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ದೇಶದಲ್ಲಿ ನಿತ್ಯ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗಿದ್ದರೂ ಕೂಡ ರಾಜ್ಯಲ್ಲಿ ಕಡಿಮೆಯಾಗಿಲ್ಲ. ನವೆಂಬರ್ 12ರೊಳಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 10 ಲಕ್ಷ ಗಡಿದಾಟಲಿದೆ, ಮೃತರ ಸಂಖ್ಯೆ 12,800ಕ್ಕೆ ತಲುಪಲಿದೆ ಎಂದು ತಜ್ಞರು ನಡೆಸಿದ ಅಧ್ಯಯನದಲ್ಲಿ ಅಂದಾಜಿಸಲಾಗಿದೆ. ಬೆಂಗಳೂರಿನಲ್ಲಿ ಕೊರೊನಾ ವ್ಯಾಪಕವಾಗುತ್ತಿದ್ದು, ನಗರದಲ್ಲಿ ಗರಿಷ್ಠ ಸಂಖ್ಯೆಯ ಸಕ್ರಿಯ ಪ್ರಕರಣಗಳನ್ನು ಹೊಂದಿದೆ. ಭಾರತದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳಲ್ಲಿ ಶೇ.8ಪಾಲನ್ನು ಬೆಂಗಳೂರು ಹೊಂದಿದೆ. ಇದರಂತೆ ನವೆಂಬರ್ ವೇಳೆಗೆ ಪ್ರಕರಣಗಳ ಸಂಖ್ಯೆ 4.2 ಲಕ್ಷಕ್ಕೆ ಹೆಚ್ಚಾಗುವ ಸಾಧ್ಯತೆಯಿದೆ ಮತ್ತು ಮುಂದಿನ4-6 ವಾರಗಳಲ್ಲಿ ಬೆಂಗಳೂರು ನಗರಕ್ಕೆ 13,000 ಆಮ್ಲಜನಕ ಹಾಸಿಗೆಗಳು, 10,000 ಐಸಿಯು ಹಾಸಿಗೆಗಳು ಮತ್ತು 6,500 ವೆಂಟಿಲೇಟರ್‍ಗಳ ಅಗತ್ಯತೆ ಬೀಳಬಹುದು ಎಂದು ಹೇಳಲಾಗುತ್ತಿದೆ. ಮಾರ್ಚ್ 8…

Read More

ಪೊಲೀಸರು, ಅಬಕಾರಿ ಇಲಾಖೆಗೆ ಈಗ ಗಾಂಜಾ ಏಟು!ಸರ್ಕಾರದಿಂದ ಡೆಡ್‍ಲೈನ್: ದಂಧೆಕೋರರಿಗೆ ಟೈಮ್ ಲೈನ್ ಮಂಗಳೂರು: ದೇಶದಲ್ಲಿ ಗಾಂಜಾ ಮತ್ತು ಡ್ರಗ್ಸ್ ದಂಧೆಗೆ ಸರ್ಕಾರ ಕಡಿವಾಣ ಹಾಕುತ್ತಿದೆ. ಪ್ರತಿ ಪೊಲೀಸ್ ಮತ್ತಿ ಅಬಕಾರಿ ಠಾಣೆಗೆ ಟಾರ್ಗೆಟ್ ನೀಡಿದೆ. ಇತ್ತ ಗಾಂಜಾ ಕಳ್ಳರ ಹಿಂದೆ ಬಿದ್ದ ಪೊಲೀಸರು ಹಳ್ಳಿ ಹಳ್ಳಿ ನುಗ್ಗುತ್ತಿದ್ದಾರೆ. ಪೊಲೀಸರು ಅಬಕಾರಿ ಇಲಾಖೆಗೆ ಸರ್ಕಾರದಿಂದ ಡೆಡ್‍ಲೈನ್ ನೀಡಲಾಗಿದೆ. ದಂಧೆಕೋರರಿಗೆ ಟೈಮ್ ಲೈನ್ ಫಿಕ್ಸ್ ಆಗಿದ್ದು ಉಡುಪಿಯಲ್ಲಿ ಇತ್ತೀಚೆಗೆ ಭಾರೀ ದಂಧೆ ಬಯಲಾಗಿದೆ. ಶಿವಮೊಗ್ಗದಲ್ಲಿ ಅರೆಸ್ಟ್!: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ದೊಡ್ಡಪೇಟೆ ಪೆÇಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಸುಮಾರು 80 ಸಾವಿರ ರೂಲ ಮೌಲ್ಯದ ಗಾಂಜಾ, ಒಂದು ಸ್ವಿಫ್ಟ್ ಕಾರು ಮತ್ತು 2 ಮೊಬೈಲ್ ಫೆÇೀನ್ ವಶಪಡಿಸಿಕೊಂಡಿದ್ದಾರೆ.

Read More

ಇಬ್ಬರು ಅರ್ಚಕರ ಮೇಲೆ ಕೇಸ್!ದೇಗುಲದಲ್ಲಿ ನಡೆದ ಘಟನೆ ಬಗ್ಗೆ ಸಿಎಂ ಬೇಸರ ಸಾಗರ: ರಾಜ್ಯದ ಪ್ರಸಿದ್ಧ ಸಿಗಂದೂರು ದೇವಸ್ಥಾನದಲ್ಲಿ ಗಲಾಟೆಗೆ ಸಂಬಂಧಿಸಿದಂತೆ ಇದೀಗ ಮಹತ್ವದ ತಿರುವು ಸಿಕ್ಕಿದೆ. ದೇವಸ್ಥಾನದ ಪ್ರಧಾನ ಅರ್ಚಕ ಶೇಷಗಿರಿ ಭಟ್ ಹಾಗೂ ಅವರ ಸಹೋದರ ಸುಬ್ಬಾ ಭಟ್ ವಿರುದ್ಧ ಕೇಸ್ ದಾಖಲಾಗಿದೆ. ಇವರು ದ್ಯಾಮಪ್ಪ ಜೈನ್ ಎಂಬುವವರ ಮೇಲೆ ಹಲ್ಲೆ ನಡೆಸಿದ್ದರು ಎಂದು ಕಾರ್ಗಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇಬ್ಬರ ವಿರುದ್ಧ ಐಪಿಸಿ ಸೆಕ್ಷನ್ 323, 324, 504 ಮತ್ತು 506ರ ಅಡಿ ಎಫ್‍ಐಆರ್ ದಾಖಲಿಸಲಾಗಿದೆ. ಇತ್ತ ಡಿಸಿ ಸೇರಿದಂತೆ ಎಲ್ಲಾ ಉನ್ನತ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಖಡಕ್ ಕ್ರಮ: ಸಿಗಂದೂರಿಗೆ ಡೀಸಿ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇತ್ತ ಸರ್ಕಾರ ಇಬ್ಬರು ಕುಳಿತು ಸಮಸ್ಯೆ ಬಗೆಹರಿಸಿಕೊಳ್ಳದಿದ್ದರೆ ಸರ್ಕಾರ ಮುಂದಿನ ಕ್ರಮ ತೆಗೆದುಕೊಳ್ಳಲಿದೆ. ಎಂದು ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ. ಸಿಎಂ ಬೇಸರ!: ಸಿಗಂದೂರಲ್ಲಿ ನಡೆದ…

Read More

ಶೂಟಿಂಗ್‍ನಲ್ಲಿದ್ದಾಗಲೇ ವಿಧಿವಶ: ಅಪಾರ ಅಭಿಮಾನಿಗಳ ಕಣ್ಣೀರುಕಿರಿ ತಲೆಮಾರನ್ನು ಬೆಳೆಸಿದ್ದ ಹಿರಿಯ ನಟ ಬೆಂಗಳೂರು: ಕನ್ನಡದ ಹಲವಾರು ಧಾರಾವಾಹಿಯಲ್ಲಿ ನಟಿಸಿದ್ದ ಪ್ರಸಿದ್ಧ ನಟ, ಬರಹಗಾರ ಕೃಷ್ಣ ನಾಡಿಗ್ ಶನಿವಾರ ಶೂಟಿಂಗ್‍ನಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಅವರಿಗೆ ಹೃದಯಾಘಾತವಾಗಿದೆ. ಮೊದಲಿಗೆ ಎದೆನೋವು ಕಾಣಿಸಿಕೊಂಡಿತ್ತು. ನಂತರ ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ಇದೀಗ ಅವರ ಸಾವು ಕಲಾ ಲೋಕಕ್ಕೆ ನೋವು ತಂದಿದೆ.”ಮಿಲನ’, ‘ದೇವಿ’, ‘ಪಾರು’ ಮುಂತಾದ ಧಾರಾವಾಹಿಗಳಲ್ಲಿ ಇವರು ನಟಿಸಿದ್ದರು. ಸುಮಾರು ನಾಲ್ಕುದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ನಟ, ಬರಹಗಾರರಾಗಿ ಗುರುತಿಸಿಕೊಂಡಿದ್ದರು.

Read More

ಕರೋನಾ ಹಿನ್ನೆಲೆ ಹೃದಯಾಘಾತ…?ಪುತ್ರನ ಸಾವಿನ ನೋವು ಮರೆಯಲಾಗದ ಶಾಸಕ ಶಿವಮೊಗ್ಗ: ವಿಧಾನ ಪರಿಷತ್‍ನ ಕಾಂಗ್ರೆಸ್ ಸದಸ್ಯ ಆರ್.ಪ್ರಸನ್ನ ಕುಮಾರ್ ಅವರ ಹಿರಿಯ ಪುತ್ರ ಹೃದಯಾಘಾತದಿಂದ ಸುಹಾಸ್(31) ನಿಧನರಾಗಿದ್ದಾರೆ.ಭಾನುವಾರ ಬೆಳಗ್ಗೆ ಶರಾವತಿ ನಗರ ತಮ್ಮ ಮನೆಯಲ್ಲಿ ಎದೆ ನೋವು ಕಾಣಿಸಿಕೊಂಡಿದ್ದು ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ಇವರಿಗೂ ಕರೋನಾ ಇತ್ತು ಎನ್ನಲಾಗಿದೆ. ಒಂದೂವರೆ ವರ್ಷದ ಹಿಂದೆ ಇವರಿಗೆ ಮದುವೆಯಾಗಿತ್ತು. ಇದೀಗ ಅವರ ಕಾರ್ಯ ಮುಗಿದಿದ್ದು ಅವರಿಗೂ ಕರೋನಾ ಭಾದಿಸಿತ್ತಾ ಎಂಬ ಶಂಕೆ ವ್ಯಕ್ತವಾಗಿದೆ.

Read More