ಪಕ್ಷಕ್ಕೆ ಬರಲು ಡಿಕೆಶಿ ಗ್ರೀನ್ ಸಿಗ್ನಲ್ಜೆಡಿಎಸ್ ಕಟ್ಟಲು ಹೋಗಿ ಹಾಳು ಮಾಡಿದ್ರಾ..? ನ್ಯೂಸ್ ಡೆಸ್ಕ್: ನಮ್ಮೂರ್ ಎಕ್ಸ್‍ಪ್ರೆಸ್ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಪುತ್ರ, ಮಾಜಿ ಶಾಸಕ, ಮಾಜಿ ಜೆಡಿಎಸ್ ಕಾರ್ಯದರ್ಶಿ ಮಧು ಬಂಗಾರಪ್ಪ ಕಾಂಗ್ರೆಸ್ ಸೇರುವ ದಿನಗಳು ಸಮೀಪದಲ್ಲಿವೆ. ಈ ಬಗ್ಗೆ ಮಾತುಕತೆ ಶುರುವಾಗಿದೆ.ಕಾಗೋಡು ತಿಮ್ಮಪ್ಪ ಅವರ ಮಧ್ಯಸ್ಥಿಕೆಯಲ್ಲಿ ಮಾತುಕತೆ ನಡೆದಿದ್ದು ಕಾಂಗ್ರೆಸ್ ನಾಯಕ ಡಿಕೆಶಿ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ತಿಳಿದು ಬಂದಿದೆ.ಸೊರಬ ಕ್ಷೇತ್ರದ ಜೆಡಿಎಸ್ ಮಾಜಿ ಶಾಸಕ ಮಧು ಬಂಗಾರಪ್ಪ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುತ್ತಾರೆ ಎಂಬ ಸುದ್ದಿ ಕಳೆದ ಆರು ತಿಂಗಳಿನಿಂದ ಓಡಾಡುತ್ತಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರ ಉಪ ಚುನಾವಣೆಯಲ್ಲಿ ಸೋತ ಬಳಿಕ ಮಧು ಬಂಗಾರಪ್ಪ ಅವರು ಜೆಡಿಎಸ್ ಪಕ್ಷದಿಂದ ದೂರವೇ ಉಳಿದಿದ್ದಾರೆ. ಮಧು ಬಂಗಾರಪ್ಪ ಅವರನ್ನು ಕಾಂಗ್ರೆಸ್ ಹಿರಿಯ ನಾಯಕ ಕಾಗೋಡು ತಿಮ್ಮಪ್ಪ ಭೇಟಿಯಾಗಿ ಕಾಂಗ್ರೆಸ್ ಪಕ್ಷಕ್ಕೆ ಕರೆತರಲು ಮಾತುಕತೆ ನಡೆಸಿದ್ದರು. ಮಧು ಇನ್ನೂ ನಿರ್ಧರಿಸಿರಲಿಲ್ಲ.ನಾನು ಕಾರ್ಯಾಧ್ಯಕ್ಷನಾಗಿರಲಿ ಅಥವಾ ಸಾಮಾನ್ಯ ಕಾರ್ಯಕರ್ತ ಆಗಿರಲಿ, ನನ್ನೊಂದಿಗೆ…
Author: Nammur Express Admin
ಕುಟುಂಬದ 8 ಮಂದಿಗೆ ಕರೋನಾ ರೋಗಮಗನಿಗೆ ಗಂಭೀರ: ಆದರೂ ಜನರ ಟೀಕೆಡಿಸಿಎಂ ಗೋವಿಂದ ಕಾರಜೋಳ ನೋವಿನ ಪತ್ರ ನ್ಯೂಸ್ ಡೆಸ್ಕ್: ನಮ್ಮೂರ್ ಎಕ್ಸ್‍ಪ್ರೆಸ್ಬೆಂಗಳೂರು: ಕುಟುಂಬದ 8 ಮಂದಿಗೆ ಕರೋನಾ…ಅದರ ನಡುವೆ ಮಗನ ಸ್ಥಿತಿ ಗಂಭೀರ…ಇತ್ತ ಮಳೆಯ ಆರ್ಭಟಕ್ಕೆ ಜನರ ಬದುಕು ಬೀದಿಪಾಲು…ಉಪ ಮುಖ್ಯಮಂತ್ರಿ ಮತ್ತು ಲೋಕೋಪಯೋಗಿ ಖಾತೆಯ ಸಚಿವ ಗೋವಿಂದ ಕಾರಜೋಳಗೆ ಛೀಮಾರಿ…ಟೀವಿಯಲ್ಲಿ ಲೈವ್ ಶೋ..!.ಪಾಪ, ಪ್ರಕೃತಿ, ದೇವರ ಸೃಷ್ಟಿಗೆ ಇವರೇನ್ ಮಾಡ್ತಾರೆ..?. ಅಂತಹ ಮನಕಲಕುವ ಪತ್ರವನ್ನು ಸಚಿವರೊಬ್ಬರು ಬರೆದಿರುವುದು ಇದೀಗ ಇಡೀ ವ್ಯವಸ್ಥೆಯ ಹತಾಶಭಾವಕ್ಕೆ ನಿದರ್ಶನವಾಗಿದೆ. ಯಾರಾದಾರೂ..ಎಷ್ಟಿದ್ದರೂ..ಆರೋಗ್ಯ, ನೆಮ್ಮದಿ ಮುಖ್ಯ. ಪ್ರೀತಿಯೇ ಶಾಶ್ವತ ಇದು ಕಾರಜೋಳ ಫೇಸ್‍ಬುಕ್ ಪೋಸ್ಟ್ ಇಡೀ ನಾಯಕರಿಗೆ ಮಾದರಿಯಾಗಿದೆ. ಇತ್ತ ಅವರ ಕ್ಷೇತ್ರದ ಜನ ಮಳೆ, ಕರೋನಾದಿಂದ ಬದುಕು ಕಳೆದುಕೊಂಡರೆ ಅತ್ತ ಕಾರಜೋಳ ಕುಟುಂಬವೇ ಜೀವನ್ಮರಣದ ನಡುವೆ ಹೋರಾಡುತ್ತಿದೆ.ಬಿಜೆಪಿ ನಾಯಕರ ಆಜ್ಞೆ ಮೇರೆಗೆ ಶಿರಾ ಅಸೆಂಬ್ಲಿ ಕ್ಷೇತ್ರದ ಉಪಚುನಾವಣೆಯ ಪಕ್ಷದ ಅಭ್ಯರ್ಥಿ ಡಾ.ರಾಜೇಶ್ ಗೌಡ ನಾಮಪತ್ರ ಸಲ್ಲಿಕೆಯ ವೇಳೆ ಹಾಜರಾಗಿದ್ದ ಕಾರಜೋಳ ಅವರಿಗೆ, ನೆರೆ ಪೀಡಿತ…
ವಿಜಯೇಂದ್ರ ಈಗ “ಮಾಸ್ ಲೀಡರ್”!ಶಿರಾ ಚುಕ್ಕಾಣಿ..ಮಾಸ್ಟರ್ ಪ್ಲಾನ್ ರೆಡಿ..!ಆಶೀರ್ವಾದ ಮಾಡಿ ಕಳುಹಿಸಿಕೊಟ್ಟ ಸಿಎಂ ಶಿರಾ: ತುಮಕೂರು ಜಿಲ್ಲೆ ಶಿರಾ ಉಪ ಕಣ ಇದೀಗ ಹಲವು ರಾಜಕೀಯ ಘಟನಾವಳಿಗಳಿಗೆ ಸಾಕ್ಷಿಯಾಗಿದೆ. ಒಂದು ಕಡೆ ಹೊಸದಾಗಿ ಕಾಂಗ್ರೆಸ್ ಸಾರಥ್ಯ ವಹಿಸಿಕೊಂಡಿರುವ ಡಿಕೆಶಿಗೆ ಪ್ರತಿಷ್ಠೆಯಾದರೇ, ಮತ್ತೊಂದು ಕಡೆ ಯುವ ನಾಯಕ, ಮುಂದಿನ ಯಡಿಯೂರಪ್ಪ ಉತ್ತಾರಾಧಿಕಾರಿ ಎಂದೇ ಕರೆಯಲಾಗುತ್ತಿರುವ ಬಿ.ವೈ.ವಿಜಯೇಂದ್ರ ಇದೀಗ ಶಿರಾ ಉಸ್ತುವಾರಿ ತೆಗೆದುಕೊಂಡಿದ್ದಾರೆ. ಜೆಡಿಎಸ್‍ನಿಂದ ಬಿಜೆಪಿಗೆ ಜಂಪ್ ಆಗಿರುವ ಡಾ.ರಾಜೇಶ ಗೌಡ ಅವರ ಗೆಲುವಿಗಾಗಿ ವಿಜಯೇಂದ್ರ ಇದೀಗ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ವಿಜಯ ಪತಾಕೆ ಹಾರಿಸುವುದು ಅಸಾಧ್ಯವೆಂದು ಬಿಜೆಪಿ ಬಹುತೇಕ ಕೈಚೆಲ್ಲಿತ್ತು. ಕಾರಣ, ಬಿಜೆಪಿಗೆ ನೆಲೆಯೇ ಇಲ್ಲದ ಕ್ಷೇತ್ರ ಅದಾಗಿತ್ತು. ಆದರೆ, ಅಲ್ಲಿ ನಾರಾಯಣ ಗೌಡ್ರು 9,731 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಇದಕ್ಕೆ ವಿಜಯೇಂದ್ರ ವರ್ಚಸ್ಸು ಮತ್ತು ಸಂಘಟನೆ ಕಾರಣವಾಗಿತ್ತು.ಆಗ ಖುದ್ದು ಮೋದಿ, ಅಮಿತ್ ಶಾ ಸೇರಿ ರಾಜ್ಯ ನಾಯಕರು ಕೂಡ ಶಹಬ್ಬಾಸ್‍ಗಿರಿ ನೀಡಿದ್ದರು. ಕೆ.ಆರ್.ಪೇಟೆಯಲ್ಲಿ ಬಿಜೆಪಿ ಕ್ಷೇತ್ರದ…
ಕೈ ಹಿಡೀತಾರಾ ಶರತ್ ಬಚ್ಚೇಗೌಡ! ಹೊಸಕೋಟೆಯಲ್ಲಿ ಎಂಟಿಬಿಗೆ ಟಾಂಗ್?ಬಿಜೆಪಿ ದಾಳ ಗ್ರಾಮೀಣದಲ್ಲಿ ಉರುಳುತ್ತಾ..? ನ್ಯೂಸ್ ಡೆಸ್ಕ್: ನಮ್ಮೂರ್ ಎಕ್ಸ್‍ಪ್ರೆಸ್ ಬೆಂಗಳೂರು: ಹೊಸಕೋಟೆ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಚುನಾವಣೆಯಲ್ಲಿ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಎಲ್ಲಾ ಸ್ಥಾನಗಳಲ್ಲಿಯೂ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಬಿಜೆಪಿ ಪಾಳಯಕ್ಕೆ ಟಾಂಗ್ ಕೊಟ್ಟಿದ್ದು, ಶರತ್ ಬಚ್ಚೇಗೌಡ ಕಾಂಗ್ರೆಸ್ ಸೇರುವ ಸೂಚನೆ ಕಂಡು ಬಂದಿದೆ. ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಅಕ್ರಮವಾಗಿ ಚುನಾವಣೆ ನಡೆಯುತ್ತಿದೆ ಎಂದು ಬಹಿಷ್ಕಾರ ಮಾಡಿದ್ದರು. ಇದರಿಂದಾಗಿ ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್‍ಗೆ ಹಿನ್ನಡೆಯಾಗಿದೆ. ಶರತ್ ಬಚ್ಚೇಗೌಡ ಕಾಂಗ್ರೆಸ್ ಸೇರಲು ಈ ಚುನಾವಣೆ ಸಹಕಾರಿಯಾಗಿದೆ.ಚುನಾವಣೆ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ, “ಈ ಚುನಾವಣೆ ಫಲಿತಾಂಶ ತಾಲೂಕಿನ ಮುಂದಿನ ಚುನಾವಣೆ ದಿಕ್ಸೂಚಿಯಾಗಿದೆ” ಎಂದು ಹೇಳಿದ್ದಾರೆ. ಈ ಮೂಲಕ ಬಿಜೆಪಿಗೆ ಶರತ್ ಸಡ್ಡು ಹೊಡೆದಿದ್ದಾರೆ. ಗ್ರಾಮೀಣ ಸಂಸದ ಬಿ.ಎನ್.ಬಚ್ಚೇಗೌಡ ಪುತ್ರ ಶರತ್ ಈ ಹಿಂದೆ…
ಹಬ್ಬದ ಋತುಮಾನ ಪ್ರಾರಂಭವಾಗಲಿದೆ. ಪ್ರತಿ ವರ್ಷ ಹಬ್ಬ ಬಂತೆಂದರೆ ಹಬ್ಬದ ಸಂಭ್ರಮ ಹೆಚ್ಚಾಗುವುದು ಸಿಹಿ-ಸಿಹಿ ಖಾದ್ಯಗಳಿಂದಾಗಿ. ಸಿಹಿ ತಿನಿಸು ಎಂದರೆ ಹಲವು ಮಂದಿಗೆ ಅಚ್ಚು ಮೆಚ್ಚು. ಆದರೆ ತೂಕ ಹೆಚ್ಚಾಗಿಬಿಟ್ಟರೆ ಎಂಬ ಭಯ ಕೂಡ ಎಲ್ಲರನ್ನೂ ಕಾಡದೇ ಇರದು. ವಾಸ್ತವವಾಗಿ ಸಿಹಿತಿಂಡಿಗಳು (Sweets) ಹೆಚ್ಚಿನ ಕ್ಯಾಲೊರಿಗಳನ್ನು ಹೊಂದಿದ್ದು ಅದು ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಹಲವು ಮಂದಿಗೆ ಸಿಹಿ ಬಿಡಲೂ ಇಷ್ಟವಿರುವುದಿಲ್ಲ ಜೊತೆಗೆ ಫಿಟ್‌ನೆಸ್ (Fitness) ಬಗ್ಗೆಯೂ ಚಿಂತೆ. ಆದರೆ ಈ ಬಾರಿಯ ಹಬ್ಬದಲ್ಲಿ ಚಿಂತೆ ಪಕ್ಕಕ್ಕಿಟ್ಟು ನೆಮ್ಮದಿಯಾಗಿ ಸಿಹಿ ತಿನ್ನಿ. ಈ ಸಲಹೆಗಳನ್ನು ಅನುಸರಿಸಿ ಸಿಹಿ ತಿನ್ನುವುದರಿಂದ ನಿಮ್ಮ ತೂಕ ಹೆಚ್ಚಾಗುವುದಿಲ್ಲ ಎಂದು ನಿಮಗೆ ತಿಳಿದಿದೆಯೇ? ಆ ಟಿಪ್ಸ್ ಬಗ್ಗೆ ತಿಳಿಯಲು ನಿಯಮಿತವಾಗಿ ವ್ಯಾಯಾಮ ಮಾಡಿ :-ರಜಾದಿನಗಳು ಮತ್ತು ಹಬ್ಬಗಳು ಇದ್ದಾಗ ಹಾಸಿಗೆಯಿಂದ ಹೊರಬರುವುದು ದೊಡ್ಡ ಕೆಲಸ. ಅಂತಹ ಪರಿಸ್ಥಿತಿಯಲ್ಲಿ ವ್ಯಾಯಾಮ ಮಾಡಲು ನಿಮ್ಮನ್ನು ಸಿದ್ಧಪಡಿಸುವುದು ಇನ್ನಷ್ಟು ಕಷ್ಟ. ಆದರೆ ನೀವು ತೂಕವನ್ನು ಕಾಪಾಡಿಕೊಳ್ಳಲು ಬಯಸಿದರೆ, ನಿಯಮಿತ ವ್ಯಾಯಾಮ ಅಗತ್ಯ. ನಿಮ್ಮ…
ನವದೆಹಲಿ: ಆಸ್ತಿ ಕಾರ್ಡ್‌ಗಳ ವಿತರಣೆಗೆ ಭಾನುವಾರ ಚಾಲನೆ ನೀಡಿದ ನಂತರ ಗ್ರಾಮಗಳ ಸಮೀಕ್ಷೆ ಮತ್ತು ಸುಧಾರಿತ ತಂತ್ರಜ್ಞಾನದೊಂದಿಗೆ ಗ್ರಾಮ ಪ್ರದೇಶಗಳಲ್ಲಿ (ಸ್ವಾಮಿತ್ವ)) ಯೋಜನೆಯ ಫಲಾನುಭವಿಗಳ ಆಸ್ತಿ ಮೇಲೆ ಯಾರೂ ಕಣ್ಣಿಡಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಗ್ರಾಮೀಣ ಪ್ರದೇಶದ ಭೂ ಪ್ರದೇಶಗಳನ್ನು ಡ್ರೋನ್‌ಗಳನ್ನು ಬಳಸಿ ಮ್ಯಾಪ್ ಮಾಡಲಾಗುತ್ತದೆ. ಇದು ಆದಾಯ ಸಂಗ್ರಹಣೆಗೆ ಸಹಾಯ ಮಾಡುತ್ತದೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಆಸ್ತಿ ಹಕ್ಕುಗಳ ಬಗ್ಗೆ ಸ್ಪಷ್ಟತೆಯನ್ನು ನೀಡುತ್ತದೆ. ‘ಒಬ್ಬರು ತಮ್ಮ ಮನೆಯ ಮಾಲೀಕರಾದಾಗ, ಅವರ ಸ್ವಾಭಿಮಾನವನ್ನು ಪುನಃಸ್ಥಾಪಿಸಲಾಗುತ್ತದೆ. ಒಬ್ಬರು ಸುರಕ್ಷಿತ ಮತ್ತು ಬಲಶಾಲಿ ಎಂದು ಭಾವಿಸುತ್ತಾರೆ ‘ಎಂದು ಪಿಎಂ ಮೋದಿ ಯೋಜನೆಯ ಫಲಾನುಭವಿಗಳೊಂದಿಗೆ ಸಂವಹನ ನಡೆಸುವಾಗ ಹೇಳಿದರು. “ಆಸ್ತಿ ಕಾರ್ಡ್‌ಗಳ ವಿತರಣೆ ಸ್ವಾವಲಂಬಿ ಭಾರತದ ಮತ್ತೊಂದು ಐತಿಹಾಸಿಕ ಹೆಜ್ಜೆಯಾಗಿದೆ” ಎಂದು ಪ್ರಧಾನಿ ಮೋದಿ ಹೇಳಿದರು, ಇದನ್ನು ಪ್ರಾರಂಭಿಸುವ ದಿನವೂ ಗಮನಾರ್ಹವಾಗಿದೆ. ಏಕೆಂದರೆ ಇಂದು ಜಯಪ್ರಕಾಶ್ ನಾರಾಯಣ್ ಮತ್ತು ಸಾಮಾಜಿಕ ಸುಧಾರಕ ನಾನಾಜಿ ದೇಶ್ಮುಖ್ ಅವರ ಜನ್ಮದಿನ. ಈ ಇಬ್ಬರು ನಾಯಕರು…
ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯಡಿಯುರಪ್ಪ ಆಂಟಿಜೆನ್ ಟೆಸ್ಟ್ (ರಾಟ್) ನಡೆಸುವ ಬದಲು ಆರ್‌ಟಿ-ಪಿಸಿಆರ್ ಪರೀಕ್ಷೆಯನ್ನು ಹೆಚ್ಚಿಸುವಂತೆ ಯಡಿಯುರಪ್ಪ ಗುರುವಾರ ಜಿಲ್ಲಾಧಿಕಾರಿಗಳು ಮತ್ತು ಇತರ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಐಎಎನ್‌ಎಸ್‌ನೊಂದಿಗೆ ಮಾತನಾಡಿದ ಹಿರಿಯ ಅಧಿಕಾರಿಯೊಬ್ಬರು, ಆರ್‌ಎಟಿಗೆ ಹೋಲಿಸಿದರೆ ಆರ್‌ಟಿ-ಪಿಸಿಆರ್ ಪರೀಕ್ಷಾ ವಿಧಾನವು ಅತ್ಯಂತ ನಿಖರವಾಗಿದೆ, ಆದ್ದರಿಂದ ಜಿಲ್ಲಾ ಅಧಿಕಾರಿಗಳು ಆರ್‌ಟಿ-ಪಿಸಿಆರ್ ಪರೀಕ್ಷಾ ವಿಧಾನವನ್ನು ಅಳವಡಿಸಿಕೊಳ್ಳುತ್ತಾರೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಹಾಸನ, ಮೈಸೂರು, ಬಲ್ಲಾರಿ, ಅಧರ್ವಾಡ್ ಮತ್ತು ತುಮಕುರು ಜಿಲ್ಲಾ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಆರ್‌ಟಿ-ಪಿಸಿಆರ್ ಪರೀಕ್ಷೆಯನ್ನು ಹೆಚ್ಚಿಸಲು ಅನೌಪಚಾರಿಕವಾಗಿ ನಿರ್ಧರಿಸಲಾಗಿದೆ. ಸಿಎಂಒ ಅಧಿಕಾರಿಗಳ ಪ್ರಕಾರ, ಯಡಿಯುರಪ್ಪ ಅವರು ಆರ್‌ಟಿ-ಪಿಸಿಆರ್ ಪರೀಕ್ಷೆಗಳತ್ತ ಗಮನಹರಿಸಲು ಮತ್ತು ತುರ್ತು ಸಂದರ್ಭಗಳಲ್ಲಿ ಮಾತ್ರ ರಾಟ್ ಪರೀಕ್ಷೆಗಳನ್ನು ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕರ್ನಾಟಕ ಇದುವರೆಗೆ 55.24 ಲಕ್ಷ ಪರೀಕ್ಷೆಗಳನ್ನು ನಡೆಸಿದ್ದು, ಅದರಲ್ಲಿ 20.5 ಲಕ್ಷ ರ್ಯಾಟ್ ಪರೀಕ್ಷೆಗಳು ಮತ್ತು 34.71 ಲಕ್ಷ ಆರ್‌ಟಿ-ಪಿಸಿಆರ್ ಪರೀಕ್ಷೆಗಳು ನಡೆದಿವೆ. ಕರ್ನಾಟಕ ಸರ್ಕಾರ ಹಂಚಿಕೊಂಡ ಮಾಹಿತಿಯ ಪ್ರಕಾರ,…
750ರತ್ತ ಕರೋನಾ ಕೇಸ್ದಿನ 10ಕ್ಕೂ ಹೆಚ್ಚು ಕೇಸ್ಕರೋನಾ ನೆಪ: ಜನರ ಕೆಲಸಕ್ಕೆ ತೊಂದರೆ!? ತೀರ್ಥಹಳ್ಳಿ: ಕರೋನಾ ಆರ್ಭಟ ದಿನೇ ದಿನೇ ತೀರ್ಥಹಳ್ಳಿಯಲ್ಲಿ ಹೆಚ್ಚುತ್ತಿದೆ.ತೀರ್ಥಹಳ್ಳಿ ತಾಲೂಕಿನಲ್ಲಿ ಶುಕ್ರವಾರ 12 ಕರೋನಾ ಪ್ರಕರಣಗಳು ದಾಖಲಾಗಿವೆ.ತೀರ್ಥಹಳ್ಳಿ ತಾಲೂಕಲ್ಲಿ ಈವರೆಗೆ 750ರತ್ತ ಕರೋನಾ ಪ್ರಕರಣ ಬಂದಿದೆ.ತೀರ್ಥಹಳ್ಳಿ ತಾಲೂಕಲ್ಲಿ ಎಲ್ಲೆಲ್ಲಿ..? :ಕೋಣಂದೂರು -1, ಶಂಕರಹಳ್ಳಿ- 1,ಕೈಮರ -1, ಕೋಡ್ಲು -1ಮುಂಡುಗಿನಮನೆ -1ಮಠದ ಗದ್ದೆ -1ಮೇಲಿನ ಕುರುವಳ್ಳಿ -1ಪಿಡಬ್ಲೂಡಿ ಕ್ವಾರ್ಟಸ್ -1ಸೊಪ್ಪುಗುಡ್ಡೆ-1ಬಿ.ಅಗ್ರಹಾರ-1ಜಂಬವಳ್ಳಿ -1ಯಡವತ್ತಿ-1ಯಲ್ಲಿ ಕೇಸ್ ದಾಖಲಾಗಿದೆ.ಪ್ರತಿ ಹಳ್ಳಿಯಲ್ಲಿ ಕರೋನಾ ಪರೀಕ್ಷೆ ನಡೆಯುತ್ತಿದೆ. ಪರೀಕ್ಷೆ ಮಾಡಿಸಲು ತೀರ್ಥಹಳ್ಳಿ ತಾಲೂಕು ಮತ್ತು ಪಟ್ಟಣ ಆಡಳಿತ ಮನವಿ ಮಾಡಿದೆ.ಕರೋನಾ ಕಳ್ಳತನ!: ಕರೋನಾದಿಂದ ಒಂದು ಕಡೆ ಕಳ್ಳರು ವಾಹನ, ಮನೆ, ಮೊಬೈಲ್ ಕಳ್ಳತನಕ್ಕೆ ಮುಂದಾದರೆ ಇನ್ನೊಂದು ಕಡೆ ಆಸ್ಪತ್ರೆಗಳು ಕರೋನಾ ಹೆಸರಲ್ಲಿ ಸುಲಿಗೆ ಮಾಡುತ್ತಿವೆ ಎಂಬ ದೂರು ಕೇಳಿ ಬಂದಿದೆ.ಸರ್ಕಾರಿ ಅಧಿಕಾರಿಗಳು, ನೌಕರರು ಕರೋನಾ ನೆಪ ಹೇಳಿಕೊಂಡು ಜನರ ಕೆಲಸ ತಡ ಮಾಡುತ್ತಿದ್ದಾರೆ. ಈ ಬಗ್ಗೆ ತಾಲೂಕು ಆಡಳಿತ ಗಮನಿಸಬೇಕು.ಮಾಸ್ಕ್, ಅಂತರ ಕಾಪಾಡಿ ಜನತೆ ಕೂಡ…