ಈ ದಿನದ ರಾಶಿ ಭವಿಷ್ಯ ಹೇಗಿದೆ? – ಇಂದು ಕಾರ್ತಿಕ ಶನಿವಾರ ಯಾವ ರಾಶಿಯವರಿಗೆ ಶುಭ ? ಯಾವ ರಾಶಿಯವರಿಗೆ ಅಶುಭ ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಇಂದು ನಿಮ್ಮ ಜೀವನದ ಗುರಿಗಳ ಮೇಲೆ ಕೇಂದ್ರೀಕರಿಸಿ. ನಿಮ್ಮ ಕೆಲಸದಲ್ಲಿ ಅಜಾಗರೂಕರಾಗಿರಬೇಡಿ. ಕೆಲವು ಜನರು ಇಂದು ತಮ್ಮ ಸಂಬಂಧಿಕರೊಂದಿಗೆ ಕುಟುಂಬ ಕಾರ್ಯಕ್ರಮಗಳು ಅಥವಾ ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ. ಕಚೇರಿಯಲ್ಲಿ ಕೆಲಸದ ಸವಾಲುಗಳು ಹೆಚ್ಚಾಗುತ್ತವೆ. ಒತ್ತಡವನ್ನು ತಪ್ಪಿಸಿ. ಕೆಲಸದ ಅಡೆತಡೆಗಳನ್ನು ನಿವಾರಿಸಲು ಸಹೋದ್ಯೋಗಿಗಳ ಬೆಂಬಲವನ್ನು ಪಡೆಯಲು ಹಿಂಜರಿಯದಿರಿ. ** ವೃಷಭ ರಾಶಿ : ವೃತ್ತಿ ಜೀವನದಲ್ಲಿ ಶಕ್ತಿ ಮತ್ತು ಉತ್ಸಾಹದ ವಾತಾವರಣವಿರುತ್ತದೆ. ಹೊಸ ಕಾರ್ಯಗಳ ಜವಾಬ್ದಾರಿಯನ್ನು ತೆಗೆದುಕೊಳ್ಳುವಲ್ಲಿ ನೀವು ಆತ್ಮವಿಶ್ವಾಸವನ್ನು ತೋರುತ್ತೀರಿ. ಇಂದು ವಾಹನ ಚಲಾಯಿಸುವಾಗ ಜಾಗರೂಕರಾಗಿರಿ. ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ.…
Author: Nammur Express Admin
ಬಂದೂಕು ತೋರಿಸಿ, ಮನೆಯಲ್ಲಿ ಊಟ ಮಾಡಿಕೊಂಡು ಹೋಗಿರುವ ನಕ್ಸಲರು! – ನಕ್ಸಲರ ಓಡಾಟ ಹಿನ್ನೆಲೆ, ನಕ್ಸಲ್ ನಿಗ್ರಹ ಪಡೆ ಕೂಂಬಿಂಗ್ ಕಾರ್ಯಾಚರಣೆ! – ದಶಕಗಳ ಬಳಿಕ ನಕ್ಸಲರ ಹೆಜ್ಜೆ ಗುರುತು NAMMUR EXPRESS NEWS ಕೊಪ್ಪ: ಕೊಪ್ಪದ ಕಾಡಂಚಿನ ಗ್ರಾಮದ ಮನೆಯೊಂದಕ್ಕೆ ಭೇಟಿ ನೀಡಿದ್ದ ನಕ್ಸಲರು ಬಂದೂಕು ತೋರಿಸಿ ಮನೆಯವರನ್ನು ಬೆದರಿಸಿ ಅಡುಗೆ ತಯಾರಿಸಲು ಹೇಳಿ ಊಟ ಮಾಡಿಕೊಂಡು ಹೋಗಿರುವ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಕೊಪ್ಪ ತಾಲೂಕಿನ ಜಯಪುರ ಸಮೀಪದ ಕಡೇಗುಂದಿ ಗ್ರಾಮದ ಸುಬ್ಬೇ ಗೌಡ ಎಂಬವರ ಮನೆಯಲ್ಲಿ ನಕ್ಸಲರಿಗೆ ಸೇರಿದ್ದು ಎನ್ನಲಾಗಿರುವ ಮೂರು ಬಂದೂಕುಗಳು ಸಿಕ್ಕಿದ ಬಳಿಕ ಪೊಲೀಸರು ಮನೆಯವರನ್ನು ವಿಚಾರಣೆಗೊಳಪಡಿಸಿದ್ದು ಆಗ ಮನೆಯವರು ತಮ್ಮನ್ನು ಬಂದೂಕು ತೋರಿಸಿ ಹೆದರಿಸಿರುವ ವಿಚಾರ ತಿಳಿಸಿದ್ದಾರೆ. ನಕ್ಸಲರ ಓಡಾಟದ ಹಿನ್ನೆಲೆಯಲ್ಲಿ ನಕ್ಸಲ್ ನಿಗ್ರಹ ಪಡೆ ಕಾಡಂಚಿನಲ್ಲಿ ಕೂಂಬಿಂಗ್ ಕಾರ್ಯಾಚರಣೆ ಚುರುಕುಗೊಳಿಸಿದ್ದು, ಎಲ್ಲ ಗಡಿಗಳಲ್ಲಿ ನಾಕಾಬಂಧಿ ಹಾಕಿ ವಾಹನಗಳ ತಪಾಸಣೆ ನಡೆಸುತ್ತಿದೆ. ನಕ್ಸಲ್ ನಿಗ್ರಹ ಪಡೆ ಅಧಿಕಾರಿಗಳು ಸುಬ್ಬೇ ಗೌಡರ ಮನೆಗೆ ಹೋಗಿ ಪರಿಶೀಲನೆ…
ಇಂದಿನ ಅಡಿಕೆ ದರ ಎಷ್ಟಿದೆ? – ಅಡಿಕೆ ಬೆಲೆ ಏರಿಕೆಯಾಗುತ್ತಾ? ಇಳಿಕೆಯಾಗುತ್ತಾ? NAMMUR EXPRESS NEWS ಶಿವಮೊಗ್ಗ 15-11-2024 ಇಂದಿನ ಅಡಿಕೆ ಬೆಲೆ ಬೆಟ್ಟೆ: 46774- 57250 ಸರಕು: 44100- 87210 ಗೊರಬಲು: 17309- 36869 ರಾಶಿ: 31138- 50009
ನ.20ರಂದು ರಾಜ್ಯಾದ್ಯಂತ ಮದ್ಯ ಸಿಗಲ್ಲ! – ಮದ್ಯ ಮಾರಾಟ ವ್ಯಾಪಾರಿಗಳ ಪ್ರತಿಭಟನೆ – ಅಬಕಾರಿ ಇಲಾಖೆ ಭ್ರಷ್ಟಾಚಾರದ ವಿರುದ್ಧ ಹೋರಾಟ NAMMUR EXPRESS NEWS ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯಾದ್ಯಂತ ನ.20ರಂದು ಮದ್ಯದ ಮಾರಾಟ ಬಂದ್ ಮಾಡಲು ಕರ್ನಾಟಕ ಫೆಡರೇಷನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ನಿರ್ಧರಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತಕ್ಷಣ ಸಭೆ ಕರೆದು ಚರ್ಚಿಸಬೇಕು. ಇಲ್ಲವಾದಲ್ಲಿ ಮದ್ಯ ಮಾರಾಟ ಬಂದ್ ಮಾಡುವುದು ನಿಶ್ಚಿತ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ. – ಅಸೋಸಿಯೇಷನ್ ಬೇಡಿಕೆಗಳೇನು? ಚಿಲ್ಲರೆ ಮದ್ಯ ಮಾರಾಟದ ಮೇಲೆ ಕನಿಷ್ಠ ಶೇ.20 ಲಾಭಾಂಶ ನೀಡಬೇಕು. ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ನಿಗ್ರಹಕ್ಕೆ ಕಠಿಣ ಕ್ರಮ ಕೈಗೊಳ್ಳಬೇಕು. ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಬೇಕು. 2005ರ ಅಬಕಾರಿ ಕಾಯ್ದೆ ಕಲಂ 29 ರ ಪುನರ್ ವಿಮರ್ಶಿಸಿ ತಿದ್ದುಪಡಿ ತರಬೇಕು. ಸಿಎಲ್-2ನಲ್ಲಿ ಮದ್ಯ ಸೇವಿಸಲು ಅವಕಾಶ. ಸಿಎಲ್-9 ಹೆಚ್ಚುವರಿ ಶುಲ್ಕ ವಿಧಿಸಿ ಮದ್ಯ ಪಾರ್ಸಲ್ ನೀಡಲು ಕಾನೂನು ಅವಕಾಶ ನೀಡಬೇಕು. ಎಂಎಸ್ಐಎಲ್ ಲೈಸೆನ್ಸ್…
ಮಾಳ ಶ್ರೀ ಗುರುಕುಲ ಅನುದಾನಿತ ಶಾಲೆಯಲ್ಲಿ ಮಕ್ಕಳ ದಿನ – ಮಕ್ಕಳೇ ಗಣ್ಯರಾಗಿ ಕಾರ್ಯಕ್ರಮ ಆಯೋಜಿಸಿದ್ದು ವಿಶೇಷ – ಶಿಕ್ಷಕರ ಪ್ರೇರಣೆಯ ಮಾತು: ಮಕ್ಕಳ ಕಲರವ NAMMUR EXPRESS NEWS ಕಾರ್ಕಳ: ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮಾಳದಲ್ಲಿ ನವೆಂಬರ್ 14ರಂದು ಮಕ್ಕಳ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ವೇದಿಕೆಯಲ್ಲಿ ಶಾಲಾ ನಾಯಕನಾದ ವಿಖ್ಯಾತ್ ಡೋಂಗ್ರೆ, ಮುಖ್ಯ ಅತಿಥಿಯಾಗಿ ಶಾಲಾ ಪ್ರತಿಭಾನ್ವಿತ ಪೂರ್ವ ವಿದ್ಯಾರ್ಥಿನಿಯಾದ ಕುಮಾರಿ ವಚನಾ, ಉಪಮುಖ್ಯಮಂತ್ರಿಯಾಗಿರುವ ಕುಮಾರಿ ವಿದ್ಯಾ ಡೋಂಗ್ರೆ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿಕ್ಷಕರು ಪ್ರಾರ್ಥನೆ ಹಾಡುವುದರ ಮೂಲಕ ಪ್ರಾರಂಭಿಸಲಾಯಿತು. ನಂತರ ಜ್ಯೋತಿ ಬೆಳಗಿಸಿ ಜವಾಹರಲಾಲ್ ನೆಹರೂರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಮಕ್ಕಳಿಗೆ ಕೆಲವೊಂದು ಆಟೋಟ ಸ್ಪರ್ಧೆಗಳನ್ನು ನಡೆಸಿ ವಿಜೇತರಿಗೆ ಬಹುಮಾನಗಳನ್ನು ನೀಡಲಾಯಿತು. ಮಕ್ಕಳು ಮಕ್ಕಳ ದಿನಾಚರಣೆಯ ಪ್ರಯುಕ್ತ ಭಾಷಣ ಮಾಡಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಶಿಕ್ಷಕಿಯರು ಭಾಷಣ ಮಾಡಿದರು. ಈ ಕಾರ್ಯಕ್ರಮಕ್ಕೆ ಬಂದಂತಹ ಅತಿಥಿಗಳಿಗೆ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು. ಮಕ್ಕಳು ,ಮುಖ್ಯೋಪಾಧ್ಯಾಯರು ,ಶಿಕ್ಷಕರು ಭಾಗವಹಿಸಿದ್ದರು. ಶಾಲಾ…
ಟಾಪ್ ನ್ಯೂಸ್ ಶಿವಮೊಗ್ಗ : ಮಾಜಿ ಉಪಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ವಿರುದ್ಧ ದೂರು ದಾಖಲು..! – ಶಿವಮೊಗ್ಗ : ಸಾರ್ವಜನಿಕ ಬಳಕೆಗೆ ಮುಕ್ತಗೊಳ್ಳದ ಕೋಟಿ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಬಹುಮಹಡಿ ಪಾರ್ಕಿಂಗ್ ಕಟ್ಟಡ! – ಸೊರಬ : ಅರಣ್ಯ ಇಲಾಖೆ ವಾಚರ್ ಗಳ ಮೇಲೆ ಹಲ್ಲೆ – ಸಾಗರ: ಸಾಲ ಬಾಧೆ ತಾಳಲಾರದೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ.!!! NAMMUR EXPRESS NEWS ಕಾಂಗ್ರೆಸ್ ಮತ್ತು ಮುಸ್ಲೀಮರ ವಿರುದ್ಧ ರಕ್ತಕ್ರಾಂತಿಯ ಮಾತಾಡಿದ್ದ ಮಾಜಿ ಉಪಮುಖ್ಯಮಂತ್ರಿ, ರಾಷ್ಟ್ರಭಕ್ತ ಬಳಗದ ಸಂಚಾಲಕರಾದ ಕೆ.ಎಸ್.ಈಶ್ವರಪ್ಪ ವಿರುದ್ಧ ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆಯಲ್ಲಿ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜಯನಗರ ಪೊಲೀಸ್ ಇನ್ಸ್ ಪೆಕ್ಟರ್ ಸಿದ್ದೇಗೌಡ ಹೆಚ್.ಎಂ. ರವರು ಸ್ವ ದೂರು ನೀಡಿದ್ದು, ಈಶ್ವರಪ್ಪರ ವಿರುದ್ಧ ನವೆಂಬರ್ 14 ರಂದು 81/2024 ರಂತೆ, ಕಲಂ 196(1)(a), 299BNS ನಂತೆ ಪ್ರಕರಣ ದಾಖಲಾಗಿದೆ. ಶಿವಮೊಗ್ಗದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಕೆ.ಎಸ್.ಈಶ್ವರಪ್ಪ ವಕ್ಫ್ ಪ್ರಕರಣಗಳ ಬಗ್ಗೆ, ಅಂಬೇಡ್ಕರ್…
ಜ್ಞಾನೇಂದ್ರ ವಿರುದ್ಧ ಕಿಮ್ಮನೆ ಮಾತಿನ ಚಾಟಿ! – ಅರಣ್ಯ ಇಲಾಖೆಯ ಜಾಗದಲ್ಲಿ ಮದ್ಯದ ಅಂಗಡಿಗಾಗಿ ಪ್ರತಿಭಟನೆ – ಜ್ಞಾನೇಂದ್ರರಂತಹ ಶಾಸಕರು ಕ್ಷೇತ್ರಕ್ಕಾಗಲಿ, ರಾಜ್ಯಕ್ಕಾಗಲಿ ಒಳಿತಲ್ಲ – ರಾಜೀನಾಮೆ ಕೊಟ್ಟು ಕೂರುವುದೇ ಲೇಸು ಎಂದು ತಿವಿದ ಮಾಜಿ ಸಚಿವ NAMMUR EXPRESS NEWS ತೀರ್ಥಹಳ್ಳಿ: ಆರಗ ಜ್ಞಾನೇಂದ್ರ ಅವರು 25 ವರ್ಷ ರಾಜಕೀಯದಲ್ಲಿ ಅರಣ್ಯ ಇಲಾಖೆಯ ಜಾಗದಲ್ಲಿ ಮದ್ಯದ ಅಂಗಡಿಯ ಪ್ರತಿಭಟನೆ ಮಾಡುತ್ತಿದ್ದಾರೆ, ಇದು ನಮ್ಮ ವಿಪರ್ಯಾಸವೇ ಸರಿ. ಆರಗ ಜ್ಞಾನೇಂದ್ರರಂತಹ ಶಾಸಕರು ಕ್ಷೇತ್ರಕ್ಕಾಗಲಿ, ರಾಜ್ಯಕ್ಕಾಗಲಿ ಒಳಿತಲ್ಲ ಈ ಶಾಸಕರು ನಮ್ಮ ಊರಿಗೆ ಶಾಸಕರಾಗಿ ಉಳಿದಿರುವುದೇ ನಮ್ಮ ದುರಂತ ಎಂದು ಮಾಜಿ ಶಾಸಕರು ಕಿಮ್ಮನೆ ರತ್ನಾಕರ್ ಅವರು ಮಾಜಿ ಗೃಹಸಚಿವರು, ಶಾಸಕರು ಆರಗ ಜ್ಞಾನೇಂದ್ರ ವಿರುದ್ಧ ಚಾಟಿ ಬೀಸಿದರು. ಗಾಂಧಿ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಹಲವಾರು ಕಡೆ ಮರಳು ವ್ಯಾಪಾರ ನಡೆಯುತ್ತಿದ್ದು, ಸರಿಪಡಿಸುವ ಯಾವುದೇ ಹಾದಿಯಲ್ಲಿ ನಮ್ಮ ಶಾಸಕರಿಲ್ಲ. ಸಾಕಷ್ಟು ಭಾರಿ ನಾನೇ ಖುದ್ದಾಗಿ ಸಾಕ್ಷಿ ಪತ್ತೆ ಮಾಡಿದ್ದರೂ ಯಾವುದೇ…
ವಿದೇಶದಲ್ಲಿ ಕನ್ನಡ ಡಿಂಡಿಮ ಬಾರಿಸಿದ ಅಕ್ಷ್ಯಮ್ಯ ಕಿರುಚಿತ್ರ – ಟೆಕ್ಸಾಸ್ ಕನ್ನಡಿಗರ ನೆರವಿನಲ್ಲಿ ಯುವ ಪ್ರತಿಭೆಗಳ ಹೊಸ ಸಾಹಸ – ಥಿಯೇಟರ್ ನಲ್ಲಿ ಪ್ರೀಮಿಯರ್ ಬಿಡುಗಡೆಗೆ ಸಜ್ಜು – ವೆಂಕಿ ಗೌಡ ನಿರ್ದೇಶನದಲ್ಲಿ ಉತ್ತಮ ಕಿರುಚಿತ್ರ NAMMUR EXPRESS NEWS ಅಮೆರಿಕಾದ ಟೆಕ್ಸಾಸ್ ನಲ್ಲಿ ನಡೆಯುವ ಕನ್ನಡ ಕಿರು ಚಿತ್ರೋತ್ಸವಕ್ಕೆ ಭಾರಿ ಸಿದ್ಧತೆ ನಡೆಯುತ್ತಿದೆ. ಈ ನಡುವೆ ಕನ್ನಡದ ಅಕ್ಷಮ್ಯ ಎಂಬ ಚಿತ್ರ ಸುಮಾರು 50 ಕಿರು ಚಿತ್ರಗಳೊಂದಿಗೆ ಸ್ಪರ್ಧಿಯಾಗಿ ಪ್ರವೇಶ ಪಡೆದಿದೆ. ತನ್ನ ವಿಭಿನ್ನ ಕಥೆಯ ಮೂಲಕವೇ ಇದೀಗ ಬಹಳಷ್ಟು ಸದ್ದು ಮಾಡುತ್ತಿದ್ದು, ಯೂಟ್ಯೂಬ್ ನಲ್ಲಿ ಅತಿ ಹೆಚ್ಚು ನೋಡುಗರನ್ನು ಅಕ್ಷಮ್ಯ ಚಿತ್ರ ಪಡೆದಿದೆ. ಯುನೈಟೆಡ್ ಸ್ಟೇಟ್ಸ್ ನ ಹೂಸ್ಟನ್ ನ ಕೆಲವು ಯುವ ಪ್ರತಿಭೆಗಳ ಕನ್ನಡ ತಂಡವೊಂದು ಒಗ್ಗೂಡಿ, ಯಾವುದೇ ಅನುಭವವಿಲ್ಲದೆ , ಪ್ರಥಮ ಬಾರಿ ಅಕ್ಷಮ್ಯ ಎಂಬ ಒಳ್ಳೆಯ ಕಿರುಚಿತ್ರವನ್ನು ರಚಿಸಿರುವುದು ನಿಜಕ್ಕೂ ಹೆಮ್ಮೆಯೇ ಸರಿ. ಅಕ್ಷಮ್ಯ ಚಿತ್ರವನ್ನು ನಿರ್ದೇಶನ ಮಾಡಿದವರು ವೆಂಕಿ ಗೌಡ. ಮೂಲತಃ ಬೆಂಗಳೂರಿನವರಾದ…
ಹಾಸನದಲ್ಲಿ ನ.17ರಂದು ಡಾಗ್ ಶೋ! – ಹಾಸನ ಕೆನಲ್ ಕ್ಲಬ್‌ನಿಂದ ಆಯೋಜನೆ: ಬರಲಿವೆ ವಿವಿಧ ತಳಿ ಶ್ವಾನ – ಮೊದಲ ಬಾರಿಗೆ ಹೊರಾಂಗಣದಲ್ಲಿ ಪೆಟ್ ಡಾಗ್ ಶೋ NAMMUR EXPRESS NEWS ಹಾಸನ: ಹಾಸನ ಕೆನಲ್ ಕ್ಲಬ್‌ನಿಂದ ಬರುವ ನ.17 ಭಾನುವಾರದಂದು ಬೆಳಿಗ್ಗೆ ನಗರದ ಸರ್ಕಾರಿ ಕಲಾ ಕಾಲೇಜು ಮೈದಾನದಲ್ಲಿ ಪೆಟ್ ಡಾಗ್ ಶೋ ನಡೆಯಲಿದೆ. ಪಪ್ಪಿ(೩-೬ ತಿಂಗಳು), ಜೂನಿಯರ್(೬-೧೨ ತಿಂಗಳು) ಮತ್ತು ಅಡಲ್ಟ್ ಹೀಗೆ ಮೂರು ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ ಎಂದರು. ಹಾಸನ ಕೆನಲ್ ಕ್ಲಬ್ ಕಳೆದ ೪ ವರ್ಷಗಳಿಂದ ಒಂದೇ ವೇದಿಕೆಯಲ್ಲಿ ವಿವಿಧ ತಳಿಗಳ ನಾಯಿಗಳ ಪ್ರದರ್ಶನ ಮಾಡಿಕೊಂಡು ಬರುತ್ತಿದೆ. ಬೆಸ್ಟ್ ಇನ್ ಶೋ ಶ್ವಾನಗಳಿಗೆ ೧ ಲಕ್ಷದವರೆಗೂ ಬಹುಮಾನ ನೀಡಲಾಗುವುದು. ಕ್ಲಬ್‌ನ ಪಧಾನ ಕಾರ್ಯದರ್ಶಿ ಹೆಚ್.ಎಂ. ರಾಘವೇಂದ್ರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿ, ಶ್ವಾನ ಪ್ರದರ್ಶನದಿಂದ ಸ್ವದೇಶಿ ಮತ್ತು ವಿದೇಶಿ ತಳಿಗಳ ಬಗ್ಗೆ ಅರಿವುದು ಮೂಡಿಸುವುದು, ಶ್ವಾನಗಳ ಬಗ್ಗೆ ಜನರಿಗೆ ಆಕ್ತ ಮೂಡಿಸುವುದರ ಜೊತೆಗೆ ಉದ್ಯೋಗ ಸೃಷ್ಟಿಗೂ ಅನುಕೂಲ…
ಕರಾವಳಿ: ಆತ್ಮಹತ್ಯೆ.. ಅನಾಹುತ.. ಅಪರಾಧ ಹೆಚ್ಚಾಯ್ತು! – ಕೌಟುಂಬಿಕ ಕಲಹ, ಬ್ಲ್ಯಾಕ್‌ಮೇಲ್ , ಆರ್ಥಿಕ ಸಂಕಷ್ಟ, ಅನಾರೋಗ್ಯ – ದಿನೇ ದಿನೇ ಹೆಚ್ಚುತ್ತಿರುವ ಸಾವು ನೋವು – ಆನ್ಲೈನ್ ಮೋಸಕ್ಕೆ ಅತೀ ಹೆಚ್ಚು ಜನಕ್ಕೆ ಮೋಸ! NAMMUR EXPRESS NEWS ಮಂಗಳೂರು/ಉಡುಪಿ: ಮಗು, ಪತ್ನಿಯನ್ನುಕೊಂದು ಆತ್ಮಹತ್ಯೆ, ಹುಟ್ಟಿದ ವಾರದೊಳಗೆ ಮಗು ಮೃತಪಟ್ಟ ಬಳಿಕ ತಾಯಿ ಆತ್ಮಹತ್ಯೆ, ಯಾರೋ ಬ್ಲ್ಯಾಕ್‌ಮೇಲ್ ಮಾಡಿ ಕಿರುಕುಳ ನೀಡುತ್ತಿದ್ದಾರೆಂದು ಉದ್ಯಮಿ ಆತ್ಮಹತ್ಯೆ, ಮಗುವಿನೊಂದಿಗೆ ಕಾರ್ಮಿಕ ಆತ್ಮಹತ್ಯೆಗೆ ಯತ್ನ, ನದಿಗೆ ಹಾರಿ ಯುವಕ ಆತ್ಮಹತ್ಯೆ. ಅಪಘಾತಕ್ಕೆ ಅನೇಕರು ಬಲಿ. ಆನ್ಲೈನ್ ವಂಚನೆಗೆ ಲಕ್ಷ ಲಕ್ಷ ಹಣ ಕಳೆದುಕೊಂಡ ಜನ. ಹೌದು. ಬುದ್ಧಿವಂತರ ನಾಡು ಕರಾವಳಿ. ಇತ್ತೀಚಿಗೆ ಅತೀ ಹೆಚ್ಚು ದುರಂತಗಳು ಕರಾವಳಿಯಲ್ಲಿ ಸಂಭವಿಸುತ್ತಿವೆ. ತಿಂಗಳೊಳಗೆ ಎರಡು ಜಿಲ್ಲೆಗಳಲ್ಲಿ ಅನೇಕ ದುರಂತಗಳು ನಡೆದಿವೆ. ಉಡುಪಿ, ಮಂಗಳೂರು, ಕಾರ್ಕಳ, ಮೂಡುಬಿದಿರೆ, ಬಂಟವಾಳದಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಆನ್ಲೈನ್ ಗೇಮ್ಸ್, ಆನ್ಲೈನ್ ಹೂಡಿಕೆ, ಆನ್ಲೈನ್ ಜಾಬ್ ಇತರೆ ಆನ್ಲೈನ್ ಮೋಸಗಳಿಗೆ ಹಲವು ಜೀವ…