ಇಲ್ಲೊಂದು ಅಪರೂಪದ ಮದುವೆ!
– ಕನ್ನಡ ಡಿಂಡಿಮ ಬಾರಿಸಿ ಸಪ್ತಪದಿ ತುಳಿದ ಜೋಡಿ!
– ಬೆಳಗಾವಿಯಲ್ಲಿ ಕನ್ನಡ ಧ್ವಜ, ಪೇಟ, ಫಲಕದ ರಂಗು!
NAMMUR EXPRESS NEWS
ಬೆಳಗಾವಿ: ಬೆಳಗಾವಿಯಲ್ಲಿ ನವಜೋಡಿಯೊಂದು ಕನ್ನಡ ಸಂಭ್ರಮದಲ್ಲೇ ವಿವಾಹ ಮಾಡಿ ಕೊಳ್ಳುವ ಮೂಲಕ ಗಮನ ಸೆಳೆದಿದೆ. ರಾಮತೀರ್ಥ ನಗರದಲ್ಲಿರುವ ಎಚ್.ಕೆ. ಪಾಟೀಲ ಕಲ್ಯಾಣ ಮಂಟಪದಲ್ಲಿ ನಡೆದ ವಿವಾಹ ಕಾರ್ಯಕ್ರಮ ಸಂಪೂರ್ಣವಾಗಿ ಕನ್ನಡ ಮಯವಾಗಿತ್ತು. ದೀಪಕ ಮುಂಗರವಾಡಿ ಮತ್ತು ರಾಜೇಶ್ವರಿ ವಾಂಗಿ ಹಸೆಮಣೆಗೇರಿದವರು. ವಧು ವರರ ಕೈಯಲ್ಲಿ ಕನ್ನಡಿಗ, ಕನ್ನಡತಿ ಎಂಬ ಚಿನ್ನದ ಉಂಗುರ ಬದಲಾಯಿಸಿಕೊಂಡರು. ಕನ್ನಡ ಧ್ವಜ, ಕನ್ನಡ ಪೇಟ, ಕನ್ನಡದ ನಾಮಫಲಕಗಳನ್ನು ಹಾಕಿ ನವ ಜೋಡಿ ಸಪ್ತಪದಿ ತುಳಿದರು.
ಕಲ್ಯಾಣ ಮಂಟಪದ ತುಂಬೆಲ್ಲ ಕನ್ನಡದ ಬಾವುಟಗಳು, ಇಮ್ಮಡಿ ಪುಲಿಕೇಶಿ, ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಮೂರ್ತಿ, ವಿಶ್ವಗುರು ಬಸವಣ್ಣ, ಪುಟ್ಟರಾಜ ಗವಾಯಿ, ಪೂರ್ಣಚಂದ್ರ ತೇಜಸ್ವಿ ಅವರ ಭಾವ ಚಿತ್ರಗಳು ಇಲ್ಲಿ ರಾರಾಜಿಸಿದವು. ಎಲ್ಲೆಲ್ಲೂ ಕನ್ನಡ ಬಾವುಟಗಳು, ಹಳದಿ-ಕೆಂಪು ಪೇಟಾ ತೊಟ್ಟಿದ್ದ ಯುವಕರು ಗಮನ ಸೆಳೆದರು.