- ರಾಜ್ಯೋತ್ಸವದಂದು ಸಿಎಂ ಲೋಕಾರ್ಪಣೆ
- ಕನ್ನಡ ಕಲಿಯುವವರಿಗೆ ಸರ್ಕಾರದ ಸಾಥ್
ಬೆಂಗಳೂರು: ಕರೋನಾ ಸಾಂಕ್ರಾಮಿಕ ಬಳಿಕ ಆನ್ಲೈನ್ ಶಿಕ್ಷಣ ಪರಿಣಾಮಕಾರಿ ಪ್ರತಿಯೊಬ್ಬರಿಗೂ ತಿಳಿಯುತ್ತಿದ್ದು, ಇದೀಗ ರಾಜ್ಯ ಸರ್ಕಾರ ಕೂಡ ಕನ್ನಡ ಕಲಿಕೆಗೆ ತಂತ್ರಜ್ಞಾನವನ್ನು ಅಳವಡಿಸಲು ಮುಂದಾಗಿದೆ. ಇದು ಕನ್ನಡ ಬಾರದವರಿಗೆ, ಅಂತರಾಜ್ಯದ ನಿವಾಸಿಗಳಿಗೆ ಅನುಕೂಲವಾಗಲಿದೆ.
ಕನ್ನಡ ಕಲಿಯಲು ಇಚ್ಛಿಸುವ ಜನರು ಇ-ಲನಿರ್ಂಗ್ portal ಮೂಲಕ ಕನ್ನಡ ಭಾಷೆಯನ್ನು ಸುಲಭವಾಗಿ ಕಲಿಯಬಹುದಾಗಿದೆ. ಇ-ಕಲಿಕೆ ಪೆÇೀರ್ಟಲ್ಗೆ ನವೆಂಬರ್.1ರ ಕನ್ನಡ ರಾಜ್ಯೋತ್ಸವ ದಿನದಂದು ಮುಖ್ಯಮಂತ್ರಿ ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದೊಂದಿಗೆ ಈ ಉಪಕ್ರಮವು ರಾಜ್ಯದಲ್ಲಿ ನೆಲೆಸಿರುವ ಕನ್ನಡಿಗರಲ್ಲದವರಿಗೆ ಭಾಷೆಯನ್ನು ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ ಮತ್ತು ವಿದೇಶದಲ್ಲಿ ವಾಸಿಸುವ ಕನ್ನಡಿಗರು ತಮ್ಮ ಮುಂದಿನ ಪೀಳಿಗೆಯ ಕನ್ನಡದ ಮೂಲ ಸಂಪರ್ಕ ಕಳೆದುಕೊಳ್ಳದಂತೆಯೂ ಸಹಾಯ ಮಾಡಲಿದೆ.
ಕನ್ನಡವನ್ನು ಕಲಿಸಲು ರಾಜ್ಯ ಸರ್ಕಾರ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿರುವುದು ಇದೇ ಮೊದಲಾಗಿದೆ. ಕನ್ನಡ ಪದಗಳನ್ನು ಡಿಜಿಟಲೀಕರಣಗೊಳಿಸಲು ತಜ್ಞರು, ಬರಹಗಾರರು ಕಾರ್ಯನಿರ್ವಹಿಸುತ್ತಿದ್ದಾರೆ. ಆರಂಭದಲ್ಲಿ, ಕನ್ನಡವನ್ನು ಕಲಿಯಲು ಇಚ್ಛಿಸುವ ಆಸಕ್ತರಿಗೆ ಈ portal ಸಹಾಯ ಮಾಡುತ್ತದೆ ಮತ್ತು ಕ್ರಮೇಣ ಓದುವುದು ಮತ್ತು ಬರೆಯುವುದನ್ನೂ ಕೂಡ ಕಲಿಯಬಹುದಾಗಿದೆ. ಮುಂದಿನ ದಿನಗಳಲ್ಲಿ, ವಿಜ್ಞಾನ ವಿಷಯಗಳನ್ನು ಕೂಡ ಕನ್ನಡದಲ್ಲಿ portal ಮೂಲಕ ಕಲಿಸಲು ಸರ್ಕಾರ ಚಿಂತನೆ ನಡೆಸಿದೆ.
ಕನ್ನಡಿಗರಲ್ಲದ ಸಾಕಷ್ಟು ಜನರು ಅಧ್ಯಯನ ಮತ್ತು ಕೆಲಸ ಮಾಡಲು ಕರ್ನಾಟಕಕ್ಕೆ ಬರುತ್ತಾರೆ. ಇ-ಪೆÇೀರ್ಟಲ್ ಎಲ್ಲಿಯೇ ಇದ್ದರೂ ಭಾಷೆಯನ್ನು ಕಲಿಯಲು ಅಂತಹವರಿಗೆ ಸಹಾಯ ಮಾಡುತ್ತದೆ. ಇದು ಬಳಕೆದಾರ ಸ್ನೇಹಿ ಮತ್ತು ಉಚಿತವಾಗಿರಲಿದೆ.
ವಿದೇಶದಲ್ಲಿ ವಾಸಿಸುವ ಜನರಿಗೆ portal ಸಹಾಯ ಮಾಡುತ್ತದೆ. ವಿದೇಶಗಳಿಗೆ ಹೋದ ಪೆÇೀಷಕರಿಗೆ ತಮ್ಮ ಮಕ್ಕಳಿಗೆ ಕನ್ನಡವನ್ನು ಕಲಿಸಲು ಸೌಲಭ್ಯಗಳಿಲ್ಲದಿದ್ದರೂ ಇ-ಲನಿರ್ಂಗ್ portal ಅಂತಹವರಿಗೆ ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸ್ಥಳೀಯ ಕನ್ನಡ ಸಂಸ್ಥೆಗಳ ಸಹಯೋಗದೊಂದಿಗೆ ವಿದೇಶಗಳಲ್ಲಿ ವಾರಾಂತ್ಯದ ದಿನಗಳಲ್ಲಿ ತರಗತಿಗಳನ್ನು ನಡೆಸುತ್ತಿದೆ, ಇ-ಲನಿರ್ಂಗ್ portal 2ನೇ ತಲೆಮಾರಿನ ಜನರಿಗೆ ಕನ್ನಡ ಕಲಿಯಲು ಸಹಾಯ ಮಾಡಲಿದೆ ಎಂದಿದ್ದಾರೆ.
ಕರೋನಾ ಬಳಿಕ ನಾವು 84 ದೇಶಗಳಲ್ಲಿ 300 ಕ್ಕೂ ಹೆಚ್ಚು ಅನಿವಾಸಿ ಕನ್ನಡಿಗರಿಗೆ ತರಬೇತಿ ನೀಡಿದ್ದೇವೆ. ಅಮೆರಿಕಾದ ಒಂದೆರಡು ಶಾಲೆಗಳು ಕನ್ನಡವನ್ನು ವಿದೇಶಿ ಭಾಷೆಯನ್ನಾಗಿ ನೀಡುತ್ತಿವೆ ಎಂದು ಪ್ರಾಧಿಕಾರದ ಅಧ್ಯಕ್ಷ ನಾಗಾಭರಣ ಹೇಳಿದ್ದಾರೆ.