- ಮಹಾರಾಷ್ಟ್ರ ಬಳಿಕ ರಾಜ್ಯಕ್ಕೆ ಸ್ಥಾನ
- ಕೊಂಚ ಯಾಮಾರಿದರೂ ಅಪಾಯ ಕಟ್ಟಿಟ್ಟಬುತ್ತಿ!
ಬೆಂಗಳೂರು: ವಿಶ್ವದಲ್ಲೇ ಸಾವಿನ ಸಂಖ್ಯೆಯಲ್ಲಿ ನಂ.2 ಸ್ಥಾನ ಗಳಿಸಿದ ಭಾರತ ಎಂಬ ಸುದ್ದಿ ಆತಂಕ ಸೃಷ್ಟಿಸಿರುವಾಗಲೇ ಕರ್ನಾಟಕ ಸೋಂಕಿತರ ಸಂಖ್ಯೆಯಲ್ಲಿ ರಾಜ್ಯ ದೇಶದಲ್ಲಿಯೇ 2ನೇ ಸ್ಥಾನಕ್ಕೆ ಬಂದಿದೆ. ಇದು ರಾಜ್ಯದಲ್ಲಿ ಕರೋನಾ ಇನ್ನು ತನ್ನ ಆರ್ಭಟ ಹೆಚ್ಚಿಸುತ್ತಿರುವ ಲಕ್ಷಣವಾಗಿದೆ.
ಶನಿವಾರ ಕರ್ನಾಟಕದಲ್ಲಿ 3014 ಹೊಸ ಕೋವಿಡ್ ಪ್ರಕರಣ ದಾಖಲಾಗುವ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 8,23,412ಕ್ಕೆ ಏರಿಕೆಯಾಗಿದೆ. ಶನಿವಾರ ರಾಜ್ಯದಲ್ಲಿ 28 ಜನರು ಮಾತ್ರ ಮೃತಪಟ್ಟಿದ್ದಾರೆ. 6 ತಿಂಗಳಿನಲ್ಲಿ ಮೊದಲ ಬಾರಿಗೆ ರಾಜ್ಯದಲ್ಲಿ ಅತಿ ಕಡಿಮೆ ಕೋವಿಡ್ ಸೋಂಕಿತರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಇದುವರೆಗೂ 1,11,68 ಜನರು ಮೃತಪಟ್ಟಿದ್ದಾರೆ.ರಾಜ್ಯದಲ್ಲಿ ಅಕ್ಟೋಬರ್ 31ರಂದು 3014 ಹೊಸ ಪ್ರಕರಣ ಪತ್ತೆಯಾಗಿದೆ.
ರಾಜ್ಯದಲ್ಲಿ 7,468 ಜನರು ಗುಣಮುಖರಾಗಿದ್ದಾರೆ. ಇದುವರೆಗೂ ರಾಜ್ಯದಲ್ಲಿ ಗುಣಮುಖರಾದವರ ಸಂಖ್ಯೆ 7,57,208 ಆಗಿದೆ. ದೇಶದಲ್ಲಿ ಕೋವಿಡ್ ಸೋಂಕಿತರು ಹೆಚ್ಚು ಇರುವ ರಾಜ್ಯಗಳಲ್ಲಿ ಮಹಾರಾಷ್ಟ್ರ (16,78,406) ಮೊದಲ ಸ್ಥಾನದಲ್ಲಿದೆ. ಕರ್ನಾಟಕ (8,23,412) 2ನೇ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿ ಆಂಧ್ರ ಪ್ರದೇಶವಿದ್ದು 8,23,348 ಒಟ್ಟು ಸೋಂಕಿತರಿದ್ದಾರೆ. ಹೀಗಾಗಿ ಕರೋನಾ ಬಗ್ಗೆ ನಿರ್ಲಕ್ಷ್ಯ ಸಲ್ಲದು.