- ಡ್ರಗ್ಸ್ ದಂಧೆಕೋರರಿಗೆ ಹಣ ಪೂರೈಕೆ ಆರೋಪದಲ್ಲಿ ಅರೆಸ್ಟ್
ಬೆಂಗಳೂರು: ಕೇರಳದ ಮಾಜಿ ಗೃಹ ಸಚಿವ, ಸಿಪಿಐ (ಎಂ) ಕಾರ್ಯದರ್ಶಿ ಕೊಡಿಯೇರಿ ಅವರ ಮಗ ಬಿನೀಶ್ ಕೊಡಿಯೇರ್ನನ್ನುಇಡಿ ಪೆÇಲೀಸರು ವಶಕ್ಕೆ ಪಡೆದಿದ್ದಾರೆ. ಡ್ರಗ್ಸ್ ಫೆಡ್ಲರ್ ಮೊಹಮ್ಮದ್, ಅನೂಪ್ಗೆ ಐವತ್ತು ಲಕ್ಷ ಹಣದ ವ್ಯವಹಾರ ನಡೆಸಿದ ಪ್ರಕರಣ ಕುರಿತು ನಾಲ್ಕು ಗಂಟೆಗಳ ವಿಚಾರಣೆ ಬಳಿಕ ಅಧಿಕಾರಿಗಳು ಬಂಧಿಸಿದ್ದಾರೆ. ಈ ಹಿಂದೆ ಅ.6ರಂದು ವಿಚಾರಣೆಗೆ ಒಳಗಾಗಿದ್ದ ಬಿನೀಶ್ ಸ್ನೇಹಿತನ ಮೂಲಕ ಡ್ರಗ್ ಫೆಡ್ಲರ್ ಅನೂಫ್ ಹಣ ನೀಡಿದ್ದನ್ನು ಇಡಿ ಅಧಿಕಾರಿಗಳ ಮುಂದೆ ಒಪ್ಪಿಕೊಂಡಿದ್ದ. ಈ ಕುರಿತು ದಾಖಲೆಗಳ ಸಮೇತ ಬೆಂಗಳೂರಿನ ಕಚೇರಿಗೆ ಹಾಜರಾಗುವಂತೆ ಅಧಿಕಾರಿಗಳು ಸೂಚಿಸಿದ್ದರು. ಬಿನೀಶ್ ಶಾಂತಿನಗರದ ಇಡಿ ಕಚೇರಿಗೆ ಗುರುವಾರ ಬೆಳಗ್ಗೆ ಹಾಜರಾಗಿದ್ದರು. ಈ ವೇಳೆ ಹಲವು ಗಂಟೆಗಳ ವಿಚಾರಣೆ ಬಳಿಕ ವಶಕ್ಕೆ ಪಡೆಯಲಾಗಿದೆ. ಸೆಷನ್ಸ್ ಕೋರ್ಟ್ ಮುಂದೆ ಹಾಜರು ಪಡಿಸಲಾಗಿದ್ದು, ನಾಲ್ಕು ದಿನ ಇಡಿ ವಶಕ್ಕೆ ನೀಡಲಾಗಿದೆ.
ಈ ಹಿಂದೆ ಕೇರಳ ಗೋಲ್ಡ್ ಸ್ಮಗ್ಲಿಂಗ್ ಕೇಸ್ನಲ್ಲಿ ಸ್ವಪ್ನಾ ಸುರೇಶ್ ಎಂಬಾಕೆಯನ್ನು ಬಂಧಿಸಲಾಗಿತ್ತು. ಈ ವೇಳೆ ಕೊಚ್ಚಿ ಇಡಿಯಿಂದಲೂ ಬಿನೇಶ್ಗೆ ನೊಟೀಸ್ ನೀಡಿ ವಿಚಾರಣೆ ಮಾಡಲಾಗಿತ್ತು. ಒಟ್ಟಿನಲ್ಲಿ ಡ್ರಗ್ಸ್ ದಂಧೆಯಲ್ಲಿ ಸಿನಿಮಾ ನಟ-ನಟಿಯರು, ಉದ್ಯಮಿಗಳು, ರಾಜಕಾರಣಿಗಳ ಮಕ್ಕಳು ಬಲೆಗೆ ಬೀಳುತ್ತಿದ್ದಾರೆ.