- ದೀಪಾವಳಿ ಸಂಭ್ರಮದಲ್ಲಿ ಮಿಂದೆದ್ದ ಜನ!
- ಎಲ್ಲೆಡೆ ಜನವೋ ಜನ..ಪೂಜೆ, ಪುನಸ್ಕಾರ
ಬೆಂಗಳೂರು: ಕರೋನಾ ಇಡೀ ದೇಶವನ್ನು ಮಂಕು ಮಾಡಿದ್ದು, ಇದೀಗ ಬೆಳಕಿನ ಹಬ್ಬ ದೀಪಾವಳಿ ಈ ಕರೋನಾ ಕತ್ತಲನನ್ನು ಕೊಂಚ ಬೆಳಕು ಮಾಡಿದೆ.
ಜನ ನಕರಾತ್ಮಕ ಚಿಂತನೆಯಿಂದ ಕೊಂಚ ಹೊರಬರುವಂತೆ ಮಾಡಿದೆ. ದೀಪಾವಳಿ ಹಬ್ಬಕ್ಕೂ ಮುನ್ನ 2 ದಿನದಿಂದ ಎಲ್ಲಾ ಕಡೆ ಜನರ ಭಯಬಿಟ್ಟು, ಪಾಸಿಟಿವ್ ಎನರ್ಜಿಯಿಂದ ಕೆಲಸ ಮಾಡುತ್ತಿದ್ದುದು ಕಂಡು ಬಂತು.
ಇನ್ನು ಪ್ರತಿ ಊರಿನ ಮಾರುಕಟ್ಟೆಗಳು ಅಂಗಡಿಗಳು ರಶ್ ಆಗಿದ್ದವು. ವ್ಯವಹಾರದಲ್ಲೂ ಕೊಂಚ ಚೇತರಿಕೆ ಕಂಡಿತು. ಇದು ಎಲ್ಲಾ ಕಡೆ ಮಾಮೂಲಾಗಿತ್ತು. ಇನ್ನು ಜನತೆ ಹೆಚ್ಚು ಹೆಚ್ಚು ಖರೀದಿಯಲ್ಲಿ ತೊಡಗಿದ್ದರು. ಮನೆ ಮಂದಿಯೆಲ್ಲಾ ಸೇರಿ ಇದೇ ಮೊದಲ ಬಾರಿಗೆ ಹಬ್ಬ ಆಚರಿಸಿದ್ದಾರೆ. ಏಕೆಂದರೆ ಕೆಲಸದ ಸಲುವಾಗಿ ದೂರದ ಊರಲ್ಲಿದ್ದ ಮನೆ ಮಕ್ಕಳು ಈ ಬಾರಿ ಕರೋನಾ ಕಾರಣ ಮನೆಯಲ್ಲಿಯೇ ಇದ್ದಾರೆ.
ಪಟಾಕಿ ಅಬ್ಬರವಿಲ್ಲದೆ ಇದ್ದರೂ ಹಸಿರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಪಟ್ಟಣಗಳಲ್ಲಿ ಜನರ ಸಂಖ್ಯೆ ಕಡಿಮೆ ಕಂಡಿತು. ಎಲ್ಲಿಯೂ ಪಟಾಕಿ ಅವಘಡ ಸಂಭವಿಸಿದ ಮಾಹಿತಿ ಲಭ್ಯವಾಗಿಲ್ಲ. ಇತ್ತ ಹಸಿರು ಪಟಾಕಿ ಮಾತ್ರ ಮಾರಾಟಕ್ಕೆ ಸರ್ಕಾರ ಅವಕಾಶ ಮಾಡಿಕೊಟ್ಟಿತ್ತು. ನಮ್ಮೂರ್ ಎಕ್ಸ್ಪ್ರೆಸ್ ಸರ್ವರಿಗೂ ಶುಭ ಹಾರೈಸುತ್ತದೆ.