- ಮೊಬೈಲ್, ಹಣ, ಚಿನ್ನ ಇವರ ಟಾರ್ಗೆಟ್
- ಸರ್ಕಾರಗಳೇ, ಅಪಾಯದ ಸೂಚನೆ: ಹುಷಾರ್..!
ಬೆಂಗಳೂರು: ಕರೋನಾ ಕಾರಣದಿಂದ ದೇಶದಲ್ಲಿ ಲಕ್ಷ ಲಕ್ಷ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಲಕ್ಷಾಂತರ ಉದ್ಯಮಗಳು ಮುಚ್ಚಿವೆ. ಇದರ ಎಫೆಕ್ಸ್ ಎಲ್ಲಾ ಕ್ಷೇತ್ರದ ಮೇಲೆ ಬೀಳುತ್ತಿದೆ. ಈ ನಡುವೆ ಕೆಲಸ, ದುಡಿಮೆ, ಹಣವಿಲ್ಲದೆ ಕೆಲವು ಯುವಕರು ಇದೀಗ ಹಿಂಸೆ, ಅಪರಾಧದತ್ತ ಇಳಿಯುತ್ತಿದ್ದಾರೆ ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ.
ರಾಜ್ಯದ ರಾಜಧಾನಿ ಬೆಂಗಳೂರಿ ಸೇರಿ ಪ್ರತಿ ಊರಲ್ಲೂ ದರೋಡೆ, ಮೊಬೈಲ್, ಚಿನ್ನ, ಹಣ ಕಳ್ಳತನ ಹೆಚ್ಚಿದೆ. ಇದು ಅಪಾಯಕಾರಿ ವಿಷಯ ಕೂಡ!.
ಬೆಂಗಳೂರಿನ ಹೋಟೆಲ್ವೊಂದರಲ್ಲಿ ರಿಸೆಫನಿಸ್ಟ್ ಆಗಿದ್ದ ಅಮೀರ್ ಅಹ್ಮದ್ ಎಂಬ 28 ವರ್ಷದ ಯುವಕ ಕೆಲಸ ಕಳೆದುಕೊಂಡ ಬಳಿಕ ಪಿಣ್ಯ ಕಾರ್ಖಾನೆ ಬಳಿ ಗ್ರಾಹಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದಾಗ ಸಿಕ್ಕಿಬಿದ್ದು ಜೈಲು ಸೇರಿದ್ದಾನೆ. ಬೆಂಗಳೂರಿನ ಆಟೋ ಚಾಲಕನೊಬ್ಬ ವೃದ್ಧೆಯ ಮಾಂಗಲ್ಯ ಎಗರಿಸಿ ಸುವರ್ಣ ನ್ಯೂಸ್ ಕಚೇರಿಗೆ ತಂದು ಕೊಟ್ಟಿದ್ದ. ದೀಪಾವಳಿ ಮುನ್ನ ದಿನವೇ ರಾಯಚೂರಲ್ಲಿ ಹುಡುಗರು ಕದ್ದಿದ್ದಾರೆ. ಕಟ್ಟಡ ಕಾರ್ಮಿಕರಾಗಿದ್ದ ಯುವಕರು ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನಲ್ಲಿ ಹಿರಿಯ ಮಹಿಳೆಯರ ಚಿನ್ನಾಭರಣ ಕದ್ದು ಸಿಕ್ಕಿ ಬಿದ್ದಾಗ ಉದ್ಯೋಗವಿಲ್ಲದೆ ಇಂತಹ ಕೃತ್ಯ ನಡೆಸುತ್ತಿರುವುದಾಗಿ ಅವರು ಪೊಲೀಸರ ಬಳಿ ತಪೆÇ್ಪಪ್ಪಿಕೊಂಡಿದ್ದರು. ಹೀಗೆ ಪ್ರತಿ ನಿತ್ಯ ಸಾವಿರಾರು ಘಟನೆಗಳು ನಡೆಯುತಿವೆ. ಸರ್ಕಾರ, ಆಳುವವರು ಉದ್ಯೋಗ ಸೃಷ್ಟಿಗೆ ಒತ್ತು ನೀಡದೇ ರಾಜಕೀಯ, ಭ್ರಷ್ಟಾಚಾರ, ಹಗರಣ ಮಾಡುತ್ತಾ ಕುಳಿತರೇ ಒಂದು ದಿನ ರಕ್ತರಾಜ್ಯ ಆದರೂ ಅಚ್ಚರಿ ಇಲ್ಲ!.