ಕೆಜಿಗೆ 600 ರೂ.ದಾಟಿದ ಬೆಳ್ಳುಳ್ಳಿ!
– ಸಾಮಾನ್ಯವಾಗಿ 150 ರೂ.ಇರುತ್ತಿದ್ದ ಬೆಲೆ
– ಮಾರುಕಟ್ಟೆಗೆ ಬರುತ್ತಿಲ್ಲ ಬೆಳ್ಳುಳ್ಳಿ
NAMMUR EXPRESS NEWS
ಬೆಂಗಳೂರು: ಬೆಳ್ಳುಳ್ಳಿ ಬೆಲೆ ದಿನೇ ದಿನೇ ಗಗನಕ್ಕೇರುತ್ತಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಬೆಲೆ ಕೆಜಿಗೆ 600 ರೂಪಾಯಿಗೆ ತಲುಪಿದೆ. ಸಾಮಾನ್ಯವಾಗಿ ಕೆಜಿಗೆ 150 ರಿಂದ 200 ರೂಪಾಯಿಗೆ ಮಾರಾಟವಾಗುವ ಬೆಳ್ಳುಳ್ಳಿ ಈಗ ಸಾಮಾನ್ಯ ಜನರ ಜೇಬಿಗೆ ಹೊರೆಯಾಗುತ್ತಿದೆ. ದೇಶದ ಬಹುತೇಕ ನಗರಗಳಲ್ಲಿ ಬೆಳ್ಳುಳ್ಳಿ ಬೆಲೆ ಏರಿಕೆಯಾಗಿದೆ. ದೆಹಲಿ, ಲಕ್ಷ್ಮೀ, ಭೋಪಾಲ್, ಪಾಟ್ನಾ ಸೇರಿದಂತೆ ದೇಶದ ಬಹುತೇಕ ನಗರಗಳಲ್ಲಿ ಬೆಳ್ಳುಳ್ಳಿ ಕೆಜಿಗೆ 400 ರಿಂದ 600 ರೂಪಾಯಿಗೆ ಮಾರಾಟವಾಗುತ್ತಿದೆ.
15 ದಿನಗಳ ಹಿಂದೆ ಬೆಳ್ಳುಳ್ಳಿ ಬೆಲೆ ಕೆಜಿಗೆ 200 ರೂಪಾಯಿ ಇತ್ತು. ಹೊಸ ಬೆಳೆ ಬರಲು ವಿಳಂಬ ಹಾಗೂ ಇಳುವರಿ ಕುಂಠಿತವಾಗಿರುವ ಕಾರಣ ಬೆಳ್ಳುಳ್ಳಿ ಬೆಲೆ ಹೆಚ್ಚಾಗಿದೆ. ಬದಲಾಗುತ್ತಿರುವ ಹವಾಮಾನವು ಬೆಳ್ಳುಳ್ಳಿ ಬೆಳೆಗಳಿಗೆ ಹಾನಿಯನ್ನುಂಟು ಮಾಡಿದೆ. ಏಕಾಏಕಿ ಸುರಿದ ಭಾರೀ ಮಳೆಯಿಂದ ಬೆಳೆ ಸಾಕಷ್ಟು ನಷ್ಟವಾಗಿವೆ. ಬೆಳೆ ಹಾನಿಯಿಂದಾಗಿ ಮಾರುಕಟ್ಟೆಗೆ ಸಾಕಷ್ಟು ಪ್ರಮಾಣದಲ್ಲಿ ಬೆಳ್ಳುಳ್ಳಿ ಪೂರೈಕೆಯಾಗುತ್ತಿಲ್ಲ. ಸಗಟು ವ್ಯಾಪಾರಿಗಳ ಪ್ರಕಾರ ಹೊಸ ಬೆಳೆ ಬಂದ ಮೇಲೆ ಬೆಲೆ ಕಡಿಮೆಯಾಗಲಿದೆ. ಹೊಸ ಬೆಳ್ಳುಳ್ಳಿ ಮಾರುಕಟ್ಟೆಗೆ ಬರುತ್ತಿದ್ದಂತೆ ಬೆಳ್ಳುಳ್ಳಿ ಬೆಲೆಯಲ್ಲಿ ಇಳಿಕೆಯಾಗಲಿದೆ. ಫೆಬ್ರವರಿ ಅಂತ್ಯದ ವೇಳೆಗೆ ಬೆಳ್ಳುಳ್ಳಿ ಅಗ್ಗವಾಗುವ ಸಾಧ್ಯತೆ ಇದೆ.
1 Comment
Govt of Karnataka has declared to give old pension but it has no funds stall.