-ವಾರ್ಡ್ ನಂ 11ಕ್ಕೂ ಅವರಿಗೂ ಏನೂ ಸಂಬಂಧ?
-ಇಲ್ಲಿದೆ ಸಂಪೂರ್ಣ ಮಾಹಿತಿ.
ಬ್ಯಾಕು ಟು ಬ್ಯಾಕು ಸಿನಿಮಾ ಒಪ್ಪಿಕೊಂಡ ನಟ ರಾಘವೇಂದ್ರ ರಾಜ್ಕುಮಾರ್ರವರು ರಾಜಕೀಯಕ್ಕೆ ಮುಖ ಮಾಡುತ್ತಿದ್ದರಾ ಎಂಬ ಕೊಂಚ ಅನುಮಾನವು ಶುರುವಾಗಿತ್ತು. ಆದರೆ ಅವರು ರಾಜಕಾರಣಿಯಾಗಿ ಆಖಾಡಕ್ಕಿಳಿದಿರುವು ಪೊಲಿಟಿಕಲ್ ಥ್ರಿಲ್ಲರ್ ಕಥಾನಕ ಹೊಂದಿರುವ ವಾರ್ಡ್ ನಂ 11 ಚಿತ್ರದಲ್ಲಿ.
ಯುವ ನಿರ್ದೇಶಕ ಶ್ರೀಕಾಂತ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಬ್ಲೂಬೇಲ್ ಎಂಟರ್ಟೈನ್ಮೆಂಟ್ಸ್ ಮೂಲಕ ಸಂದೀಪ್ ಶಿವಮೊಗ್ಗ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಎ. ಗುರುರಾಜ್ ಹಾಗೂ ಹೇಮಂತ್ ಕುಮಾರ್ ಸಹ ನಿರ್ಮಾಪಕರಾಗಿ ಕೈಜೋಡಿಸಿದ್ದಾರೆ.
ಈಗಾಗಲೇ ಶೇ.80ರಷ್ಟು ಭಾಗದ ಚಿತ್ರೀಕರಣ ಮುಗಿದಿದ್ದು, ಒಂದು ಹಾಡು, ಫೈಟ್ ಹಾಗೂ ಕ್ಲೈಮ್ಯಾಕ್ಸ್ ಭಾಗದ ಶೂಟ್ ಮಾಡಿದರೆ ಶೂಟಿಂಗ್ ಮುಕ್ತಾಯವಾಗುತ್ತದೆ. ಇದೇ ಮೊದಲ ಬಾರಿಗೆ ನಟ ರಾಘವೇಂದ್ರ ರಾಜ್ಕುಮಾರ್ ಒಬ್ಬ ರಾಜಕಾರಣಿಯಾಗಿ ಕಾಣಿಸಿಕೊಂಡಿದ್ದು, ರಾಘಣ್ಣ, ಸುಮನ್ ನಗರಕರ್ ಹಾಗೂ ಕಬೀರ್ ಸಿಂಗ್ ಈ ಮೂರು ಪಾತ್ರಗಳ ಸುತ್ತ ಸುತ್ತುವ ಕಥೆಯೇ ಈ ಚಿತ್ರದ ಪ್ರಮುಖ ಅಂಶ. ಚಿತ್ರದ ಬಹುತೇಕ ಕಥೆ ನಡೆಯುವುದು ಒಂದು ವಾರ್ಡ್ನಲ್ಲಿ. ಹಾಗಾಗಿ ಚಿತ್ರಕ್ಕೆ ವಾರ್ಡ್ ನಂ.11 ಎಂಬ ಶೀರ್ಷಿಕೆ ಇಡಲಾಗಿದೆ.