- ಆಪ್ ಮೂಲಕ ಸಾಲ ಮೋಸ: ಮೂವರು ಅರೆಸ್ಟ್..!
- ಸಾಲದ ಹೆಸ್ರಲ್ಲಿ ಅಧಿಕ ಬಡ್ಡಿ: ಜನರೇ ಹುಷಾರ್..!
ಬೆಂಗಳೂರು: ದೇಶದಲ್ಲಿ ಕರೋನಾ ಮುಂದಿಟ್ಟುಕೊಂಡು ಆ್ಯಪ್ ಮೂಲಕ ಸಾಲ ನೀಡಿ ಅಧಿಕ ಬಡ್ಡಿ ವಿಧಿಸಿ ತೊಂದರೆ ಕೊಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಬೆಂಗಳೂರಲ್ಲಿ ಮೂವರನ್ನು ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಚೀನಾ ದೇಶದ ಪ್ರಜೆಗಳು ಭಾಗಿಯಾಗಿರುವುದು ತಿಳಿದು ಬಂದಿದೆ. ಶೀಘ್ರವೇ ಅವರನ್ನು ಬಂಧಿಸುವುದಾಗಿ ಸಿಸಿಬಿ ಪೊಲೀಸರು ತಿಳಿಸಿದ್ದಾರೆ. ಅಚ್ಚರಿ ಎಂದರೆ ರಾಜ್ಯದಲ್ಲಿ ಸಾವಿರಾರು ಜನ ಈ ಜಾಲಕ್ಕೆ ಬಲಿಯಾಗಿ ಬದುಕು ಕಳೆದುಕೊಂಡಿದ್ದಾರೆ. ಸಾಲ ನೀಡುವುದಾಗಿ ಆಮಿಷ ಒಡ್ಡುವ ಕೆಲವು ಅನಧಿಕೃತ ಮೊಬೈಲ್ ಆ್ಯಪ್ಗಳ ಜಾಲಕ್ಕೆ ಬಲಿಯಾಗಬಾರದು ಎಂದು ಆರ್ಬಿಐ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ. ಈಗಾಗಲೇ 158ಕ್ಕೂ ಹೆಚ್ಚು ಆಪ್ಗಳನ್ನು ತೆಲಂಗಾಣ ಸರ್ಕಾರ ಬಂದ್ ಮಾಡಲು ಗೂಗಲ್ ಜತೆ ಮಾತುಕತೆ ನಡೆಸಿದೆ.