ತೀರ್ಥಹಳ್ಳಿಯಲ್ಲಿ ಆರಗ, ಶಿವಮೊಗ್ಗದಲ್ಲಿ ರಾಘವೇಂದ್ರ ಕಸ ಗುಡಿಸಿದ ಶಾಸಕರು, ಸಂಸದರು!
– ಆರಂಭವಾಗಿದೆ ಸ್ವಚ್ಛ ತೀರ್ಥ ಅಭಿಯಾನ!
NAMMUR EXPRESS NEWS
ಬೆಂಗಳೂರು: ಅಯೋಧ್ಯೆಯ ರಾಮ ಪ್ರಾಣ ಪ್ರತಿಷ್ಠಾಪನೆಯ ಅಂಗವಾಗಿ ಭಾರತವನ್ನು ಸ್ವಚ್ಛ ನಗರವನ್ನಾಗಿಸಲು ಪ್ರಧಾನಿ ಮೋದಿ ಕರೆಕೊಟ್ಟಿದ್ದು, ಪ್ರತಿ ನಗರ, ದೇವಸ್ಥಾನಗಳು, ಧಾರ್ಮಿಕ, ಆಧ್ಯಾತ್ಮಿಕ ಕೇಂದ್ರಗಳನ್ನು ಸ್ವಚ್ಛವಾಗಿಸಲು ಸ್ವಯಂ ಪ್ರೇರಿತರಾಗಿ ಭಾಗವಹಿಸುವಂತೆ ಬೃಹತ್ ಸ್ವಚ್ಚತಾ ಅಭಿಯಾನವನ್ನು ಪ್ರಾರಂಭಿಸುವುದಕ್ಕೆ ದೇಶಾದ್ಯಂತ ಧಾರ್ಮಿಕ ಕ್ಷೇತ್ರಗಳಿಗೆ ಮೋದಿ ಕರೆ ನೀಡಿದ್ದಾರೆ. ಜನವರಿ 14ರಿಂದ 21ರ ವರೆಗಿನ ಒಂದು ವಾರವನ್ನು ಸ್ವಚ್ಛ ತೀರ್ಥ ಅಭಿಯಾನ ಎಂದು ಘೋಷಿಸಲಾಗಿದೆ.
ಈ ಸಲುವಾಗಿ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡ ಸಂಸದ ರಾಘವೇಂದ್ರ, ಶಾಸಕ ಚೆನ್ನಬಸಪ್ಪ, ಎಂಎಲ್ ಸಿ ರುದ್ರೇಗೌಡ, ಡಿಎಸ್ ಅರುಣ್ ಬಿಜೆಪಿಯ ಗಿರೀಶ್ ಪಟೇಲ್, ಜಗದೀಶ್ ಮೊದಲಾದವರು ಪಾಲ್ಗೊಂಡು, ಶಿವಮೊಗ್ಗದ ಶ್ರೀ ಅರೆಕೇಶ್ವರ ಸ್ವಾಮಿ ದೇವಾಲಯದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಿದರು. ಎಲ್ಲರೂ ಕಸಪೊರಕೆ ಹಿಡಿದು ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಂದರ್ಭ ಚುನಾವಣೆಯ ಸಂದರ್ಭ ಜನಗಳೊಂದಿಗೆ ಬೆರೆಯುವುದು ಮಾತ್ರವಲ್ಲದೆ ಇಂತಹ ಅಭಿಯಾನದ ಮೂಲಕ ಸಮಾಜ ಸೇವೆಗಳಲ್ಲಿ ಭಾಗಿಯಾಗುವ ಅವಕಾಶ ಸಿಕ್ಕಿದೆ. ಇಂತಹ ಅವಕಾಶ ನೀಡಿದ್ದಕ್ಕೆ ಮೋದಿಯವರಿಗೆ ಧನ್ಯವಾದಗಳು ಎಂದು ಸಂಸದ ರಾಘವೇಂದ್ರ ಮಾತನಾಡಿದ್ದಾರೆ.
ತೀರ್ಥಹಳ್ಳಿಯಲ್ಲಿ ದೇವಸ್ಥಾನ ಸ್ವಚ್ಛ ಮಾಡಿದ ಆರಗ!
ಜನವರಿ 22ರ ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ನಾಸಿಕ್ ದೇವಸ್ಥಾನವೊಂದರಲ್ಲಿ ಸ್ವತಃ ಸ್ವಚ್ಚಗೊಳಿಸಿ ದೇಶದ ಜನತೆಗೆ ತಮ್ಮ ತಮ್ಮ ಊರಿನ ದೇವಾಲಯಗಳನ್ನು ಸ್ವಚ್ಚಗೊಳಿಸಲು ಕರೆ ನೀಡಿದ್ದರು. ಪ್ರಧಾನಿಯವರ ಕರೆಯಂತೆ ಇಂದು ತೀರ್ಥಹಳ್ಳಿ ಶಾಸಕರಾದ ಆರಗ ಜ್ಞಾನೇಂದ್ರರವರು ನಿನ್ನೆ ಜಾತ್ರೆ ನಡೆದ ತೀರ್ಥಹಳ್ಳಿ ಶ್ರೀ ರಾಮೇಶ್ವರ ದೇವಸ್ಥಾನ ಸ್ವಚ್ಚಗೊಳಿಸುವ ಕಾರ್ಯದಲ್ಲಿ ಸಂಘಟನೆ ಕಾರ್ಯಕರ್ತರೊಂದಿಗೆ ಪಾಲ್ಗೊಂಡರು.