ಮಾರುಕಟ್ಟೆಗೆ ಭಾರತ್ ಬ್ರಾಂಡ್ ಅಕ್ಕಿ!
– ಕೆಜಿ ಗೆ 29 ರೂ-ಆನ್ಲೈನ್ನಲ್ಲೂ ಲಭ್ಯ
– ಏನಿದು ಅಕ್ಕಿ… ಯಾರಿಗೆ ಸಿಗುತ್ತೆ..?
NAMMUR EXPRESS NEWS
ಬೆಂಗಳೂರು: ಇತ್ತಿಚೆಗೆ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದೆ. ಇನ್ನು ಅಕ್ಕಿಯ ಬೆಲೆ ಅಂತು ಕೇಳೋದಕ್ಕೆ ಆಗೋದಿಲ್ಲ. ಈ ಹಿನ್ನೆಲೆ ಕೇಂದ್ರ ಸರ್ಕಾರ ಜನರಿಗೆ ಅನುಕೂಲ ಆಗಲಿ ಅನ್ನೋ ಕಾರಣಕ್ಕೆ 29 ರೂಪಾಯಿಗೆ ಅಕ್ಕಿ ನೀಡಲು ಮುಂದಾಗಿದೆ. ಕೇಂದ್ರ ಸರ್ಕಾರ 29 ರೂಪಾಯಿಗೆ ಅಕ್ಕಿ ನೀಡಲು ಮುಂದಾಗಿದ್ದು, ಮಂಗಳವಾರ ಬೆಂಗಳೂರಿನಲ್ಲಿ ಚಾಲನೆ ನೀಡಲಾಗಿದೆ.
ಅಮೇಜಾನ್ನಲ್ಲಿ ಕೇಂದ್ರದ ಅಕ್ಕಿ ಲಭ್ಯ!
ಮೊದಲ ಹಂತದಲ್ಲಿ 120 ಕ್ವಿಂಟಾಲ್ ಅಕ್ಕಿ ಬೆಂಗಳೂರಿಗೆ ಬಂದಿದೆ. ರೈತರು ಬೆಳೆಯುವ ಅಕ್ಕಿಯನ್ನ ಖರೀದಿಸಿ ಜನರಿಗೆ ಕಡಿಮೆ ದರದಲ್ಲಿ ಮಾರಾಟ ಮಾಡಲಾಗ್ತಿದೆ. ಇದಕ್ಕಾಗಿ ಒಟ್ಟು 25 ವಾಹನಗಳನ್ನ ನೇಮಿಸಲಾಗಿದೆ. ಬೆಂಗಳೂರಿನಲ್ಲಿ 5 ಕಡೆಗಳಲ್ಲಿ ಮೊಬೈಲ್ ವಾಹನಗಳು ಇರಲಿದ್ದು, ಜನರು ಅಕ್ಕಿ ಖರೀದಿ ಮಾಡಬಹುದು. ಜೊತೆಗೆ ಬೇರೆ ಜಿಲ್ಲೆಗಳಲ್ಲೂ ಕೂಡಾ ಅಕ್ಕಿ ವಿತರಣೆಗೆ ಸಿದ್ಧತೆ ಮಾಡಿಕೊಂಡಿದ್ದು ಮೊಬೈಲ್ ವಾಹನಗಳು ಸಂಚಾರ ಮಾಡಲಿವೆ.
ಭಾರತ್ ಅಕ್ಕಿ ವಿತರಣೆಗೆ ಯಡಿಯೂರಪ್ಪ ಚಾಲನೆ:
ಅಕ್ಕಿ ಸರಬರಾಜು ಮಾತ್ರವಲ್ಲದೆ ಮೊಬೈಲ್ ವಾಹನಗಳಲ್ಲದೆ, ರಿಲಯನ್ಸ್ ಮಾರ್ಟ್, ಫ್ಲಿಪ್ ಕಾರ್ಡ್, ಬ್ಲಿಂಕಿಟ್ ಸೇರಿದಂತೆ ಅನೇಕ ಆನ್ಲೈನ್ ಶಾಪಿಂಗ್ ಆಯಪ್ಗಳಲ್ಲೂ ಭಾರತ್ ಅಕ್ಕಿ 29 ರೂಪಾಯಿಗೆ ಸಿಗಲಿದೆ. ಅಕ್ಕಿ ಖರೀದಿಸುವವರು ತಮ್ಮ ಮೊಬೈಲ್ ನಂಬರ್ ರಿಜಿಸ್ಟರ್ ಮಾಡಿಸಿ ಅಕ್ಕಿ ಪಡೆಯಬಹುದು. ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿಯನ್ನ ನೀಡಲಾಗುವುದು. ಕಡಿಮೆ ದರದಲ್ಲಿ ಅಕ್ಕಿ ಸಿಗ್ತಿರೋದು ಉಪಯುಕ್ತ ಎನ್ನುತ್ತಿದ್ದಾರೆ ಜನ.