ನಕಲಿ ಡಾಕ್ಟರೇಟ್ ಪಡೆದವರ ವಿರುದ್ಧ ಈಗ ಕೇಸ್!?
– ಕೆಲವು ವಿವಿಗಳಿಂದ ನಕಲಿ ಡಾಕ್ಟ್ರೇಟ್ ಮಾರಾಟ
– ಅರ್ಹರಲ್ಲದವರಿಗೂ ಪದವಿ: ಸದನದಲ್ಲಿ ಭಾರೀ ಚರ್ಚೆ!
– ಮನೆ, ಕಟ್ಟಡ ಕಟ್ಟುವಾಗ ಈ ಲೈಸೆನ್ಸ್ ಬೇಕು!
– 10ಕ್ಕಿಂತ ಹೆಚ್ಚು ಕಾರ್ಮಿಕರನ್ನು ಹೊಂದಿರುವ ಕಟ್ಟಡ ನಿರ್ಮಾಣ ಮಾಲೀಕರಿಗೆ ಪ್ರಮಾಣ ಪತ್ರ ಕಡ್ಡಾಯ
NAMMUR EXPRESS NEWS
ಬೆಂಗಳೂರು: ವಿಶ್ವವಿದ್ಯಾನಿಲಯಗಳಿಂದ ನೀಡುವ ನಕಲಿ ಗೌರವ ಡಾಕ್ಟರೇಟ್ ಪದವಿಗಳನ್ನು ಪಡೆಯುವುದರ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದ್ದಾರೆ. ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯ ಮಂಜುನಾಥ್ ಭಂಡಾರಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಇತ್ತೀಚೆಗೆ ವಿಶ್ವವಿದ್ಯಾನಿಲಯಗಳಲ್ಲಿ ವ್ಯಾಪಕವಾಗಿ ನಕಲಿ ಡಾಕ್ಟರೇಟ್ ಪದವಿಗಳನ್ನು ನೀಡುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಇದನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ ಎಂದು ತಿಳಿಸಿದರು.
ನಕಲಿ ಗೌರವ ಡಾಕ್ಟರೇಟ್ ಕೊಡುವ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರ ಎಂದು ಮಂಜುನಾಥ್ ಕೇಳಿದ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಸಚಿವರು, ಡಾಕ್ಟರೇಟ್ ಪದವಿ ಪಡೆದವರು ಡಾಕ್ಟರ್ ಎಂದು ಹಾಕೊಳ್ಳಬಹುದಾ ಎಂಬುದರ ಬಗ್ಗೆ ಸುಪ್ರಿಂಕೋರ್ಟ್ ತೀರ್ಪು ಬರಲಿದೆ. ಉನ್ನತ ಶಿಕ್ಷಣ ಪರಿಷತ್ ಸಭೆ ಕರೆದು, ನಕಲಿ ಗೌರವ ಡಾಕ್ಟರೇಟ್ ಪಡೆಯವ ಪ್ರಕರಣಗಳಿಗೆ ಕಡಿವಾಣ ಹಾಕುತ್ತೇವೆ ಎಂದು ಆಶ್ವಾಸನೆ ನೀಡಿದರು.ಜೊತೆಗೆ ಖಾಸಗಿ ವಿಶ್ವವಿದ್ಯಾನಿಲಯಗಳ ಮುಖ್ಯಸ್ಥರ ಕರೆದು ಚರ್ಚೆ ಮಾಡುತ್ತೇವೆ. ಇಂತಹ ಪ್ರಕರಣಗಳು ಮರುಕಳಿಸಂತೆ ಸರ್ಕಾರ ಸೂಕ್ತ ಕ್ರಮ ಜರುಗಿಸಲಿದೆ ಎಂದು ಆಶ್ವಾಸನೆ ನೀಡಿದರು.
10 ಕಿಂತ ಹೆಚು. ಕಾರ್ಮಿಕರನ್ನು ಹೊಂದಿರುವ ಕಟ್ಟಡ ನಿರ್ಮಾಣ ಮಾಲೀಕರಿಗೆ ಪ್ರಮಾಣ ಪತ್ರ ಕಡ್ಡಾಯ
ಉಡುಪಿ: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ (ಉದ್ಯೋಗದ ಕ್ರಮೀಕರಣ ಮತ್ತು ಸೇವಾ ಷರತ್ತುಗಳು) ಕಾಯ್ದೆ 1996 ಮತ್ತು ಕರ್ನಾಟಕ ನಿಯಮಗಳು 2006 ರಡಿ 10 ಕ್ಕಿಂತ ಹೆಚ್ಚಿನ ಕಾರ್ಮಿಕರನ್ನು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಲ್ಲಿ ಕಡ್ಡಾಯವಾಗಿ ಕಟ್ಟಡ ಮಾಲೀಕರು, ನಿಯೋಜಕರು ಹಾಗೂ ಗುತ್ತಿಗೆದಾರರು ಕಟ್ಟಡ ನಿರ್ಮಾಣ ಕಾಮಗಾರಿ ಸಂಸ್ಥೆಯನ್ನಾಗಿ ನೋಂದಾಯಿಸಲು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿ ನಿಗದಿತ ಶುಲ್ಕವನ್ನು ಭರಿಸಿ, ನೋಂದಣಿ ಪ್ರಮಾಣ ಪತ್ರವನ್ನು ಕಾರ್ಮಿಕ ಇಲಾಖೆಯಿಂದ ಪಡೆಯುವುದು ಕಡ್ಡಾಯವಾಗಿರುತ್ತದೆ.
ವ್ಯಾಸ್ತವ್ಯದ ಕಟ್ಟಡ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ರೂ.10 ಲಕ್ಷ ನಿರ್ಮಾಣ ವೆಚ್ಚ ಮೀರಿದ ಕಟ್ಟಡ ಮತ್ತು ಯಾವುದೇ ವಾಣಿಜ್ಯ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಕೈಗೊಳ್ಳುವ ಕಟ್ಟಡದ ಮಾಲೀಕರು ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಂಡ ಬಳಿಕ ಸ್ಥಳೀಯ ಸಂಸ್ಥೆಯ ಪರವಾನಗಿ ಪ್ರಾಧಿಕಾರ ಕಛೇರಿಗಳಿಂದ occupancy certificate ಅನ್ನು ಕಟ್ಟಡದ ನಿರ್ಮಾಣ ಮಾಲೀಕರು ಪಡೆಯುವ ಪೂರ್ವದಲ್ಲಿ ಕಾರ್ಮಿಕ ಅಧಿಕಾರಿ ಹಾಗೂ ಸುಂಕ ಮೌಲ್ಯಮಾಪನಾಧಿಕಾರಿಗಳಿಗೆ ಕಟ್ಟಡದ ಮಾಲೀಕರು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಸುಂಕ ಕಾಯ್ದೆಯನ್ವಯ ನಮೂನೆ-1 ಹಾಗೂ ನಮೂನೆ-4 ರಲ್ಲಿ ಭರ್ತಿ ಮಾಡಿದ ಮಾಹಿತಿ ಹಾಗೂ ಅಗತ್ಯ ದಾಖಲಾತಿಯನ್ನು ಸಲ್ಲಿಸಿ, ಸುಂಕ ಮೌಲ್ಯಮಾಪನ ಆದೇಶ ಮಾಡಿಸಿಕೊಂಡು ಸುಂಕದ ಪೂರ್ಣ ಮೊತ್ತ ಪಾವತಿ ಮಾಡಿರುವ ಬಗ್ಗೆ ದೃಢಪತ್ರವನ್ನು ಪಡೆದು ಸ್ಥಳೀಯ ಸಂಸ್ಥೆಯ ಪರವಾನಗಿ ಪ್ರಾಧಿಕಾರ ಕಚೇರಿಗಳಿಂದ occupancy certificate ಅನ್ನು ಪಡೆದುಕೊಳ್ಳುವಂತೆ ಅಪರ ಜಿಲ್ಲಾಧಿಕಾರಿಗಳ ಕಛೇರಿ ಪ್ರಕಟಣೆ ತಿಳಿಸಿದೆ.