- ನಿರ್ದೇಶಕ ರವಿ ಶ್ರೀವತ್ಸ ಆಕ್ಷನ್ ಕಟ್: ಚಿತ್ರೀಕರಣ ಜನವರಿಯಿಂದ ಶುರು
ಬೆಂಗಳೂರು: ಭೂಗತ ಲೋಕದ ಮಾಜಿ ಡಾನ್ ಮುತ್ತಪ್ಪ ರೈ ಜೀವನಾಧಾರಿತ ಚಿತ್ರ ಇದೀಗ ತೆರೆ ಮೇಲೆ ಬರಲು ಸಿದ್ಧವಾಗಿದೆ.
ಮುತ್ತಪ್ಪ ರೈ ಜೀವನಾಧಾರಿತ ಸಿನಿಮಾಗೆ ನಿರ್ದೇಶಕ ರವಿ ಶ್ರೀವತ್ಸ ಚಾಲನೆ ನೀಡಿದ್ದಾರೆ. ಚಿತ್ರಕ್ಕೆ ಎಂಆರ್ ಟೈಟಲ್ ಫಿಕ್ಸ್ ಆಗಿದ್ದು, ಸೌಭಾಗ್ಯ ಲಕ್ಷ್ಮೀ ಫಿಲ್ಮ್ ಬ್ಯಾನರ್ ಅಡಿಯಲ್ಲಿ ಡೆಡ್ಲಿಸೋಮ ಚಿತ್ರದ ನಿರ್ಮಾಪಕ ಶುಭ ರಾಜಣ್ಣ ಬಂಡವಾಳ ಹೂಡುತ್ತಿದ್ದಾರೆ.
ನಿರ್ಮಾಪಕರ ಮಗ ದೀಕ್ಷಿತ್, ಮುತ್ತಪ್ಪ ರೈ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾ 3 ಭಾಗಗಳಲ್ಲಿ ಬಿಡುಗಡೆಯಾಗಲಿದೆ. ಮೊದಲ ಭಾಗದ ಚಿತ್ರೀಕರಣ ಜನವರಿಯಿಂದ ಪ್ರಾರಂಭವಾಗಲಿದ್ದು, ಆಗಸ್ಟ್ ಅಥವಾ ಸೆಪ್ಟಂಬರ್ನಲ್ಲಿ ರಿಲೀಸ್ ಮಾಡಲು ಪ್ಲಾನ್ ಮಾಡಲಾಗಿದೆ. ಮುತ್ತಪ್ಪ ರೈ ಬಯೋಪಿಕ್ ಮಾಡಬೇಕು ಎನ್ನುವ ಪ್ರಯತ್ನ ಹಲವು ವರ್ಷಗಳ ಹಿಂದೆಯೇ ನಡೆದಿತ್ತು.
ಸುದೀಪ್ ನಟನೆಯಲ್ಲಿ ಅಪ್ಪ ಎನ್ನುವ ಹೆಸರಿನಲ್ಲಿ ಸಿನಿಮಾ ಅನೌನ್ಸ್ ಆಗಿತ್ತು. ಬಳಿಕ ಸುದೀಪ್ ಬದಲಿಗೆ ವಿವೇಕ್ ಒಬೆರಾಯ್ ಆಯ್ಕೆಯಾಗಿ ಸಿನಿಮಾ ಪ್ರಾರಂಭದಲ್ಲೇ ನಿಂತು ಹೋಗಿತ್ತು. ಈ ವರ್ಷ ಮುತ್ತಪ್ಪ ರೈ ಕ್ಯಾನ್ಸರ್ ಕಾರಣ ವಿಧಿವಶರಾಗಿದ್ದರು. ರಾಜ್ಯ ಸೇರಿ ದೇಶ-ವಿದೇಶದಲ್ಲಿರುವ ಸಾವಿರಾರು ಅವರ ಅಭಿಮಾನಿಗಳಿಗೆ ಈ ಚಿತ್ರ ಕುತೂಹಲ ಮೂಡಿಸಿದೆ.