ಒಕ್ಕಲಿಗರ ಸಂಘಕ್ಕೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
NAMMUR EXPRESS – ಬೆಂಗಳೂರು: ರಾಜ್ಯ ಒಕ್ಕಲಿಗರ ಸಂಘಕ್ಕೆ ಹೊಸ ಸದಸ್ಯರ ನೋಂದಣಿಗೆ ಅರ್ಜಿ ಸಲ್ಲಿಸುವ ಅವಧಿಯನ್ನು ನ.30ರವ ರೆಗೆ ವಿಸ್ತರಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಡಿ.ಹನು ಮಂತಯ್ಯ ತಿಳಿಸಿದ್ದಾರೆ. 2023 ಫೆ.17ರಿಂದ ಆ.31ರವ ರೆಗೆ ಅವಕಾಶ ನೀಡಲಾಗಿತ್ತು. ಅರ್ಜಿ ಸಲ್ಲಿಕೆ ಅವಧಿ ವಿಸ್ತ ರಿಸುವಂತೆ ಸಮುದಾಯದಲ್ಲಿ ಒತ್ತಾಯ ಕೇಳಿಬಂದಿತ್ತು. ಹೀಗಾಗಿ ಮತ್ತೆ ಮೂರು ತಿಂಗಳು ಅವಧಿ ವಿಸ್ತರಿಸಲಾಗಿದೆ. 18 ವರ್ಷ ತುಂಬಿದ ಒಕ್ಕಲಿಗ ಸಮು ದಾಯದವರು ಆನ್ ಲೈನ್ ಮತ್ತು ಆಫ್ಲೈನ್ ಮೂಲಕ ಸದಸ್ಯತ್ವಕ್ಕಾಗಿ ಅರ್ಜಿ ಸಲ್ಲಿಸಬಹುದು ಎಂದು ಗುರುವಾರ ಹೇಳಿದರು.
ಹೊಸದಾಗಿ ಅಫ್ಲಿನ್ ಮೂಲಕ 49,522 ಮತ್ತು ಆನ್ಲೈನ್ ಮೂಲಕ 736 ಮಂದಿ ಅರ್ಜಿ ಸಲ್ಲಿಸಿದ್ದಾರೆ
`ನ.30 ಅರ್ಜಿ ಸಲ್ಲಿಕೆ ಕಡೆಯ ದಿನಾಂಕವಾಗಿದೆ. ಅರ್ಜಿ ಸಲ್ಲಿಕೆಗೆ 3 1,650 ಶುಲ್ಕ ನಿಗದಿಪಡಿಸಲಾಗಿದೆ. ವಿವರಕ್ಕೆ www.rvsmembership.in ಗೆ ಭೇಟಿ ನೀಡಿ’ ಎಂದು ಹೇಳಿದರು.