ಗ್ರಾಹಕರಿಗೆ ಗುಡ್ ನ್ಯೂಸ್..!
– ಕರ್ನಾಟಕದ ವೈರಲ್ ಸ್ಟಾರ್ ಬೆಳ್ಳುಳ್ಳಿ ದರ ಇಳಿಕೆ
– ಮಧ್ಯಪ್ರದೇಶದಿಂದ ಪೂರೈಕೆ ಹೆಚ್ಚಳ : ಸಗಟು ಬೆಲೆಯಲ್ಲಿ ಇಳಿಕೆ
NAMMUR EXPRESS NEWS
ಬೆಂಗಳೂರು: ಮಾರುಕಟ್ಟೆಯಲ್ಲಿ ಏರಿಕೆಯ ಹಾದಿ ಹಿಡಿದಿದ್ದ ಬೆಳ್ಳುಳ್ಳಿ ಬೆಲೆ ಇಳಿಕೆಯಾಗತೊಡಗಿದೆ. ಮಧ್ಯಪ್ರದೇಶದಿಂದ ಪೂರೈಕೆ ಹೆಚ್ಚಾದ ಕಾರಣ ಸಗಟು ಬೆಲೆಯಲ್ಲಿ ಇಳಿಕೆಯಾಗಿದೆ. ಕಳೆದ ವರ್ಷ ಡಿಸೆಂಬರ್ ಎರಡನೇ ವಾರದಲ್ಲಿ, ಈ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಬೆಳ್ಳುಳ್ಳಿ ಬೆಲೆ ಗಮನಾರ್ಹವಾಗಿ ಹೆಚ್ಚಾಗಿತ್ತು. ನಾಟಿ ಬೆಳ್ಳುಳ್ಳಿ ಬೆಲೆ ಕೆಜಿಗೆ 500 ರೂ.ಗೆ ತಲುಪಿತ್ತು, ಹೈಬ್ರಿಡ್ ಬೆಳ್ಳುಳ್ಳಿ ಬೆಲೆ ಕೆಜಿಗೆ 450 ರೂ.ವರೆಗೂ ಮಾರಾಟವಾಗಿತ್ತು. ಇದೀಗ ಬೆಲೆ ಕುಸಿದಿದ್ದು, ಯಶವಂತಪುರ ಎಪಿಎಂಸಿಯಲ್ಲಿ ಕೆಜಿಗೆ 70 ರಿಂದ 150 ರೂ.ಗೆ ಇಳಿದಿದೆ. ಉತ್ತಮ ಗುಣಮಟ್ಟದ ಬೆಳ್ಳುಳ್ಳಿಯ ಪ್ರತಿ ಕಿಲೋಗ್ರಾಂಗೆ 150 ರೂ ಬೆಲೆ ಇದೆ. ಮಾರುಕಟ್ಟೆಯಲ್ಲಿ ಕೆಜಿಗೆ 250 ರೂ. ಬೆಲೆ ಇದೆ. ಕೆಲವು ವ್ಯಾಪಾರಿಗಳು ಕೆಜಿಗೆ 300 ರೂ. ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಈಗಾಗಲೇ ಕೊಯ್ದು ಮಧ್ಯಪ್ರದೇಶದಿಂದ ಹೆಚ್ಚಿನ ಪ್ರಮಾಣದಲ್ಲಿ ಬೆಳ್ಳುಳ್ಳಿ ಬಂದ ನಂತರ ಮುಂದಿನ ವಾರ ಬೆಳ್ಳುಳ್ಳಿಯ ಸಗಟು ಬೆಲೆ ಕೆಜಿಗೆ 100 ರಿಂದ 120 ರೂ.ಗೆ ಇಳಿಯಲಿದೆ.