ಬೇಳೂರು ಅಧಿಕಾರ ಸ್ವೀಕಾರ ಸಂಭ್ರಮ!
– ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷರಾಗಿ ಅಧಿಕಾರ
– ಆರ್.ಎಂ, ಕಿಮ್ಮನೆ, ಶ್ರೀಕಾಂತ್ ಸೇರಿ ಗಣ್ಯರ ಭೇಟಿ: ಶುಭಾಶಯ
NAMMUR EXPRESS NEWS
ಬೆಂಗಳೂರು: ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷರಾಗಿ ಸಾಗರ ಕ್ಷೇತ್ರದ ಜನಪ್ರಿಯ ಶಾಸಕರಾದ ಬೇಳೂರು ಗೋಪಾಲಕೃಷ್ಣ ಅವರು ಶುಕ್ರವಾರ ಬೆಂಗಳೂರಿನ ಮಲ್ಲೇಶ್ವರಂ ವನವಿಕಾಸ ಕಛೇರಿಯಲ್ಲಿ ಅಧಿಕಾರ ಸ್ವೀಕರಿಸಿದರು. ಶಿವಮೊಗ್ಗ ಜಿಲ್ಲೆಯ ಡೈನಾಮಿಕ್ ನಾಯಕರಲ್ಲಿ ಒಬ್ಬರಾದ ಬೇಳೂರು ಗೋಪಾಲಕೃಷ್ಣ ಅವರಿಗೆ ಸಿಎಂ, ಡಿಸಿಎಂ ಸೇರಿ ಅನೇಕ ರಾಜ್ಯ ನಾಯಕರು ಶುಭ ಕೋರಿದ್ದಾರೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಡಾ ಆರ್ ಎಂ ಮಂಜುನಾಥಗೌಡ, ಎಂ ಶ್ರೀಕಾಂತ್, ಹಮೀದ್ ಪಾಳ್ಯ ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ಕುರುವಳ್ಳಿ ನಾಗರಾಜ್ ಸುಕೇಶ್ ಕೊಣಂದೂರು, ಕುಮಾರಸ್ವಾಮಿ ಜಾವಗಲ್, ಲೋಕೇಶ್ ಕರಕುಚ್ಚಿ ಕಚೇರಿಗೆ ತೆರಳಿ ಶುಭಾಶಯಗಳು ಕೋರಿ ಗೌರವಿಸಿದರು.
ಕಿಮ್ಮನೆ ಭೇಟಿ: ಅಭಿನಂದನೆ
ಸಾಗರ ಶಾಸಕರಿಗೆ ನೂತನ ಕಚೇರಿಯಲ್ಲಿ ಅಧಿಕಾರ ಸ್ವೀಕಾರ ವೇಳೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮತ್ತು ಪ್ರಮುಖರಾದ ಅಮ್ರಪಾಲಿ ಸುರೇಶ,ಮುಡುಬ ರಾಘವೇಂದ್ರ, ಅಮರನಾಥ ಶೆಟ್ಟಿ, ವಿಜಯಕುಮಾರ್, ಚಂದ್ರ ಮೌಳಿ, ವಿನಯ್ ಸೇರಿದಂತೆ ಹಲವರು ಇದ್ದರು.