ಗೃಹಜ್ಯೋತಿ ಅರ್ಜಿ ನೋಂದಣಿಗೆ ಹೊಸ ಲಿಂಕ್!
– ಒಂದೇ ನಿಮಿಷದಲ್ಲಿ ಅರ್ಜಿ ಹಾಕಬಹುದು
– ಏನಿದು ಹೊಸ ಲಿಂಕ್ ಇಲ್ಲಿದೆ ಮಾಹಿತಿ!
NAMMUR EXPRESS NEWS
ಬೆಂಗಳೂರು: ಗೃಹ ಜ್ಯೋತಿ ಅರ್ಜಿ ನೋಂದಣಿ ವಿಳಂಬವನ್ನು ಮನಗಂಡ ಸರ್ಕಾರ ಕೊನೆಗೂ ಹೊಸ ಲಿಂಕ್ ಬಿಟ್ಟು ಜನರ ಪರ ನಿಂತಿದೆ ಮೊದಲು ಬೆಂಗಳೂರು ಒನ್ ಕೇಂದ್ರಗಳಲ್ಲಿ ಜಾರಿ ಮಾಡಿದ್ದು ಬೆಂಗಳೂರು ಒನ್ ಕೇಂದ್ರಗಳಿಗೆ ಈಗ ಹೊಸ ಲಿಂಕ್ ಲಭ್ಯವಾಗಿದೆ. ಕೇವಲ ಒಂದೇ ನಿಮಿಷದಲ್ಲಿ ಈಗ ಗೃಹಜ್ಯೋತಿ ನೋಂದಣಿ ಮಾಡಬಹುದಾಗಿದೆ.
ಕರ್ನಾಟಕ ಒನ್, ಗ್ರಾಮ ಒನ್, ಬೆಂಗಳೂರು ಒನ್ ಗಳಿಗೆ ಮಾತ್ರ ಲಿಂಕ್ ಕೊಡಲಾಗಿದೆ. ಹಾಗಾಗಿ ಅದು ಸ್ಪೀಡ್ ವರ್ಕ್ ಆಗುತ್ತಿದೆ. ಇನ್ನು ಹೊರಗಡೆ ಯಾರಿಗೂ ಲಿಂಕ್ ನೀಡದಿರಲು ಸರ್ಕಾರ ನಿರ್ಧಾರ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಗೆ ಭಾನುವಾರದಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ.
ಆದರೆ, ಆರಂಭದಲ್ಲಿಯೇ ವಿಘ್ನ ಎಂಬಂತೆ 200 ಯೂನಿಟ್ವರೆಗೂ ಉಚಿತ ವಿದ್ಯುತ್ ಪಡೆಯಲು ಸೇವಾಸಿಂಧು ಪೋರ್ಟಲ್ ಸಮಸ್ಯೆ ಹಾಗೂ ಸರ್ವರ್ ಸಮಸ್ಯೆಯಿಂದ ಜನರು ಪರದಾಡುವಂತಾಗಿದೆ. ಭಾನುವಾರ ಪೂರ್ತಿ ಇದ್ದ ಸರ್ವರ್ ಸಮಸ್ಯೆ ಸೋಮವಾರ ಕೂಡ ಮುಂದುವರಿದಿದ್ದು, ಇದೀಗ ಸರ್ಕಾರ ಸರ್ವರ್ ಸಮಸ್ಯೆಗೆ ಹೊಸ ಲಿಂಕ್ ಬಿಟ್ಟಿದೆ.
ಶೀಘ್ರದಲ್ಲಿ ಎಲ್ಲಾ ಕಡೆ ವಿಸ್ತರಣೆ ಮಾಡುವ ಸಾಧ್ಯತೆ ಇದೆ.
HOW TO APPLY : NEET-UG COUNSELLING 2023