ಡಿ-ಬಾಸ್ ಗೆ ಹುಟ್ಟು ಹಬ್ಬದ ಸಂಭ್ರಮ
– ಮನೆಯ ಮುಂದೆ ಅಭಿಮಾನಿಗಳ ಸಾಗರ
– ದರ್ಶನ್ ಗೆ ಸಿಗ್ತು ಮಗನ ಅಪ್ಪುಗೆ
– ಅಭಿಮಾನಿಗಳ ಅಭಿಮಾನಕ್ಕೆ ದರ್ಶನ್ ಹರ್ಷ!
NAMMUR EXPRESS NEWS
ಬೆಂಗಳೂರು: ಒಂದು ಕಡೆ “ಕಾಟೇರ ಸೂಪರ್ ಹಿಟ್. ಮತ್ತೊಂದು ಕಡೆ ಬರ್ತಡೇ, ಇನ್ನೊಂದು ಕಡೆ ಅಭಿಮಾನಿಗಳ ಪಾಲಿನ ಡಿಬಾಸ್ ಚಿತ್ರರಂಗಕ್ಕೆ ಬಂದು 25 ವರ್ಷ… ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಸಂಭ್ರಮಿಸಲು ಇದಕ್ಕಿಂತ ಹೆಚ್ಚು ಕಾರಣ ಬೇಕಿಲ್ಲ ಆದರೆ, ಇಂದು “ಸೆಲೆಬ್ರೆಟಿಗಳ ಸಂಭ್ರಮಕ್ಕೆ ಮೂಲ ಕಾರಣ, ನಟ ದರ್ಶನ್ ಅವರ ಹುಟ್ಟುಹಬ್ಬ. ಅಭಿಮಾನಿಗಳನ್ನು ಸೆಲೆಬ್ರೆಟಿಗಳು ಎಂದು ಕರೆದು, ಅವರಿಗೆ ತಮ್ಮ ಜೀವನದಲ್ಲಿ ವಿಶೇಷ ಪ್ರಾಮುಖ್ಯತೆ ನೀಡುತ್ತಲೇ ಬರುತ್ತಿರುವ ನಟ ದರ್ಶನ್ ಇಂದು ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಲಿದ್ದಾರೆ.
ಆದರೆ, ಈ ಹಿಂದಿನಂತೆ ಕೇಕ್, ಹಾರ ಬದಲು ಅಭಿಮಾನಿಗಳು ಪ್ರೀತಿಯಿಂದ ನೀಡಿದ ದವಸ, ಧಾನ್ಯ, ಆಹಾರ ಪದಾರ್ಥಗಳನ್ನು ಅನಾಥಶ್ರಮ, ವೃದ್ಧಾಶ್ರಮಗಳಿಗೆ ತಲುಪಿಸುವುದಾಗಿ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ತಮ್ಮ ಪ್ರೀತಿಯ ಡಿ ಬಾಸ್ ಬರ್ತ್ಡೇ ಹಿನ್ನೆಲೆಯಲ್ಲಿ ಅಕ್ಕಿ, ಬೇಳೆಗಳನ್ನು ನೀಡುತ್ತಿದ್ದಾರೆ.ಸೋಲು-ಗೆಲುವು ಮತ್ತು ದರ್ಶನ್ ಒಲವು ಇವತ್ತು ದರ್ಶನ್ ಅವರಿಗೆ ಅಭಿಮಾನಿಗಳು ಇಷ್ಟೊಂದು ಪ್ರೀತಿ ತೋರಿ ಸಲು ಕಾರಣ ಅವರ ಪಾಲಿಸಿ ಕೊಂಡು ಬಂದ ಸಿದ್ಧಾಂತ. ಅದು ಸೋತಾಗ ಕುಗ್ಗದೇ, ಗೆದ್ದಾಗ ಹಿಗ್ಗದೇ ಸಮಚಿತ್ತವಾಗಿ ನಡೆದುಕೊಂಡು ಬಂದಿರುವುದು.
ದರ್ಶನ್ ತಮ್ಮ ಸಿನಿಮಾ ಕೆರಿಯರ್ನಲ್ಲಿ ಹಲವು ಸೂಪರ್ ಹಿಟ್ಗಳನ್ನು ನೋಡಿದ್ದಾರೆ. ಅದೇ ತರಹ ನಿರೀಕ್ಷಿತ ಮಟ್ಟ ತಲುಪದ ಸಿನಿಮಾಗಳು ಅವರ ಕೆರಿಯರ್ನಲ್ಲಿವೆ. ಆದರೆ, ದರ್ಶನ್ ಮಾತ್ರ ಸೋಲು-ಗೆಲುವನ್ನು ಖುಷಿ, ಬೇಸರವನ್ನು ಸಮಚಿತ್ತವಾಗಿ ತಗೊಂಡು, ತಮ್ಮ ಮೂಲವ್ಯಕ್ತಿತ್ವದೊಂದಿಗೆ ಸಾಗಿಬರುತ್ತಿ ರುವುದು ಅಭಿಮಾನಿಗಳ ಪ್ರೀತಿಗೆ ಮತ್ತೊಂದು ಕಾರಣ. ತಮ್ಮ 25 ವರ್ಷದ ಸಿನಿಮಾ ಕೆರಿಯರ್ ನಲ್ಲಿ ನಾಯಕ ನಟರಾಗಿ 56 ಸಿನಿಮಾಗಳನ್ನು ಪೂರೈಸಿರುವ ದರ್ಶನ್ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಸದ್ಯ “ಡೆವಿಲ್ ಸಿನಿಮಾದ ಚಿತ್ರೀಕರಣಕ್ಕೆ ದರ್ಶನ್ ಸಿದ್ಧರಾಗಿದ್ದಾರೆ. ಮಿಲನಾ ಪ್ರಕಾಶ್ ನಿರ್ದೇಶನದಲ್ಲಿ “ಡೆವಿಲ್ ಚಿತ್ರ ತಯಾರಾಗುತ್ತಿದ್ದು, ದರ್ಶನ್ ಹಾಗೂ ಪ್ರಕಾಶ್ ಕಾಂಬಿನೇಶನ್ನಲ್ಲಿ ಬರುತ್ತಿರುವ ಎರಡನೇ ಚಿತ್ರವಿದು. ಈ ಹಿಂದೆ “ತಾರಕ್ ಚಿತ್ರ ಬಂದಿತ್ತು.
ಇತ್ತೀಚಿನ ವರ್ಷಗಳಲ್ಲಿ ದೊಡ್ಡ ಗೆಲುವಿಗಾಗಿ ಕನ್ನಡ ಚಿತ್ರರಂಗ ಎದುರು ನೋಡುತ್ತಿತ್ತು. ಅದರಲ್ಲೂ 2023ರಲ್ಲಿ ಹೇಳಿಕೊಳ್ಳುವಂತಹ ಹಿಟ್ ಸಿಕ್ಕಿರಲಿಲ್ಲ. ಇಂತಹ ಸಮಯದಲ್ಲಿ ವರ್ಷದ ಕೊನೆಗೆ ಬಂದ “ಕಾಟೇರ’ ಚಿತ್ರ ಸೂಪರ್ ಹಿಟ್ ಆಗಿ. ಇಡೀ ಚಿತ್ರರಂಗಕ್ಕೆ ಬೂಸ್ಟರ್ ಡೋಸ್ ಆಗಿದ್ದು ಸುಳ್ಳಲ್ಲ. ಕೇವಲ ಕನ್ನಡದಲ್ಲಷ್ಟೇ ಬಿಡುಗಡೆ ಯಾದ ಚಿತ್ರ. ತನ್ನ ಮುಂದೆ ಬಿಡುಗಡೆ ಯಾದ ಪರಭಾಷಾ ಚಿತ್ರಗಳನ್ನು ಲೆಕ್ಕಿಸದೇ ಭರ್ಜರಿ ಹವಾದೊಂದಿಗೆ ಮುಂದುವರೆಯಿತು. ಈ ಖುಷಿ ಇಡೀ ಚಿತ್ರರಂಗದ ಜೊತೆಗೆ ದರ್ಶನ್ ಅಭಿಮಾನಿಗಳಿಗಿದೆ. ಈ ಯಶಸ್ಸು ಕೂಡಾ ಈ ಬಾರಿಯ ದರ್ಶನ್ ಹುಟ್ಟುಹಬ್ಬಕ್ಕೆ ಹೆಚ್ಚಿನ ಮೆರುಗು ತಂದಿರೋದು ಸುಳ್ಳಲ್ಲ.
ಕನ್ನಡವೇ ಸತ್ಯ…
ಇತ್ತೀಚಿನ ವರ್ಷಗಳಲ್ಲಿ ಬೇರೆ ಬೇರೆ ನಟರು ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿದ್ದಾರೆ. ಪರಭಾಷೆಯಲ್ಲೂ ಮಿಂಚುವ ಕನಸು ಕಾಣುತ್ತಿದ್ದಾರೆ. ಆದರೆ, ದರ್ಶನ್ ಮಾತ್ರ ತಮ್ಮ ಮೊದಲ ಆಯ್ಕೆ ಯಾವತ್ತಿದ್ದರೂ ಕನ್ನಡ ಭಾಷೆಗೆ ಮತ್ತು ನಾವು ಮಾಡಿರೋದು ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ. ಕನ್ನಡ ಸಿನಿಮಾ ಎಂದು ಸ್ಪಷ್ಟವಾಗಿ ಹೇಳುತ್ತಲೇ ಬಂದಿದ್ದಾರೆ. ಈ ಮೂಲಕ ಕನ್ನಡ ಭಾಷೆ, ಕನ್ನಡ ಚಿತ್ರರಂಗ, ಕನ್ನಡ ನಿರ್ದೇಶಕ, ನಿರ್ಮಾಪಕರಿಗೆ ಮೊದಲ ಪ್ರಾಶಸ್ತ್ರ ಎಂದು ಸಾಬೀತು ಮಾಡಿದ್ದಾರೆ. ಜೊತೆಗೆ “ನನ್ನನ್ನು ನೀವು (ಕನ್ನಡಿಗರು) ತುಂಬಾ ಚೆನ್ನಾಗಿ ಇಟ್ಟಿದ್ದೀರಿ. ಲೂನಾದಲ್ಲಿ ಓಡಾಡುತ್ತಿದ್ದ ನನ್ನನ್ನು ಲ್ಯಾಂಬೋರ್ಗಿನಿಯಲ್ಲಿ ಓಡಾಡುವಂತೆ ಮಾಡಿದ್ದು ನೀವೇ’ ಎಂದು ಆಗಾಗ ಹೇಳುವ ಮೂಲಕ ದರ್ಶನ್ ಕನ್ನಡ ಚಿತ್ರರಂಗ ತನಗೆ ಎಲ್ಲವನ್ನು ಕೊಟ್ಟಿದೆ ಎಂದು ಹೇಳುತ್ತಾರೆ.
ಮನೆಯ ಮುಂದೆ ಜನಸಾಗರ, ದಚ್ಚು ಬರ್ತ್ಡೇಯನ್ನು ಮದ್ಯ ರಾತ್ರಿಯಿಂದ ಸಂಭ್ರಮಿಸಿದ ಅಭಿಮಾನಿಗಳುಚಾಲೆಂಜಿಂಗ್ ಸ್ಟಾರ್ ದರ್ಶನ್ ಬರ್ತ್ಡೇ ಪ್ರಯುಕ್ತ ಬೆಂಗಳೂರಿನ ರಾಜರಾಜೇಶ್ವರಿ ನಗರದ ಮನೆಯಲ್ಲಿ ರಾತ್ರಿಯಿಂದಲೇ ಅಭಿಮಾನಿಗಳ ಸಂಭ್ರಮಾಚರಣೆ ಮುಂದುವರಿದಿದೆ. ನೆಚ್ಚಿನ ನಟನನ್ನು ನೋಡಲೆಂದೇ ರಾಜ್ಯದ ಬೇರೆ ಬೇರೆ ಕಡೆಗಳಿಂದ ಸಾವಿರಾರು ಮಂದಿ ಫ್ಯಾನ್ಸ್ ಆಗಮಿಸಿದ್ದರು. ಎಲ್ಲರನ್ನೂ ಭೇಟಿಯಾಗಿ ಅವರ ಆಶೀರ್ವಾದ ಪಡೆದಿದ್ದಾರೆ ದರ್ಶನ್. ಹ್ಯಾಪಿ ಬರ್ತ್ಡೇ ಪಪ್ಪಾ ಎಂದು ಅಪ್ಪ ದರ್ಶನ್ಗೆ ಸಿಕ್ತು ಮಗನ ಅಪ್ಪುಗೆ ,ಮಧ್ಯರಾತ್ರಿಯೇ ಹಬ್ಬ ಮಾಡಿದ ಡಿಬಾಸ್ ಫ್ಯಾನ್ಸ್ ಆರ್ಆರ್ ನಗರದ ಮನೆ ಬಳಿ ದರ್ಶನ್ ಮನೆಯ ಮುಂದೆ ಅಭಿಮಾನಿಗಳ ಜನಸಾಗರ ಅಭಿಮಾನಿಗಳ ಸಂಭ್ರಮ ಕಣ್ತುಂಬಿಕೊಂಡ ಅಭಿಷೇಕ್ ಅಂಬರೀಶ್, ಧನ್ವೀರ್ ಗೌಡ, ವಿನೋದ್ ಪ್ರಭಾಕರ್.