ಕರ್ನಾಟಕದಲ್ಲಿ ಮಂಗನ ಜ್ವರ ಹೆಚ್ಚಳ..!
– ಭಾನುವಾರ ಒಂದೇ ದಿನ 11 ಜನರಿಗೆ ಪಾಸಿಟಿವ್!
– ತೀರ್ಥಹಳ್ಳಿಯಲ್ಲಿ 3 ಜನರಲ್ಲಿ ಕೆಎಫ್ ಡಿ ಸೋಂಕು ಪತ್ತೆ
NAMMUR EXPRESS NEWS
ಬೆಂಗಳೂರು: ರಾಜ್ಯದಲ್ಲಿ ಮಂಗನ ಖಾಯಿಲೆ ಸೋಂಕು ಪ್ರಕರಣ ಹೆಚ್ಚಾಗಿದ್ದು, ಭಾನುವಾರ ಒಂದೇ ದಿನದಲ್ಲಿ 11 ಜನರಿಗೆ ಪಾಸಿಟಿವ್ ವರದಿ ಬಂದಿದೆ. ಭಾನುವಾರ ಒಟ್ಟು 18 ಜನರ ರಕ್ತದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ರಾಜ್ಯದಲ್ಲಿ ಕೆಎಫ್ ಡಿ ಬಾಧಿತರ ಸಂಖ್ಯೆ ಒಟ್ಟು 68ಕ್ಕೆ ಏರಿಕೆ ಆಗಿದೆ. ರಾಜ್ಯದಲ್ಲಿ ಒಟ್ಟು 37 ಸಕ್ರಿಯ ಪ್ರಕರಣಗಳು ವರದಿ ಇದ್ದು, ತೀರ್ಥಹಳ್ಳಿಯಲ್ಲಿ 3, ಹೊಸನಗರದಲ್ಲಿ 8 ಜನರಲ್ಲಿ ಕೆಎಫ್ ಡಿ ಸೋಂಕು ದೃಢವಾಗಿದೆ. ಪಾಸಿಟಿವ್ ಇರುವ ಸೋಂಕಿತರ ಆರೋಗ್ಯ ಸ್ಥಿರವಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.