- ಪ್ರಾರಂಭದಲ್ಲಿ “0” ಇನ್ಮುಂದೆ ಕಡ್ಡಾಯ.
ನವ ದೆಹಲಿ: ನೀವು ಲ್ಯಾಂಡ್ಲೈನ್ ಫೆÇೀನ್ನಿಂದ ಯಾವುದೇ ಮೊಬೈಲ್ಗೆ ಕರೆ ಮಾಡಬೇಕಾದರೆ ಪ್ರಾರಂಭದಲ್ಲಿ “0” ಒತ್ತುವುದು ಇನ್ಮುಂದೆ ಕಡ್ಡಾಯ. ಈ ಹೊಸ ನಿಯಮ ಜನವರಿ 1ರಿಂದಲೇ ಜಾರಿಗೆ ಬರಲಿದೆ.
ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರವು ಲ್ಯಾಂಡ್ಲೈನ್ನಿಂದ ಮೊಬೈಲ್ಗೆ ಕರೆ ಮಾಡುವ ಮುನ್ನ “0” ಅನ್ನು ಡಯಲ್ ಮಾಡಬೇಕು ಎಂದು ಮೇ.29ರಂದು ದೂರಸಂಪರ್ಕ ಸಚಿವಾಲಯಕ್ಕೆ ಶಿಫಾರಸ್ಸು ಮಾಡಿತ್ತು. ನ.20ರಂದು ಸುತ್ತೋಲೆ ಹೊರಡಿಸಿದ ಟ್ರಾಯ್ ಈ ಶಿಫಾರಸ್ಸನ್ನು ಜಾರಿಗೆ ತರುವುದಾಗಿ ತಿಳಿಸಿದೆ.
ಗ್ರಾಹಕರು ಪ್ರಾರಂಭದಲ್ಲಿ “0” ಸಂಖ್ಯೆಯನ್ನು ಒತ್ತದೇ ಕರೆ ಮಾಡಿದ್ದಲ್ಲಿ ರೆಕಾರ್ಡ್ ಮೂಲಕ “0” ಅನ್ನು ಒತ್ತುವಂತೆ ಮಾಹಿತಿ ನೀಡಬೇಕು ಎಂದು ಕಂಪೆನಿಗಳಿಗೆ ಸೂಚನೆ ನೀಡಲಾಗಿದೆ.
ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಸದ್ಯಕ್ಕೆ 11 ಅಂಕೆಗಳಿಗೆ ಮೊಬೈಲ್ ಸಂಖ್ಯೆಯನ್ನು ಏರಿಸುವಂತ ಯಾವುದೇ ರೀತಿಯಾದ ತೀರ್ಮಾನ ತೆಗೆದುಕೊಂಡಿಲ್ಲ ಎಂದು ತಿಳಿಸಿತ್ತು.