ಮಂಜುಶ್ರೀ ಹಿಟ್ ಚೆಕ್ ಕಂಪನಿ ಪ್ರಕಟಣೆ
ಬ್ಯಾಂಕಿಗೆ ಕಟ್ಟಲು ಕೊಟ್ಟ 5.6 ಲಕ್ಷ ಹಣ ಕದ್ದು ಪರಾರಿ
ನವೀನ್ ಎಂಬಾತ ಕಂಡಲ್ಲಿ ಮಾಹಿತಿ ನೀಡುವಂತೆ ಮನವಿ
ಬೆಂಗಳೂರಿನ ಪೀಣ್ಯದಲ್ಲಿರುವ ಮಂಜುಶ್ರೀ ಹಿಟ್ ಚೆಕ್ ಎಂಬ ಕಂಪನಿಯಲ್ಲಿ ನವೀನ್ ಎಂಬಾತ ಸುಮಾರು 3 ವರ್ಷಗಳ ಹಿಂದೆ ಏಜನ್ಸಿಯಿಂದ ಸೆಕ್ಯೂರಿಟಿ ಕೆಲಸ ಮಾಡಲು ಬಂದಿದ್ದು ನಂತರ ಒಂದು ವರ್ಷದಲ್ಲಿ ಕಂಪನಿಯಲ್ಲಿ ಡೈರೆಕ್ಟಾಗಿ ಸೆಕ್ಯೂರಿಟಿ ಕೆಲಸ ಮತ್ತು ಆಫೀಸ್ ಬಾಯ್ ಆಗಿ ಕೆಲಸ ಮಾಡುತ್ತಿದ್ದು ದಿನಾಂಕ -28/10/2024 ರಂದು ಕೆನರಾ ಬ್ಯಾಂಕ್ ಹೋಗಿ ಹಣ ಠೇವಣಿ ಮಾಡಲು 5 ಲಕ್ಷ ಹಣವನ್ನು ನೀಡಿದ್ದು ಮತ್ತು ಆದೆ ಬ್ಯಾಂಕ್ ಖಾತೆಯಿಂದ ಅರವತ್ತು ಸಾವಿರ ರೂಗಳನ್ನ ಡ್ರಾ ಮಾಡಿಕೊಂಡು ಬರುವಂತೆ ಚೆಕ್ ನೀಡಿದ್ದು ನಂತರ ಬ್ಯಾಂಕ್ ಗೆ ಹೋಗಿ 60 ಸಾವಿರ ರೂಗಳನ್ನ ಡ್ರಾ ಮಾಡಿಕೊಂಡು ಮತ್ತು ಜಮಾ ಮಾಡಲು ಕೊಟ್ಟಿದ್ದ 5 ಲಕ್ಷ ಹಣವನ್ನು ಸಹ ಜಮಾ ಮಾಡದೆ ಒಟ್ಟು ಐದು ಲಕ್ಷದ ಅರವತ್ತು ಸಾವಿರ ರೂಗಳನ್ನ ತೆಗೆದುಕೊಂಡು ಕದ್ದುಕೊಂಡು ಹೋಗಿದ್ದು ಈಗ ಯಾರ ಸಂಪರ್ಕಕ್ಕೆ ಸಿಗುತ್ತಿಲ್ಲ. ಆದ್ದರಿಂದ ಸದರಿ ವ್ಯಕ್ತಿಯನ್ನು ಯಾರಾದರೂ ನೋಡಿದಲ್ಲಿ ಕೆಳಕಂಡ ನಂಬರ್ ಸಂಪರ್ಕಿಸಿ ಮಾಹಿತಿ ನೀಡುವಂತೆ ಕಂಪನಿ ಮಾಲೀಕರು ಮನವಿ ಮಾಡಿದ್ದಾರೆ.
ಸಂಪರ್ಕಿಸಿ ಮಾಹಿತಿ ಕೊಡಿ: 9243458858, 9243407146