ಈರುಳ್ಳಿ ಈಗ ಕಣ್ಣೀರು ತರಿಸುತ್ತೆ!
– ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ದಿಢೀರ್ ಏರಿಕೆ
– ಬೆಳ್ಳುಳ್ಳಿ ಬಳಿಕ ಈರುಳ್ಳಿ ಏರಿಕೆ: ಜನರ ಜೇಬಿಗೆ ಕತ್ತರಿ!
NAMMUR EXPRESS NEWS
ಬೆಂಗಳೂರು: ಮಾರುಕಟ್ಟೆಯಲ್ಲಿ ಈರುಳ್ಳಿ ಧಾರಣೆ ಏಕಾಏಕಿ ಏರಿಕೆಯಾಗಿದ್ದು, ಗ್ರಾಹಕರಿಗೆ ಭರ್ಜರಿ ಶಾಕ್ ನೀಡಿದೆ. ಪ್ರಮುಖ ಆಹಾರ ಬೆಳೆ ಈರುಳ್ಳಿ ದಿನ ನಿತ್ಯ ಬಳಸಲೇಬೇಕಾದ ಆಹಾರ ಆಗಿದೆ. ಹೀಗಾಗಿ ಜನರ ಜೇಬಿಗೆ ಕತ್ತರಿ ಬೀಳಲಿದೆ. ಕೇಂದ್ರ ಸರ್ಕಾರ ಈರುಳ್ಳಿ ರಫ್ತು ನಿಷೇಧ ಹಿಂದಕ್ಕೆ ಪಡೆದ ಬೆನ್ನಿಗೇ ಈ ಬೆಳವಣಿಗೆ ನಡೆದಿದೆ. ದೇಶದ ಅತೀ ದೊಡ್ಡ ಈರುಳ್ಳಿ ಮಾರುಕಟ್ಟೆ ಲಾಸಲ್ ಗಾಂವ್ ಕೃಷಿ ಉತ್ಪಾದನಾ ಮಾರುಕಟ್ಟೆಯಲ್ಲಿ ಈರುಳ್ಳಿ ರಖಂ ಮಾರಾಟ ಬೆಲೆ ಶೇ.40ರಷ್ಟು ಏರಿಕೆ ದಾಖಲಿಸಿದೆ. ಈರುಳ್ಳಿ ಈಗ ಪ್ರತೀ ಕ್ವಿಂಟಾಲ್ ಬೆಲೆ 1,280 ರೂ.ಗಳಿಂದ 1,400 ರೂ.ಗೆ ಏರಿಕೆ ಕಂಡಿದ್ದು, ಕನಿಷ್ಠ ಬೆಲೆ 1 ಸಾವಿರ ರೂ. ಹಾಗೂ ಗರಿಷ್ಠ ಬೆಲೆ ಕ್ವಿಂಟಾಲ್ಗೆ 2,100 ರೂ.ಹೆಚ್ಚಳವಾಗಿದೆ. ಬೆಳ್ಳುಳ್ಳಿ ದರ ಏರಿಕೆಯಾಗಿದ್ದ ಬೆನ್ನಲ್ಲೇ ಇದೀಗ ಈರುಳ್ಳಿ ಬೆಲೆಯು ಏರಿಕೆಯಾಗಿರುವುದು ಗ್ರಾಹಕರಿಗೆ ಆತಂಕ ಉಂಟುಮಾಡಿದೆ.