1ರಿಂದ 10ನೇ ತರಗತಿ ಮಕ್ಕಳಿಗೆ ಶೂ ಭಾಗ್ಯ!
– ಮಕ್ಕಳ ಸುರಕ್ಷತೆಗೆ 125 ಕೋಟಿ ಬಿಡುಗಡೆ
– ಶೂ, ಸಾಕ್ಸ್ ಖರೀದಿಸಲು ಎಸ್ಡಿಎಂಸಿಗಳಿಗೆ ಸೂಚನೆ
– ಸಿಇಟಿ ಪಾಸ್ ಅದವರ ದಾಖಲೆ ಪರಿಶೀಲನೆ
NAMMUR EXPRESS NEWS
ಬೆಂಗಳೂರು: ರಾಜ್ಯದ ಸರಕಾರಿ ಶಾಲೆಗಳ 1ರಿಂದ 10ನೇ ತರಗತಿಯ ಮಕ್ಕಳಿಗೆ ಒಂದು ಜತೆ ಶೂ ಮತ್ತು 2 ಜತೆ ಸಾಕ್ಸ್ ಸಿಗಲಿದೆ.
ಶೂ ಹಾಗೂ ಸಾಕ್ಸ್ ಖರೀದಿಸಲು 2 ಶಾಲಾ ಶಿಕ್ಷಣ ಇಲಾಖೆಯು ಸಂಬಂಧಪಟ್ಟ ಶಾಲಾಭಿವೃದ್ಧಿ ಸಮಿತಿಗಳಿಗೆ ಸೂಚನೆ ನೀಡಿದೆ. ಖರೀದಿ ಪ್ರಕ್ರಿಯೆಗೆ 125 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವಂತೆ ಸೂಚಿಸಲಾಗಿದೆ. ಇದರಲ್ಲಿ ಕೆ-2: ಮುಖಾಂತರ 90, 70 ಕೋಟಿ ರೂ. ಗಳನ್ನು ಬಿಡುಗಡೆ ಮಾಡಲಾಗಿದೆ ಇಲಾಖೆ ಆಯುಕ್ತರು ತಿಳಿಸಿದ್ದಾರೆ.
ಸಿಇಟಿ ದಾಖಲೆ ಆನ್ಲೈನ್ ಪರಿಶೀಲನೆ: ವೃತ್ತಿಪರ ಕೋರ್ಸ್ಗಳ ಪ್ರವೇಶ ಬಯಸಿ ಸಿಇಟಿ ಪರೀಕ್ಷೆ ಬರೆದು ವಿವಿಧ ರಾಂಕ್ ಪಡೆದದು ಎ ಅರ್ಹತೆ ಕ್ಲೇಮ್ ಮಾಡಿರುವ ಅಭ್ಯರ್ಥಿಗಳ ದಾಖಲಾತಿಗಳ ಆನ್ಲೈನ್ ಪರಿಶೀಲನೆ ಜೂ. 27ರಿಂದ ಜು.15ರ ವರೆಗೆ ನಡೆಯಲಿದೆ. ಅಭ್ಯರ್ಥಿಗಳು ಇದಕ್ಕಾಗಿ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಹಾಜರಾಗಬೇಕು. ಹೆಚ್ಚಿನ ವಿವರಗಳಿಗೆ ಪ್ರಾಧಿಕಾರದ ವೆಬ್ಸೈಟ್ ನೋಡುವಂತೆ ಕರ್ಣಾಟಕ ಪರೀಕ್ಷಾ ಪ್ರದಿಕರ ತಿಳಿಸಿದೆ.
ಇದನ್ನೂ ಓದಿ : ಗೃಹಜ್ಯೋತಿ ಅರ್ಜಿ ನೋಂದಣಿಗೆ ಹೊಸ ಲಿಂಕ್!
HOW TO APPLY : NEET-UG COUNSELLING 2023