ಮಂಗಳವಾರ ಬರಲಿದೆ ಸ್ಪಂದನಾ ಪಾರ್ಥಿವ ಶರೀರ?
– ವಿಜಯ ರಾಘವೇಂದ್ರ ಕುಟುಂಬದಲ್ಲಿ ಕಣ್ಣೀರು
– ಬೆಂಗಳೂರು, ಬೆಳ್ತಂಗಡಿ ಮನೆಗಳಲ್ಲಿ ನೀರವ ಮೌನ
NAMMUR EXPRESS NEWS
ಬೆಂಗಳೂರು/ಮಂಗಳೂರು: ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಹೃದಯಾಘಾತದಿಂದ ನಿಧನರಾಗಿದ್ದು ಇಡೀ ನಾಡು ಕಂಬನಿ ಮಿಡಿಯುತ್ತಿದೆ. ಸಿನಿಮಾ ರಂಗ ಮಾತ್ರವಲ್ಲದೆ ಜನರು ಕೂಡ ಸಂತಾಪ ವ್ಯಕ್ತಪಡಿಸುತ್ತಿದ್ದಾರೆ. ಮಂಗಳವಾರ ಬೆಂಗಳೂರಿಗೆ ಸ್ಪಂದನಾ ಪಾರ್ಥಿವ ಶರೀರ ಬರಲಿದೆ. ಎಂದು ಮೂಲಗಳು ತಿಳಿಸಿವೆ. ಸ್ಪಂದನಾ ಹಿರಿಯ ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ ಶಿವರಾಮ್ ಅವರ ಪುತ್ರಿ. ಆಗಸ್ಟ್ 26 -2007 ರಂದು ವಿಜಯರಾಘವೇಂದ್ರ ಅವರನ್ನು ವಿವಾಹವಾಗಿದ್ದರು. ಇವರಿಗೆ ಶೌರ್ಯ ಎಂಬ ಪುತ್ರನಿದ್ದಾನೆ. ಇನ್ನು ಸ್ಪಂದನಾ ಸಹೋದರ ರಕ್ಷಿತ್ ಶಿವರಾಂ ಈ ಬಾರಿ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು.
ಅತ್ತಿಗೆ ಸಾವಿಗೆ ಕಂಬನಿ ಮಿಡಿದ ಶ್ರೀಮುರಳಿ
ಅತ್ತಿಗೆ ಸ್ಪಂದನಾ ಸಾವಿಗೆ ನಟ ಶ್ರೀಮುರಳಿ ಕಂಬನಿ ಮಿಡಿದಿದ್ದಾರೆ. ಈ ಬಗ್ಗೆ ಶ್ರೀಮುರಳಿ ಮಾತನಾಡಿ ನಿಧನವಾಗಿದ್ದನ್ನ ಅಣ್ಣ ಫೋನ್ ಮಾಡಿ ಹೇಳಿದರು, ಹೋಟೆಲ್ನಲ್ಲಿ ಮಲಗಿದ್ದಾಗಲೇ ನಿಧನರಾಗಿದ್ದಾರೆ. ಲೋ ಬಿಪಿಯಿಂದ ಈ ರೀತಿ ಆಗಿರಬಹುದು ಎಂದು ಬಿ.ಕೆ ಶಿವರಾಂ ನಿವಾಸದ ಬಳಿ ಕಣ್ಣೀರು ಹಾಕಿದ್ದಾರೆ. ಸ್ಪಂದನಾ ರವಿಚಂದ್ರನ್ ಅವರ ಅಪೂರ್ವ ಸಿನಿಮಾದಲ್ಲಿ ನಟಿಸಿದ್ದರು. ವಿಜಯ್ ಅಭಿನಯದ ಕಿಸ್ಮತ್ ಸಿನಿಮಾವನ್ನು ಸ್ಪಂದನಾ ನಿರ್ಮಿಸಿದ್ದರು. ಮಂಗಳವಾರ ಬೆಂಗಳೂರಿಗೆ ಸ್ಪಂದನಾ ಪಾರ್ಥೀವ ಶರೀರ ರವಾನೆಯಾಗಲಿದೆ. ಸ್ಪಂದನಾ ಮೃತದೇಹ ಭಾರತಕ್ಕೆ ಕರೆತರುವ ಬಗ್ಗೆ ಥೈಲ್ಯಾಂಡ್ ಸರ್ಕಾರದ ಜೊತೆ ಕೇಂದ್ರ ಸರ್ಕಾರ ಮಾತುಕತೆ ನಡೆಸಲಿದೆ. ಈ ಬಗ್ಗೆ ಹರಿಪ್ರಸಾದ್ ವಿದೇಶಾಂಗ ಸಚಿವ ಜೈಶಂಕರ್
ಜೊತೆ ಮಾತುಕತೆ ನಡೆಸಿದ್ದಾರೆ.
ಎರಡು ಕುಟುಂಬ ಬ್ಯಾಂಕಾಕ್ಗೆ ಪಯಣ!
ವಿಷಯ ತಿಳಿಯುತ್ತಿದ್ದಂತೆ ವಿಜಯ ರಾಘವೇಂದ್ರ, ಸ್ಪಂದನಾ ತಂದೆ ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ. ಶಿವರಾಂ ಸೇರಿದಂತೆ ಕುಟುಂಬಸ್ಥರು ಬ್ಯಾಂಕಾಕ್ಗೆ ತೆರಳಿದ್ದಾರೆ. ಸ್ಪಂದನ ಮಂಗಳೂರಿನ ವಿಮಾನ ನಿಲ್ದಾಣದ ಮೂಲಕ ಶನಿವಾರ ಬ್ಯಾಂಕಾಕ್ ಗೆ ತೆರಳಿದ್ದರು. ಭಾನುವಾರ ಸ್ಪಂದನಾ ಅವರಿಗೆ ಹೃದಯಾಘಾತವಾಗಿ ಅಲ್ಲಿನ ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿತ್ತು.ಆದರೇ ಚಿಕಿತ್ಸೆ ಫಲಕಾರಿಯಾಗದೇ ಸಾವು ಕಂಡಿದ್ದಾರೆ. ಅತ್ಯಂತ ಕ್ಯೂಟ್ ಜೋಡಿಯಾಗಿದ್ದ ವಿಜಯ ರಾಘವೇಂದ್ರ ಮತ್ತು ಸ್ಪಂದನಾ ಸಿನಿಮಾ ರಂಗದ ಜತೆಗೆ ಸಾಮಾಜಿಕ ಚಟುವಟಿಕೆಯಲ್ಲೂ ತೊಡಗಿಸಿಕೊಂಡಿದ್ದರು.
ಬೆಂಗಳೂರು, ಬೆಳ್ತಂಗಡಿ ಮನೆಗಳಲ್ಲಿ ನೀರವ ಮೌನ
ಸ್ಪಂದನಾ ಅವರ ಬೆಂಗಳೂರು ಮತ್ತು ಬೆಳ್ತಂಗಡಿ ಮನೆಗಳಲ್ಲಿ ನೀರವ ಮೌನ ಆವರಿಸಿದೆ. ಎಲ್ಲೆಡೆ ಕುಟುಂಬದವರು, ಸ್ನೇಹಿತರು ಕಣ್ಣೀರು ಹಾಕುತ್ತಿದ್ದಾರೆ. ಇಡೀ ನಾಡಿನ ಎಲ್ಲರಲ್ಲೂ ಸಂತಾಪ ವ್ಯಕ್ತವಾಗುತ್ತಿದೆ.ಸಾಮಾಜಿಕ ಜಾಲ ತಾಣದಲ್ಲಿ ಇಬ್ಬರ ಜೋಡಿಯ ಫೋಟೋಗಳು ಕಾಣಿಸಿವೆ.
ಇದನ್ನೂ ಓದಿ : ರೈತರಿಗೆ ಖುಷ್: ಕಾಳು ಮೆಣಸು ದರ ಏರಿಕೆ!
HOW TO APPLY : NEET-UG COUNSELLING 2023