ಬೆಂಗಳೂರು ಸೇರಿ ರಾಜ್ಯಾದ್ಯಂತ ಮೆಂಟಲ್ ಕ್ಲಿನಿಕ್..!
– ನಿಮ್ಹಾನ್ಸ್ನಲ್ಲಿ ಮೆದುಳಿನ ಚಿಕಿತ್ಸೆಗೆ ಕಭಿ ಯೋಜನೆ
– ತಲೆ ನೋವು, ಸ್ಟ್ರೋಕ್, ಸೇರಿದಂತೆ ನರರೋಗ ಸಮಸ್ಯೆಗಳಿಗೆ ಚಿಕಿತ್ಸೆ
NAMMUR EXPRESS NEWS
ಬೆಂಗಳೂರು: ನರರೋಗ ಸಮಸ್ಯೆ ಎಂದರೆ ತಕ್ಷಣಕ್ಕೆ ನೆನಪಾಗುವುದೇ ನಿಮ್ಹಾನ್ಸ್. ಬೆಂಗಳೂರಿನ ಪ್ರತಿಷ್ಠಿತ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ನುರಿತ ತಜ್ಞರಿದ್ದು, ಚಿಕಿತ್ಸೆ ಸಿಗುತ್ತದೆ ಎನ್ನುವ ಕಾರಣಕ್ಕೆ ಜನರು ನಿಮ್ಹಾನ್ಸ್ ಹೋಗ್ತಾರೆ. ಆದರೆ ಇನ್ಮುಂದೆ ಬೇರೊಂದು ಮಾರ್ಗವಿದೆ. ಸರ್ಕಾರ ಕಭಿ ಎನ್ನುವ ಹೊಸ ಪೈಲಟ್ ಪ್ರಾಜೆಕ್ಟ್ ಜಾರಿಗೆ ಮುಂದಾಗಿದೆ. ಅನೇಕರಿಗೆ ನ್ಯೂರಾಲಜಿ ರಿಲೇಟೆಡ್ ಸಮಸ್ಯೆಗಳಿದ್ದು ನಿಮ್ಹಾನ್ಸ್ಗೆ ಹೋಗುತ್ತಾರೆ. ಎಲ್ಲರೂ ಒಮ್ಮೇಲೆ ನಿಮ್ಹಾನ್ಸ್ಗೆ ಹೋದಾಗ ಚಿಕಿತ್ಸೆ ಸಿಗೋದಿಲ್ಲ. ಇದರಿಂದ ಅನೇಕರು ಪರದಾಡಿರುವ ಪ್ರಕರಣಗಳೂ ಇವೆ. ಇದನ್ನ ತಪ್ಪಿಸೋದಕ್ಕೆ ಸರ್ಕಾರ ಕಭಿ ಎನ್ನುವ ಹೊಸ ಪೈಲಟ್ ಪ್ರಾಜೆಕ್ಟ್ ಜಾರಿಗೆ ಮುಂದಾಗಿದೆ. ಕಭಿ ಎಂದರೇ ಕರ್ನಾಟಕ ಬೈನ್ ಹೆಲ್ತ್ ಇನಿಷಿಯೇಟಿವ್ ಎಂದು ವಿವರಿಸಲಾಗಿದೆ. ತಲೆ ನೋವು, ಸ್ಟ್ರೋಕ್, ಸೇರಿದಂತೆ ನರರೋಗ ಸಮಸ್ಯೆಗಳಿಗೆ ಚಿಕಿತ್ಸೆ: ಮೆದುಳಿನ ಆರೋಗ್ಯ, ಆರೈಕೆಗಾಗಿ ರಾಜಧಾನಿಯಲ್ಲಿ ವಿನೂತನ ಯೋಜನೆ ಜಾರಿಯಾಗುತ್ತಿದೆ.
ಆರೋಗ್ಯ ಇಲಾಖೆ, ನಿಮ್ಹಾನ್ಸ್ ಆಸ್ಪತ್ರೆ ಸಹಯೋಗದಲ್ಲಿ ದೇಶದಲ್ಲೇ ಮೊದಲ ಬಾರಿಗೆ ವಿನೂತನ ಯೋಜನೆ ಜಾರಿಗೆ ಮುಂದಾಗಿದೆ. ತಲೆ ನೋವು, ಸ್ಟ್ರೋಕ್ ಸೇರಿದಂತೆ ನರರೋಗ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಬೈನ್ ಹೆಲ್ತ್ ಕ್ಲಿನಿಕ್ ಸ್ಥಾಪನೆಗೆ ಆರೋಗ್ಯ ಇಲಾಖೆ ಮುಂದಾಗಿದೆ. ಕೆ.ಸಿ.ಜನರಲ್, ಜಯನಗರ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ: ಮೊದಲಿಗೆ ಬೆಂಗಳೂರಲ್ಲಿ ಆರಂಭ ಮಾಡಲಿದ್ದು, ಆ ಬಳಿಕ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಬೈನ್ ಹೆಲ್ತ್ ಕ್ಲಿನಿಕ್ ತೆರೆಯುವ ನಿರ್ಧಾರ ಮಾಡಲಾಗಿದೆ. ನಿಮ್ಹಾನ್ಸ್ ಆಸ್ಪತ್ರೆಯ ನ್ಯೂರಾಲಜಿ ಪ್ರೊಫೆಸರ್ ಡಾ.ಸುವರ್ಣ ಆಲಾಡಿ ಅವರ ಮುಂದಾಳತ್ವದಲ್ಲಿ ಈ ಸ್ಪೆಷಲ್ ಕ್ಲಿನಿಕ್ ತೆರೆಯಲಾಗ್ತಿದೆ. ಮೊದಲ ಹಂತದಲ್ಲಿ ಕೆ.ಸಿ.ಜನರಲ್ ಹಾಗೂ ಜಯನಗರ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಿದ್ದು, ನಿಮ್ಹಾನ್ಸ್ ವೈದ್ಯರು ನೇರವಾಗಿ ಆನ್ಲೈನ್ ಮೂಲಕ ಚಿಕಿತ್ಸೆ ನೀಡುವಂತೆ ವ್ಯವಸ್ಥೆ ಮಾಡಲಾಗ್ತಿದೆ.