ಕಾವೇರಿ ಸೇರಿ 12 ನದಿಗಳ ನೀರು ಕುಡಿಯಲು ಯೋಗ್ಯವಲ್ಲ!
– ನೀರನ್ನು ಶುದ್ಧೀಕರಿಸಿದ ನಂತರವೂ ಕುಡಿಯಲು ಯೋಗ್ಯವಲ್ಲ!
– ಭಯಾನಕ ಮಾಹಿತಿ ಬಿಚ್ಚಿಟ್ಟ SPCB ವರದಿ!
– SPCB ವರದಿಯ ಬಗ್ಗೆ ವಿವರ ಇಲ್ಲಿದೆ
NAMMUR EXPRESS NEWS
ಬೆಂಗಳೂರು: ಈ ಬಾರಿ ಮಳೆಯೂ ಕಡಿಮೆಯಿದ್ದು ಮೊದಲೇ ನೀರಿಗೆ ಅಭಾವವಿದೆ. ಬೇಸಿಗೆಯಲ್ಲಿ ಇನ್ನೂ ತೊಂದರೆಯಾಗಲಿದೆ. ಈ ಮಧ್ಯ ರಾಜ್ಯದ 12 ನದಿಗಳ ನೀರು ಕುಡಿಯಲು ಯೋಗ್ಯವಲ್ಲ ಎಂಬ ಸ್ಪೋಟಕ ವರದಿ ಬಹಿರಂಗವಾಗಿದೆ. ಕಾವೇರಿ, ಕೃಷ್ಣಸೇರಿದಂತೆ ರಾಜ್ಯದ ನದಿಗಳ ನೀರನ್ನು ಕುಡಿಯುವುದಕ್ಕೆ ಯೋಗ್ಯವಲ್ಲ ಎಂದು ರಾಜ್ಯ ಮಾಲಿನ ನಿಯಂತ್ರಣ ಮಂಡಳಿ 12 ನದಿಗಳ ವಿವಿಧ ಭಾಗಗಳ ನೀರು ಸಂಗ್ರಹಿಸಿ ಪರೀಕ್ಷೆ ನಡೆಸಿದಾಗ ತಿಳಿದು ಬಂದಿದೆ. ಏಕೆಂದರೆ, ಆ ನದಿಯ ನೀರನ್ನು ನೇರವಾಗಿ ಕುಡಿದರೆ ಗಂಟಲು, ಕಣ್ಣು ಸೇರಿದಂತೆ ದೇಹದ ಭಾಗಗಳಿಗೆ ಅಪಾಯ ಸಂಭವಿಸುವುದು ಖಚಿತವಾಗಿದೆ, ಈ 12 ನದಿಗಳ ನಿರ್ದಿಷ್ಟ ಸ್ಥಳದಲ್ಲಿ ನೀರು ಪರೀಕ್ಷೆ ನಡೆಸಿದಾಗ, ಆ ನೀರು ನಿಜಕ್ಕೂ ಆತಂಕ ಹುಟ್ಟಿಸುವಷ್ಟು ಕಲುಷಿತವಾಗಿ ಗೋಚರಿಸಿದೆ.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ರಾಜ್ಯದ ನದಿಗಳ ನೀರಿನ ಗುಣಮಟ್ಟದ ಕುರಿತಂತೆ ಕಾಲಕಾಲಕ್ಕೆ ಪರೀಕ್ಷೆ ನಡೆಸುತ್ತಿದೆ. ಮೇಲ್ವಿಚಾರಣಾ ಘಟಕ (ಮೊನಿಟ ರಿಂಗ್ ಸ್ಟೇಷನ್) ಗಳಲ್ಲಿ ನೀರು ಸಂಗ್ರಹಿಸಿ ಪರೀಕ್ಷೆಗೊಳಪಡಿಸಲಾಗಿದೆ. ಅದರಂತೆ ಕಳೆದ ನವೆಂಬರ್ನಲ್ಲಿ ನಡೆಸಲಾದ ಪರೀಕ್ಷೆಯ ವರದಿಯಂತೆ ರಾಜ್ಯದ 12 ನದಿಗೆ ನೀರು ಕುಡಿಯಲು ಯೋಗ್ಯವಲ್ಲ ಎಂಬ ವರದಿ ಬಂದಿದೆ. ಅದರಲ್ಲೂ ಲಕ್ಷ್ಮಣತೀರ್ಥ, ಆರ್ಕಾವತಿ, ಕಬಿನಿ, ತಿಂಷಾ ನದಿಗಳ ನೀರು ಶುದ್ದೀಕರಿಸಿದ ನಂತರವೂ ಕುಡಿಯಲು ಹಾಗೂ ಬಳಕೆಗೆ ಯೋಗ್ಯವಲ್ಲ ಎಂದು ತಿಳಿಸಲಾಗಿದೆ.
ಉಳಿದಂತೆ ನೇತ್ರಾವತಿ ನದಿ ನೀರನ್ನು ಶುದ್ದೀಕರಿಸಿ ಬಳಸಬಹುದೆಂದು ವರದಿಯಲ್ಲಿ ಹೇಳಲಾಗಿದೆ. ಅದರಲ್ಲಿ ಟೋಟಲ್ ಕ್ಲೋರೊಫಾರ್ಮ್ ಪ್ರಮಾಣ 100 ಎಂಎಲ್ ನೀರಿನಲ್ಲಿ 10 ಯುನಿಟ್ ಗಿಂತ ಕಡಿಮೆಯಿರಬೇಕು. ಆದರೆ, ಮಾಲಿನ್ಯ ನಿಯಂತ್ರಣ ಮಂಡಳಿಯ ಪರೀಕ್ಷಾ ವರದಿಯಲ್ಲಿ ಗಾಣಗಾಪುರ ಗ್ರಾಮದ ಬಳಿ ಸಂಗ್ರಹಿಸಲಾಗಿದೆ ಭೀಮ ನದಿ ನೀರಿನಲ್ಲಿ 2.80 ಲಕ್ಷ ಯೂನಿಟ್ ಇದೆ. 38 ಪರೀಕ್ಷಾ ಘಟಕಗಳಲ್ಲಿಯೂ ಟಿಸಿ ಪ್ರಮಾಣ ಭಾರೀಯಿದ್ದು, ಆ ನೀರನ್ನು ಸೇವಿಸಿದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಅದರಲ್ಲೂ ದೃಷ್ಟಿ ದೋಷ, ಗಂಟಲು, ಸಂಪರ್ಕ ಸಮಸ್ಯೆಗಳು ಕಂಡುಬರುವ ಸಾಧ್ಯತೆಗಳಿವೆ ಎಂದು ತಿಳಿಸಲಾಗಿದೆ.