ಜಲಪಾತ ಸಿನಿಮಾಕ್ಕೆ ವಿಜಯಪ್ರಕಾಶ್ ಎಂಟ್ರಿ!
– ಮಲೆನಾಡ ನಿರ್ದೇಶಕರು, ನಟ ನಟಿಯರ ಸಿನಿಮಾ
– ರವೀಂದ್ರ ತುಂಬರಮನೆ ನಿರ್ಮಾಣ, ರಮೇಶ್ ಬೇಗಾರ್ ನಿರ್ದೇಶನ
– ಸಾದ್ವಿನಿ ಕೊಪ್ಪ ಸಂಗೀತ ನಿರ್ದೇಶಕರಾಗಿ ಹೊಸ ಹೆಜ್ಜೆ
– ನಭಾ, ಸಂಗೀತಾ ಬಳಿಕ ಈಗ ಇನ್ನೊಬ್ಬಳು ಹೀರೋಯಿನ್
NAMMUR EXPRESS NEWS
ಬೆಂಗಳೂರು: ಮಲೆನಾಡ ಖ್ಯಾತ ಕಲಾವಿದ, ರಂಗಕರ್ಮಿ ಶೃಂಗೇರಿಯ ಬೇಗಾರು ರಮೇಶ್ ರಚಿಸಿ ನಿರ್ದೇಶನ ಮಾಡಿರುವ ಜಲಪಾತ ಸಿನಿಮಾ ಇದೀಗ ಕನ್ನಡ ಸಿನಿಮಾ ರಂಗದಲ್ಲಿ ಸದ್ದು ಮಾಡುತ್ತಿದೆ. ಇದೀಗ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಕೊಪ್ಪದ ಜೀ ಕನ್ನಡದ ಸರಿಗಮಪ ಖ್ಯಾತಿಯ ಸಾದ್ವಿನಿ ಕೊಪ್ಪ ಸಂಗೀತ ನಿರ್ದೇಶನ ಮಾಡಿರುವ ಬೇಗಾರ್ ರಮೇಶ್ ಸಾಹಿತ್ಯ ರಚಿಸಿದ ಹಾಡನ್ನು ಕನ್ನಡದ ಖ್ಯಾತ ಗಾಯಕ ವಿಜಯ ಪ್ರಕಾಶ್ ಹಾಡಲಿದ್ದಾರೆ. ತೀರ್ಥಹಳ್ಳಿ ಮೂಲದ ಉದ್ಯಮಿ ಇಂಡಸ್ ಹರ್ಬ್ಸ್ ಟಿ. ಸಿ ರವೀಂದ್ರ ತುಂಬರಮನೆ ಇವರು ನಿರ್ಮಿಸಿರುವ ಈ ಸಿನಿಮಾ ಈಗಾಗಲೇ ಹೊಸಬರ ಹಾಗೂ ವಿಭಿನ್ನ ಕಲಾವಿದರ ತಂಡದ ಮೂಲಕ ಹೆಸರು ಮಾಡಿದೆ. ಮಲೆನಾಡ ಖ್ಯಾತ ರಂಗಕರ್ಮಿ ರಮೇಶ್ ಬೇಗಾರ್ ರಚಿಸಿ ನಿರ್ದೇಶಿಸುತ್ತಿರುವ “ಜಲಪಾತ ” ಸಿನಿಮಾಕ್ಕೆ ದೇಶದ ಸುಪ್ರಸಿದ್ಧ ಗಾಯಕ ವಿಜಯಪ್ರಕಾಶ್ “ಎದೆಯ ದನಿಯ ಹಾಡು ಕೇಳು…” ಎಂಬ ಥೀಮ್ ಸಾಂಗ್ ನ್ನು ಹಾಡಿದ್ದಾರೆ.
ಕನ್ನಡದ ಖ್ಯಾತ ನಟರ ನಟನೆ
ಕಿರಿಕ್ ಪಾರ್ಟಿ, ಕಾಂತಾರ ಖ್ಯಾತಿಯ ನಟ ಪ್ರಮೋದ್ ಶೆಟ್ಟಿ ವಿಭಿನ್ನವಾದ ಪಾತ್ರವೊಂದರಲ್ಲಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪದವಿ ಪೂರ್ವ ಸಿನಿಮಾ ಖ್ಯಾತಿಯ ರಜನೀಶ್ ಎಂ ನಾಯಕ ನಟರಾಗಿದ್ದಾರೆ. ಈ ಚಿತ್ರದ ನಾಯಕಿ ಶೃಂಗೇರಿ ಮೂಲದ ವೈಶಂಪಾಯನ ತೀರ ಖ್ಯಾತಿಯ ನಾಗಶ್ರೀ. ಇನ್ನು ಚಿತ್ರದಲ್ಲಿ ರೇಖಾ ಪ್ರೇಮ್ ಕುಮಾರ್ , ಬಿ. ಎಲ್. ರವಿಕುಮಾರ್, ನಯನ , ಪ್ರಶಾಂತ್ ಶೆಟ್ಟಿ , ತೋರಣ ಗದ್ದೆ ನಟರಾಜ್ , ಅಭಿಷೇಕ್ ಹೆಬ್ಬಾರ್ , ವಿಶ್ವನಾಥ್ , ಚಂದ್ರಶೇಖರ ತುಂಬರಮನೆ, ರಶ್ಮಿ ಹೇರ್ಳೆ ಮೊದಲಾದ ಮಲೆನಾಡ ರಂಗಭೂಮಿ ಕಲಾವಿದರು ಅಭಿನಯಿಸಿದ್ದಾರೆ. ಶಶೀರ ಛಾಯಾಗ್ರಹಣ, ಅವಿನಾಶ್ ಸಂಕಲನ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ಪರಿಸರ ಕಾಳಜಿ ಮತ್ತು ಅರಿವನ್ನು ಮೂಡಿಸುವ ವಿಭಿನ್ನ ಕಥಾವಸ್ತುವನ್ನು ಹೊಂದಿದ ಜಲಪಾತ ಚಿತ್ರ ಪರಿಪೂರ್ಣವಾಗಿ ಮಲೆನಾಡ ಭಾಷೆ , ಸಂಸ್ಕೃತಿ ಮತ್ತು ಪ್ರಕೃತಿಯನ್ನೊಳಗೊಂಡಿದೆ.
ಚಂದನವನಕ್ಕೆ ಶೃಂಗೇರಿಯ ಮತ್ತೊಬ್ಬಳು ನಟಿ!
ಶೃಂಗೇರಿ ಮೂಲದ ನಭಾ ನಟೇಶ್ ಕನ್ನಡ ಮತ್ತು ತೆಲಗು ಚಿತ್ರರಂಗದಲ್ಲಿ ಹೆಸರು ಮಾಡುತ್ತಿದ್ದಾರೆ. ಇನ್ನು ಚಾರ್ಲಿ ಸಿನಿಮಾ ಮೂಲಕ ಶೃಂಗೇರಿ ಮೂಲದ ಸಂಗೀತಾ ಶೃಂಗೇರಿ ಕನ್ನಡದ ಟಾಪ್ ನಟಿಯರಲ್ಲಿ ಒಬ್ಬರಾಗಿದ್ದಾರೆ. ಇದೀಗ ಮತ್ತೊಬ್ಬಳು ಶೃಂಗೇರಿ ಮೂಲದ ಕಲಾವಿದೆ ವೈಶಂಪಾಯನ ತೀರ ಖ್ಯಾತಿಯ ನಾಗಶ್ರೀ ಈ ಚಿತ್ರದ ಮೂಲಕ ಕನ್ನಡ ಸಿನಿಮಾದಲ್ಲಿ ಹೆಸರು ಮಾಡಿದ್ದಾರೆ.
ಇದನ್ನೂ ಓದಿ : ಅಡಿಕೆ ಮಾರುಕಟ್ಟೆ: ಎಷ್ಟಿದೆ ದರ?
HOW TO APPLY : NEET-UG COUNSELLING 2023