- ನಿರೀಕ್ಷಿತ ನಷ್ಟಕ್ಕಿಂತ ಕಡಿಮೆ ನಷ್ಟ: ಕಂಪನಿ ಮಾಹಿತಿ
ನವದೆಹಲಿ: ಕರೋನಾ ಸಂಕಷ್ಟದಿಂದ ದೇಶದ ಪ್ರಮುಖ ಕಾರು ತಯಾರಿಕಾ ಕಂಪೆನಿ ಮಾರುತಿ ಸುಜುಕಿ ಇಂಡಿಯಾಗೆ(ಎಂಎಸ್ ಐ) ಈವರೆಗೆ 249 ಕೋಟಿ ರೂಪಾಯಿ ನಷ್ಟವಾಗಿದೆ.
ಕಂಪನಿ ತ್ರೈಮಾಸಿಕ ವರದಿಯ ಪ್ರಕಟಿಸಿದ್ದು, 2020ರ ಮಾರ್ಚ್ನಿಂದ ಜೂನ್ವರೆಗೆ ಮಾರುತಿ ಸುಜುಕಿ ಕಂಪನಿಗೆ 249.ಕೋಟಿ ರೂಪಾಯಿ ನಷ್ಟವಾಗಿದೆ. ಆದರೆ ಪೇಟೆ ವಿಶ್ಲೇಷಕರು 445 ಕೋಟಿ ರೂಪಾಯಿ ನಷ್ಟ ಎದುರಾಗಬಹುದು ಎಂದು ನಿರೀಕ್ಷೆ ಮಾಡಿದ್ದರು. ಆದರೆ ಅದಕ್ಕಿಂತ ಕಡಿಮೆ ನಷ್ಟವಾಗಿದೆ. ಕಳೆದ ವರ್ಷದ ಈ ಅವಧಿಯಲ್ಲಿ 1,435.5 ಕೋಟಿ ಲಾಭ ಬಂದಿತ್ತು. ಏಪ್ರಿಲ್ನಿಂದ ಜೂನ್ ತ್ರೈಮಾಸಿಕದಲ್ಲಿ 76,599 ವಾಹನವನ್ನು ಮಾರಾಟ ಮಾಡಲಾಗಿದೆ.
ಕಳೆದ ವರ್ಷದ ಇದೇ ಅವಧಿಯಲ್ಲಿ 4,02,000 ವಾಹನ ಮಾರಾಟ ಆಗಿತ್ತು. ಮಾರುತಿ ಸುಜುಕಿ ಇಂಡಿಯಾ ಷೇರಿನ ಬೆಲೆಯು ಬುಧವಾರ 90.80 ರುಪಾಯಿ ಇಳಿಕೆಯಾಗಿದೆ. ಒಟ್ಟಿನಲ್ಲಿ ಕರೋನಾ ಕಾರಣ ಎಲ್ಲಾ ಕಂಪನಿಗಳು ನಷ್ಟದ ಹಾದಿ ಹಿಡಿದಿವೆ.