- ಕೇಂದ್ರದ ಆದೇಶ: ಶಿಕ್ಷಣ ಸಂಸ್ಥೆಗಳಿಗೆ ಶಾಕ್
ನವದೆಹಲಿ: ಕೇಂದ್ರ ಸರ್ಕಾರ ಕರೋನಾ ಹೆಚ್ಚುತ್ತಿರುವ ಹಿನ್ನಲೆ ನವೆಂಬರ್ ಅಂತ್ಯದವರೆಗೆ ಅನ್ ಲಾಕ್ 5.0 ವಿಸ್ತರಣೆ ಮಾಡಿದೆ. ಜತೆಗೆ ಈ ಅವಧಿಯಲ್ಲಿ ಕಡ್ಡಾಯವಾಗಿ ಶಾಲೆಗಳನ್ನು ತೆರೆಯುವಂತಿಲ್ಲ ಎಂದು ಆದೇಶ ಹೊರಡಿಸಿದೆ. ಇದರಿಂದಾಗಿ ಶಾಲೆ ಶುರು ಮಾಡಲು ಸಜ್ಜಾಗಿದ್ದ ಶಿಕ್ಷಣ ಸಂಸ್ಥೆಗಳಿಗೆ ಶಾಕ್ ಎದುರಾಗಿದೆ.
ಸೆಪ್ಟೆಂಬರ್ 30ರಂದು ಹೊರಡಿಸಲಾದ ಮಾರ್ಗಸೂಚಿ ಅಕ್ಟೋಬರ್ 31ರವರೆಗೆ ಜಾರಿಯಲ್ಲಿದ್ದು, ಈ ಅವಧಿಯನ್ನು ನವೆಂಬರ್ 30ರವರೆಗೆ ವಿಸ್ತರಿಸುವಂತೆ ಗೃಹ ಸಚಿವಾಲಯ ಗುರುವಾರ ಹೊಸ ಆದೇಶ ಹೊರಡಿಸಿದೆ. ಆದರೆ ಪದವಿ, ಸ್ನಾತಕೋತ್ತರ ತರಗತಿಗಳು ನ.17ರಿಂದ ಶರತ್ತುಬದ್ಧವಾಗಿ ಆರಂಭವಾಗುವ ಸಾಧ್ಯತೆಗಳಿವೆ.
ಮೆಟ್ರೊ ರೈಲು, ಮಾಲ್ಗಳು, ಹೋಟೆಲ್ಗಳು, ಧಾರ್ಮಿಕ ಸ್ಥಳಗಳು ಮುಂತಾದ ಬೃಹತ್ ಪ್ರಮಾಣದ ಸಭೆಗಳಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ಪುನರಾರಂಭಿಸಲು ಕೆಲವು ನಿಬರ್ಂಧಗಳೊಂದಿಗೆ ಅನುಮತಿ ನೀಡಲಾಗಿದೆ.