- ಘಟನೆ ಹಿಂದೆ ಕಾಣದ ಕೈ..?
ಚೆನ್ನೈ: ನಟಿ, ರಾಜಕಾರಣಿ ಖುಷ್ಬು ಪ್ರಯಾಣಿಸುತ್ತಿದ್ದ ಕಾರು ನ.18ರಂದು ಅಪಘಾತಕ್ಕೆ ಈಡಾಗಿದ್ದು, ಯಾವುದೇ ಅಪಾಯ ಆಗಿಲ್ಲ, ಆದರೆ ಇದೀಗ ನಟಿ ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
ಖುಷ್ಬು ಅವರು ತಮಿಳುನಾಡಿನ ಕೂಡಲ್ಲೋರುಗೆ ತಮ್ಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಎದುರಿನಿಂದ ಬಂದ ಟ್ಯಾಂಕರ್ ಒಂದು ಕಾರಿಗೆ ಡಿಕ್ಕಿ ಹೊಡೆದು ಕಾರು ಜಖಂ ಆಗಿದೆ. ಕಾರಿನ ಚಿತ್ರಗಳನ್ನು ಖುಷ್ಬು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ದೇವರು ಹಾಗೂ ನಿಮ್ಮಗಳ ಕೃಪೆಯಿಂದ ನಾನು ಪಾರಾಗಿದ್ದೇನೆ ಎಂದಿದ್ದಾರೆ.
ಘಟನೆ ಬಗ್ಗೆ ಅನುಮಾನವನ್ನೂ ವ್ಯಕ್ತಪಡಿಸಿರುವ ಖುಷ್ಬು, ನಾನು ರಸ್ತೆ ನಿಯಮದ ಪ್ರಕಾರ ಸರಿಯಾಗಿಯೇ ಹೋಗುತ್ತಿದ್ದೆ, ಆದರೆ ಅದೆಲ್ಲಿಂದಲೋ ಹಠಾತ್ತನೆ ಬಂದ ಟ್ಯಾಂಕರ್ ನನ್ನ ಕಾರಿಗೆ ಗುದ್ದಿತು, ಇದನ್ನು ಮಾಧ್ಯಮಗಳ ಗಮನಕ್ಕೆ ತರಲು ಇಚ್ಛೆಪಡುತ್ತಿದ್ದೇನೆ ಎಂದಿದ್ದಾರೆ ಟ್ಯಾಂಕರ್ನ ಚಾಲಕನನ್ನು ಪೆÇಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಖುಷ್ಬು ಕಾಂಗ್ರೆಸ್ ತೊರೆದು ಇತ್ತೀಚೆಗಷ್ಟೆ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ತಮಿಳುನಾಡಿನಲ್ಲಿ ಖುಷ್ಬೂಪ್ರಮುಖ ಬಿಜೆಪಿ ಮಹಿಳಾ ನಾಯಕಿ. ಹೀಗಾಗಿ ಹಲವು ಅನುಮಾನಗಳು ವ್ಯಕ್ತವಾಗಿವೆ.