ಶೃಂಗೇರಿ ಕಸದ ಸಮಸ್ಯೆಗೆ ಸಿಗದ ಪರಿಹಾರ!?
– ಮುಂದುವರಿದ ಪ್ರತಿಭಟನೆ: ಸ್ಥಳಕ್ಕೆ ಬಾರದ ಡಿಸಿ
– ಶಾಸಕರು, ಸರ್ಕಾರದ ವಿರುದ್ದ ಆಕ್ರೋಶ
NAMMUR EXPRESS NEWS
ಶೃಂಗೇರಿ: ಶೃಂಗೇರಿ ಪಟ್ಟಣ ಪಂಚಾಯ್ತಿ ಪೌರ ಕಾರ್ಮಿಕ ಕೆಲಸ ಖಾಯಂ ಮಾಡಬೇಕೆಂದು ಅನಿರ್ಧಿಷ್ಟಾವಧಿ ಮುಷ್ಕರ ಶುರುವಾಗಿ 8 ದಿನಗಳೇ ಕಳೆದಿದ್ದು, ನಗರದ ತುಂಬೆಲ್ಲಾ ಕಸದ ರಾಶಿ ಬಿದ್ದಿದೆ, ಈಗ ತಾಲೂಕಿನಲ್ಲಿ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ಪ್ರತಿಭಟನೆ ಪ್ರಾರಂಭವಾಗಿ ಇಷ್ಟು ದಿನ ಕಳೆದರು ಮಾನ್ಯ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಾರದೇ,ಪ್ರತಿಭಟನಾ ನಿರತ ಕಾರ್ಮಿಕರನ್ನು ಭೇಟಿಯಾಗಲಿಲ್ಲ. ಕ್ಷೇತ್ರದ ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಈ ಬಾರಿ ಸದನದಲ್ಲಿ ಈ ಬಗ್ಗೆ ಚರ್ಚಿಸಿ ಕೆಲಸ ಖಾಯಂಗೊಳಿಸುವ ಬಗ್ಗೆ ಕ್ರಮ ವಹಿಸೋದಾಗಿ ಆಶ್ವಾಸನೆ ಕೊಟ್ಟಿದ್ದಾರೆ. ಆದರೆ ಈ ಹಿಂದೆ ಪ್ರತಿಭಟನೆಯಾದಾಗಲು ಸದನದಲ್ಲಿ ಚರ್ಚಿಸೋದಾಗಿ ಹೇಳಿ ಹೋಗಿದ್ದ ಶಾಸಕರ ಸದನದಲ್ಲಿ ಈ ಬಗ್ಗೆ ತುಟಿ ಬಿಚ್ಚಿರಲಿಲ್ಲ. ಈ ಬಾರಿಯು ಅದನ್ನೆ ಹೇಳಿದ್ದಾರೆ.
ಪ್ರತಿಭಟನಾ ನಿರತರು ಸಚಿವರನ್ನು ಇಲ್ಲಿಗೆ ಕರೆತನ್ನಿ,ಬರುವುದಾದರೆ ನಮ್ಮ ಕೆಲಸ ಖಾಯಂ ಪತ್ರದೊಂದಿಗೆ ಬನ್ನಿ ಇಲ್ಲವಾದರೆ ನಮಗೆ ವಿಷ ತಂದು ಕೊಡಿ ಎಂಬ ಮನವಿ ಮಾಡಿದ್ದರು. ಆದರೆ ಶಾಸಕರು ಪ್ರತಿಭಟನಾಕಾರರನ್ನು ಬೆಂಗಳೂರಿಗೆ ಬನ್ನಿ ಸಚಿವರನ್ನು ಭೇಟಿ ಮಾಡಿಸಿ,ಸಮಸ್ಯೆ ಬಗೆಹರಿಸೋ ಪ್ರಯತ್ನ ಮಾಡ್ತೇನೆ ಎಂದಿರುವುದು ಪೌರ ಕಾರ್ಮಿಕರಿಗೆ ಬೇಸರವಾಗಿದೆ. ವಿವಿಧ ಸಂಘ ಸಂಸ್ಥೆಗಳು, ಸಂಘನೆಗಳು,ಸಾರ್ವಜನಿಕರು ಪ್ರತಿಭಟನೆಗೆ ಬೆಂಬಲ ಸೂಚಿಸಿ ಅವರರ ಕೆಲಸ ಖಾಯಂ ಬಗ್ಗೆ ಶೀಘ್ರ ನಿರ್ಧಾರ ಕೈಗೊಳ್ಳುವಂತೆ ತಹಶೀಲ್ದಾರರ ಮುಖಾಂತರ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮತ್ತು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
ಸುಂದರ ನಗರವಾಗಲಿ.. ನಮ್ಮ ಕಳಕಳಿ
ಪೌರ ಕಾರ್ಮಿಕರಿಗೆ ನ್ಯಾಯ ಸಿಕ್ಕಿ ಅವರ ಕೇಲಸ ಖಾಯಂಗೊಳಿಸುವಂತಾಗಿ ಶೃಂಗೇರಿ ನಗರ ಸ್ವಚ್ಛವಾಗಿದ್ದು ಪ್ರವಾಸಿಗರಿಗೆ,ಸಾರ್ವಜನಿಕರಿಗೆ ತೊಂದರೆ,ಅನಾನುಕೂಲವಾಗದಿರಲಿ ಎಂಬುದು ನಮ್ಮೂರು ಎಕ್ಸ್ಪ್ರೆಸ್ ಕಳಕಳಿ.