ಕರ್ತವ್ಯ ನಿರತ ವೈದ್ಯರ ಮೇಲೆ ಮಹಿಳೆ ಚಪ್ಪಲಿಯಿಂದ ಹಲ್ಲೆ!
– ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ಘಟನೆ: ವೈದ್ಯರಿಂದ ದೂರು,ಪ್ರತಿಭಟನೆ
– ಹಲ್ಲೆ ಖಂಡಿಸಿ ಆಕ್ರೋಶ ವ್ಯಕ್ತ ಪಡಿಸಿದ ಸಿ.ಟಿ ರವಿ
NAMMUR EXPRESS NEWS
ಚಿಕ್ಕಮಗಳೂರು: ಚಿಕ್ಕಮಗಳೂರು ನಗರದ ಮಲ್ಲೇಗೌಡ ಜಿಲ್ಲಾಸ್ಪತ್ರೆಯ ಕರ್ತವ್ಯ ನಿರತ ವೈದ್ಯಾಧಿಕಾರಿ ಡಾ.ವೆಂಕಟೇಶ್ ಮೇಲೆ ಹಲ್ಲೆ ಘಟನೆ ನಡೆದಿದ್ದು ಹಲ್ಲೆ ಖಂಡಿಸಿ ನಗರದ ಪೋಲೀಸ್ ಠಾಣೆ ಎದುರು ನೂರಾರು ಆರೋಗ್ಯ ಸಿಬ್ಬಂದಿಗಳಿಂದ ಪ್ರತಿಭಟನೆ ನಡೆದಿದೆ.
ಹಲ್ಲೆಗೊಳಗಾದ ವೈದ್ಯಾಧಿಕಾರಿ ಹಾಗೂ ಆಸ್ಪತ್ರೆ ವೈದ್ಯರ ತಂಡ ಚಿಕ್ಕಮಗಳೂರು ನಗರ ಪೋಲೀಸ್ ಠಾಣೆಯಲ್ಲಿ ಹಲ್ಲೆಗೈದ ಮಹಿಳೆಯ ವಿರುದ್ಧ ದೂರು ನೀಡಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಸರ್ಜನ್ ಜೊತೆ ಪೋಲೀಸ್ ಠಾಣೆಯ ಎದುರು ನೂರಾರು ಜನ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಜಮಾವಣೆಗೊಂಡು ಚಪ್ಪಲಿಯಿಂದ ಹಲ್ಲೆ ನಡೆಸಿದ ಮಹಿಳೆಯನ್ನು ಕೂಡಲೇ ಬಂಧಿಸಿ,ಸೂಕ್ತ ಕ್ರಮ ಕೈಗೊಳ್ಳುವಂತೆ ಪ್ರತಿಭಟನೆ ನಡೆಸಿದರು. ಸಿಬ್ಬಂದಿಯ ಪ್ರತಿಭಟನೆಗೆ ನಗರದ ಆಟೋ ಚಾಲಕರು,ಕರ್ನಾಟಕ ರಕ್ಷಣಾ ವೇದಿಕೆ,ಬಜರಂಗದಳ ಸೇರಿದಂತೆ ವಿವಿಧ ಸಂಘಟನೆಗಳ ಾ್ಯಕರ್ತು ಸಾಥ್ ನೀಡಿದರು. ನಗರ ಠಾಣೆಯ ಮುಂದೆ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣಗೊಂಡಿತ್ತು.
ಹಲ್ಲೆ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದ ಸಿ.ಟಿ ರವಿ..!
ಘಟನೆಗೆ ಆಕ್ರೋಶ ವ್ಯಕ್ತಪಡಿಸಿದ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ರಾಜ್ಯ ಸರ್ಕಾರದ ಗೃಹಸಚಿವರಿಗೂ ಹಾಗೂ ಪೋಲೀಸ್ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್ರವರಿಗೂ ಹಲ್ಲೆ ನಡೆಸಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ತಮ್ಮ ‘X’ ಖಾತೆಯಲ್ಲಿ ಘಟನೆಯ ವಿಡಿಯೋದೊಂದಿಗೆ ಆಗ್ರಹಿಸಿದ್ದಾರೆ.
‘X’ ನಲ್ಲಿ ವಿಡಿಯೋದೊಂದಿಗೆ ಸಿ.ಟಿ ರವಿಯವರ ಆಗ್ರಹ ಏನಿದೆ..?!
ಸನ್ಮಾನ್ಯ ಗೃಹ ಸಚಿವರಾದ @DrParameshwara ಇಂತಹ ನೀಚ ಕೃತ್ಯ ಎಸಗಿದವರನ್ನು ಈ ಕೂಡಲೇ ಬಂಧಿಸಿ ವೈದ್ಯಕೀಯ ಸಿಬ್ಬಂದಿಗಳ ರಕ್ಷಣೆಗೆ ಕ್ರಮ ತೆಗೆದುಕೊಳ್ಳಿ.
@DgpKarnataka ಅಲೋಕ್ ಮೋಹನ್ ಅವರೇ ತಾವು ಈ ಕೂಡಲೇ ಆರೋಪಿಗಳನ್ನು ಬಂಧಿಸಿ ವೈದ್ಯಕೀಯ ಸಿಬ್ಬಂದಿ ಕಾನೂನು ಮತ್ತು ಸುವ್ಯವಸ್ಥೆಯ ಮೇಲೆ ವಿಶ್ವಾಸವಿಟ್ಟು ಕೆಲಸ ಮಾಡುವ ವಾತಾವರಣ ನಿರ್ಮಾಣ ಮಾಡಿ ಎಂದು ಹೇಳಿಕೊಂಡಿದ್ದಾರೆ.