ಚಿಕ್ಕಮಗಳೂರಲ್ಲಿ ಚರಂಡಿಗೆ ಮಹಿಳೆ ಬಲಿ!
– ಸಾಗರದಲ್ಲಿ ಹೆಚ್ಚಿದ ಕಳ್ಳರು!
– ಶ್ರೀಲಕ್ಷ್ಮೀ ನರಸಿಂಹ ದೇವಾಲಯದಲ್ಲಿ ಕಳುವಿಗೆ ಯತ್ನ
– ಮನೆಯ ಮುಂಬಾಗಿಲು ಮುರಿದು ಕಳ್ಳತನ
– ಶಿವಮೊಗ್ಗ : ಬೈಕ್ ಡಿಕ್ಕಿಯಾಗಿ ಯುವತಿ ಸಾವು
– ಶಿವಮೊಗ್ಗ: ಯುವಕರಿಂದ ಕಾರು ಚಾಲಕನಿಗೆ ಮನಸೋ ಇಚ್ಛೆ ಹಲ್ಲೆ
– ತೀರ್ಥಹಳ್ಳಿ: ಮಾತ್ರೆ ತಿಂದ ವಿದ್ಯಾರ್ಥಿನಿಯರು ಅಸ್ವಸ್ಥ
NAMMUR EXPRESS NEWS
ಚಿಕ್ಕಮಗಳೂರು: ನಗರದ 27ನೇ ವಾರ್ಡ್ನಲ್ಲಿ ಮಹಿಳೆಯೊಬ್ಬರು ಆಳವಾದ ಚರಂಡಿಗೆ ಆಯ ತಪ್ಪಿ ಬಿದ್ದು ಸಾವನ್ನಪ್ಪಿದ್ದಾರೆ. ಕಾಳಿದಾಸ ನಗರದ ಶಾಂತಮ್ಮ ಮೃತ ಮಹಿಳೆ. ಪದೇ ಪದೇ ಇದೇ ಘಟನೆ ಮರುಕಳಿಸಿದರೂ ಎಚ್ಚೆತ್ತುಕೊಳ್ಳದ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಇದೀಗ ಆಕ್ರೋಶ ವ್ಯಕ್ತವಾಗಿದೆ.ಈ ಹಿಂದೆ ಕೂಡ ಇದೇ ಸ್ಥಳದಲ್ಲಿ ಆಟವಾಡುತ್ತಿದ್ದ ಮಕ್ಕಳು ಹಾಗೂ ಜಾನುವಾರುಗಳು ಚರಂಡಿಗೆ ಬಿದ್ದಿವೆ. ಇಷ್ಟಾದರೂ ಕೂಡ ಸಂಬಂಧಪಟ್ಟ ಅಧಿಕಾರಿಗಳು ಈ ಕಡೆಗಮನಹರಿಸದೇ ಇರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಗರದಲ್ಲಿ ಹೆಚ್ಚಿದ ಕಳ್ಳರು!
ಸಾಗರ : ಆನಂದಪುರ ನರಸೀಪುರದ ಶ್ರೀಲಕ್ಷ್ಮೀ ನರಸಿಂಹ ದೇವಾಲಯದಲ್ಲಿ ಕಳವಿಗೆ ವಿಫಲ ಯತ್ನ ನಡೆಸಿದ ಘಟನೆ ರಾತ್ರಿ ನಡೆದಿದೆ. ದೇವಾಲಯದ ಬೀಗ ಮುರಿಯಲು ಯತ್ನಿಸಿ ತಿರುಚಿದ್ದಾರೆ. ಕಿಟಕಿ ಬಾಗಿಲು ತೆರೆದು ಸರಳುಗಳನ್ನು ಬಗ್ಗಿಸಲಾಗಿದೆ. ದೇವಾಲಯ ಊರಿನ ಒಳಗೆ ಇರುವ ಕಾರಣ ಬೀಗ ಒಡೆಯುವ ಶಬ್ದ ಗ್ರಾಮಸ್ಥರಿಗೆ ಕೇಳಿಸಬಹುದು ಎಂದು ಹೆದರಿ ಕಳ್ಳರು ಪರಾರಿಯಾಗಿದ್ದಾರೆ. ಬೆಳಗ್ಗೆ ಅರ್ಚಕರು ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ.
– ಶಿವಮೊಗ್ಗ : ಬೈಕ್ ಡಿಕ್ಕಿಯಾಗಿ ಯುವತಿ ಸಾವು
ಶಿವಮೊಗ್ಗ : ಬೈಕ್ ಡಿಕ್ಕಿಯಾಗಿ ಯುವತಿಯೊಬ್ಬಳು ಸಾವನ್ನಪ್ಪಿದ ಘಟನೆ ಬಿ ಆರ್ ಪಿಯಲ್ಲಿ ಸಂಭವಿಸಿದೆ. ಭದ್ರಾ ರಿವರ್ ಪ್ರಾಜೆಕ್ಟ್ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ. ರಂಗನಾಥಪುರದ ಸುಕನ್ಯಾ ಎನ್ನುವವರು ಮೃತರು. ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಯುವತಿಗೆ ಬೈಕ್ವೊಂದು ಡಿಕ್ಕಿ ಹೊಡೆದಿದೆ. ಅಲ್ಲದೆ ಅವರ ಮೈಮೇಲೆ ಬೈಕ್ ಹರಿದಿದೆ. ಪರಿಣಾಮ ತೀವ್ರ ರಕ್ತಸ್ರಾವದಿಂದಾಗಿ ಯುವತಿ ಸಾವನ್ನಪ್ಪಿದ್ದಾರೆ. ಖಾಸಗಿ ಸಂಸ್ಥೆಯಲ್ಲಿ ಟೈಪಿಸ್ಟ್ ಆಗಿದ್ದ ಸುಕನ್ಯಾ ತಮ್ಮ ಕೆಲಸಗಳನ್ನ ಮುಗಿಸಿಕೊಂಡು ಬ್ಯಾಂಕ್ಗೆ ಹೋಗುತ್ತಿದ್ದರು. ಈ ವೇಳೆ ಬೈಕ್ವೊಂದು ಡಿಕ್ಕಿಯಾಗಿ ಘಟನೆ ಸಂಭವಿಸಿದೆ.
– ಸಾಗರ: ಮನೆಯ ಮುಂಬಾಗಿಲು ಮುರಿದು ಕಳ್ಳತನ
ಸಾಗರ : ಸಮೀಪದ ಹಿರೇಬಿಲಗುಂಜಿ ಗ್ರಾ ಪಂ ವ್ಯಾಪ್ತಿಯ ಹೊಸಂತೆ ಗ್ರಾಮದಲ್ಲಿ ಶಿನೋಜ್ ಅವರ ಮನೆಯಲ್ಲಿ ಕಳ್ಳತನ ಆಗಿದೆ. ಮಧ್ಯಾಹ್ನ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮನೆಯ ಮುಂಬಾಗಿಲು ಬೀಗ ಮುರಿದು ಒಳನುಗ್ಗಿ ಮನೆಯೊಳಗೆ ರೂಮ್ ಗಾಡ್ರೆಜ್ ಬೀಗ ತೆಗೆದು ವಸ್ತು ಗಳನ್ನೆಲ್ಲ ಚೆಲ್ಲಾಪಿಲ್ಲಿಯಾಗಿ ಎಸೆಯಲಾಗಿದೆ ಗಾಡ್ರೆಟ್ನಲ್ಲಿದ್ದ ಸುಮಾರು 73 ಗ್ರಾಂನಷ್ಟು ಬಂಗಾರದ ಒಡವೆಗಳನ್ನು ಹಾಗೂ 18000 ನಗದು ಹಣ ಕಳ್ಳತನ ಮಾಡಲಾಗಿದೆ ಎಂದು ಶಿನೋಜ್ ಪೋಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಮನೆಯೊಡತಿ ನಿಜಿ ಶಿನೋಜ್ ತಾಯಿ ಮನೆಗೆ ತೆರಳಿದ್ದರು ವಾಪಸ್ಸು ಮದ್ಯಾಹ್ನದ ಸಮಯದಲ್ಲಿ ಮನೆಗೆ ಬಂದಾಗ ಮನೆಯ ಬೀಗ ಒಡೆದು ಬಂಗಾರದ ಒಡವೆಗಳನ್ನು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಅನಂದಪುರ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ.
ಕ್ಯಾಲ್ಸಿಯಂ ಮಾತ್ರೆ ಸೇವಿಸಿದ 15 ವಿದ್ಯಾರ್ಥಿನಿಯರು ಅಸ್ವಸ್ಥ
ತೀರ್ಥಹಳ್ಳಿ : ತಾಲೂಕಿನ ಸೊಪ್ಪುಗುಡ್ಡೆಯಲ್ಲಿರುವ ಬಾಲಕಿಯರ
ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕ್ಯಾಲ್ಸಿಯಂ ಮಾತ್ರೆ ಸೇವಿಸಿ 15 ಜನ ವಿದ್ಯಾರ್ಥಿನಿಯರು ವಾಂತಿ – ಬೇದಿ ಯಾಗಿ ಅಸ್ವಸ್ಥರಾದ ಘಟನೆ ನಡೆಸಿದೆ. ಪ್ರಿನ್ಸಿಪಾಲ್ ಶೇಷಗಿರಿಯವರಿಗೆ ವೈದ್ಯರು ಸೂಚಿಸಿದಂತೆ ಕ್ಯಾಲ್ಸಿಯಂ ಮಾತ್ರೆ ವಿದ್ಯಾರ್ಥಿಗಳಿಗೆ ನೀಡಲು ಹೇಳಿದ್ದು ಅದರಂತೆ ಮದ್ಯಾಹ್ನದ ಊಟದ ನಂತರ ಸೇವಿಸಲು ಮೊದಲೆ ತಿಳಿಸಲಾಗಿತ್ತು ಆದರೆ ಪ್ರಸ್ತುತ ಕಾಲೇಜು ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆ ಇಲ್ಲದಿರುವುದರಿಂದ ಊಟಕ್ಕೆ ಮೊದಲೇ ಮಾತ್ರೆ ಸೇವಿಸಿದ್ದು ಈ ಅನಾರೋಗ್ಯಕ್ಕೆ ಕಾರಣವಾಗಿದೆ. ಕೂಡಲೇ ವೈದ್ಯರನ್ನು ಸಂಪರ್ಕಿಸಿದ್ದಾರೆ.
ಶಿವಮೊಗ್ಗ: ಯುವಕರಿಂದ ಕಾರು ಚಾಲಕನಿಗೆ ಮನಸೋ ಇಚ್ಛೆ ಹಲ್ಲೆ
ಶಿವಮೊಗ್ಗ: ಬೈಕ್ನಲ್ಲಿ ಹಿಂಬಾಲಿಸಿ ಬಂದ ಯುವಕರ ಗುಂಪೊಂದು ಕಾರನ್ನು ಅಡ್ಡಗಟ್ಟಿ ಒಳಗಿದ್ದ ವ್ಯಕ್ತಿಯ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿರುವ ಘಟನೆ ಶಿವಮೊಗ್ಗ – ಭದ್ರಾವತಿ ಹೆದ್ದಾರಿಯಲ್ಲಿ ಘಟನೆ ಸಂಭವಿಸಿದೆ. ಸೋಮಿನಕೊಪ್ಪದ ನವೀನ್ ಕುಮಾರ್ ಎಂಬುವವರು ಗಾಯಗೊಂಡಿದ್ದಾರೆ. ಜು.28ರಂದು ರಾತ್ರಿ ನವೀನ್ ಕುಮಾರ್ ತಮ್ಮ ಕಾರಿನಲ್ಲಿ ತೆರಳುತ್ತಿದ್ದರು. ಎಂಆರ್ಎಸ್ ಸರ್ಕಲ್ ಬಳಿ ಎರಡು ಬೈಕ್ಗಳನ್ನು ಓವರ್ಟೇಕ್ ಮಾಡಿದ್ದರು. ಆ ಬೈಕಿನಲ್ಲಿದ್ದವರು ಕಾರನ್ನು ಬೆನ್ನಟ್ಟಿ ಬಂದು ಮಲವಗೊಪ್ಪದ ಬಳಿ ಅಡ್ಡಗಟ್ಟಿ ನವೀನ್ ಕುಮಾರ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದ ಆರೋಪಿಸಲಾಗಿದೆ. ಕಾರನ್ನು ಚಲಾಯಿಸಿಕೊಂಡು ತೆರಳಿದ್ದ ನವೀನ್ ಕುಮಾರ್ ಅವರನ್ನು ನಾಲೈದು ಬೈಕುಗಳಲ್ಲಿ ಪುನಃ ಯುವಕರ ಗುಂಪು ಬೆನ್ನಟ್ಟಿತ್ತು ಎಂದು ಆರೋಪಿಸಲಾಗಿದೆ. ಬಿದರೆ ಕ್ರಾಸ್ ಬಳಿ ಅಡ್ಡಗಟ್ಟಿ ನವೀನ್ ಕುಮಾರ್ ಅವರನ್ನು ಕಾರಿನಿಂದ ಕೆಳಗೆಳೆದು ಹಲ್ಲೆ ನಡೆಸಲಾಗಿದೆ. ಈ ವೇಳೆ ಚಿನ್ನದ ಸರ ನಾಪತ್ತೆಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಘಟನೆ ಸಂಬಂಧ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.