ಮಗಳ ನೋಡಲು ಕೊಪ್ಪಕ್ಕೆ ಬಂದ ಮಹಿಳೆ ಆತ್ಮಹತ್ಯೆ?
– ಜಯಪುರ ಸಮೀಪ ಕಟ್ಟೆಮನೆಯಲ್ಲಿ ನಡೆದ ಘಟನೆ
– ಆತ್ಮಹತ್ಯೆಗೆ ನಿಖರ ಕಾರಣ ತಿಳಿದಿಲ್ಲ: ತನಿಖೆ ಶುರು
NAMMUR EXPRESS NEWS
ಕೊಪ್ಪ: ಕೊಪ್ಪ ತಾಲ್ಲೂಕಿನ ಜಯಪುರ ಸಮೀಪ ಕಟ್ಟೆಮನೆಯಲ್ಲಿ ಇರುವ “ಸತ್ಯಸಾಯಿ ಶ್ರೀನಿಕೇತನ ಮಳಿಗೆ ” ವಸತಿ ಶಾಲೆಯಲ್ಲಿ ಮಂಗಳವಾರ ಮುಂಜಾನೆ ಚಿಕ್ಕಬಳ್ಳಾಪುರ ಮೂಲದ ಚೈತ್ರ ಗಜೇಂದ್ರ(33), ಎಂಬ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಪೋಷಕರ ಸಭೆಗೆ ಬಂದವರು ಮಂಗಳವಾರ ಮುಂಜಾನೆ ಬೆಳಂ ಬೆಳಿಗ್ಗೆ ಸುಮಾರು ನಾಲ್ಕು ಗಂಟೆಗೆ ಶಾಲೆಯ 3ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಮಹಿಳೆ ಚಿಕ್ಕಬಳ್ಳಾಪುರ ಮೂಲದವರಾಗಿದ್ದು ಇವರು ಹೂವಿನ ವ್ಯಾಪಾರ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ, ಸ್ಥಳಕ್ಕೆ ಆಗಮಿಸಿದ ಪೊಲೀಸ್ ಅಧಿಕಾರಿ ಕೊಪ್ಪ ವೃತ್ತನಿರೀಕ್ಷರಾದ ಮಂಜುನಾಥ್, ಹಾಗೂ ಜಯಪುರ ಪೊಲೀಸ್ ಠಾಣಾಧಿಕಾರಿ ಅಂಬರೀಷ್ರವರ ನೇತೃತ್ವದಲ್ಲಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಶವವನ್ನು ಕೊಪ್ಪ ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.ಆತ್ಮಹತ್ಯೆಗೆ ಸೂಕ್ತ ಕಾರಣ ತಿಳಿದುಬಂದಿಲ್ಲ, ಇನ್ನೂ ಹೆಚ್ಚಿನ ಮಾಹಿತಿ ಪೊಲೀಸರ ತನಿಖೆಯಿಂದ ತಿಳಿಯಬೇಕಾಗಿದೆ. ಮೃತರ ಒಬ್ಬಳೇ ಮಗಳಾದ ಅರ್ಪಿತಾ 8ನೇ ತರಗತಿಯಲ್ಲಿ ಓದುತ್ತಿದ್ದು ಇವರ ಪೋಷಕರ ಸಭೆಗಾಗಿ ಇವರು ಶಾಲೆಗೆ ಬಂದಿದ್ದರು ಎನ್ನಲಾಗಿದೆ.