ಸುಧೀರ್ ಕುಮಾರ್ ಮುರೊಳ್ಳಿ ಅವರಿಗೆ ಮಹತ್ವದ ಜವಾಬ್ದಾರಿ
– ಬೆಳಗಾವಿ ಅಧಿವೇಶನ ಶತಮಾನೋತ್ಸವ ಆಚರಣಾ ಸಮಿತಿಯಲ್ಲಿ ಸ್ಥಾನ
– ರಾಷ್ಟ್ರೀಯ ಕಾಂಗ್ರೆಸ್ ಅಲ್ಲೂ ಶೀಘ್ರದಲ್ಲಿ ಹುದ್ದೆ?
NAMMUR EXPRESS NEWS
ಕೊಪ್ಪ: ಕಾಂಗ್ರೆಸ್ ವೀಕ್ಷಕ, ಯುವ ಕಾಂಗ್ರೆಸ್ ನಾಯಕ, ನ್ಯಾಯವಾದಿ ಸುಧೀರ್ ಕುಮಾರ್ ಮುರೊಳ್ಳಿ ಅವರಿಗೆ ರಾಜ್ಯದಲ್ಲಿ ಮಹತ್ವದ ಜವಾಬ್ದಾರಿ ಸಿಕ್ಕಿದೆ. 1924ರಲ್ಲಿ ಮಹಾತ್ಮಾ ಗಾಂಧಿಯವರ ಅಧ್ಯಕ್ಷತೆಯಲ್ಲಿ ನಡೆದ ಏಕೈಕ ಕಾಂಗ್ರೆಸ್ ಅಧಿವೇಶನದ ಕರ್ನಾಟಕದ ಬೆಳಗಾವಿಯಲ್ಲಿ ನಡೆದಿದ್ದು ಈ ಅಧಿವೇಶನದ ಶತಮಾನೋತ್ಸವ ಸಂದರ್ಭದಲ್ಲಿ ಬೆಳಗಾವಿ ಅಧಿವೇಶನ ಶತಮಾನೋತ್ಸವ ಸಮಾರಂಭವನ್ನು ವಿಶೇಷವಾಗಿ ಆಚರಿಸಲು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ರವರು ಶತಮಾನೋತ್ಸವ ಆಚರಣಾ ಸಮಿತಿಯನ್ನು ರಚಿಸಿದ್ದು ಅದರಲ್ಲಿ ಸುಧೀರ್ ಕುಮಾರ್ ಅವರನ್ನು ಸಮಿತಿಯ ಸದಸ್ಯರನ್ನಾಗಿ ನೇಮಿಸಿದ್ದಾರೆ.
ರಾಷ್ಟ್ರೀಯ ಕಾಂಗ್ರೆಸ್ ಅಲ್ಲೂ ಶೀಘ್ರದಲ್ಲಿ ಹುದ್ದೆ?
ಎಐಸಿಸಿಯಲ್ಲೂ ಕೂಡ ರಾಜ್ಯದ ಪ್ರಮುಖ ವಾಗ್ಮಿ ಆಗಿರುವ ಸುಧೀರ್ ಕುಮಾರ್ ಮುರೊಳ್ಳಿ ಅವರಿಗೆ ಶೀಘ್ರದಲ್ಲಿ ಜವಾಬ್ದಾರಿ ಸಿಗಲಿದೆ ಎಂಬ ಚರ್ಚೆ ಇದೆ. ಏಕೆಂದರೆ ಸುಧೀರ್ ಸೇರಿ ಅನೇಕರು ಪ್ರೇರಣೆ ನೀಡಿ ಕಾಂಗ್ರೆಸ್ ಪಕ್ಷಕ್ಕೆ ಬರ ಮಾಡಿಕೊಂಡಿದ್ದಾ ಅಂದಿನ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕುಮಾರ್ ಸೆಂತಿಲ್ ತಮಿಳುನಾಡಿನಿಂದ ಗೆದ್ದು ಲೋಕ ಸಭೆ ಪ್ರವೇಶಿಸಿದ್ದಾರೆ. ಇವರೇ 2023ರ ರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ವಾರ್ ರೂಂ ಮುಖ್ಯಸ್ಥರು ಕೂಡ ಆಗಿದ್ದರು. ಜತೆಗೆ ಇಡೀ ದೇಶದಲ್ಲಿ ಕಾಂಗ್ರೆಸ್ ಹೊಸ ಮಾದರಿ ಪಕ್ಷ ಸಂಘಟನೆಗೆ ಮುಂದಾಗಿದ್ದು ಇಲ್ಲಿ ಸುಧೀರ್ ಅವರಿಗೆ ಅವಕಾಶ ಆಗಲಿದೆ ಎಂಬ ಚರ್ಚೆ ಇದೆ.