ಸಿಎಂ ರಾಜೀನಾಮೆಗೆ ಬಿಜೆಪಿ ಪಟ್ಟು!
– ಚಿಕ್ಕಮಗಳೂರು ಜಿಲ್ಲೆಯ ಎಲ್ಲಾ ತಾಲೂಕಲ್ಲಿ ಪ್ರತಿಭಟನೆ
NAMMUR EXPRESS NEWS
ಚಿಕ್ಕಮಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ
ರಾಜೀನಾಮೆಗೆ ಒತ್ತಾಯಿಸಿ ಚಿಕ್ಕಮಗಳೂರು ಜಿಲ್ಲೆಯ ಎಲ್ಲಾ ತಾಲೂಕಲ್ಲಿ ಪ್ರತಿಭಟನೆ ನಡೆಯಿತು.
ಚಿಕ್ಕಮಗಳೂರಲ್ಲಿ ಪ್ರತಿಭಟನೆ
ಬಿಜೆಪಿ ನಗರ ಘಟಕದಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು. ಬಿಜೆಪಿ ಕಚೇರಿಯಿಂದ ಆಜಾದ್ ವೃತ್ತದವರೆಗೆ ಮೆರವಣಿಗೆ ನಡೆಸಿದ ಕಾರ್ಯಕರ್ತರು ಮತ್ತು ಮುಖಂಡರು. ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ ಆರ್ ದೇವರಾಜ್ ಶೆಟ್ಟಿ ಮಾತನಾಡಿ. ಸಮಾಜವಾದಿ ಎಂದು
ಬಿಂಬಿಸಿಕೊಂಡಿರುವ ಸಿದ್ದರಾಮಯ್ಯ ಜನರ ಕಣ್ಣಿಗೆ ಮಂಕುಬೂದಿ ಎರಚಿದ್ದಾರೆ. ಅವರ ರಾಜಕೀಯ ನಾಟಕ ಈಗ ಬಯಲಾಗಿದೆ ಎಂದರು ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು ಅದನ್ನು ಬಿಟ್ಟು ಪ್ರದರ್ಶನ ಮಾಡುವುದು ಸರಿಯಲ್ಲ ಹೇಳಿದರು
ಬಿಜೆಪಿ ನಗರ ಘಟಕ ಅಧ್ಯಕ್ಷ ಕೆ ಎಸ್ ಪುಷ್ಪಜ್ ಮಾತನಾಡಿ ಭ್ರಷ್ಟಾಚಾರ ಹಣೆಪಟ್ಟಿ ಹೊತ್ತಿರುವ ಮುಖ್ಯಮಂತ್ರಿಗಳು ಸ್ಥಾನ ಕಳೆದುಕೊಳ್ಳುವ ಮುನ್ನವೇ ಪದ ತ್ಯಾಗಗೊಳಿಸಿ ಸಂವಿಧಾನಕ್ಕೆ ಕೊಡಬೇಕು ಎಂದರು
ಜಿಲ್ಲಾ ವಕ್ತಾರ ಸಿ ಹೆಚ್ ಲೋಕೇಶ್ ಮಾತನಾಡಿ ಅಹಿಂದ ನಾಯಕ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ ಆ ಮೀಸಲಾದ ಹಣವನ್ನೇ ಲೂಟಿ ಮಾಡಿದ್ದಾರೆ. ವಾಲ್ಮೀಕಿ ನಿಗಮದ ಹಣ ದುರುಪಯೋಗಕ್ಕೆ ಕಾರಣರಾಗಿದ್ದಾರೆ. ಆ ಮೂಲಕ ಆ ಸಮುದಾಯಗಳಿಗೆ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದರು. ಮಹಿಳಾ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷೆ ಜಸಂತ ಅನಿಲ್ ಕುಮಾರ್ ನಗರ ಘಟಕದ ಅಧ್ಯಕ್ಷೆ ಪವಿತ್ರ ಮದುಗುಂಡಿ ಜಿಲ್ಲಾ ಉಪಾಧ್ಯಕ್ಷ ಪ್ರೇಮ್ ಕುಮಾರ್ ಎಸ್ಪಿ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಕುರುವಂಗಿ ವೆಂಕಟೇಶ್. ಒಬಿಸಿ ರಾಜ್ಯ ಕಾರ್ಯದರ್ಶಿ ಬಿ ರಾಜಪ್ಪ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ ಭಾಗವಹಿಸಿದ್ದರು
ನಿಷ್ಪಕ್ಷಪಾತ ತನಿಖೆಗೆ ಆಗ್ರಹ
ಆಲ್ದೂರು: ಮುಡ ಪ್ರಕರಣ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು ಬಿಜೆಪಿ ಮಂಡಲ ಅಧ್ಯಕ್ಷ ರವಿ ಬಸರವಳ್ಳಿ ಮಾತನಾಡಿ ಗ್ಯಾರಂಟಿ ಯೋಜನೆಗಳ ಮೂಲಕ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದ ಕಾಂಗ್ರೆಸ್ ಸರ್ಕಾರ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡದೆ ಭ್ರಷ್ಟಾಚಾರದ ಸರಣಿಯನ್ನು ಮುಂದುವರೆಸಿದೆ ಪ್ರಾಸಿಕ್ಯೂಷನ್ ಅನುಮತಿ ಇದ್ದರು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡದಿರುವುದು ಪ್ರಜಾಪ್ರಭು್ವದ ಿರೋಧಿ ನಡೆ ಎಂದು ದೂರಿದರು.
ಪ್ರಧಾನ ಕಾರ್ಯದರ್ಶಿ ಕೂದುವಳ್ಳಿ ಅರವಿಂದ್ ಹೋಬಳಿ ಅಧ್ಯಕ್ಷ ಬನ್ನೂರು ಸುದರ್ಶನ್ ಪರಿಶಿಷ್ಟ ಜಾತಿ ಮೋರ್ಚಾದ ಕೃಷ್ಣಮೂರ್ತಿ ಮಾತನಾಡಿದರು ಕೊಲ್ಕತ್ತಾ ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಭವ್ಯ ನಟಿಷ್ ಖಂಡಿಸಿದರು ಯುವ ಮೋರ್ಚಾದ ಅಧ್ಯಕ್ಷ ಇಂದು ಕುಮಾರ್ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷ ಪ್ರತಿಭಾ ನವೀನ್ ಪರಿಶಿಷ್ಟ ಪಂಗಡದ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಶಂಕರ್ ಮುಖಂಡ ನಾರಾಯಣ ಆಚಾರ್ಯ ಕಾರ್ಯಕರ್ತರು ಭಾಗವಹಿಸಿದರು
ತನಿಖೆ ಎದುರಿಸಲಿ
ಕೊಪ್ಪ: ಭ್ರಷ್ಟಾಚಾರ ಕೊನೆಗೊಳ್ಳಬೇಕಾದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ತನಿಖೆ ಎದುರಿಸಬೇಕು ಎಂದು ಬಿಜೆಪಿ ಮಂಡಲ ಅಧ್ಯಕ್ಷ ಎಚ್ ಕೆ ದಿನೇಶ್ ಹೊಸೂರು ಆಗ್ರಹಿಸಿದರು
ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ರಾಜೀನಾಮೆಗೆ ಒತ್ತಾಯಿಸಿ, ಬಿಜೆಪಿ ಮಂಡಲ ಘಟಕ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಉತ್ತಮ ಆಡಳಿತ ಮಾಡುತ್ತಾರೆ ಎಂದು ಕಾಂಗ್ರೆಸ್ ರಾಜ್ಯದ ಜನ 135 ಸೀಟು ಗೆಲ್ಲಿಸಿ ಕೊಟ್ಟರು ಆದರೆ ಕಾಂಗ್ರೆಸ್ ಸಮಾಜ ಬದಲಾಗಿ ಮಜಾವಧಿ ಮಾತ್ರ ಉಳಿದಿದೆ ನೈತಿಕತೆ ಇದ್ದರೆ ರಾಜೀನಾಮೆ ಕೊಟ್ಟು ತನಿಖೆ ಎದುರಿಸಲಿ ಆರೋಪದಿಂದ ಮುಕ್ತರಾಗಿ ಬಂದು ಮತ್ತೆ ಮುಖ್ಯಮಂತ್ರಿಯಾಗಿ ಎಂದರು.
ಮುಖಂಡ ಎಸ್ಎನ್ ರಾಮಸ್ವಾಮಿ ಮಾತನಾಡಿ ಯಡಿಯೂರಪ್ಪ ಅವರ ವಿರುದ್ಧ ತನಿಕೆಗೆ ಆದೇಶವಾದಾಗ ಅವರು ರಾಜೀನಾಮೆ ಕೊಟ್ಟಿದ್ದರು ದೂರವಾಣಿ ಕದ್ದಾಲಿಕೆ ಪ್ರಕರಣದಲ್ಲಿ ರಾಮಕೃಷ್ಣ ಹೆಗಡೆ ರಾಜೀನಾಮೆ ಕೊಟ್ಟಿದ್ದರು. ಸಿದ್ದರಾಮಯ್ಯ ಕೂಡ ರಾಜೀನಾಮೆ ಕೊಟ್ಟು ತನಿಖೆ ಎದುರಿಸಲಿ ಎಂದರು
ಬಿಜೆಪಿ ಎಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಜೆ ಪುಣ್ಯಪಾಲ್ ಮಾತನಾಡಿ ವಾಲ್ಮೀಕಿ ನಿಗಮದಲ್ಲಿ ಹಗಲು ದರೋಡೆ ಮುಡಾ ದಲ್ಲಿ ಸೃಜನ ಪಕ್ಷಪಾತವಾಗಿದೆ ರಾಜ್ಯಪಾಲರು ಪರಿಶೀಲಿಸಿಯ ತನಿಖೆಗೆ ಅನುಮತಿ ಕೊಟ್ಟಿದ್ದಾರೆ ಮೈಸೂರಿನಲ್ಲಿ 80,000 ಜನರು ಅರ್ಜಿ ಹಾಕಿ ನಿವೇಶನಕ್ಕಾಗಿ ಕಾಯುತ್ತಿದ್ದಾರೆ ರಾಜ್ಯದಲ್ಲಿ ಲೂಟಿ ಹೊಡೆದು ಎಐಸಿಸಿ ಪ್ರಧಾ ಕಾರ್ಯದರ್ಶಿ ರಣಜಿವಾಲ ಅವರ ಜೇಬು ತುಂಬಿಸುವ ಕೆಲಸವನ್ನು ಕಾಂಗ್ರೆಸ್ ಮಾಡಿದೆ ಎಂದು ಆರೋಪಿಸಿದರು.
ಮುಖಂಡ ಹೆಚ್ ಎಂ ರವಿಕಾಂತ್ ಮಾತನಾಡಿ ಇದು ದೊಡ್ಡ ಹಗರಣ ವಾಗಿದ್ದು ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡಬೇಕಿತ್ತು, ಆದರೆ ರಾಜ್ಯಪಾಲರ ಅಧಿಕಾರವನ್ನೇ ಪ್ರಶ್ನಿಸುತ್ತಾರೆ ಎಂದರು ಮುಖಂಡರಾದ ಅರುಣ್ ಶಿವಪುರ ದಿವಾಕರ್ ಭಟ್ ಜಯಂತ್ ಎಂಕೆ ಕಿರಣ್ ಮಡಬಳ್ಳಿ ಅಜಿತ್ ಬಿಕ್ಕಳಿ ಇದಿನಬ್ಬ ಶರತ್ ಸಿ ಎಚ್ ಪ್ರಕಾಶ್ ಮತ್ತಿತರು ಇದ್ದರು
ನೈತಿಕತೆ ಇದ್ದರೆ ಮುಖ್ಯಮಂತ್ರಿ ರಾಜೀನಾಮೆ ನೀಡಲಿ
ಮೂಡಿಗೆರೆ: ರಾಜ್ಯ ಸರ್ಕಾರಕ್ಕೆ ನೈತಿಕತೆ ಇದ್ದರೆ ಕೂಡಲೇ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು ಎಂದು ವಿಧಾನ ಪರಿಷತ್ ಉಪಸಭಾಪತಿ ಎಂ ಕೆ ಪ್ರಾಣೇಶ್ ಒತ್ತಾಯಿಸಿದರು.
ಮುಖ್ಯಮಂತ್ರಿ ರಾಜೀನಾಮೆಗೆ ಒತ್ತಾಯಿಸಿ ಪಟ್ಟಣದ ಲಯನ್ಸ್ ವೃತ್ತದಲ್ಲಿ ಸೋಮವಾರ ಬಿಜೆಪಿ ನಡೆಸಿದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ವಾಲ್ಮೀಕಿ ನಿಗಮದಲ್ಲಿ ₹87 ಕೋಟಿ ಹಗರಣ ನಡೆದಿದೆ ಎಂದು ಸರ್ಕಾರವೇ ಒಪ್ಪಿಕೊಂಡಿದೆ. ಮುಡಾದಲ್ಲಿ 13 ನಿವೇಶನಗಳನ್ನು ಸಿಎಂ ಪತ್ನಿ ಹೆಸರಲ್ಲಿ ಮಾಡಿಕೊಂಡಿದ್ದಾರೆ ಈ ಎಲ್ಲಾ ಭ್ರಷ್ಟಾಚಾರಗಳ ಬಗ್ಗೆ ನೈತಿಕತೆ ಇದ್ದರೆ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು
ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ ಮಾತನಾಡಿ ಪ್ರಾಸಿಕ್ಯೂಷನ್ ಅನುಮತಿಯನ್ನು ಸುಖಾಸುಮ್ಮನೆ
ನೀಡಿಲ್ಲ ಎಲ್ಲಾ ದಾಖಲೆಗಳು ಮುಖ್ಯಮಂತ್ರಿಯ ವಿರುದ್ಧ ಇರುವುದರಿಂದಲೇ ಅನುಮತಿ ನೀಡಲಾಗಿದೆ ಮುಖ್ಯಮಂತ್ರಿ ಸ್ಥಾನದ ಗೌರವವನ್ನು ನೀರುಪಾಲು ಮಾಡಲಾಗಿದ್ದು, ಸರ್ಕಾರವು ಮುಂದುವರೆಯಲು ಅನರ್ಹವಾಗಿದೆ ಎಂದರು.
ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವ ವೃಂದ ಮಾತನಾಡಿ, ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ಹೋರಾಟ ಮಾಡುತ್ತಿರುವುದು ಸಂವಿಧಾನ ವಿರೋಧಿಯಾಗಿದೆ ಭ್ರಷ್ಟಾಚಾರದಲ್ಲಿ ಮುಳುಗಿರುವ ರಾಜ್ಯದ ಕಾಂಗ್ರೆಸ್ ಸರ್ಕಾರವು ಕೆಲವೇ ದಿನದಲ್ಲಿ ಪತನಗೊಳ್ಳಲಿದೆ ಎಂದರು. ಬಿಜೆಪಿ ಪದಾಧಿಕಾರಿ ಜೆ ಎಸ್ ರಘು ಮಾತನಾಡಿದರು ಗಜೇಂದ್ರ ಕೊಟ್ಟಿಗೆಹಾರ ಜಯಂತ್ ಬಿದ್ರೆಹಳ್ಳಿ, ಡಿ ಎಸ್ ಸುರೇಂದ್ರ ಧನಿಕ್
ಪ್ರಶಾಂತ್ ಪು್ಟಣ್ ಪಟ್ಟದೂರು ಕಮಲಾಕ್ಷಮ್ಮ ಗೌರಮ್ಮ ನಯನ ತಳವಾರ ಪರೀಕ್ಷೆ ಜಾವಳಿ ಸಂದೀಪ್ ಗೆಲ್ಲೂರು ಸಚಿನ್ ಬಾನಹಳ್ಳಿ ರವಿ ಒಡೆಯರ್ ತಾರೆಶ್ ವಿನಯ್ ಹಳೆಕೋಟೆ ರವಿ ಬಡವನ ದಿಣ್ಣೆ ಮಂಜು ಪಟೇಲ್ ಇದ್ದರು