ಕಾಂಗ್ರೆಸ್ ಸರ್ಕಾರದ ವಿರುದ್ಧ ಶೃಂಗೇರಿಯಲ್ಲಿ ಬಿಜೆಪಿ ಹೋರಾಟ!
– ಗ್ಯಾರಂಟಿ ಹಣ ಹೊಂದಿಸಲು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ
– ಹಳ್ಳಿ ಹಳ್ಳಿಯಲ್ಲೂ ಪ್ರತಿಭಟನೆ ಎಚ್ಚರಿಕೆ ನೀಡಿದ ನಾಯಕರು
NAMMUR EXPRESS NEWS
ಶೃಂಗೇರಿ: ರಾಜ್ಯ ಕಾಂಗ್ರೇಸ್ ಸರ್ಕಾರ ಪೆಟ್ರೋಲ್ ,ಡೀಸೆಲ್ ಬೆಲೆಯನ್ನು ಏರಿಸಿದ್ದನ್ನು ಖಂಡಿಸಿ ಶೃಂಗೇರಿಯಲ್ಲಿಂದು ಶೃಂಗೇರಿ ತಾಲೂಕು ಬಿಜೆಪಿಯಿಂದ ಪ್ರತಿಭಟನೆ ನಡೆಯಿತು.
ದಿನದಿಂದ ದಿನಕ್ಕೆ ತನ್ನ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ರಾಜ್ಯ ಸರ್ಕಾರ ಎಲ್ಲಾ ಅಗತ್ಯ ದಿನೋಪಯೋಗಿ ವಸ್ತುಗಳ ಬೆಲೆ ಜಾಸ್ತಿ ಮಾಡಿದ್ದು ಇದರಿಂದ ಬಡ,ಮಧ್ಯಮ ವರ್ಗದ ಜನರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ, ತಕ್ಷಣ ರಾಜ್ಯ ಸರ್ಕಾರ ಪೆಟ್ರೋಲ್ , ಡೀಸೆಲ್ ಬೆಲೆ ಮತ್ತು ಅಗತ್ಯ ಸಾಮಾಗ್ರಿಗಳ ಬೆಲೆ ಇಳಿಸದೇ ಇದ್ದರೆ ತಾಲೂಕು,ಕ್ಷೇತ್ರ,ಜಿಲ್ಲೆಯಾದ್ಯಂತ ಪ್ರತಿಭಟನೆ ಹಮ್ಮಿಕೊಂಡು ಬಂದ್ಗೆ ಕರೆ ನೀಡಲಾಗುವುದು ಎಂದು ರಾಜ್ಯ ಎಸ್.ಸಿ ಮೋರ್ಚಾ ವಕ್ತಾರರಾದ ಡಾ.ಬಿ ಶಿವಶಂಕರ್ ಆಕ್ರೋಶ ಹೊರ ಹಾಕಿದರು.
ಶೃಂಗೇರಿ ತಾಲೂಕು ಅಧ್ಯಕ್ಷ ಉಮೇಶ್ ತಲಗಾರ್ ರವರು ಮಾತನಾಡಿ ರಾಜ್ಯ ಕಾಂಗ್ರೇಸ್ ಸರ್ಕಾರ ಅಗತ್ಯ ದಿನಬಳಕೆ ಸಾಮಾಗ್ರಿಗಳ ಬೆಲೆ ಹೆಚ್ಚಿಸಿ ತನ್ನ ಭಾಗ್ಯಗಳಿಗೆ ಪೂರೈಸುತ್ತಿದೆ, ಜನರಿಗೆ ಗ್ಯಾರಂಟಿಗಳ ಪೂರೈಸುವ ನಾಟಕ ಮಾಡುತ್ತು ಜನರಿಂದ ದುಪ್ಪಟ್ಟು ಹಣವನ್ನು ವಸೂಲಿ ಮಾಡುತ್ತಿದ್ದು, ಈ ಮೂಲಕ ರಾಜ್ಯದ ಜನರ ಜೇಬಿಗೆ ಕತ್ತರಿ ಹಾಕಿ ಮೋಸ ಮಾಡುತ್ತಿದೆ ಎಂದು ಪ್ರತಿಭಟಿಸಿದರು.
ಪ್ರತಿಭಟನೆಯಲ್ಲಿ ತಾಲೂಕಿನ ಅಧ್ಯಕ್ಷರಾದ ಉಮೇಶ್ ತಲಗಾರ್,ರಾಜ್ಯ ಎಸ್.ಸಿ ಮೋರ್ಚಾ ವಕ್ತಾರರಾದ ಡಾ.ಬಿ ಶಿವಶಂಕರ್ (ಶೃಂಗೇರಿ ಶಿವಣ್ಣ), ತಾಲೂಕು ಪ್ರಧಾನ ಕಾರ್ಯದರ್ಶಿಗಳಾದ ವೇಣುಗೋಪಾಲ್,ನೂತನ್ ಕುಮಾರ್ ಕಿಗ್ಗಾ,ಪಟ್ಟಣ ಪಂಚಾಯ್ತಿ ಮಾಜಿ ಅಧ್ಯಕ್ಷರಾದ ಹರೀಶ್.ವಿ ಶೆಟ್ಟಿ , ಚುನಾಯಿತ ಪ್ರತಿನಿಧಿಗಳು,ಪ್ರಮುಖ ನಾಯಕರುಗಳು, ಕಾರ್ಯಕರ್ತರುಗಳು, ತಾಲೂಕಿನ ಪದಾಧಿಕಾರಿಗಳು ಉಪಸ್ಥಿತರಿದ್ದರು.