ಮುಂದಿನ ಅಭ್ಯರ್ಥಿ ನಾನೇ ಎಂದಿದ್ದ ಚೈತ್ರ ಕುಂದಾಪುರ!
– ಉಡುಪಿ-ಚಿಕ್ಕಮಗಳೂರು ಲೋಕಸಭೆಗೆ ಸ್ಪರ್ಧೆ ಪುಕಾರು
– ವಂಚನೆ ಪ್ರಕರಣದ ಬಳಿಕ ಒಂದೊಂದೇ ಬಯಲು
– ಚಿಕ್ಕಮಗಳೂರು, ಕಡೂರಲ್ಲೇ ಈಕೆಯ ಆಪರೇಷನ್!
NAMMUR EXPRESS NEWS
ಚಿಕ್ಕಮಗಳೂರು: ಉದ್ಯಮಿಗೆ ವಂಚನೆ ಎಸಗಿದ ಆರೋಪದಡಿ ಬಂಧನಕ್ಕೊಳಗಾದ ನಂತರ ಚೈತ್ರಾ ಕುಂದಾಪುರ ಅವರ ಒಂದೊಂದೇ ಅಚ್ಚರಿಯ ವಿಚಾರ ಬೆಳಕಿಗೆ ಬರುತ್ತಿದೆ. ಪ್ರಭಾವಿಗಳನ್ನು ವಂಚನೆ ಜಾಲಕ್ಕೆ ಬೀಳಿಸಲು ರಾಜಕೀಯ ನವರಂಗೀಯ ಆಟಗಳನ್ನು ಆಡಿದ್ದಾರೆ. ಕೇಂದ್ರ ವಿತ್ತ ಸಚಿವೆ ನೀಡಿದ ಡೇರಿಂಗ್ ಗರ್ಲ್ ಎಂಬ ಪಟ್ಟವನ್ನೇ ದುರುಪಯೋಗ ಮಾಡಿ ಖ್ಯಾತಿ ಗಳಿಸಿದ್ದ ಚೈತ್ರಾ, ಮುಂದಿನ ಉಡುಪಿ-ಚಿಕ್ಕಮಗಳೂರು ಲೋಕಸಭೆ ಅಭ್ಯರ್ಥಿ ನಾನೇ ಎಂದು ಪುಕಾರು ಎಬ್ಬಿಸಿದ್ದಳು ಎಂಬ ಮಾಹಿತಿ ತಿಳಿದುಬಂದಿದೆ. ಇದೀಗ ಭಾರೀ ಚರ್ಚೆ ಆಗುತ್ತಿದೆ. ಚೈತ್ರಾ ಕುಂದಾಪುರ ಮತ್ತು ಚಿಕ್ಕಮಗಳೂರಿಗೆ ನಂಟು ಇದೆ. ತನ್ನೆಲ್ಲ ವ್ಯವಹಾರಕ್ಕೆ ಕಿಂಗ್ ಪಿನ್ ಮಾಡಿಕೊಂಡವರೆಲ್ಲರೂ ಚಿಕ್ಕಮಗಳೂರು ಜಿಲ್ಲೆಯವರೇ. ಗಗನ್ ಕಡೂರು ಈಕೆಯ ಪಿಎ ಇದ್ದ ಹಾಗೆ. ಆಪರೇಷನ್ ಎಲ್ಲವೂ ಕಡೂರು ಇಂದಲೇ ನಡೆದಿದೆ.