ಚಿಕ್ಕಮಗಳೂರು: ಪುಟಾಣಿಗಳ ಅಪರೂಪದ ಪ್ರತಿಭಟನೆ!!
* ಬದಲಿ ಶಿಕ್ಷಕರು ಬಾರದ ಹಿನ್ನೆಲೆ ಮಕ್ಕಳ ಪ್ರತಿಭಟನೆ!
* ಶಿಕ್ಷಕನ್ನು ರಿಲೀವ್ ಮಾಡಿದ ಕಾರಣ ಪೋಷಕರ ಪ್ರಶ್ನೆ!
NAMMUR EXPRESS NEWS
ಚಿಕ್ಕಮಗಳೂರು:ತಮ್ಮ ಶಾಲೆಗೆ ಶಿಕ್ಷಕರನ್ನು ನೇಮಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಎದುರಿಗೆ ಕುಳಿತು ಪ್ರತಿಭಟನೆ ನಡೆಸಿದ ಅಪರೂಪದ ಘಟನೆ ಚಿಕ್ಕಮಗಳೂರಿನಲ್ಲಿ ನಡೆಯಿತು.
ಚಿಕ್ಕಮಗಳೂರು ತಾಲೂಕಿನ ಮೇಲು ಹುಲುವತ್ತಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಕ್ಕಳು ಇದ್ದ ಒಬ್ಬ ಶಿಕ್ಷಕರು ವರ್ಗಾವಣೆಗೊಂಡಿದ್ದು ಇನ್ನೂ ಯಾರನ್ನು ನಿಯೋಜನೆ ಮಾಡಿಲ್ಲ, ಇದರಿಂದ ನಮ್ಮ ಶಿಕ್ಷಣಕ್ಕೆ ತೊಂದರೆಯಾಗಿದೆ ಎಂದು ಬಿ.ಇ.ಓ. ಕಛೇರಿಗೆ ಬಂದು ಶಾಲೆಯ 9 ಮಕ್ಕಳು ಕುಳಿತು ಪ್ರತಿಭಟನೆ ನಡೆಸಿದ್ದಾರೆ.
ಇದ್ದ ಒಬ್ಬರು ಟೀಚರ್ ಕೂಡ ವರ್ಗಾವಣೆ ಮಾಡಿಕೊಂಡು ಹೋಗಿದ್ದಾರೆ ಆ ಸ್ಥಳಕ್ಕೆ ಹೊಸಬರು ಬರೋದಕ್ಕೆ 15 ದಿನ ಆಗುತ್ತೆ ಎಂದು ಹೇಳಲಾಗಿದ್ದು, ಒಬ್ಬರೂ ಟೀಚರ್ ಇಲ್ಲದ ಕಾರಣ ಪೋಷಕರ ಜೊತೆ ಸೇರಿ ಬಿಇಓ ಕಚೇರಿಗೆ ಬಂದ ವಿದಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.
ಹೊಸ ಶಿಕ್ಷಕರು ಬರುವ ಮುನ್ನವೇ ಹಳೆಯ ಶಿಕ್ಷಕನ್ನು ರಿಲೀವ್ ಮಾಡಿದ್ರು ಎಂದು ಪೋಷಕರು ಪ್ರಶ್ನೆ ಮಾಡುತ್ತಿದ್ದು, ಮೇಲಿನ ಹುಲುವತ್ತಿ ಮುತ್ತೋಡಿ ಅರಣ್ಯ ವ್ಯಾಪ್ತಿಯ ಕುಗ್ರಾಮವಾಗಿದೆ.
ಶಿಕ್ಷಕರ ವರ್ಗಾವಣೆ ಖಂಡಿಸಿ ವಿದ್ಯಾರ್ಥಿಗಳು ನಡೆಸಿದ ಮುಷ್ಕರ ರಾತ್ರಿ ಅಂತ್ಯ ಕಂಡಿದೆ. ಚಿಕ್ಕಮಗಳೂರು ತಾಲೂಕು ಮೇಲು ಹುಲುವತ್ತಿ, ಕಸ್ಕೆ ಶಾಲೆಯಲ್ಲಿ ಇದ್ದ ಒಬ್ಬರು ಶಿಕ್ಷಕರು ವರ್ಗಾವಣೆಯಾಗಿ ಹೋಗಿದ್ದು, ಶಿಕ್ಷಕರು ಏಳೆಂಟು ದಿನಗಳಿಂದ ಬದಲಿ ಶಿಕ್ಷಕರು ಬಾರದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ರಾತ್ರಿಯಾದರೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಬಾರದೇ ಇದ್ದು ಅಹೋರಾತ್ರಿ ಧರಣಿಗೆ ಮುಂದಾಗಿದ್ದು,ಇದನ್ನು ಅರಿತ ಕ್ಷೇತ್ರ ಶಿಕ್ಷಣಾಧಿಕಾರಿಗಳು ರಾತ್ರಿ 8 ಗಂಟೆಗೆ ಬಂದು ಸಮಸ್ಯೆ ಆಲಿಸಿ ಲಿಖಿತ ಭರವಸೆ ನೀಡಿದ ಹಿನ್ನೆಲೆಯಲ್ಲಿ ಮುಷ್ಕರ ಕೈ ಬಿಡಲಾಯಿತು .
ಬಂದ ಮಕ್ಕಳು ಮತ್ತು ಪೋಷಕರಿಗೆ ರಾತ್ರಿ ಊಟ ಮತ್ತು ರಾತ್ರಿ ಮಲಗುವ ವ್ಯವಸ್ಥೆಯನ್ನೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕಲ್ಪಿಸಿದ್ದರು.ಈ ಸಂದರ್ಭದಲ್ಲಿ ಕೋಟೆ ಸೋಮಣ್ಣ ಹಾಗೂ ಇತರರು ಉಪಸ್ಥಿತರಿದ್ದರು.