ಟಾಪ್ 3 ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು: ಹಾಡಹಗಲೇ ಕಳ್ಳರ ಕೈಚಳಕ
– ಚಿಕ್ಕಮಗಳೂರು: ಒತ್ತುವರಿ ತೆರವು ಕಾರ್ಯಾಚರಣೆ ಅರಣ್ಯಾಧಿಕಾರಿಗಳ ಮುಂದೆ ದಂಪತಿ ಕಣ್ಣೀರು
– ಚಿಕ್ಕಮಗಳೂರು: ಆಸ್ಪತ್ರೆಗೆ ದಾಖಲಿಸಿದ್ದ ಪರಿಚಿತ ವ್ಯಕ್ತಿ ಸಾವು
NAMMUR EXPRESS NEWS
ಚಿಕ್ಕಮಗಳೂರು: ತರೀಕೆರೆ ಪಟ್ಟಣದ ಎಂ.ಜಿ ರಸ್ತೆಯಲ್ಲಿರುವ ಟಿ.ಬಿ ಕೃಷ್ಣ ಎಂಬುವರ ಮನೆಯಲ್ಲಿ ಹಾಡಹಗಲೇ ಕಳ್ಳರು ಕನ್ನ ಹಾಕಿದ್ದಾರೆ. ಮನೆಯ ಮಾಲೀಕ ಟಿ.ಬಿ ಕೃಷ್ಣ ಹಾಗೂ ಮನೆಯ ಸದಸ್ಯರು ತಮ್ಮ ತೋಟಕ್ಕೆ ತೆರಳಿದ್ದಾಗ ಯಾರು ಇಲ್ಲದಿರುವುದನ್ನು ಗಮನಿಸಿದ ಖದೀಮರು ಕೈಚಳಕ ತೋರಿದ್ದಾರೆ. ಮನೆಯ ಬಾಗಿಲಿನ ಬೀಗ ಮುರಿದು ಮನೆಯಲ್ಲಿದ್ದ 16 ಗ್ರಾಂ ಚಿನ್ನ, 38 ಗ್ರಾಂ ಬೆಳ್ಳಿಯ ವಸ್ತುಗಳನ್ನು ಹಾಗೂ 21,000 ನಗದು ಕಳ್ಳತನ ಮಾಡಿದ್ದು, ಒಟ್ಟು 1,36,000 ರೂ ಮೌಲ್ಯದ ವಸ್ತುಗಳೆಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ತರೀಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
– ಚಿಕ್ಕಮಗಳೂರು: ಒತ್ತುವರಿ ತೆರವು ಕಾರ್ಯಾಚರಣೆ ಅರಣ್ಯಾಧಿಕಾರಿಗಳ ಮುಂದೆ ದಂಪತಿ ಕಣ್ಣೀರು
ಚಿಕ್ಕಮಗಳೂರು: ರಾಜ್ಯದಲ್ಲಿ ಅಕ್ರಮವಾಗಿ ಅರಣ್ಯ ಒತ್ತುವರಿ ಮಾಡಿದವರಿಗೆ ಸಂಕಷ್ಟ ಎದುರಾಗಿದ್ದು, ಒತ್ತುವರಿ ತೆರವು ಕಾರ್ಯ ಬರದಿಂದ ಸಾಗಿದೆ. ಚಿಕ್ಕಮಗಳೂರು ತಾಲೂಕಿನ ವಿವಿಧೆಡೆ ತೆರವು ಕಾರ್ಯ ನಡೆಸುತ್ತಿರುವ ಅರಣ್ಯಾಧಿಕಾರಿಗಳ ವಿರುದ್ಧ ಸಣ್ಣ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ತಾಲೂಕಿನ ದುಮ್ಮಗೆರೆಯಲ್ಲಿ ಒತ್ತುವರಿ ತೆರವು ಮಾಡುತ್ತಿದ್ದ ಅರಣ್ಯಾಧಿಕಾರಿಗಳ ಮುಂದೆ ದಂಪತಿ ಕಣ್ಣೀರಿಟ್ಟಿದ್ದಾರೆ. ದೊಡ್ಡವರು ಅಕ್ರಮ ಮಾಡಿದರೆ ಯಾರು ಕೇಳಲ್ಲ, ಮೊದಲು ಪ್ರಭಾವಿಗಳ ಒತ್ತುವರಿಯನ್ನ ತೆರವುಗೊಳಿಸಿ. ದಯವಿಟ್ಟು ನಾವು ಬೆಳೆದ ಕಾಫಿ ಗಿಡಗಳನ್ನು ಕಡಿಯಬೇಡಿ ಎಂದು ಕಣ್ಣೀರಿಟ್ಟು ಬೇಡಿಕೊಂಡಿದ್ದಾರೆ.
– ಚಿಕ್ಕಮಗಳೂರು: ಆಸ್ಪತ್ರೆಗೆ ದಾಖಲಿಸಿದ್ದ ಪರಿಚಿತ ವ್ಯಕ್ತಿ ಸಾವು
ಚಿಕ್ಕಮಗಳೂರು: ನಗರದ ಬಸ್ ನಿಲ್ದಾಣದ ಎದುರಿನ ಪುಟ್ಬಾತ್ ನಲ್ಲಿ 2 ದಿನಗಳಿಂದ ನಿತ್ರಾಣವಾಗಿ ಮಲಗಿದ್ದ ಅಪರಿಚಿತ ವ್ಯಕ್ತಿಯನ್ನು ಗಮನಿಸಿದ ಸ್ಥಳೀಯ ಹೂವಿನ ವ್ಯಾಪಾರಿಗಳು, ನಗರದ ಶ್ರೀ ಕೃಷ್ಣ ಚಾರಿಟಬಲ್ ಟ್ರಸ್ಟ್ ಸದಸ್ಯರಿಗೆ ಮಾಹಿತಿಯನ್ನು ನೀಡಿದ್ದರು, ಸ್ಥಳಕ್ಕೆ ಆಗಮಿಸಿದ ಟ್ರಸ್ಟ್ ನ ಸ್ವಯಂಸೇವಕ ಪುನೀತ್ ಹಾಗೂ ತಂಡ ಅಪರಿಚಿತ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿದ್ದರು. ಚಿಕಿತ್ಸೆಗೆ ಸ್ಪಂದಿಸದ ಕಾರಣ ವ್ಯಕ್ತಿ ಮೃತಪಟ್ಟಿದ್ದಾರೆ. ಹೀಗಾಗಿ ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ. ಈ ವ್ಯಕ್ತಿಗೆ ಕುಟುಂಬಸ್ಥರು,ಸಂಬಂಧಪಟ್ಟವರು ಗೊತ್ತಿದ್ದಲ್ಲಿ ಈ ಮೊಬೈಲ್ ಸಂಖ್ಯೆಗೆ ಸಂಪರ್ಕಿಸಲು ಕೃಷ್ಣ ಚಾರಿಟಬಲ್ ಟ್ರಸ್ಟ್ ಸದಸ್ಯರು ಮನವಿ ಮಾಡಿಕೊಂಡಿದ್ದಾರೆ.