ಚಿಕ್ಕಮಗಳೂರು ಜಿಲ್ಲೆ: ಟಾಪ್ ನ್ಯೂಸ್
– ರಂಭಾಪುರಿ ಮಠಕ್ಕೆ ನಟಿ ಶಿಲ್ಪಾ ಶೆಟ್ಟಿಯಿಂದ ರೋಬೋಟ್ ಆನೆ!
– ಆನೆ ದಾಳಿ: ಮೃತನ ಮನೆಗೆ ಭೇಟಿ ನೀಡಿದ ಅರಣ್ಯ ಸಚಿವ,ಉಸ್ತುವಾರಿ ಸಚಿವ
– ರೈತರ ಜಮೀನು ಒತ್ತುವರಿ ತೆರವು ಮಾಡದಂತೆ ಸಚಿವರಿಗೆ ರಂಭಾಪುರಿ ಮಠದಿಂದ ಮನವಿ
NAMMUR EXPRESS NEWS
ಬಾಳೆಹೊನ್ನೂರು: ರಂಭಾಪುರಿ ಮಠಕ್ಕೆ ನಟಿ ಶಿಲ್ಪಾಶೆಟ್ಟಿ ರೊಬೋಟ್ ಆನೆಯೊಂದನ್ನ ಕೊಡುಗೆಯಾಗಿ ನೀಡಿದ್ದಾರೆ. ಈ ರೋಬೋಟ್ ಆನೆ ಪಕ್ಕಾ ನಿಜವಾದ ಆನೆಯಂತೆ ಭಾಸವಾಗುತ್ತದೆ. ಆನೆಯನ್ನು ರಂಭಾಪುರಿ ಶ್ರೀಗಳು ಉದ್ಘಾಟಿಸಿದರು. ರೋಬೋಟ್ ಆನೆಯನ್ನು ನೋಡಲು ಮಠದಲ್ಲಿ ಭಕ್ತರು ಜಮಾಯಿಸಿದ್ದರು.
ರೈತರ ಒತ್ತುವರಿ ತೆರವು ಮಾಡದಂತೆ ಅರಣ್ಯ ಸಚಿವರಿಗೆ ಮನವಿ..!
ರಂಭಾಪುರಿ ಪೀಠಕ್ಕೆ ಭೇಟಿ ನೀಡಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ ಜಾರ್ಜ್ರವರುಗಳಿಗೆ ರೈತರ ಒತ್ತುವರಿ ತೆರವು ಮಾಡದಂತೆ ಪೀಠದ ವತಿಯಿಂದ ಮನವಿ ಮಾಡಲಾಯಿತು. ರೈತರು ಜೀವನಕ್ಕಾಗಿ ಕೃಷಿ ನಂಬಿದ್ದಾರೆ ಈ ನಡುವೆ ಎಲೆ ಚುಕ್ಕೆ,ಹಳದಿ ರೋಗದಿಂದ ಫಸಲು ಬಾರದೆ ಸಂಕಷ್ಟದಲ್ಲಿದ್ದಾರೆ ಈ ಸಂದರ್ಭದಲ್ಲಿ ಸರ್ಕಾರ ರೈತರ ಒತ್ತುವರಿ ತೆರವು ಆದೇಶ ಮಾಡಿದರೆ ಜೀವನಕ್ಕಾಗಿ ಕೃಷಿ ಅವಲಂಬಿಸಿದ ರೈತರ ಜೀವನ ಬೀದಿಗೆ ಬರಲಿದ್ದು ಆದ್ದರಿಂದ ರೈತರ ಒತ್ತುವರಿ ತೆರವು ಮಾಡದಂತೆ ಅರಣ್ಯ ಸಚಿವರಿಗೆ ಮನವಿ ಸಲ್ಲಿಸಲಾಗಿದೆ.
ಸೀತೂರಿನ ಕಾಡಾನೆ ದಾಳಿ: ಮೃತನ ಮನೆಗೆ ಭೇಟಿ ನೀಡಿದ ಅರಣ್ಯ ಸಚಿವ
ಕಳೆದ ಕೆಲವು ದಿನಗಳ ಹಿಂದೆ ಎನ್ ಆರ್ ಪುರ ತಾಲೂಕಿನ ಸೀತೂರಿನಲ್ಲಿ ಕಾಡಾನೆ ದಾಳಿಗೆ ಮೃತಪಟ್ಟ ಕೃಷಿಕ ಉಮೇಶ್ರವರ ಮನೆಗೆ ರಾಜ್ಯ ಸರ್ಕಾರದ ಅರಣ್ಯ ಸಚಿವ ಈಶ್ವರ್ ಖಂಡ್ರೆ,ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ ಜಾರ್ಜ್ ಭೇಟಿ ನೀಡಿ ಸಾಂತ್ವನ ಹೇಳಿದರು.ಈ ಸಂದರ್ಭದಲ್ಲಿ ಅರಣ್ಯ ಸಚಿವರು ವೈಯಕ್ತಿಕ 1 ಲಕ್ಷ ರೂಗಳ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ ಜಾರ್ಜ್ ವೈಯಕ್ತಿಕ 2 ಲಕ್ಷ ರೂ.ಗಳ ಚೆಕ್ ನೀಡಿ ಕುಟುಂಬಕ್ಕೆ ಧನಸಹಾಯ ಮಾಡಿದರು. ಶಾಸಕ ಟಿ.ಡಿ ರಾಜೇಗೌಡ,ಚಿಕ್ಕಮಗಳೂರು ಶಾಸಕ ಎಚ್.ಡಿ ತಮ್ಮಯ್ಯ ಉಪಸ್ಥಿತರಿದ್ದರು. ಘಟನೆಯ ದಿನ ಟಿ.ಡಿ ರಾಜೇಗೌಡ ಒಂದು ಲಕ್ಷ ರೂ.ಗಳ ವೈಯಕ್ತಿಕ ಸಹಾಯ ನೀಡೋದಾಗಿ ಘೋಷಿಸಿ ಕುಟುಂಬ ಸದಸ್ಯರಿಗೆ ತಮ್ಮ ಸಹಾಯದ ಚೆಕ್ನ್ನು ಹಸ್ತಾಂತರಿಸಿದ್ದರು.